ಹೂವಿನ ಹಡಗಲಿ: ಪತ್ರಕರ್ತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿಲಿ ಎಂದು ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ ಸತ್ಯನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಗಂಗಾವತಿ ಭಾಗ್ಯಮ್ಮ ಪದವಿ ಕಾಲೇಜಿನ ಹಾನಗಲ್ ಕುಮಾರೇಶ ಸಭಾಂಗಣದಲ್ಲಿ
ಬುಧವಾರ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದ ಅನೇಕ ಜ್ವಲಂತ ಸಮಸ್ಯೆಗಳಿಗೆ ನಿತ್ಯ ಪತ್ರಿಕೆಗಳ ಮೂಲಕ ಬೆಳಕು ಚೆಲ್ಲುವ ಕಾಯಕ ಪತ್ರಕರ್ತರಿಂದ ಆಗುತ್ತಿದೆ. ಗ್ರಾಮೀಣ ತಾಲೂಕು ಮಟ್ಟದ ಪತ್ರಕರ್ತರಿಗೆ ಸಮಸ್ಯೆಗಳನ್ನು ಅರಿಯಲು ಓಡಾಡಲು ಬಸ್ ಪಾಸ್ ಸೌಲಭ್ಯ ಸರ್ಕಾರ ಇಂದಿಗೂ ನೀಡದಿರುವುದು ಅತ್ಯಂತ ನೋವಿನ ಸಂಗತಿ ಎಂದು ತಿಳಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ತಾಲೂಕು ಮಟ್ಟದ ಪತ್ರಕರ್ತರು ತಮ್ಮ ವ್ಯಾಪ್ತಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಣ ಆರೋಗ್ಯ ಸಾರಿಗೆ ನೀರಾವರಿ ಮತ್ತಿತರ ವಿಷಯಗಳ ಕುರಿತು
ಲೇಖನಗಳು ಹೆಚ್ಚು ಪತ್ರಿಕೆಗಳಲ್ಲಿ ಬರುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಲಕ್ಷ್ಮಣ ಯುವಕರು ಹೆಚ್ಚು ಹೆಚ್ಚು ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಗಾಗಿ ವೃತ್ತ ಪತ್ರಿಕೆಗಳು ನಿಯತಕಾಲಿಕೆಗಳು ನಿತ್ಯ ಓದಿರಿ ಎಂದು ತಿಳಿಸಿದರು.
ಜಿ ಬಿ ಆರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ ಮೋಹನ್ ರೆಡ್ಡಿ ಮಾತನಾಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ ಪಿ ಎಂ ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿ ಮುಂದಿನ ದಿನಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ಆಯೋಜಿಸಲಾಗುವುದು ಎಂದರು.
ಸಾಧಕರಿಗೆ ಸನ್ಮಾನ: ಪಟ್ಟಣದ ಪದ್ಮ ಕ್ಲಿನಿಕ್ ನ ಹಿರಿಯ ವೈದ್ಯರಾದ ಡಾ ಎಂ ಧರ್ಮಣ್ಣ,
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹೊಸಮನಿ ಸಿದ್ದಪ್ಪ
ಕೆ ಕೆ ಆರ್ ಟಿ ಸಿ ಚಾಲಕ ಕೆ ಪ್ರಭಾಕರ್, ಚಾರಣಿ ಟೆಲಿ ಚಿತ್ರದ ನಾಯಕ ನಟ ಎಸ್ ಕ್ರಾಂತಿ, ಮುದೇನೂರಿನ ಪಾರ್ವತಿ ತಳವಾರ ರವರಿಗೆ ಪತ್ರಿಕಾ ದಿನಾಚರಣೆ ಅಂಗವಾಗಿ ಗೌರವ ಸನ್ಮಾನ ನೆರವೇರಿಸಲಾಯಿತು.
ವಿಶ್ವನಾಥ ಹಳ್ಳಿಗುಡಿ, ಕೆ ಮಧುಸೂದನ, ಕೊಂಚಿಗೇರಿ ಚಂದ್ರು ಎಚ್ ಚಂದ್ರಪ್ಪ ನಿರ್ವಹಿಸಿದರು.
ಜಿ ಬಿ ಆರ್ ಕಾಲೇಜು ಪ್ರಾಂಶುಪಾಲರಾದ ಪ್ರೊ ಎಸ್ ಎಸ್ ಪಾಟೀಲ್, ಅಮರೇಗೌಡ ಪಾಟೀಲ್, ಎಸ್ ಆರ್ ಎಂ ಪಿ ಪದವಿ ಕಾಲೇಜಿನ ಪ್ರಾಂಶುಪಾಲ ವಿಜಯಕುಮಾರ್ ಎಂ ಇತರರು ಹಾಜರಿದ್ದರು.
ವರದಿ ಹಲಗಿ ಸುರೇಶ
