ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಮಿತಿ ಹಾವೇರಿ, ಭಾರತ ಸೇವಾ ಫೋರ್ಸ್ ಜಿಲ್ಲಾ ಘಟಕ ಹಾವೇರಿ, ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಹಾವೇರಿ ವತಿಯಿಂದ ಹಾವೇರಿ ನಗರದಲ್ಲಿ ಮಕ್ಕಳಿಗೆ ಹಾಲು ಕೊಡುವ ಮೂಲಕ ಬಸವ ಪಂಚಮಿ ಹಬ್ಬ ಆಚರಣೆ ಮಾಡಲಾಯಿತು.ಈ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಮಾನವ ಬಂಧುತ್ವ ವೇದಿಕೆ ಹಾವೇರಿ ತಾಲೂಕು ಸಮಿತಿ ಸಂಚಾಲಕರಾದ ಶ್ರೀ ಸುರೇಶ ಹಳ್ಳಳ್ಳಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತ ಸೇವಾ ಫೋರ್ಸ್ ರಾಜ್ಯಾಧ್ಯಕ್ಷರಾದ ಶ್ರೀ ಏಳುಕೊಟೇಪ್ಪ ಎಸ್ ಪಾಟೀಲ್ ಸರ್ ಬಸವಣ್ಣನವರ ಚಿಂತನೆಯಿಂದ ಮಾತ್ರ ನಾಡಿನ ಪ್ರಗತಿ ಸಾಧ್ಯ.ಜನರು ಮೂಢನಂಬಿಕೆಯಿಂದ ಹೊರ ಬರಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಹನುಮಂತಪ್ಪ ಹಲಗೇರಿ,ರಾಜು ಗಡ್ಡಿ, ಪರಶುರಾಮ ಹಲಗೇರಿ, ಸುನೀಲ್, ಇನ್ನೂ ಅನೇಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
