ಕೊಡಗು ಡಿ ಎ ಆರ್ ಮುಖ್ಯಪೇದೆ ವಿಜಯ್ ಬುಧವಾರ ರಾತ್ರಿ 9:00 ಏಳು ನಿಮಿಷಕ್ಕೆ ಹೃದಯಘಾತದಿಂದ ನಿಧನ ಇವರು ಪೊಲೀಸ್ ಬ್ಯಾಂಡ್ ಮೆನ್ ಡ್ರಮ್ ವಾದಕರು ಸಹ ಆಗಿದ್ದರು. ಇವರು ಮೂಲತಃ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಹುಟ್ಟೂರಾಗಿದ್ದು 1997ರಲ್ಲಿ ನೇಮಕಾತಿ ಹೊಂದಿದ್ದು ಸುಮಾರು 28 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಇವರು ತಂದೆ ತಾಯಿ, ರತ್ನಮ್ಮ ಧರ್ಮ ಪತ್ನಿ ಪತ್ನಿ ಮತ್ತು, ಎರಡು ಮಕ್ಕಳನ್ನು ಅಗಲಿದ್ದು, ಇವರ ಅಂತ್ಯ ಸಂಸ್ಕಾರ ಇಂದು ಚಾಮರಾಜನಗರದಲ್ಲಿ ನಡೆಯಲಿದೆ. ಇವರ ಪಾರ್ಥಿವ ಶರೀರಕ್ಕೆ ಕೊಡಗು ಎಸ್ ಪಿ ರಾಮರಾಜ ನವರು ಎಲ್ಲಾ ಸಿಬ್ಬಂದಿ ವರ್ಗಗಳೊಂದಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸಲಾಯಿತು. ಪಾರ್ಥಿವ ಶರೀರವನ್ನು ಸೂಕ್ತ ಗೌರವಗಳೊಂದಿಗೆ ಕೊಡಗಿನ ಕೇಂದ್ರ ಸ್ಥಳವಾದ ಮಡಿಕೇರಿಯಿಂದ ಚಾಮರಾಜನಗರಕ್ಕೆ ಬೆಳಗಿನ ಸಮಯದಲ್ಲಿ ಕಳುಹಿಸಿಕೊಡಲಾಯಿತು.
