ಆಲಮೇಲ: ಪಟ್ಟಣದ ಗ್ರಾಮ ದೇವರಾದ ಹಜರತ್ ಪೀರ್ ಗಾಲೀಬ್ ಸಾಬ್ ದರ್ಗಾಕ್ಕೆ ಹೋಗುವ ಶಾಶ್ವತ ರಸ್ತೆ ಸಲುವಾಗಿ ಹೋರಾಟಗಾರರು ಬಂದಗೇ ಕರೆ ಕೊಟ್ಟರು.
ಗಾಲಿಬ್ ಸಾಬ್ ದರ್ಗಾದಿಂದ ಊರಿನ ಪ್ರಮುಖ ಬೀದಿಗಳ ಮುಖಾಂತರ ಪಟ್ಟಣ ಪಂಚಾಯಿತಿ ವರೆಗೆ ಹೋರಾಟ ಜರಗಿತು. ಹೋರಾಟಕ್ಕೆ ಜಾತಿ ಧರ್ಮ ಪಕ್ಷ ಬಿಟ್ಟು ಅನೇಕ ಧರ್ಮದವರು ಮತ್ತು ಮಹಿಳೆಯರು ಹೋರಾಟದಲ್ಲಿ ಭಾಗವಹಿಸಿದರು.
ನಾಗರಿಕ ವೇದಿಕೆ ಅಧ್ಯಕ್ಷ ರಮೇಶ್ ಬಂಟನೂರು ಮಾತನಾಡಿ ಊರಿನ ಗ್ರಾಮ ದೇವರಾದ ಹಜರತ್ ಪೀರ್ ಗಾಲೀಬ್ ಸಾಬ್ ದರ್ಗಾ ಕೆ ರಸ್ತೆ ಕಲ್ಪಿಸಿ ಕೊಡಬೇಕು ನಾವು ನಮ್ಮ ವೈಯಕ್ತಿಕವಾಗಿ ರಸ್ತೆ ಬೇಡುತ್ತಿಲ್ಲ ಜಾತ್ರೆಯ ವೇಳೆ ಸಾವಿರಾರು ಹಳ್ಳಿಯ ಜನರು ಬರುವುದರಿಂದ ತೊಂದರೆ ಗಿಡಾಗುತ್ತಿದೆ ಆದ್ದರಿಂದ ನಾವು ರಸ್ತೆ ಕೇಳುತ್ತಿದ್ದೇವೆ ವೆಂದರು.
ಅರ್ಬನ್ ಬ್ಯಾಂಕಿನ ಅಧ್ಯಕ್ಷರಾದ ಶಿವಕುಮಾರ್ ಗುಂದಗಿ ಮಾತನಾಡಿ ದರ್ಗಾ ಕ್ಕೆ ಹೋಗುವ ರಸ್ತೆ ಅವಶ್ಯಕತೆ ವಿದೇ ಯಾರ ಹಿತಕಾಗಿ ಅಲ್ಲ ಇದನ್ನು ಪಕ್ಷಾಭೇದ ಮರೆತು ಹೋರಾಟ ಮಾಡುತ್ತಿರುವ ತಮಗೆಲ್ಲರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ್ ಸುಂಬುಡ ಮಾತನಾಡಿ ನಾನು ಮತ್ತು ಶಾಸಕರು ಸಂಬಂಧ ಪಟ್ಟ ಅಧಿಕಾರಿಗಳು ಜೊತೆ ಚರ್ಚೆ ಮಾಡಿದ್ದೇವೆ ನಕ್ಷೆಯಲ್ಲಿ ರಸ್ತೆಯು ಬೇರೆ ಬೇರೆ ಕಡೆ ತೋರಿಸುವದರಿಂದ ವಾಕ್ಪ ಬೋರ್ಡ್ ಮತ್ತು ಅಂಜುಮನ್ ಕಮಿಟಿ ಜೊತೆ ಚರ್ಚೆ ಮಾಡಿ 20 ಪುಟು ಸದ್ಯಕ್ಕೆ ಯಾವ ತಕರಾರು ಇಲ್ಲ 20 ಪುಟ್ಟು ರಸ್ತೆಗೆ ಸಾಲದೆ ಇರುವುದರಿಂದ 25 ಪುಟು ಅಥವಾ 30 ಪುಟ್ಟಿಗೆ ಶಾಸಕರು ಮತ್ತು ಅಂಜಮನ ಕಮಿಟಿ ಸದಸ್ಯರಿಂದ ಹಾಗೂ ಊರಿನ ಪ್ರಮುಖ ಹಿರಿಯರು ಜೊತೆಗೂಡಿ ನಿರ್ಣಯ ತೆಗೆದುಕೊಳ್ಳೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಶೋಕ್ ಕೊಳಾರಿ ಪ್ರಭು ವಾಲಿಕರ, ಬಸವರಾಜ ತೆಲ್ಲೋರ್,
ಡಾಕ್ಟರ್ ಸಂಜು ಯಂಟಮನ, ಶಶಿಧರ ನಾಯ್ಕೋಡಿ, ರಾಜು, ಬಸವರಾಜ್ ಹೂಗಾರ್, ದೇವಪ್ಪ ಗುಣಾರಿ ಉಪಸ್ಥಿತರಿದ್ದರು.
ವರದಿ. ಉಮೇಶ ಕಟಬರ
