ಅರಸೀಕೆರೆ ತಾಲ್ಲೋಕ್, ಕಣಕಟ್ಟೆ ಹೋಬಳಿಯ ಉಪ ತಹಶೀಲ್ದಾರರಾದ ಶ್ರೀ ಮಂಜುನಾಥ್ ರವರು ವಯೋ ಸಹಜ ನಿವೃತ್ತರಾದ ಕಾರಣದಿಂದ ಶ್ರೀಯುತರಿಗೆ ಕಣಕಟ್ಟೆ ಹೋಬಳಿಯ ಎಲ್ಲಾ ವೃತ್ತದ ಸಿಬ್ಬಂದಿ ವರ್ಗದವರು ಮದ್ಯಾಹ್ನ ಸೇರಿ ಬೀಳ್ಕೊಡುಗೆ ನೀಡಲಾಯಿತು. ಹಾಗೂ ಸಂಜೆ ತಾಲ್ಲೋಕ್ ಕಚೇರಿಯಲ್ಲಿ ಮಾನ್ಯ, ತಹಶೀಲ್ದಾರ್ ಶ್ರೀಸಂತೋಷ್ ಕುಮಾರ್ ರವರನ್ನು ಒಳಗೊಂಡಂತೆ ಎಲ್ಲಾ ಸಿಬ್ಬಂದಿಗಳು ಸೇರಿ ಕಂದಾಯ ಇಲಾಖೆಯಲ್ಲಿ ಸುದೀರ್ಘ ಸೇವೆಯನ್ನು ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಕರ್ತವ್ಯ ನಿರ್ವಹಿಸಿ ಹಾಗೂ ಎಲ್ಲಾ ಸಿಬ್ಬಂದಿಗಳೊಟ್ಟಿಗೆ ಸೌಜನ್ಯ ರೀತಿಯಲ್ಲಿ ವರ್ತಿಸಿ ಎಲ್ಲರ ಪ್ರೀತಿಗೆ ಪಾತ್ರರಾದ ಶ್ರೀ ಮಂಜುನಾಥ್ ರವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಅದ್ದೂರಿಯಾಗಿ ನಡೆಸಿಕೊಡಲಾಯಿತು. ಈ ಸಂದರ್ಭದಲ್ಲಿ ಮಾನ್ಯ, ತಹಶೀಲ್ದಾರ್ ಶ್ರೀ ಸಂತೋಷ್ ಕುಮಾರ್ರವರು, ಗ್ರೇಡ್ 2 – ತಹಶೀಲ್ದಾರ್ ಶ್ರೀ ಪಾಲಾಕ್ಷ ರವರು, ಶಿರಸ್ತೆದಾರ್ ಶ್ರೀ ಶಿವಶಂಕರ್, ಕಸಬಾ
RI ಯವರಾದ ಶ್ರೀ ಓಬಳೇಶ್, ಗಂಡಸಿ ಡಿಟಿ ಯವರಾದ ಶ್ರೀ ಮೋಹನ್ ಕುಮಾರ್, ಕಣಕಟ್ಟೆ RI ಆದ ಶ್ರೀ ಶಾಂತಕುಮಾರ್,ತಾಲ್ಲೋಕ್ ಕಚೇರಿಯ ಶ್ರೀ ನಾರಾಯಣ್, ಶ್ರೀ ಸಕಾಲ ರಾಜು, ಹಾಗೂ ಸಿಬ್ಬಂದಿ ವರ್ಗದವರು, ಮತ್ತು ಕಣಕಟ್ಟೆ ಹೋಬಳಿಯ ಎಲ್ಲಾ ವೃತ್ತದ VA ಗಳಾದ ಶ್ರೀ ಸಿದ್ದಪ್ಪ, ಶ್ರೀ ಕುಮಾರ್, ಶ್ರೀ ರಾಜುಸಬ್ ಶ್ರೀ ಚೇತನ್, ಶ್ರೀ ಹರ್ಷಿತ, ಶ್ರೀ ಪಾರ್ವತಿ, ಶ್ರೀ ಮಾದೇವಿ, ಶ್ರೀಮಧುಕುಮಾರಿ ಹಾಗೂ ಕಣಕಟ್ಟೆಯ ಎಲ್ಲಾ ವೃತ್ತದ ಗ್ರಾಮಸೇವಕರುಗಳಾದ ಶ್ರೀ ಕೊಟ್ರೇಶ್, ಶ್ರೀ ಕುಮಾರ್, ಹಾಗೂ ಇತರರು ಸೇರಿ ಅದ್ದೂರಿಯಾಗಿ ಬೀಳ್ಕೊಡುಗೆಯ ಸಮಾರಂಭವನ್ನು ಆಚರಿಸಿದ್ದು ಬಹಳ ವಿಶೇಷವಾಗಿತ್ತು.
ವರದಿ : ಮಾಡಾಳ್ ರವಿ.
