ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಮಿತಿ ಹಾವೇರಿ, ಭಾರತ ಸೇವಾ ಫೋರ್ಸ್ ಜಿಲ್ಲಾ ಘಟಕ ಹಾವೇರಿ, ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಹಾವೇರಿ ವತಿಯಿಂದ ಹಾವೇರಿ ನಗರದಲ್ಲಿ ಮಕ್ಕಳಿಗೆ ಹಾಲು ಕೊಡುವ ಮೂಲಕ ಬಸವ ಪಂಚಮಿ ಹಬ್ಬ ಆಚರಣೆ ಮಾಡಲಾಯಿತು.ಈ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಮಾನವ ಬಂಧುತ್ವ ವೇದಿಕೆ ಹಾವೇರಿ ತಾಲೂಕು ಸಮಿತಿ ಸಂಚಾಲಕರಾದ ಶ್ರೀ ಸುರೇಶ ಹಳ್ಳಳ್ಳಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತ ಸೇವಾ ಫೋರ್ಸ್ ರಾಜ್ಯಾಧ್ಯಕ್ಷರಾದ ಶ್ರೀ ಏಳುಕೊಟೇಪ್ಪ ಎಸ್ ಪಾಟೀಲ್ ಸರ್ ಬಸವಣ್ಣನವರ ಚಿಂತನೆಯಿಂದ ಮಾತ್ರ ನಾಡಿನ ಪ್ರಗತಿ ಸಾಧ್ಯ.ಜನರು ಮೂಢನಂಬಿಕೆಯಿಂದ ಹೊರ ಬರಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಹನುಮಂತಪ್ಪ ಹಲಗೇರಿ,ರಾಜು ಗಡ್ಡಿ, ಪರಶುರಾಮ ಹಲಗೇರಿ, ಸುನೀಲ್, ಇನ್ನೂ ಅನೇಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
POST
ವಿಶ್ವ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ
ಸಿರುಗುಪ್ಪ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕಾಡಳಿತ, ಪೋಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಅಶೋಕ್.ಆರ್.ಹೆಚ್, ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ಮಾನವ ಕಳ್ಳ ಸಾಗಾಣಿಕೆಯು ಇಡೀ ಮನುಷ್ಯ ಕುಲಕ್ಕೆ ಸವಾಲಾಗಿರುವ ಸಮಸ್ಯೆಯಾಗಿದೆ.
ಆದ್ದರಿಂದ ನಾವೆಲ್ಲರೂ ಸೇರಿ ಇದನ್ನು ವಿರೋಧಿಸಬೇಕಾಗಿದೆ. ಪ್ರಪಂಚದಾದ್ಯಂತ ಮಾನವ ಕಳ್ಳ ಸಾಗಾಣಿಕೆ ದಿನವನ್ನು ಆಚರಿಸಲಾಗುತ್ತಿದೆ.
ವಿದ್ಯಾವಂತರಾದ ನಿಮ್ಮ ಮೂಲಕ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ ಅವರು ಮಾತನಾಡಿ 2016 ಜುಲೈ 30ನೇ ತಾರೀಖಿನಿಂದ ವಿಶ್ವ ಮಾನವ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಜಾರಿಗೆ ಬಂದಿದ್ದು, ನಾವೆಲ್ಲರೂ ಇದರ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವದರೊಂದಿಗೆ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯಬೇಕಿದೆಂದು ತಿಳಿಸಿದರು.
ಇದೇ ವೇಳೆ ಸರ್ಕಾರಿ ಸಹಾಯಕ ಅಭಿಯೋಜಕರಾದ ಶಿವರಾಜ್, ಉಪ ತಹಶೀಲ್ದಾರ್ ಸಿದ್ದಾರ್ಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಮ್.ಸಿದ್ದಯ್ಯ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ ವರ್ಮ, ದೈಹಿಕ ಶಿಕ್ಷಣಾಧಿಕಾರಿ ರಮೇಶ್, ವಕೀಲರ ಸಂಘದ ಕಾರ್ಯದರ್ಶಿ ಶಿವಕುಮಾರ್.ಎಮ್, ಸಿಪಿಐ ಹನುಮಂತಪ್ಪ, ಕಾಲೇಜಿನ ಪ್ರಾಚಾರ್ಯರಾದ ನಾಗರಾಜ.ಹೆಚ್, ಸೇರಿದಂತೆ ಇನ್ನಿತರ ಹಿರಿಯ ವಕೀಲರು ಹಾಗೂ ವಿದ್ಯಾರ್ಥಿಗಳು ಇದ್ದರು.
ವರದಿ ಶೇಖರ್ ಹೆಚ್
ಲಕ್ಷ್ಮೇಶ್ವರ ತಾಲೂಕ ಬೀದಿ ಬದಿ ವ್ಯಾಪಾರಸ್ಥರ ಸಂಘದ ವ್ಯಾಪಾರಸ್ಥರಿಗೆ ಆಶ್ರಯ ಮನೆಯನ್ನು ಮಂಜೂರು ಮಾಡಬೇಕು ಅಧ್ಯಕ್ಷ ಮಂಜುನಾಥ್ ಹೊಗೆ ಸೊಪ್ಪಿನ್
ಲಕ್ಷ್ಮೇಶ್ವರ ನಗರದ ಬೀದಿ ಬದಿ ವ್ಯಾಪಾರಸ್ಥರ ಸಂಘದ ಎಲ್ಲಾ ಪದಾಧಿಕಾರಿಗಳು ಸೇರಿ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರಿಗೆ ಆಶ್ರಯ ಮನೆಯನ್ನು ಮಂಜೂರು ಮಾಡಬೇಕು ಎಂದು ಮನವಿ ನೀಡಿದರು, ಈ ವೇಳೆ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮಂಜುನಾಥ್ ಹೋಗೆಸೊಪ್ಪಿನ ಮಾತನಾಡಿ ಬೀದಿ ಬದಿ ವ್ಯಾಪಾರಸ್ಥರು ಕಡು ಬಡವರಾಗಿದ್ದು ದಿನೇ ದಿನೇ ತಂದ ಹಣ್ಣು ಹೂವು ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡಿ ದಿನನಿತ್ಯದ ಜೀವನ ನಡೆಸುತ್ತಿದ್ದೇವೆ. ಇಂದಿನ ತುಟ್ಟಿ ದಿನಮಾನಗಳಲ್ಲಿ ಎಲ್ಲಾ ದರಗಳು ಗಗನಕ್ಕೆ ಏರುತ್ತಿದ್ದು ಮಕ್ಕಳ ಶಿಕ್ಷಣ ಆರೋಗ್ಯ ಕುಟುಂಬ ನಿರ್ವಹಣೆ ನಡೆಸುವುದು ತುಂಬಾ ಕಷ್ಟಕರವಾಗಿದೆ ಹಾಗೂ ನಮಗೆ ಉಳಿಯಲು ಸರಿಯಾದ ಸೂರು ಇರುವುದಿಲ್ಲ. ಕಾರಣ ಮಾನ್ಯರು ಈ ನಮ್ಮ ಎಲ್ಲಾ ಸಂಕಷ್ಟಗಳನ್ನು ಅರಿತು ಶೀಘ್ರವೇ ನಮಗೆ ವಾಸಿಸಲು ಆಶ್ರಯ ಮನೆಗಳನ್ನ ಮಂಜೂರು ಮಾಡಿದರೆ ತಮನ್ನು ಜೀವನ ಪರ್ಯಂತ ಮರೆಯುವುದಿಲ್ಲ ಎಂದರು.
ವರದಿ. ಹಲಗಿ ಸುರೇಶ
ರಸ್ತೆ ಅಪಘಾತ : ಬೈಕ್ ಸವಾರ ಸ್ಥಳದಲ್ಲಿಯೇ ಸಾವು.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಶಿರಂಗಾಲ ಶ್ರೀ ಮಂಟಿಗಮ್ಮ ದೇವಾಲಯ ಪ್ರವೇಶದ್ವಾರದ ತಿರುವಿನಲ್ಲಿ ಬುಧವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲ್ಲೂಕು ಕಣಗಾಲು ಹೋಬಳಿಯ ಚಾಮರಾಯನಕೋಟೆ ಗ್ರಾಮದ ನಿವಾಸಿ ಅಶೋಕ್(36) ಮೃತ ದುರ್ದೈವಿಯಾಗಿದ್ದಾನೆ. ಕೊಣನೂರು ಕಡೆಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಲಾರಿ ಹಾಗೂ ಶಿರಂಗಾಲದಿಂದ ಕೊಣನೂರು ಕಡೆಗೆ ಹೋಗುತ್ತಿದ್ದ ಬೈಕ್ ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಸ್ಥಳಕ್ಕೆ ಡಿವೈಎಸ್ಪಿ ಚಂದ್ರಶೇಖರ್, ವೃತ್ತ ನಿರೀಕ್ಷಕ ದಿನೇಶ್ ಹಾಗೂ ಸಂಚಾರಿ ಠಾಣಾಧಿಕಾರಿ ಶ್ರೀನಿವಾಸ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು .ಲಾರಿ ಚಾಲಕನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಮೃತ ಅಶೋಕ್ ಪತ್ನಿ ರಂಜಿತಾ. ಮಕ್ಕಳದ ಸಮರ್ಥ್ ಹಾಗೂ ಸಾನ್ವಿ ಸೇರಿದಂತೆ ಕುಟುಂಬಸ್ಥರು. ಅಗಲಿದ್ದಾರೆ.
ವಿಶೇಷ ನಾಗರ ಪಂಚಮಿ ಸಂಭ್ರಮಿಸಿದ ನಾರಿಯರು.
ಸುರಪುರ. ನಾಗರ ಪಂಚಮಿ ಹಬ್ಬವು ನಾಡಿಗೆ ಮತ್ತು ಮಹಿಳೆಯರಿಗೆ ದೊಡ್ಡ ಹಬ್ಬವಾಗಿದೆ. ನಾಗ ಪಂಚಮಿ ಹಬ್ಬ ನಿಮಿತ್ಯ ಪಟ್ಟಣದಲ್ಲಿ ನಾಗಪ್ಪ ಹಾಲೆರೆದು ವಿಶೇಷ ಪೂಜೆ ಮಾಡಲಾಯಿತು. ನಾಡಿಗೆ ಸಕಲ ಮಳೆ ಬೆಳೆಯ ಸಮೃದ್ಧಿ ಆರೋಗ್ಯ ನೀಡಲೆಂದು ಮಹಿಳೆಯರು ಬೇಡಿಕೊಂಡರು. ಲಕ್ಷ್ಮಿ ಪ್ರಕಾಶ್ ಬಣಗಾರ್ ಹೇಳಿದರು.
ಕಬಾಡಗೇರಾ ಓಣಿಯಲ್ಲಿ ನಾಗರ ಪಂಚಮಿ ಹಬ್ಬದ ನಿಮಿತ್ಯ ವಿಶೇಷ ಪೂಜೆ ಮತ್ತು ಹಾಲೆರೆಲಾಯಿತು.
ಈ ಸಂದರ್ಭದಲ್ಲಿ. ಮಹಾದೇವಮ್ಮ ಭಾವನಾ ಬಣಗಾರ ಇನ್ನೂ ಇತರರು ಭಾಗವಹಿಸಿದ್ದರು ನಾಗರ ಪಂಚಮಿ ಹಬ್ಬವು ವಿಶಿಷ್ಟವಾಗಿ ಆಚರಿಸಿ ಸಂಭ್ರಮಿಸಿದರು.
ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪಡೆದ ಸಂಪಾದಕರಾದ ಆನಂದ ಗೋಕರ್ಲ್ ಇವರಿಗೆ ಸನ್ಮಾನ.
ಯಾದಗಿರಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ ದಿನಪತ್ರಿಕೆ
ಕನ್ನಡ ದೀಪ ಸಂಪಾದಕರಾದ ಶ್ರೀ ಆನಂದ್ ಗೋರ್ಕಲ್ ಆಯ್ಕೆಯಾಗಿ ಪ್ರಶಸ್ತಿ ಸ್ವೀಕಾರ ಮಾಡಿದ ಸಂಪಾದಕರಿಗೆ ಆತ್ಮೀಯ ಪತ್ರಕರ್ತರಿಂದ ಅಭಿನಂದಿಸಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಶ್ರೀ ಅಜಯ್ ಕುಲಕರ್ಣಿ , ನಾಗಭೂಷಣ ಎಸ್ ಯಾಳಗಿ, ಕಲ್ಯಾಣ್ ಶೆಟ್ಟಿ ಅಂಗಡಿ ಹಾಗೂ ಇನ್ನಿತರು ಉಪಸ್ಥಿತರಿದ್ದು
ರಾಷ್ಟ್ರೀಯ ಹಿಂದ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾಗಿ ಸತ್ಯನಾರಾಯಣ ಪ್ರಸಾದ್ ಆಯ್ಕೆ
ಕರ್ನಾಟಕ ರಾಜ್ಯದ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಎಸ್ ಮುತ್ತಣ್ಣ ಶಿವಳ್ಳಿ ಇವರು ಸತ್ಯನಾರಾಯಣ ಪ್ರಸಾದ್ ನಂಜನಗೂಡು ಇವರನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ರಾಜ್ಯ ಘಟಕ ರಾಜ್ಯ ಸಮಿತಿಯು ಇವರನ್ನು ಮುಂದಿನ ಆದೇಶದವರೆಗೆ ರಾಷ್ಟ್ರೀಯ ಹಿಂದ ಸಂಘಟನೆಯ ಮಾಧ್ಯಮ ಲೇಖಕ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಇವರನ್ನು ಆಯ್ಕೆ ಮಾಡಲಾಗಿದ್ದು, ಹಿಂದುಳಿದ ವರ್ಗಗಳ, ಪರಿಷತ್ ಜಾತಿ ಪರಿಶಿಷ್ಟ ವರ್ಗಗಳ, ಆರ್ಥಿಕ ರಾಜಕೀಯ ಹಕ್ಕುಗಳ ಮಾಧ್ಯಮಗಳ ಸಂಘಟನೆಗಾಗಿ ಹಿಂದುಳಿದ ಸಮುದಾಯದ ಜೊತೆಯಲ್ಲಿ ಉತ್ತಮ ಸೇವೆಯನ್ನು ಮಾಡುವಂತೆ ತಿಳಿಸಲಾಗಿದ್ದು, ಆಗಸ್ಟ್ ತಿಂಗಳ 24 ನೇ ತಾರೀಖಿನಂದು ವಿಧಾನಸೌಧ ಸಭಾಂಗಣದಲ್ಲಿ ಗೌರಾನ್ವಿತ ಮಾನ್ಯ ಯತೀಂದ್ರ ಸಿದ್ದರಾಮಯ್ಯನವರ ಹಾಗೂ ಕರ್ನಾಟಕ ರಾಜ್ಯ ಎಲ್ಲಾ ಅಹಿಂದಾ ನಾಯಕರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ವಿಧಾನಸೌಧ ಸಭಾಂಗಣದಲ್ಲಿ ನಡೆಯಲಿದ್ದು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅಹಿಂದ ಪ್ರಕಟಣೆಯಲ್ಲಿ ರಾಜ್ಯಾಧ್ಯಕ್ಷರಾದ ಮುತ್ತಣ್ಣ ಶಿವಳ್ಳಿ ಇವರು ಜನತೆಯಲ್ಲಿ ಮನವಿ ಮಾಡಿದ್ದಾರೆ.
ಕೌಟುಂಬಿಕ ಕಲಹದಿಂದ ಮನನೊಂದು ಯುವ ಪೊಲೀಸ್ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ನಂಜನಗೂಡು: ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಸೋಮವಾರ ಮುಂಜಾನೆ ಕೌಟುಂಬಿಕ ಕಲಹದಿಂದ ಮನನೊಂದು ಯುವ ಪೊಲೀಸ್ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರು ಮನ ಕುಲುಕುವ ಘಟನೆ ನಂಜನಗೂಡು ಹೌಸಿನಬೋರ್ಡ್ ನಲ್ಲಿ ನಡೆದಿದೆ. ಬೀರೇಶ್ 37 ವರ್ಷದ ವಿವಾಹಿತ ಮೃತ ದುರ್ದೈವಿ. ಇವರು ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕಟಿ ಗ್ರಾಮದವರಗಿದ್ದು, ಮೈಸೂರು ಜಿಲ್ಲಾ ಸಶಸ್ತ್ರ ಪಡೆಯ ಮುಖ್ಯ ಪೇದೆ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೀರೇಶ್ ತನ್ನ ಪತ್ನಿ ಹಾಗೂ ಮೂರು ವರ್ಷದ ಮುದ್ದು ಮಗುವಿನೊಂದಿಗೆ, ನಂಜನಗೂಡಿನ ಗ್ರಾಮಾಂತರ ಠಾಣೆಯ ಸಮೀಪವಿರುವ ಹೌಸಿಂಗ್ ಬೋರ್ಡು ಕಾಲೋನಿಯಲ್ಲಿ ವಾಸವಿದ್ದರು ಎನ್ನಲಾಗಿದೆ. ಮೃತರ ನಿವಾಸಕ್ಕೆ ಜಿಲ್ಲಾ SP ಆಗಮಿಸಿ ಸಾಂತ್ವನದ ನುಡಿಗಳೊಂದಿಗೆ ಗೌರವ ಸಲ್ಲಿಸಿದರು. ಮೃತರು ಕೌಟುಂಬಿಕ ಕಾರಣ ಮನನೊಂದು ಕೊಠಡಿಯ ಫ್ಯಾನ್ ಗೆ ನೇಣು ಹಾಕಿಕೊಂಡಿರುತ್ತಾರೆ. ಪಟ್ಟಣಪೋಲೀಸ್ ಠಾಣೆಯ ಆರಕ್ಷಕ ಅಧಿಕಾರಿಗಳು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿ ಕೊಂಡು ಶವದ ಮರಣೋತ್ತರ ಪರೀಕ್ಷೆಗೆ ನಂಜನಗೂಡು ಆಸ್ಪತ್ರೆಗೆ ರವಾನಿಸಿದ್ಧತೆ. ಆತ್ಮಹತ್ಯೆ ವಿಚಾರಣೆ ಬಗ್ಗೆ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ಕರ್ನಾಟಕ ಪ್ರೆಸ್ ಕ್ಲಬ್ ಘಟಕದಿಂದ ಪತ್ರಿಕಾ ದಿನಾಚರಣೆ ನೂತನ ಪದಾಧಿಕಾರಿಗಳ ಆಯ್ಕೆ
ಲಕ್ಷ್ಮೇಶ್ವರ, ಕರ್ನಾಟಕ ಪ್ರೆಸ್ ಕ್ಲಬ್ ನೂತನ ತಾಲೂಕಾ ಘಟಕದ ವತಿಯಿಂದ
ಕರ್ನಾಟಕ ಪ್ರೆಸ್ ಕ್ಲಬ್ ಕಚೇರಿಯಲ್ಲಿ ಪತ್ರಿಕಾ ದಿನಾಚರಣೆ ಮತ್ತು ನೂತನ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ನಡೆಯಿತು
ಕಾರ್ಯಕ್ರಮವನ್ನು ಸಸಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದ ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯ ಉಪಾಧ್ಯಕ್ಷರಾದ ಸುರೇಶ್ ಹಲಗಿ ಅವರು ಮಾತನಾಡಿ ರಾಜ್ಯದಲ್ಲಿ ಪತ್ರಿಕಾ ಮತ್ತು ಮಾಧ್ಯಮದವರಿಗೆ ಸರಕಾರದಿಂದ ಯಾವುದೇ ಸೌಲಭ್ಯವಿಲ್ಲ ಕೇವಲ ಮಹಿಳೆಯರಿಗೆ ಶಕ್ತಿ ಯೋಜನೆಯಲ್ಲಿ ಉಚಿತ ಬಸ್ ಪ್ರಯಾಣ ಮಾಡುವ ಅನುಕೂಲತೆ ಇದೆ ಆದರೆ ನಿಖರವಾಗಿ ಊರು ಊರಿಗೆ ಹೋಗಿ ಸುದ್ದಿ ಮಾಡುವ ಪತ್ರಕರ್ತರಿಗೆ ಯಾವುದೇ ಸಹಾಯ ಸಹಕಾರ ಇಲ್ಲ ಸರ್ಕಾರ ಇಂತಹ ಪತ್ರಿಕಾ ಮಾಧ್ಯಮದವರಿಗೆ ಸಹಾಯ ಸಹಕಾರ ನೀಡುವ ಕೆಲಸ ಮಾಡಬೇಕು ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷ ಮಂಜುನಾಥ್ ಮಾಗಡಿ ಅವರು ಮಾತನಾಡಿ ಪತ್ರಿಕಾ ಮಾಧ್ಯಮದವರು ಸಮಾಜದಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ನೇರ ನಿಷ್ಠುರವಾಗಿ ಸುದ್ದಿಯನ್ನು ಮಾಡಿದಾಗ ಮಾತ್ರ ಪತ್ರಿಕಾ ಧರ್ಮಕ್ಕೆ ಒಂದು ಅರ್ಥ ಬರುತ್ತದೆ ನೀವು ಯಾರ ಸ್ವತ್ತು ಅಲ್ಲ ಸಂವಿಧಾನದ 4ನೇ ಅಂಗ ಪತ್ರಿಕಾ ರಂಗ ನಿಮಗೆ ಸಂಪೂರ್ಣ ಅಧಿಕಾರವಿದೆ ಸ್ಪಷ್ಟವಾಗಿ ನೀವು ಸುದ್ದಿ ಮಾಡುವುದರಿಂದ ನಿಮ್ಮ ಘನತೆ ಗೌರವ ಹಚ್ಚುವುದರೊಂದಿಗೆ ಒಬ್ಬ ಒಳ್ಳೆಯ ಪತ್ರಕರ್ತರಾಗಿ ಹೊರಹೊಮ್ಮುತ್ತಿರಿ ಎಂದರು
ಇದೇ ಸಮಯದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆಯನ್ನು ಮಾಡಲಾಯಿತು
ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ವೀರಣ್ಣ ಹಡಪದ, ಉಪಾಧ್ಯಕ್ಷರಾಗಿ ನಾಗರಾಜ್ ಲಮಾಣಿ, ಕಾರ್ಯದರ್ಶಿಯಾಗಿ ಅಲ್ತಾಫ್ ಹುಸೇನ್ ಹವಾಲ್ದಾರ್, ಸಹ ಕಾರ್ಯದರ್ಶಿಯಾಗಿ ಮೆಹಬೂಬ್ ಹುಸೇನ್ ಮುಲ್ಲಾ ಖಜಾಂಸಿಯಾಗಿ ಗಾಳೆಪ್ಪ ಹರಿಜನ್, ಸದಸ್ಯರಾಗಿ ನಿಂಗರಾಜ್ ಖರಾಟೆ, ಸಂತೋಷ್ ಭಜಂತ್ರಿ ಅವರನ್ನು ಆಯ್ಕೆ ಮಾಡಲಾಯಿತು
ಈ ಸಮಯದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಸದಸ್ಯರಾದ ದೇವೇಂದ್ರಪ್ಪ ಟಿ ಮುಖಂಡರಾದ ನಾಗಣ್ಣ ಚಿಂಚಲಿ, ಪವನ ಬಂಕಾಪುರ್, ಶಂಕ್ರಪ್ಪ ಹಡಪದ, ಸೇರಿದಂತೆ ಇನ್ನೂ ಅನೇಕ ಮುಖಂಡರು ಇದ್ದರು
ಲಯನ್ಸ್ ಕ್ಲಬ್ ವತಿಯಿಂದ 90ಕ್ಕೂ ಹೆಚ್ಚು ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ
“ಟೀಮ್ ಇಂಪ್ಯಾಕ್ಟ್” ಉತ್ಸವವನ್ನು ಬಡ ಪ್ರತಿಭಾ ವಿದ್ಯಾರ್ಥಿಗಳ & ದೇಶ ಕಾಪಾಡುವ ಸೈನಿಕರ ಜೊತೆ ಆಚರಿಸುತ್ತಿರುವ”ಅಂತರ ರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಎ” ಯ ಜನಪ್ರಿಯ ರಾಜ್ಯಪಾಲರಾದ ಲಯನ್ ಡಾ: ಜಿ.ಮೋಹನ್ mjf 25-26 ಅವರು ಸುದ್ದಿ ಗಾರರೊಂದಿಗೆ ಮಾತನಾಡಿ 317ಎ ಟೀಮ್ ಇಂಪ್ಯಾಕ್ಟ್ ಧ್ಯೇಯದಲ್ಲಿ3ಜಿಲ್ಲೆಗಳೂ ಸೇವೆಯ ಮುಂದಾಳತ್ವದಲ್ಲಿ “ನಾವು ಸೇವೆಗೆ” ತತ್ವದಡಿ ಕಣ್ಣಿನ ಆರೋಗ್ಯ ತಪಾಸಣೆ, ಹಸಿವು ನಿವಾರಣೆ, ಪರಿಸರ ಸಮತೋಲನ ರಕ್ಷಣೆ, ಬಾಲ್ಯದ ಕ್ಯಾನ್ಸರ್ ತಡೆ, ಮಧುಮೇಹ ತಡೆಗಟ್ಟುವಿಕೆ” ಜೊತೆಗೆ ವಿದ್ಯಾರ್ಥಿಗಳಿಗೆ, ಸೈನಿಕ ರಕ್ಷಕರಿಗೂ ಅಗತ್ಯ ಸೇವೆ ಒದಗಿಸುತ್ತಿರುವ ಮಹತ್ತರ ಉದ್ದೇಶ ದಿಂದ ಕೂಡಿದೆ” ಎಂದು ಮಾಧ್ಯಮದವರಿಗೆ ತಿಳಿಸಿದರು. ಇದೇ ಸಂಧರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಶೇ 90ಕ್ಕೂ ಹೆಚ್ಚು ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಿದರು
