ಚಿಕ್ಕಬಳ್ಳಾಪುರ ಹೊರವಲಯದ ಶ್ರೀ ಸಿ. ವಿ. ವೆಂಕಟರಾಯಪ್ಪ ಶಿಕ್ಷಣ ಕೇಂದ್ರದಲ್ಲಿ 29ನೇ ದತ್ತಿ ದಿನಾಚರಣೆ ಹಾಗೂ 110ನೇ ಶ್ರೀ ಸಿವಿವಿ ಜಯಂತಿ ಅಂಗವಾಗಿ ಶ್ರೀ ಕೆ. ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮತ್ತು ರಕ್ತದಾನ ಮಾಡಿದ ಪ್ರತಿ ಯೂಬ್ಬರಿಗೂ ಹಾಗೂ ಸಿವಿವಿ ಸಂಸ್ಥೆ ಹಾಗೂ ರೆಡ್ ಕ್ರಾಸ್ ಸಂಸ್ಥೆ ಹಾಗೂ ಈ ಬಾರಿ ವಿಶೇಷವಾಗಿ ರಾಜ್ಯದಾದ್ಯಂತ ರೆಡ್ ಕ್ರಾಸ್ ಸಂಸ್ಥೆಗಳು ಭಾಗವಹಿಸಿದ್ದವು ಮತ್ತು ಚಿಕ್ಕಬಳ್ಳಾಪುರದ ಸಂಘ ಸಂಸ್ಥೆಗಳು ಮತ್ತು ಸಮಸ್ತ ಜನತೆಗೆ ಸಹಕಾರ ನೀಡಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 2811 ಯೂನಿಟ್ ರಕ್ತ ದಾನಿಗಳಿಂದ ಸಂಗ್ರಹವಾಗಿದೆ. ಈ ಯಶಸ್ಸು ರಕ್ತ ದಾನಿಗಳಿಗೆ ಸೇರುತ್ತದೆ.ರಕ್ತದಾನ ಮಾಡಲು ಆಗಮಿಸಿ ಕಾರ್ಯಕ್ರಮ ಯಶಸ್ವಿ ಮಾಡಿದ ಎಲ್ಲಾರಿಗೂ ತುಂಬು ಹೃದಯದ ಅಭಿನಂದನೆಗಳು. ಚಿಕ್ಕಬಳ್ಳಾಪುರ ರೆಡ್ ಕ್ರಾಸ್ ಸಂಸ್ಥೆ ಮತ್ತು ಲಾಯನ್ಸ್ ಸಂಸ್ಥೆ ಹಾಗೂ ಕೆ.ವಿ ಮತ್ತು ಪಂಚಗಿರಿ ದತ್ತಿ ಎಲ್ಲಾ ಸದಸ್ಯರು ಹಾಗೂ ವಿದ್ಯಾರ್ಥಿಗಳು ಮತ್ತು ಎಲ್ಲಾ ನನ್ನ ಜೀವದ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮತ್ತು ರಕ್ತದಾನ ಮಾಡಿದ ಎಲ್ಲಾರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ ಸಮಸ್ತ ಅಧ್ಯಕ್ಷರಾದ ಕೆ ಬಿ ನವೀನ್ ಕಿರಣ್.
POST
ಕೆಸರು ಗದ್ದೆಯಂತಾದ ಸರ್ಕಾರಿ ಶಾಲಾ ಮುಂಭಾಗ ..
ಸಿರುಗುಪ್ಪ ತಾಲೂಕಿನ ಹಚ್ಚೋಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಇಬಿ ಕಾಲೋನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣವು ಮಳೆ ಬಂದರೆ ಸಾಕು ಶಾಲಾ ಆವರಣ ಕೆಸರುಗದ್ದೆಯಂತಾಗಿ ಮಾರ್ಪಡಲಾಗುತ್ತಿದೆ.
ಇದರಿಂದ ವಿದ್ಯಾರ್ಥಿಗಳು ನಿತ್ಯ ನರಕಾಯತನೇ ಅನುಭವಿಸುತ್ತಿದ್ದಾರೆ.
ಪ್ರತಿನಿತ್ಯವೂ ವಿದ್ಯಾರ್ಥಿಗಳು ಕಲಿಕೆಗಾಗಿ ಆಗಮಿಸುತ್ತಿದ್ದಾರೆ. ಮಳೆಯಿಂದ ಶಾಲಾ ಕೊಠಡಿಗಳಿಗೆ ಹೋಗುವುದಕ್ಕೆ ಅರಸಹಾಸ ಪಡುವಂತಾಗಿದೆ.
ಪ್ರಮುಖವಾಗಿ ಶಾಲಾ ಆವರಣದಲ್ಲಿ ನೀರು ತುಂಬಿಕೊಂಡು ಎಷ್ಟೋ ವಿದ್ಯಾರ್ಥಿಗಳು ಕಾಲು ಜಾರಿ ಬೀಳೋ ಮೂಲಕ ಮೈ ಕೈಗೆ ಪೆಟ್ಟು ಮಾಡಿಕೊಂಡಿರುವ ಘಟನೆಗಳು ಸಹ ನಡೆದಿದೆ.

ಮಳೆಯ ನೀರಿನ ಜೊತೆಯಲ್ಲಿ ಚರಂಡಿಗಳ ಕೊಳಚೆ ನೀರು, ಮಿಶ್ರಣವಾಗಿ ಶಾಲಾ ಆವರಣದಲ್ಲಿ ಸೇರುತ್ತಿದ್ದು ಇದರಿಂದ ಶಾಲಾ ಸುತ್ತಲೂ ಗಬ್ಬು ವಾಸನೆಯಿಂದ ಶಾಲಾ ಶಿಕ್ಷಕರು ಮತ್ತು ಮಕ್ಕಳು ಶಾಲೆಯಲ್ಲಿ ಕೂತು ಪಾಠ ಕೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇದರಿಂದ ಮಕ್ಕಳ ಶೈಕ್ಷಣಿಕ ಬದುಕನ್ನು ಕಿತ್ತುಕೊಳ್ಳುವಲ್ಲಿ ಆ ಸ್ವಚ್ಛತೆ ತಾಂಡವಾಡುತ್ತಿರುವುದು ವಿಪರ್ಯಾಸವೇ ಸರಿ.
ಇಲ್ಲಿನ ಅಸಚ್ಚತೆಯಿಂದ ರೋಷವಾಗಿರುವ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ವರದಿ ಶೇಖರ್ ಹೆಚ್
ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯು ಮುಂದೂಡಿಕೆ
ಕೊಡಗು:ಕುಶಲನಗರ ತಾಲೂಕಿನ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯು ಮುಂದೂಡಿಕೆ. ದಿನಾಂಕ 15.08.2025 ರಂದು ತಾಲೂಕು ಮಟ್ಟದಲ್ಲಿ ನಡೆಯಲಿರುವ 79ನೇ ಸ್ವಾತಂತ್ರ್ಯ ದಿನಾಚರಣೆಯ ಆಚರಿಸುವ ಸಲುವಾಗಿ ಪೂರ್ವಭಾವಿ ಸಭೆಯನ್ನು ಮುಂದೂಡಲಾಗಿದೆ. ಹಾಗೂ ಮುಂದಿನ ದಿನಾಂಕವನ್ನು ತಿಳಿಸುವುದಾಗಿ ಕುಶಾಲನಗರ ತಾಲೂಕಿನ ದಂಡಾಧಿಕಾರಿಗಳಾದ ಮಾನ್ಯ ಕಿರಣ್ ಜಿ. ಗೌರಯ್ಯ ಅವರು ಕನಸಿನ ಭಾರತ ಪತ್ರಿಕೆಗೆ ತಿಳಿಸಿದ್ದಾರೆ.
ಅರಸೀಕೆರೆ ತಾಲೂಕಿನ ಕಂದಾಯ ಭವನದಲ್ಲಿ ಪೂರ್ವಭಾವಿ ಸಭೆ
ಅರಸೀಕೆರೆ ತಾಲ್ಲೋಕ್ ನಲ್ಲಿ ಮುಖ್ಯ ಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಿನಾಂಕ -22-07-2025 ರ ಮಂಗಳವಾರದಂದು ಕಂದಾಯ ಭವನದಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ & ಶಂಕುಸ್ಥಾಪನೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಸೀಕೆರೆ ಕ್ಷೇತ್ರದ ಶಾಸಕರು, ಹಾಗೂ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರು ಆದ ಸನ್ಮಾನ್ಯ ಶ್ರೀ KM ಶಿವಲಿಂಗೇಗೌಡರು ಅಧ್ಯಕ್ಷತೆ ವಹಿಸಿದ್ದರು.ಅರಸೀಕೆರೆ ನಗರ ಸಭೆಯ ಅಧ್ಯಕ್ಷರು ಆದ ಮಾನ್ಯ, ಶ್ರೀ ಸಮೀವುಲ್ಲಾ ರವರು, ಹಾಗೂ ಉಪಾಧ್ಯಕ್ಷರು ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು,ಹಾಗೂ ಈ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾದ ಮಾನ್ಯ,ಶ್ರೀ ಲತಾಕುಮಾರಿಯವರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಮಾನ್ಯ,ಶ್ರೀ ಪೂರ್ಣಿಮಾ ರವರು, ಜಿಲ್ಲಾ ಪೋಲೀಸ್
ವರಿಷ್ಟಾಧಿಕಾರಿಗಳಾದ ಮಾನ್ಯ,ಶ್ರೀ ಮೊಹಮ್ಮದ್ ಸುಜಿತಾ ರವರು,ಹಾಗೂ ಮಾನ್ಯ ತಹಶೀಲ್ದಾರ್ ಶ್ರೀ ಸಂತೋಷ್ ರವರು, ಅರಸೀಕೆರೆಯ ಮಾನ್ಯ, ಶ್ರೀ DYSP ರವರು,ಹಾಗೂ ತಾಲ್ಲೋಕ್ ಆಡಳಿತವು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅತ್ಯoತ ಯಶಸ್ವಿಯಾಗಿ ನೆರವೇರಿಸಿದರು.
ವರದಿ : ಮಾಡಾಳ್ ರವಿ.
ಮನೆ ಮನೆಗೆ ಇ-ಖಾತೆಯನ್ನು ತಲುಪಿಸುವ ಅರ್ಥಪೂರ್ಣ ಕಾರ್ಯಕ್ರಮ ಇ-ಖಾತಾ ಮೇಳ: ಬಿ.ಎಸ್.ಸುರೇಶ್ (ಭೈರತಿ)
ಬೆಂಗಳೂರು ಇ-ಖಾತಾ ಮೇಳವು ಮನೆ ಮನೆಗೆ ಇ-ಖಾತೆಯನ್ನು ತಲುಪಿಸುವ ಸದುದ್ದೇಶವನ್ನು ಹೊಂದಿರುವ ಅರ್ಥಪೂರ್ಣ ಕಾರ್ಯಕ್ರಮ ಎಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವರಾದ ಶ್ರೀ ಬಿ.ಎಸ್.ಸುರೇಶ್ (ಭೈರತಿ) ರವರು ತಿಳಿಸಿದರು.
ಪಾಲಿಕೆಯ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರ್.ಟಿ.ನಗರದ ಹೆಚ್.ಎಮ್.ಟಿ ಮೈದಾನದಲ್ಲಿ ದಿನಾಂಕ 22 ಹಾಗೂ 23 ಜುಲೈ 2025 ರಂದು ಆಯೋಜಿಸಿರುವ ಬೃಹತ್ ಇ-ಖಾತಾ ಮೇಳಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ ಎಂದು ತಿಳಿಸಿದರು.
ಈಗಾಗಲೇ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ 50,000 ಸ್ವತ್ತುಗಳ ಪೈಕಿ 13,000 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ. ನಾಗರೀಕರು ಇ-ಖಾತಾ ಮೇಳದ ಸದುಪಯೋಗ ಪಡೆದು, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸುಲಭವಾಗಿ ಇ-ಖಾತಾವನ್ನು ಪಡೆಯುವಂತೆ ನಾಗರೀಕರಲ್ಲಿ ವಿನಂತಿಸಿದರು.
ಪೂರ್ವ ವಲಯದ ಆಯುಕ್ತರಾದ ಶ್ರೀಮತಿ ಸ್ನೇಹಲ್.ಆರ್ ರವರು ಮಾತನಾಡಿ ಪೂರ್ವ ವಲಯದಲ್ಲಿ ಇ-ಖಾತಾ ಮೇಳದ ಆಯೋಜನೆಯ ಮೂಲಕ ಸುಲಭವಾಗಿ ಇ-ಖಾತಾ ನೀಡಲು ವ್ಯವಸ್ಥೆ ಮಾಡಲಾಗಿದೆ. ಪೂರ್ವ ವಲಯದಲ್ಲಿ ಒಟ್ಟು 3,45,858 ಸ್ವತ್ತುಗಳ ಪೈಕಿ 55,917 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ ಎಂದು ತಿಳಿಸಿದರು.
ಇ-ಖಾತಾ ಮೇಳದ ಸೌಲಭ್ಯವನ್ನು ಹೆಚ್ಚಿನ ಜನರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ, ಆರ್.ಟಿ.ನಗರದ ಹೆಚ್.ಎಮ್.ಟಿ ಮೈದಾನದಲ್ಲಿ ಈ ಮೇಳವನ್ನು ನಾಳೆಯೂ ಮುಂದುವರೆಸಲಾಗುತ್ತದೆ. ಇ-ಖಾತಾ ಪಡೆಯಬೇಕಿರುವ ನಾಗರಿಕರು ತಮ್ಮ ಅಗತ್ಯ ದಾಖಲೆಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಇ-ಖಾತಾ ಪಡೆಯುವಂತೆ ಅವರು ತಿಳಿಸಿದರು.
ಈ ವೇಳೆ ಮಾಜಿ ಉಪ ಮಹಾಪೌರರು,
ವಲಯ ಆಯುಕ್ತರಾದ ಸ್ನೇಹಲ್.ಆರ್, ಜಂಟಿ ಆಯುಕ್ತರಾದ ಸರೋಜ, ಉಪ ಆಯುಕ್ತರಾದ ರಾಜು, ಕಂದಾಯ ಅಧಿಕಾರಿ ಶ್ರೀನಿವಾಸ್ ಮೂರ್ತಿ, ಕಾರ್ಯಪಾಲಕ ಅಭಿಯಂತರರು ಚಂದ್ರಶೇಖರ್, ಮಾಜಿ ಪಾಲಿಕೆ ಸದಸ್ಯರುಗಳು, ಸ್ಥಳೀಯ ಹಿರಿಯ ಮುಖಂಡರುಗಳು, ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯಿತಿಯ ಆಕಾಂಕ್ಷಿಯ ಜನ್ಮ ದಿನಾಚರಣೆ
ಸುರಪುರ ತಾಲೂಕಿನ s. D ಹಂದ್ರಾಳ. ಗ್ರಾಮದ ಯುವಕರ ಕಣ್ಮಣಿ ಯುವನಾಯಕ ಬಡವರ ಬಂಧು ಶೋಷಿತ ವರ್ಗದವರ ಸಮಾಜ ಸೇವೆ ಮಾಡುವ ಕರ್ನಾಟಕ ಸರಕಾರದ ಯಾದಗಿರಿ ಜಿಲ್ಲಾ ಗ್ಯಾರಂಟಿ ಯೋಜನೆಯ ಪ್ರಾಧಿಕಾರದ ಸದಸ್ಯರಾಗಿ ಮತ್ತು ಕುಡ ಒಕ್ಕಲಿಗ ಸಮಾಜದ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಸಿದ್ದಣ್ಣ ಗೌಡ s. D ಹಂದ್ರಾಳ ಅವರ 43ನೇಯ ಹುಟ್ಟುಹಬ್ಬವನ್ನು ಅವರ ಅಭಿಮಾನ ಬಳಗದವರು ಆಚರಿಸಿದರು ಅವರ ತಾಯಿಯಾದ ಶಾಂತಮ್ಮ ಗಂಡ ಪರಮಣ್ಣಗೌಡ ಹಂದ್ರಾಳ. S. D ಗ್ರಾಮದ ಪ್ರಸ್ತುತ ಗ್ರಾಮ ಪಂಚಾಯತಿಯ ಸದಸ್ಯರಾಗಿ ಮತ್ತು ಮಾಜಿ ಗ್ರಾಮ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿದ್ದಾರೆ ಇವರ ಪುತ್ರರಾದ ಸಿದ್ದನಗೌಡ ಹಂದ್ರಾಳ್ ನಿಷ್ಠಾವಂತ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿರುವ ನಾಯಕನ ಹುಟ್ಟುಹಬ್ಬವನ್ನು ಅವರ ಅಭಿಮಾನಿ ಬಳಗದವರು ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸುವ ಮೂಲಕ ಮತ್ತು ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಅವರು ಹುಟ್ಟುಹಬ್ಬವನ್ನು ಆಚರಿಸಿದರು ಇವರ ಹುಟ್ಟು ಹಬ್ಬಕ್ಕೆ ಸುರಪುರದ ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಇತರ ಸ್ನೇಹಿತ ಬಳಗದವರು ಶುಭ ಕೋರಿದರು
ಕೃಷಾನದಿ ತುಂಬಿದೆ, ಮಳಗಾಲವಿದ್ದರೂ ನೀರಿಗೆ ಪರದಾಟ
ಸಾವಳಗಿ: ಜಮಖಂಡಿ ತಾಲೂಕಿನ ಪಕ್ಕದಲ್ಲಿರುವ ಕಡಕೋಳ ಪುನರ್ವಸತಿ ಕೇಂದ್ರದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಶೌಚಕ್ಕೂ ನೀರಿಲ್ಲ. ಇಂದಲ್ಲ ನಾಳೆಗೆ ನೀರಿನ ಸಮಸ್ಯೆ ಬಗೆ ಹರಿಯಲಿದೆ ಎಂದು ಕೊಂಡಿದ್ದ ನಿವಾಸಿಗಳ ಗೋಳು ಹೇಳತೀರದಾಗಿದೆ. ಕಳೆದ ೨೦ ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಮೊದಲು ಬೇಸಿಗೆ ಕಾಲದಲ್ಲಿ ನದಿಯಲ್ಲಿ ನೀರಿಲ್ಲ ಅದಕ್ಕಾಗಿ ಸರಬರಾಜು ಮಾಡಲಾಗಿಲ್ಲ ಎಂದೆಲ್ಲ ಸಬೂಬು ಹೇಳುತ್ತಿದ್ದ ಅಧಿಕಾರಿಗಳು ಈಗ ಕೃಷ್ಣಾನದಿಯಲ್ಲಿ ನೀರು ಇದ್ದರೂ ಕಡಕೋಳ ಪುನರವಸತಿ ಕೇಂದ್ರದ ೧೦೦ಕ್ಕೂ ಹೆಚ್ಚು ಕುಟುಂಬಗಳಿಗೆ ನೀರು ಪೂರೈಕೆ ಆಗುತ್ತಿಲ್ಲ.
ಕಡಕೋಳ ಪುನರ್ವಸತಿ ಕೇಂದ್ರದಲ್ಲಿ ಗ್ರಾಮೀಣ ಕುಡಿಯುವ ನೀರಿನ ನಲ್ಲಿಗಳನ್ನು ಅಳವಡಿಸಲಾಗಿದೆ ನೀರು ಮಾತ್ರ ಬರುತ್ತಿಲ್ಲ. ಅಂದಾಜು ೧೦೦ ಕುಟುಂಬಗಳು ವಾಸವಾಗಿವೆ. ಇವರೆಲ್ಲ ಬಡ ಮತ್ತು ಹಿಂದುಳಿದ ವರ್ಗದವರು, ಪ್ರತಿನಿತ್ಯ ಹೆಣ್ಣು ಮತ್ತು ಗಂಡುಮಕ್ಕಳು ಕೂಲಿ ಕೆಸಲಕ್ಕೆ ಹೋಗುತ್ತಾರೆ. ಮನೆಯಲ್ಲಿನ ವೃದ್ಧರು ನೀರು ಸಂಗ್ರಹಿಸಿಟ್ಟು ಕೊಳ್ಳಬೇಕಾದ ಅನಿವಾರ್ಯತೆಯಿದೆ. ದೂರದಲ್ಲಿ ದೊರೆಯುವ ಕೊಳವೆ ಬಾವಿಗಳು, ಕೈಪಂಪಗಳಿAದ ನೀರು ತಂದುಕೊಳ್ಳಬೇಕು ಕುಡಿಯುವ ನೀರಂತೂ ಇಲ್ಲಿ ಸಿಕ್ಕುವದೇ ಇಲ್ಲ.
ದೇವರಾಜ ಅರಸು ಹೆಸರಿನಲ್ಲಿ ಶುದ್ಧ ಕುಡಿವ ಘಟಕ ಸ್ಥಗಿತಗೊಂಡು ಹಲವು ವರ್ಷಗಳು ಕಳೆದಿವೆ. ಮನೆಗೊಬ್ಬರು ನೀರು ತರುವ ಕೆಲಸ ಮಾಡಬೇಕಾಗಿದೆ. ಪ್ರತಿ ಮನೆಯಲ್ಲಿ ೪ ರಿಂದ ೫ ಬ್ಯಾರಲಗಳು ಹತ್ತಾರು ಕೊಡಗಳನ್ನು ಕಾಣಬಹುದು. ವಿದ್ಯುತ್ ಕಂಬಗಳಿದ್ದರು ರಸ್ತೆ ದೀಪಗಳಿಲ್ಲ, ರಸ್ತೆಗಳು ಇಲ್ಲ, ಎಲ್ಲಿ ನೋಡಿದರಲ್ಲಿ ಬಳ್ಳಾರಿ ಜಾಲಿ ಮುಳ್ಳಿನ ಮರಗಳು ಬೆಳೆದಿವೆ. ಮಳೆಯಾದರೇ ರಸ್ತೆಗಳೆಲ್ಲ ಕೆಸರುಮಯವಾಗಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಹಾಗಂತ ಇಲ್ಲಿರುವ ನಿವಾಸಿಗಳು ಸುಮ್ಮನೆ ಕುಳಿತಿಲ್ಲ. ಹಲವು ಬಾರಿ ಹಿರಿಯ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳನ್ನು ಸಂಪರ್ಕಿಸಿ, ಸಮಸ್ಯೆ ಹೇಳಿದ್ದು ಸಮಸ್ಯೆಗೆ ಸ್ಪಂದಿಸುವ ಗೋಜಿಗೆ ಹೋಗುತ್ತಿಲ್ಲ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಒಂದೆರಡು ದಿನ ನೀರು ಪೂರೈಕೆ ಮಾಡಿದಂತೆ ಮಾಡಿ ಮತ್ತದೇ ಹಳೇ ಚಾಳಿ ಮುಂದು ವರೆಸುತ್ತಾರೆಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೀರು ಪೂರೈಸಲು ನಗರಸಭೆಯವರು ಒಬ್ಬರನ್ನು ನೇಮಕ ಮಾಡಿದ್ದು ಆ ವ್ಯಕ್ತಿ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ ಕೆಲಭಾಗಗಳಲ್ಲಿ ಮಾತ್ರ ನೀರು ಪೂರೈಕೆ ಮಾಡುವ ಮೂಲಕ ಉಳಿದ ಮನೆಗಳಿಗೆ ನೀರು ಪೈರೈಕೆ ಮಾಡುತ್ತಿಲ್ಲ ಆರೋಪಿಸಿದ್ದಾರೆ. ಅಧಿಕಾರಿಗಳು ಮಾತ್ರ ಹಾರಿಕೆ ಉತ್ತರ ನೀಡುತ್ತಿದ್ದು ನೀರು, ಬೀದಿದೀಪ ಹಾಗೂ ರಸ್ತೆಗಳ ಸುಧಾರಿಸುವತ್ತ ಕ್ರಮಗಳನ್ನು ಜರುಗಿಸಿಲ್ಲ ಎಂದು ನಿವಾಸಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುನರ್ವಸತಿ ಕೇಂದ್ರದ ನಿವಾಸಿಗಳು ಅಧಿಕಾರಿಗಳಗೆ, ಜನಪ್ರತಿನಿಧಿಗಳಿಗೆ ಅಂಗಲಾಚುವ ಮೂಲಕ ಪ್ರತಿಸಲ ಖಾಲಿ ಕೊಡಗಳನ್ನು ಪ್ರದರ್ಶಿಸಿ ತಮ್ಮ ಸಮಸ್ಯೆಗಳನ್ನು ಬಗೆ ಹರಿಸುವಂತೆ ಮನವಿ ಮಾಡುವದು ಸಾಮಾನ್ಯವಾಗಿದೆ. ಆದರೇ ಯಾರೊಬ್ಬರು ಶಾಶ್ವತವಾಗಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಜರುಗಿಸಿಲ್ಲ. ಶಾಸಕರು, ಜನಪ್ರತಿನಿಧಿಗಳನ್ನು ಕೆಟ್ಟ ಪದಗಳಿಂದ ನಿಂದಿಸುವ ನಿವಾಸಿಗಳು ತಮ್ಮ ಆಕ್ರೋಶವನ್ನು ಹೊರಹಾಕುತ್ತಾರೆ. ಬಡವನ ಕೋಪ ದವಡೆಗೆ ಮೂಲ ಎಂಬAತಾಗಿದೆ ಇಲ್ಲಿಯ ನಿವಾಸಿಗಳ ಪರಿಸ್ಥಿತಿ.
ಪ್ರತಿಭಟನೆಯಲ್ಲಿ ಸತ್ಯವ್ವ ಗಸ್ತಿ, ಮಲ್ಲಪ್ಪ ಯಂಕಾಂಚಿ, ಆಕಾಶ ಶಿವನಕ್ಕನವರ, ಸಿದ್ದರಾಜ ಶಿವನಕ್ಕನವರ, ದೇವರಾಜ ಕೆಳಗಡೆ, ಮಾಂತೇಶ, ವಿಠಲ ಶಿವನಕ್ಕನವರ, ಆಕಾಶ ಯಂಕಾಂಚಿ, ರುಕುಮವ್ವ ಕಾಂಬಳೆ, ಬಾಗವ್ವ ಹಳಿಂಗಳಿ, ಬಾಳವ್ವ ಗಸ್ತಿ, ಕಾಸವ್ವ ಯಂಕಾAಚಿ, ರುಕುಮವ್ವ ಕೆಳಗಡೆ, ನಿಂಬೆವ್ವ ಕಾಂಬಳೆ, ಶೃತಿ ಚಿನಗುಂಡಿ, ಶಾಮಲಾ ಗಸ್ತಿ, ನಗಮವ್ವ ಯಂಕಾAಚಿ, ಸತ್ಯವ್ವ ನಾಗನೂರು, ಸುಂದರವ್ವ ಗಸ್ತಿ ಸಹಿತ ಹಲವರು ಪಾಲ್ಗೊಂಡಿದ್ದರು.

1) ಬಾಕ್ಸ್:ಹಿಪ್ಪರಗಿಯಿಂದ ನೀರು ಸರಬರಾಜು ಮಾಡುವ ಪೈಪಲೈನ್ ದುರಸ್ತಿ ಇದ್ದುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಪೈಪಲೈನ್ ದುರಿಸ್ತಿ ಕಾರ್ಯ ಮುಕ್ತಾಯವಾಗಿದ್ದು, ಪ್ರತಿ ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುವದು ಸಾರ್ವಜನಿಕರು ಸಹಕರಿಸಬೇಕು.
-ಯಲ್ಲಪ್ಪ ಬಿದರಿ ಕಂದಾಯ ಅಧಿಕಾರಿಗಳು ನಗರಸಭೆ ಜಮಖಂಡಿ.
ಕಡಕೋಳ ಪುನರ್ವಸತಿ ಕೇಂದ್ರದಲ್ಲಿ ಕುಡಿಯುವ ನೀರನ್ನಂತೂ ಕೇಳಬೇಡಿ ಶೌಚ್ಯಕ್ಕೂ ನೀರಿಲ್ಲ. ಹಲವು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ. ಸಾರ್ವಜನಿಕರು ಪ್ರತಿನಿತ್ಯ ಪರದಾಡ ಬೇಕಾದ ಪರಿಸ್ಥಿತಿ ಎದುರಾಗಿದೆ. ನಮ್ಮ ಗೋಳು ಕೇಳುವರು ಯಾರೂ ಇಲ್ಲ ಎಂಬಂತಾಗಿದೆ. ಪತ್ರಕರ್ತರಿಂದ ಸಹಕಾರ ಲಭಿಸುವ ಆಶಾಭಾವನೆ ನಮ್ಮಲ್ಲಿ ಮೂಡಿದೆ.
-ಮಲ್ಲಪ್ಪ ಯಂಕಂಚಿ, ಕಡಕೋಳ ಪುನರವಸತಿ ಕೇಂದ್ರದ ನಿವಾಸಿ.
24.98 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ: ಶಾಸಕ ಸವದಿ
ಅರಟಾಳ : ಕರ್ನಾಟಕ ರಾಜ್ಯದಲ್ಲಿ ಪ್ರ ಪ್ರಥಮ ಬಾರಿಗೆ 2006ರಲ್ಲಿ ಅಥಣಿ ತಾಲೂಕಿನ ಐಗಳಿ, ಮದಬಾವಿ, ಬಳ್ಳಿಗೇರಿ 3 ಸಂಯುಕ್ತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ರಾಜ್ಯಕ್ಕೆ ಮಾದರಿ ಹಾಗೂ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಅರಟಾಳ ಸಮೀಪದ ಐಗಳಿ ಕ್ರಾಸ್ನಲ್ಲಿ 24.98 ಕೋಟಿ ರೂ. ವೆಚ್ಚದ ಸಂಯುಕ್ತ ಕುಡಿಯುವ ನೀರಿನ ಪುನಶ್ಚತನ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿ, 2006ರಲ್ಲಿ ಆಗಸ್ಟ್ ನಲ್ಲಿ ತಾಲೂಕಿನಲ್ಲಿ ಒಂದೆಡೆ ಕೃಷ್ಣಾ ನದಿ ಪ್ರವಾಹ ಬಂದು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕೆಲಸ ಭರದಿಂದ ಸಾಗಿದರೆ, ಇದೇ, ತಾಲೂಕಿನ ತೆಲಸಂಗ ಹಾಗೂ ಅನಂತಪುರ ಹೋಬಳಿಗಳಲ್ಲಿ 3 ಕಿ.ಮೀ ದೂರ ಹೋಗಿ ಕುಡಿಯಲು ನೀರು ತರುವ ಭೀಕರ ಬರಗಾಲ ಪರಿಸ್ಥಿತಿ ಎದುರಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ನಾನು ಶಾಸಕನಾಗಿ ಆಯ್ಕೆಯಾದೆ. ಅಂದಿನ ಮುಖ್ಯಮಂತ್ರಿ ಧರ್ಮಸಿಂಗ ಅವರಿಗೆ ಪರಿಸ್ಥಿತಿ ವಿವರಿಸಿ ಮನದಟ್ಟು ಮಾಡಿದ ಮೇಲೆ 15 ಕೋಟಿ ವೆಚ್ಚದ 3 ಸಂಯುಕ್ತ ಕುಡಿಯುವ ನೀರು ಯೋಜನೆಗಳು ಅನುಷ್ಠಾನಕ್ಕೆ ಬಂದ ಫಲವಾಗಿ ಕುಡಿಯುವ ನೀರಿನ ಸಮಸ್ಯೆ ತಿಳಿಯಾಯಿತು. ರಾಜ್ಯದ 160 ಸಂಯುಕ್ತ ಕುಡಿಯುವ ನೀರಿನ ಯೋಜನೆಗಳಿದ್ದು, 2400 ಹಳ್ಳಿಗಳು ಒಳಪಟ್ಟಿವೆ. ಈಗ ಈ ಮೂರು ಯೋಜನೆಗಳಿಗೆ 68 ಕೋಟಿ ಪುನಶ್ಚತನಕ್ಕೆ ಮಂಜೂರಾಗಿದೆ. ಅದರಲ್ಲಿ 220 ಮೆ.ವ್ಯಾ. ನೀರೆತ್ತುವ ಮೋಟರ್ ಪಂಪ್, ಅಲ್ಲಲ್ಲಿ ೩೦ ಕಿ.ಮೀ. ಪೈಪಲೈನ್ ಸೇರಿದಂತೆ ಸರಾಗವಾಗಿ ನೀರು ಸರಬರಾಜಿಗೆ ಅನುಕೂಲವಾಗುವಂತೆ ಎಲ್ಲ ಸೌಕರ್ಯಗಳನ್ನು ನೂತನ ತಂತ್ರಜ್ಞಾನದೊಂದಿಗೆ ಮಾಡಲಾಗುವದು. ಬರಗಾಲದ ಬವಣೆ ನೀಗಿಸಿ ರೈತರ ನೆಮ್ಮದಿ ಬದುಕಿಗೆ ಶ್ರಮಿಸಿ ಯಶಸ್ವಿಯಾದ ತೃಪ್ತಿ ನನಗಿದೆ. 8 ರಿಂದ 10 ತಿಂಗಳಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.ಅಥಣಿ ಗ್ರಾಮಿಣ ಮತ್ತು ನೈರ್ಮಲ್ಯ ಇಲಾಖೆ ಸ.ಕಾ.ನಿ. ಅಭಿಯಂತರ ರವೀಂದ್ರ ಮುರಗಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಕಮರಿ, ಐಗಳಿ, ಅಡಹಳ್ಳಿ, ಕೊಟ್ಟಲಗಿ, ತೆಲಸಂಗ, ಕೊಹಳ್ಳಿ, ಕನ್ನಾಳ, ಬನ್ನೂರ, ಬಾವನದಡ್ಡಿ, ಬಾಡಗಿ ಗ್ರಾಮಗಳಿಗೆ ಈ ಯೋಜನೆಯಿಂದ ಹೊಸ ತಂತ್ರಜ್ಞಾನ ಮೂಲಕ ಪ್ರತಿದಿನ ವ್ಯಕ್ತಿಗೆ 55 ಲೀ ನೀರು ಪೂರೈಸಲು ಸಹಕಾರಿಯಾಗಲಿದೆ ಎಂದರು.
ಶ್ರೀ ಲಕ್ಷಣ ಸಂಗಪ್ಪಾ ಸವದಿ
ಬೆಂಗಳೂರ ಮಾಲೂ ಕನ್ಸಟ್ರಕ್ಷನ್ನ ನವೀನ ನಾಗನೂರ ಹಾಗೂ ಸಿಬ್ಬಂದಿ ಮಾನ್ಯ ಲಕ್ಷ್ಮಣ ಸಂ. ಸವದಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಶೇಖರ ನೇಮಗೌಡ, ಸಿದ್ದರಾಯ ಯಲಡಗಿ, ಶ್ಯಾಮ ಪೂಜಾರಿ, ಸುಶೀಲಕುಮಾರ ಪತ್ತಾರ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಗುರು ದಾಶ್ಯಾಳ, ನೂರಹಮ್ಮದ ಡೊಂಗರಗಾಂವ, ಪ್ರಲ್ಲಾದ ಪಾಟೀಲ, ಗ್ರಾಪಂ ಅಧ್ಯಕ್ಷರಾದ ಬಸವಂತ ಗುಡ್ಡಾಪುರ, ನಾನಾಗೌಡ ಪಾಟೀಲ, ವೆಂಕಣ್ಣಾ ಅಸ್ಕಿ, ಶಿವಾನಂದ ತೇಲಿ, ಶ್ರೀಶೈಲ ಶೆಲ್ಲೆಪ್ಪಗೋಳ, ಇಂಜಿನಿಯರ್ ಬಸವರಾಜ ಪಾಟೀಲ, ತಾ.ಪಂ. ಇ.ಒ. ಶಿವಾನಂದ ಕಲ್ಲಾಪುರ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ ಹಾಗೂ ರೈತರು ಪಾಲ್ಗೊಂಡಿದ್ದರು. ಕೇದಾರಿ ಬಿರಾದಾರ ನಿರೂಪಿಸಿದರು. ರವಿ ಮೂರಗಾಲಿ ಸ್ವಾಗತಿ ವಂದಿಸಿದರು.
ಆನೇಕಲ್ನಲ್ಲಿ ಪತ್ರಿಕಾ ದಿನಾಚರಣೆ: ಶಾಸಕರಿಂದ ಪತ್ರಕರ್ತರಿಗೆ ಅಭಿನಂದನೆ
ಆನೇಕಲ್, ಜುಲೈ 21, 2025: ಆನೇಕಲ್ ತಾಲ್ಲೂಕು ಗ್ರಾಮೀಣ ಕಾರ್ಯನಿರತ ಪತ್ರಕರ್ತರ ಸಮಿತಿ ವತಿಯಿಂದ ಇಂದು ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ತಾಲ್ಲೂಕು ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗಿಡಕ್ಕೆ ನೀರು ಹಾಕುವ ಮೂಲಕ ಪತ್ರಕರ್ತರಿಗೆ ಶುಭ ಕೋರಿದರು ಮತ್ತು ಪರಿಸರ ಕಾಳಜಿ ಮೆರೆದರು.
ಇಂದು ಬೆಳಿಗ್ಗೆ : ಶ್ರೀನಿಧಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಈ ಸರಳ ಸಮಾರಂಭದಲ್ಲಿ, ಪತ್ರಕರ್ತರು ತಾಲ್ಲೂಕು ಶಾಸಕರನ್ನು ಬರಮಾಡಿಕೊಂಡರು. ಪತ್ರಿಕಾ ವೃತ್ತಿಯ ಮಹತ್ವ, ಸಮಾಜದಲ್ಲಿ ಮಾಧ್ಯಮದ ಪಾತ್ರ ಹಾಗೂ ಸವಾಲುಗಳ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಲಾಯಿತು.
ನಂತರ, ಶಾಸಕರು ಮತ್ತು ಪತ್ರಕರ್ತರು ಸೇರಿ ಗಿಡಕ್ಕೆ ನೀರುಣಿಸುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಿದರು. “ಮಾಹಿತಿ ಪ್ರಸಾರದ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುವುದು ಶ್ಲಾಘನೀಯ. ಪತ್ರಿಕಾ ದಿನಾಚರಣೆಯಂದು ಗಿಡಕ್ಕೆ ನೀರು ಹಾಕುವ ಮೂಲಕ ಪತ್ರಕರ್ತರು ಪರಿಸರ ಪ್ರಜ್ಞೆ ಮೆರೆದಿರುವುದು ನಿಜಕ್ಕೂ ಆದರ್ಶಪ್ರಾಯ” ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಅರ್ಥಪೂರ್ಣ ಆಚರಣೆಯಲ್ಲಿ ತಾಲ್ಲೂಕಿನ ಅನೇಕ ಗ್ರಾಮೀಣ ಕಾರ್ಯನಿರತ ಪತ್ರಕರ್ತರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಪರಿಸರ ಸ್ನೇಹಿ ಪತ್ರಿಕಾ ದಿನಾಚರಣೆಯ ಈ ಆಚರಣೆಯು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.
ರಾಮದುರ್ಗ ತಾಲೂಕಿನ ಪೊಲೀಸ್ ಇಲಾಖೆಯಿಂದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ
ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕಿನ ಪಿಎಸ್ಐ ಸವಿತಾ ಮುನ್ನಾಳ. ರವರು ತಮ್ಮ ನೇತೃತ್ವದಲ್ಲಿ, ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮ ಕೈಗೊಂಡಿದ್ದು , ಇದು ಪ್ರಥಮವಾಗಿ ಬೆಳಗಾಂವ ಜಿಲ್ಲಾ ರಾಮದುರ್ಗ ತಾಲೂಕಿನ ತುರನೂರ ಗ್ರಾಮದ ಶ್ರೀ ಕೆಂಪಣ್ಣ ಕ್ವಾರಿ, ಮತ್ತು ಗ್ರಾಮಸ್ಥರು ಹಾಗೂ ಸಂಗಮೇಶ್ವರ ನಗರದ ಮಲ್ಲವ್ವ ಗೌರಿಗುಡಿ, ಹಾಗೂ ಊರಿನ ಗ್ರಾಮಸ್ಥರು, ಹಾಗೂ ರಾಮದುರ್ಗ ನಗರದ ಪಂಕಜ ಕಣ್ಣೂರ್, ರವರ ಮನೆಗೆ ಭೇಟಿ ನೀಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು, ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ಅವರ ರವರ ಕುಂದು ಕೊರತೆಗಳನ್ನು ಆಲಿಸುವದರ ಜೊತೆಗೆ ಸಾರ್ವಜನಿಕರ ಸುರಕ್ಷಿತವಾಗಿ ಹೇಗೆ ನಡೆದುಕೊಳ್ಳಬೇಕು, ಪೊಲೀಸರು ಅಂದರೆ ಭಯಪಡದೆ ಒಳ್ಳೆಯ ರೀತಿಯಲ್ಲಿ ತಾವು ನಡೆದುಕೊಂಡು ಕಾನೂನಾತ್ಮಕವಾಗಿ ತಮ್ಮ ತಮ್ಮಲ್ಲಿಯ ತೊಂದರೆಗಳನ್ನು ನಮ್ಮ ಮುಂದೆ ತಿಳಿಸಬಹುದು, ಸಾರ್ವಜನಿಕರ ಸುರಕ್ಷತೆಗಾಗಿ ನಮ್ಮ ಇಲಾಖೆಯಿಂದ ಮನೆ ಮನೆಗೆ ಪೋಲಿಸ್ ಎಂಬ ಕಾರ್ಯಕ್ರಮ ನಡೆಸುತ್ತಿದ್ದೇವೆ, ನೀವು ತೊಂದರೆಯಲ್ಲಿ ಸಿಲುಕಿದಾಗ ತುರ್ತು ಸೇವೆಗಾಗಿ 112 ನಂಬರಿಗೆ ಕರೆ ಮಾಡಿ ತಿಳಿಸಬಹುದು, ಸಾರ್ವಜನಿಕರ ಸೇವೆಗಾಗಿ ನಾವು ಸದಾ ಸಿದ್ಧರಿದ್ದೇವೆ ಎಂದು ಮನೆಗೆ ಭೇಟಿ ನೀಡಿದ ಸಮಯದಲ್ಲಿ, ಇನ್ನೂ ಅನೇಕ ರೀತಿ ಕಾನೂನ ಸವಲತ್ತಿನ ವಿಷಯಗಳನ್ನು ತಿಳಿಸಿ ಹೇಳುತ್ತಿದ್ದರು, ಈ ಕಾರ್ಯ ಕ್ರಮದ ಸಾರ್ವಜನಿಕರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂತೋಷ್ ಮತ್ತು ಮುಜುಗರದಿಂದ ಮಾತನಾಡುತ್ತಿದ್ಧು ಕಂಡು ಬಂತು,
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ
