ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕಿನ ಪಿಎಸ್ಐ ಸವಿತಾ ಮುನ್ನಾಳ. ರವರು ತಮ್ಮ ನೇತೃತ್ವದಲ್ಲಿ, ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮ ಕೈಗೊಂಡಿದ್ದು , ಇದು ಪ್ರಥಮವಾಗಿ ಬೆಳಗಾಂವ ಜಿಲ್ಲಾ ರಾಮದುರ್ಗ ತಾಲೂಕಿನ ತುರನೂರ ಗ್ರಾಮದ ಶ್ರೀ ಕೆಂಪಣ್ಣ ಕ್ವಾರಿ, ಮತ್ತು ಗ್ರಾಮಸ್ಥರು ಹಾಗೂ ಸಂಗಮೇಶ್ವರ ನಗರದ ಮಲ್ಲವ್ವ ಗೌರಿಗುಡಿ, ಹಾಗೂ ಊರಿನ ಗ್ರಾಮಸ್ಥರು, ಹಾಗೂ ರಾಮದುರ್ಗ ನಗರದ ಪಂಕಜ ಕಣ್ಣೂರ್, ರವರ ಮನೆಗೆ ಭೇಟಿ ನೀಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು, ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ಅವರ ರವರ ಕುಂದು ಕೊರತೆಗಳನ್ನು ಆಲಿಸುವದರ ಜೊತೆಗೆ ಸಾರ್ವಜನಿಕರ ಸುರಕ್ಷಿತವಾಗಿ ಹೇಗೆ ನಡೆದುಕೊಳ್ಳಬೇಕು, ಪೊಲೀಸರು ಅಂದರೆ ಭಯಪಡದೆ ಒಳ್ಳೆಯ ರೀತಿಯಲ್ಲಿ ತಾವು ನಡೆದುಕೊಂಡು ಕಾನೂನಾತ್ಮಕವಾಗಿ ತಮ್ಮ ತಮ್ಮಲ್ಲಿಯ ತೊಂದರೆಗಳನ್ನು ನಮ್ಮ ಮುಂದೆ ತಿಳಿಸಬಹುದು, ಸಾರ್ವಜನಿಕರ ಸುರಕ್ಷತೆಗಾಗಿ ನಮ್ಮ ಇಲಾಖೆಯಿಂದ ಮನೆ ಮನೆಗೆ ಪೋಲಿಸ್ ಎಂಬ ಕಾರ್ಯಕ್ರಮ ನಡೆಸುತ್ತಿದ್ದೇವೆ, ನೀವು ತೊಂದರೆಯಲ್ಲಿ ಸಿಲುಕಿದಾಗ ತುರ್ತು ಸೇವೆಗಾಗಿ 112 ನಂಬರಿಗೆ ಕರೆ ಮಾಡಿ ತಿಳಿಸಬಹುದು, ಸಾರ್ವಜನಿಕರ ಸೇವೆಗಾಗಿ ನಾವು ಸದಾ ಸಿದ್ಧರಿದ್ದೇವೆ ಎಂದು ಮನೆಗೆ ಭೇಟಿ ನೀಡಿದ ಸಮಯದಲ್ಲಿ, ಇನ್ನೂ ಅನೇಕ ರೀತಿ ಕಾನೂನ ಸವಲತ್ತಿನ ವಿಷಯಗಳನ್ನು ತಿಳಿಸಿ ಹೇಳುತ್ತಿದ್ದರು, ಈ ಕಾರ್ಯ ಕ್ರಮದ ಸಾರ್ವಜನಿಕರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂತೋಷ್ ಮತ್ತು ಮುಜುಗರದಿಂದ ಮಾತನಾಡುತ್ತಿದ್ಧು ಕಂಡು ಬಂತು,
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ
