ಹುಣಸಗಿ ಪಟ್ಟಣದ ಎಮ್ ಎನ್ ಬಳಿ ಫೌಂಡೇಶನ್ ವತಿಯಿಂದ ದಿವಂಗತ. ಮಡಿವಾಳಮ್ಮ ಗಂಡ ದಿವಂಗತ ಮಹದೇವಪ್ಪ ಸಾಹುಕಾರ ಬಳಿ ಅವರ ಪುತ್ಥಳಿ ಅನಾವರಣ ಹಾಗೂ ಪುಣ್ಯಸ್ಮರಣೆಯ ನೆನಪಿನ ಅಂಗವಾಗಿ ಆಗಸ್ಟ್ 1 ಮತ್ತು 2 ರಂದು ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಗಿದೆ ಮತ್ತು ಪುತ್ತಳಿಯನ್ನು ದಿನಾಂಕ 04.08.2025 ರಂದು ಸೋಮವಾರ ಅಂದು ಅನಾವರಣ ಮಾಡಲಾಗುವುದು ಎಂದು ಫೌಂಡೇಶನ್ ಅಧ್ಯಕ್ಷ ಏನ್. ಎಮ್.ಸಾಹುಕಾರ ಬಳಿ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ ಇವರ ತಂದೆ ತಾಯಿಯಾದ ದಿವಂಗತ ಮಡಿವಾಳಮ್ಮ ಗಂಡ ದಿವಂಗತ ಮಹಾದೇವಪ್ಪ( ಸಾಹುಕಾರ್) ಬಳಿ ಅವರು ಬಡವರ ದೀನ ದಲಿತರ ಶೋಷಿತ ವರ್ಗದ ಜನರ ಬಗ್ಗೆ ಕಾಳಜಿಯನ್ನು ಹೊಂದಿರುವವರು ಅವರ ಮನೆತನ ಹಿಂದಿನಿಂದಲೂ ಸಮಾಜಕ್ಕೆ ದುಡಿಯುವ ಸಮಾಜ ಸೇವಕನ ಪುತ್ತಳಿಯ ಅಂಗವಾಗಿ ಬಡವರಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ಉಚಿತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಿವೇಕಾನಂದ ಸೇವಾ ಆಶ್ರಮ ಬೆಂಗಳೂರು ಹಾಗೂ ಜಿಲ್ಲಾ ಅಂದಿತ್ವ ನಿವಾರಣಾ ಸಂಸ್ಥೆ ಯಾದಗಿರಿ ಆಶ್ರಯದಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದರು
ಹುಣಸಿಗಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಆಗಸ್ಟ್ 1 ರಂದು ನೇತ್ರ ತಪಾಸಣೆ ಇದ್ದು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದು ಮತ್ತು ಅಗಸ್ಟ್ 2 ರಂದು ಕಣ್ಣಿನ ಪೊರೆ ಅಥವಾ ಕಣ್ಣಿಗೆ ಚಿಕಿತ್ಸೆ ಮಾಡಿ ಲೆನ್ಸ್ ಅನ್ನು ಉಚಿತವಾಗಿ ಅಳವಡಿಸಲಾಗುವುದು ಎಂದು ತಿಳಿಸಿದರು
ವಿನೋದ್ ಸಾಹುಕಾರ ಬಳಿ ಅವರು ಮಾತನಾಡಿ ಚಿಕಿತ್ಸೆಗೆ ಬರುವವರು ಭಾವಚಿತ್ರ ಇರುವ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ತರಬೇಕೆಂದು ತಿಳಿಸಿದರು ಈ ಶಿಬಿರದಲ್ಲಿ ಜಿಲ್ಲಾಧಿಕಾರಿಯಾದ ಬೋಯರ ಹರ್ಷಲ ನಾರಾಯಣರಾವ್ . ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರ್ಡಿಯ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಮಹೇಶ್ ಬಿರೆದಾರ್. ಸುರಪುರ ವೈದ್ಯಾಧಿಕಾರಿ ಡಾ ಆರ್ ವಿ. ನಾಯಕ. ಹುಣಸಗಿ ವೈದ್ಯಾಧಿಕಾರಿ ಡಾ ರೇವಣಸಿದ್ದ ಬಳಿ ಹಾಗೂ ಈ ಶಿಬಿರದಲ್ಲಿ ಸಮಸ್ತ ಬಳಿ ಪರಿವಾರದ ಮಕ್ಕಳು ಸೊಸೆಯಂದಿರು. ಅಳಿಯಂದಿರು ಮೊಮ್ಮಕ್ಕಳು ಬಂದು ಮಿತ್ರರು ಹಾಗೂ ಸಮಸ್ತ ಗುರು ಹಿರಿಯರು ಮತ್ತು ಸ್ಥಳೀಯ ವೈದ್ಯಧಿಕಾರಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು
