ಹುಣಸಗಿ ಪಟ್ಟಣದ ಎಮ್ ಎನ್ ಬಳಿ ಫೌಂಡೇಶನ್ ವತಿಯಿಂದ ದಿವಂಗತ. ಮಡಿವಾಳಮ್ಮ ಗಂಡ ದಿವಂಗತ ಮಹದೇವಪ್ಪ ಸಾಹುಕಾರ ಬಳಿ ಅವರ ಪುತ್ಥಳಿ ಅನಾವರಣ ಹಾಗೂ ಪುಣ್ಯಸ್ಮರಣೆಯ ನೆನಪಿನ ಅಂಗವಾಗಿ ಆಗಸ್ಟ್ 1 ಮತ್ತು 2 ರಂದು ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಗಿದೆ ಮತ್ತು ಪುತ್ತಳಿಯನ್ನು ದಿನಾಂಕ 04.08.2025 ರಂದು ಸೋಮವಾರ ಅಂದು ಅನಾವರಣ ಮಾಡಲಾಗುವುದು ಎಂದು ಫೌಂಡೇಶನ್ ಅಧ್ಯಕ್ಷ ಏನ್. ಎಮ್.ಸಾಹುಕಾರ ಬಳಿ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ ಇವರ ತಂದೆ ತಾಯಿಯಾದ ದಿವಂಗತ ಮಡಿವಾಳಮ್ಮ ಗಂಡ ದಿವಂಗತ ಮಹಾದೇವಪ್ಪ( ಸಾಹುಕಾರ್) ಬಳಿ ಅವರು ಬಡವರ ದೀನ ದಲಿತರ ಶೋಷಿತ ವರ್ಗದ ಜನರ ಬಗ್ಗೆ ಕಾಳಜಿಯನ್ನು ಹೊಂದಿರುವವರು ಅವರ ಮನೆತನ ಹಿಂದಿನಿಂದಲೂ ಸಮಾಜಕ್ಕೆ ದುಡಿಯುವ ಸಮಾಜ ಸೇವಕನ ಪುತ್ತಳಿಯ ಅಂಗವಾಗಿ ಬಡವರಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ಉಚಿತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಿವೇಕಾನಂದ ಸೇವಾ ಆಶ್ರಮ ಬೆಂಗಳೂರು ಹಾಗೂ ಜಿಲ್ಲಾ ಅಂದಿತ್ವ ನಿವಾರಣಾ ಸಂಸ್ಥೆ ಯಾದಗಿರಿ ಆಶ್ರಯದಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದರು
ಹುಣಸಿಗಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಆಗಸ್ಟ್ 1 ರಂದು ನೇತ್ರ ತಪಾಸಣೆ ಇದ್ದು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದು ಮತ್ತು ಅಗಸ್ಟ್ 2 ರಂದು ಕಣ್ಣಿನ ಪೊರೆ ಅಥವಾ ಕಣ್ಣಿಗೆ ಚಿಕಿತ್ಸೆ ಮಾಡಿ ಲೆನ್ಸ್ ಅನ್ನು ಉಚಿತವಾಗಿ ಅಳವಡಿಸಲಾಗುವುದು ಎಂದು ತಿಳಿಸಿದರು
ವಿನೋದ್ ಸಾಹುಕಾರ ಬಳಿ ಅವರು ಮಾತನಾಡಿ ಚಿಕಿತ್ಸೆಗೆ ಬರುವವರು ಭಾವಚಿತ್ರ ಇರುವ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ತರಬೇಕೆಂದು ತಿಳಿಸಿದರು ಈ ಶಿಬಿರದಲ್ಲಿ ಜಿಲ್ಲಾಧಿಕಾರಿಯಾದ ಬೋಯರ ಹರ್ಷಲ ನಾರಾಯಣರಾವ್ . ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರ್ಡಿಯ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಮಹೇಶ್ ಬಿರೆದಾರ್. ಸುರಪುರ ವೈದ್ಯಾಧಿಕಾರಿ ಡಾ ಆರ್ ವಿ. ನಾಯಕ. ಹುಣಸಗಿ ವೈದ್ಯಾಧಿಕಾರಿ ಡಾ ರೇವಣಸಿದ್ದ ಬಳಿ ಹಾಗೂ ಈ ಶಿಬಿರದಲ್ಲಿ ಸಮಸ್ತ ಬಳಿ ಪರಿವಾರದ ಮಕ್ಕಳು ಸೊಸೆಯಂದಿರು. ಅಳಿಯಂದಿರು ಮೊಮ್ಮಕ್ಕಳು ಬಂದು ಮಿತ್ರರು ಹಾಗೂ ಸಮಸ್ತ ಗುರು ಹಿರಿಯರು ಮತ್ತು ಸ್ಥಳೀಯ ವೈದ್ಯಧಿಕಾರಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು
POST
2010-11 ನೇ ಸಾಲಿನ ಎಂ ಡಿ ಆರ್ ಎಸ್ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ.
ಹುಣಸಗಿ : ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದ ಮುರಾರ್ಜಿ ದೇಸಾಯಿ ಮಾದರಿ ವಸತಿ ನಿಲಯದಲ್ಲಿ 2010-11 ನೇ ಸಾಲಿನ ವಿದ್ಯಾರ್ಥಿಗಳು ಗುರುವಂದನ ಕಾರ್ಯಕ್ರಮ ಅದ್ದೂರಿಯಿಂದ ಆಚರಿಸಿದರು.
ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಅಕ್ಬರ್ ಅಲಿ ಅತ್ತಾರ್ ಇವರು ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಎನ್ ಆರ್ ಜಾಲಿಬಿಂಚಿ ಮತ್ತು ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಮಾನಪ್ಪ ಸತ್ಯ ಹಾಗೂ ದೈಹಿಕ ಶಿಕ್ಷಕರಾದ ಅಶ್ಪಕ್ ದನದಮನಿ, ನಿವೃತ್ತ ವಸತಿ ನಿಲಯದ ಮೇಲ್ವಿಚಾರಕರಾದ ಮುದಿಗೌಡ ಶಿಕ್ಷಕರಾದ ಸಂಗನಬಸಪ್ಪ ಪಂಜುಗಲ್ ದೇವಿಂದ್ರ ಕಡಕಲ್ ಶಶಿಕಲಾ ಮಾಲಿಪಾಟೀಲ್ ಮಾಂತೇಶ್ ಹೂಗಾರ್ ಸಿದ್ದು ಮೇಟಿ ಗುರುರಾಜ್ ಜೋಶಿ ಶ್ರವಣ್ ಕುಮಾರ್ ಗೋನಾಲ್,ಫರೀದ್ ಸಿದ್ದರಾಮಯ್ಯಟ್ಟಿ, ಗಂಗಣ್ಣ ಪತ್ತಾರ್, ಶ್ರೀಮತಿ ರೇಷ್ಮಾ ಶ್ರೀಮತಿ ಅನುಸೂಯ ಬಿರಾದರ ಎಲ್ಲಾ ಶಿಕ್ಷಕರಿಗೆ ವಿದ್ಯಾರ್ಥಿಗಳು ಹೂಗುಚ್ಚದ ಮೂಲಕ ಎಲ್ಲರನ್ನು ಬರಮಾಡಿಕೊಂಡು ಎಲ್ಲಾ ಶಿಕ್ಷಕರಿಗೆ ಸನ್ಮಾನ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.
ಪ್ರಸ್ತಾವಿಕ ನುಡಿಯನ್ನು ಸಂಗನಬಸಪ್ಪ ಪಂಜುಗಲ್ ಇವರು ನೆರವೇರಿಸಿ ಕೊಟ್ಟರು.
ಆರ್ ಎನ್ ಜಾಲಿಬೆಂಚಿ ಇವರು ಮಾತನಾಡಿ ಸುಮಾರು ವರ್ಷಗಳ ಹಿಂದಿನ ನೆನಪುಗಳನ್ನು ಮರಳಿ ತೋರಿಸಿಕೊಟ್ಟ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು. ಗುರುವಿನ ಗುಲಾಮನಾಗುವ ತನಕ ದೊರೆಯದೆಣ್ಣ ಮುಕುತಿ ಎಂಬುದರ ವಿಸ್ತಾರ ಮಕ್ಕಳಿಗೆ ತಿಳಿಸಿ ಶಿಕ್ಷಣದ ಮೌಲ್ಯ ಶಿಕ್ಷಣದ ನೀತಿ ಶಿಕ್ಷಣ ವಂತನಾದರೆ ಜೀವನದಲ್ಲಿ ಎಲ್ಲವೂ ಸಾಧಿಸಲು ಸಾಧ್ಯ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಾನಪ್ಪ ಸತ್ಯ ಶಿಕ್ಷಕರು ಮಾತನಾಡಿ ಮಕ್ಕಳ ಉಜ್ವಲ ಭವಿಷ್ಯ ಶಿಕ್ಷಕರ ಕೈಯಲ್ಲಿದ್ದು ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಮಕ್ಕಳು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಂಡು ಸರಿ ಮಾರ್ಗದಲ್ಲಿ ಹೋದಲ್ಲಿ ಅವರ ಉಜ್ಜಲ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗುವುದು ಮಕ್ಕಳು ಗುರುಗಳನ್ನು ಗೌರವದಿಂದ ಕಂಡರೆ ಮುಂದಿನ ಭವಿಷ್ಯವೂ ಮಕ್ಕಳಿಗೆ ಭವಿಷ್ಯವನ್ನು ರೂಪಿಸಿಕೊಡುತ್ತದೆ ಹಲವಾರು ವಿಷಯಗಳ ವಿಸ್ತಾರವನ್ನು ಮಕ್ಕಳಿಗೆ ಹೇಳಿದರು.
ಬಸವರಾಜ್ ಹಳೆಯ ವಿದ್ಯಾರ್ಥಿ ಮಾತನಾಡಿ ನಾನು ಕೊನೆಯ ಆಸನದಲ್ಲಿ ಕೂಡುವ ವಿದ್ಯಾರ್ಥಿಯಾಗಿದ್ದು ಆ ಸಮಯದಲ್ಲಿ ಗುರುಗಳು ಹೇಳಿಕೊಟ್ಟ ಪಾಠವನ್ನು ಅವರು ಹೇಳುವ ನೀತಿ ಪಾಠವನ್ನು ಮಾನವೀಯ ಮೌಲ್ಯವನ್ನು ನಾನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ ಹಾಗಾಗಿ ನಾನು ಇಂದು ಮುಂದಿನ ಶಿಕ್ಷಣದ ಕಡೆಗೆ ಹೆಚ್ಚಿನ ಗಮನಕೊಡದೆ ಇದೇ ಗ್ರಾಮದಲ್ಲಿ ಇರುವ ಸನ್ನಿವೇಶ ನನಗೆ ಬಂದಿದ್ದು ನಾನು ಅಂದು ಗುರುಗಳ ಬುದ್ಧಿ ಮಾತು ಪಾಠ ಸರಿಯಾಗಿ ಕೇಳಿ ಗುರುಗಳ ಮಾರ್ಗದರ್ಶನದಲ್ಲಿ ನಡೆದಿದ್ದರೆ ನಾನು ಕೂಡ ಒಬ್ಬ ಉದ್ಯೋಗಸ್ಥ ಖಾಸಗಿ ನೌಕರ ಸರ್ಕಾರಿ ನೌಕರ ಆಗುತ್ತಿದ್ದೆ ಎಂದು ತನ್ನ ಜೀವನದ ಕಥೆಯನ್ನು ಮಕ್ಕಳಿಗೆ ಹೇಳಿ ತಾವುಗಳು ಮುಂದಿನ ಪ್ರಜೆಗಳು ನಾನು ಮಾಡಿದ ತಪ್ಪನ್ನು ಯಾವುದೇ ವಿದ್ಯಾರ್ಥಿಗಳು ಮಾಡಬೇಡಿ ಗುರುವಿನ ಮಾರ್ಗದರ್ಶನದಲ್ಲಿ ನಡೆದು ನಿಮ್ಮ ಜೀವನವನ್ನು ಯಶಸ್ವಿನ ಹಂತಕ್ಕೆ ತಲುಪಿ ಎಂದು ಹೇಳಿದರು.
ಅದೇ ರೀತಿ ದೇವೇಂದ್ರ ಕಡಕಲ್ ಗುರುರಾಜ್ ಜೋಶಿ ಮುಂತಾದ ಅತಿಥಿಗಳು ಮಾತನಾಡಿ ಈಗಿನ ಕಾಲಘಟ್ಟದಲ್ಲಿ ನಿಮ್ಮಂತ ವಿದ್ಯಾರ್ಥಿಗಳು ಪಡೆದಿರುವುದು ನಾವೇ ಭಾಗ್ಯವಂತರು ನಮ್ಮ ಭಾರತೀಯ ಸಂಸ್ಕೃತಿಯ ಗುರುಕುಲ ಪದ್ಧತಿಯೇ ಅನುಸಾರ ತಾವು ಎಲ್ಲಾ ಶಿಕ್ಷಕರನ್ನು ಪುನ ಒಂದೆಡೆ ಸೇರಿಸಿ ಗುರುವಂದನೆ ಸಲ್ಲಿಸಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾರದ ಕ್ಷಣವಾಗಿ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಧನ್ಯವಾದಗಳು ಎಲ್ಲಾ ಶಿಕ್ಷಕರು ತಿಳಿಸಿದರು.
ಹಳೆಯ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ದ್ಯಾಮಣ್ಣ ಬಸವರಾಜ್ ಅಡ್ಡಿ ಬಸವರಾಜ ಮಂಜುನಾಥ್ ಶಿವಕುಮಾರ್ ಸಾಯಬಣ್ಣ ಶರಣು ಚನ್ನಯ್ಯ ಪಲ್ಲವಿ ರೇಷ್ಮಾ ಪ್ರೇಮ ಸುಮಲತಾ ರೇಣುಕಾ ದೇವಿ ಎಲ್ಲಮ್ಮ ಸುಮಾರು ವಿದ್ಯಾರ್ಥಿಯರು ಪಾಲ್ಗೊಂಡಿದ್ದರು.
ಈ ಒಂದು ಕಾರ್ಯಕ್ರಮದ ನಿರೂಪಣೆಯನ್ನು ಪವಿತ್ರ ಹಾಗೂ ಸುಮಲತಾ ಸುಂದರವಾಗಿ ಸೊಗಸಾಗಿ ನಡೆಸಿಕೊಟ್ಟರು ಸ್ವಾಗತವನ್ನು ಮಲ್ಲಿಕಾರ್ಜುನ್ ನಾಗೂರ ನಡೆಸಿಕೊಟ್ಟರು ಕೊನೆಯದಾಗಿ ವಂದನಾರ್ಪಣೆ ಸಾಯಬಣ್ಣ ಇವರು ನಡೆಸಿಕೊಟ್ಟರು ಈ ಕಾರ್ಯಕ್ರಮದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕಬ್ಬಿನ ಗದ್ದೆಯಲ್ಲಿ ವ್ಯಕ್ತಿಯ ಶವ ಪತ್ತೆ
ಕಾಗವಾಡ : ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿ ಕಬ್ಬಿನ ಗದ್ದೆ ಒಳಗೆ ಒಗೆದು ಹೋಗಿರುವ ಘಟನೆ ಕಾಗವಾಡ ತಾಲೂಕಿನ ಶೇಡಬಾಳದಲ್ಲಿ ಗ್ರಾಮದಲ್ಲಿ ಬೇಳಕಿಗೆ ಬಂದಿದೆ ..
ಈ ಘಟನೆ ಶೇಡಬಾಳ ಗ್ರಾಮದ ರಾವಸಾಹೇಬ್ ಪಾಟೀಲ್ ರವರ ಎಂಬ ಕಬ್ಬಿನ ಗದ್ದೆಯಲ್ಲಿ ದುಷಕರ್ಮಿ ಗಳು ಬರ್ಬಬರವಾಗಿ ಕೋಲೆ ಮಾಡಿರುವ ಗಟನೆ ನಡದಿದ್ದು . ಕೊಲೆಯಾದ ವ್ಯಕ್ತಿಯನ್ನು ಶೇಡಬಾಳ ಗ್ರಾಮದ ಶಶಿಕಾಂತ್ ಕೃಷ್ಣಾ ಹೊನಕಾಂಬಳೆ (55) ಎಂದು ಗುರುತಿಸಲಾಗಿದೆ.
ಈ ಕೊಲೆಯು ಹಳೆಯ ದ್ವೇಷದ ಹಿನ್ನೆಲೆ ಶಶಿಕಾಂತನನ್ನು ಕೊಲೆ ಮಾಡಲಾಗಿದೆ ಎಂಬ ಸಂಶಯವನ್ನು ಶಶಿಕಾಂತ ಪುತ್ರ ರಾಹುಲ್ ವ್ಯಕ್ತಪಡಿಸಿದ್ದಾರೆ. ಮೃತರ ಶಶಿಕಾಂತನು ಇಬ್ಬರು ಪುತ್ರರನ್ನು ಅಗಲಿದ್ದು, ಓರ್ವ ಸೇನೆಯಲ್ಲಿ ಯೋಧನಾಗಿದ್ದಾನೆ ಇನ್ನೋರ್ವ ಹೂವಿನ ಮಾಲೆ ಕೆಲಸ ಮಾಡುತ್ತಾನೆ.
ಇನ್ನು ಈ ಹಿನ್ನಲೆ ತಂದೆಯ ಶವದ ಬಳಿ ಮಕ್ಕಳ ರೋಧನ ಮನಕಲಕುವಂತ್ತಿತ್ತು. ಸ್ಥಳಕ್ಕೆ ದಾವಿಸಿದ ಕಾಗವಾಡ ಮತ್ತು ಅಥಣಿ ಪೊಲೀಸರು ಭೇಟಿ ನೀಡಿ ಶ್ವಾನದಳದೊಂದಿಗೆ ಶೋದಕಾರ್ಯ ಮುಂದುವರಿಸಿದ್ದಾರೆ .
ಹನುಮಾನ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಅಗ್ರಹ.
ಸುರಪುರ ನಗರದಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕ ವತಿಯಿಂದ
ಮಂಗಿಹಾಳ ಗ್ರಾಮದ ಐತಿಹಾಸಿಕ ದೇವಸ್ಥಾನದ ಶ್ರೀ ಬಲಭೀಮೇಶ್ವರ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು. ಈ ದೇವಸ್ಥಾನಕ್ಕೆ ಸಾಕಷ್ಟು ಹಣವಿದ್ದು, ಈ ಕೂಡಲೇ ಸದರಿ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಕ ರ ವೇ . ಆಗ್ರಹಿಸಿ ಮನವಿ ಸಲ್ಲಿಸಿದರು ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ ಬೈರಿಮರಡಿ ಮಾತನಾಡಿ
ಮಂಗಿಹಾಳ ಗ್ರಾಮದಲ್ಲಿ ಶ್ರೀ ಬಲಭೀಮೇಶ್ವರ ದೇವಸ್ಥಾನವಿದ್ದು ಇದಕ್ಕೆ ಸುಮಾರು 50 ಎಕರೆ ಜಮೀನು ಕೂಡಾ ಇರುತ್ತದೆ. ಇದರಿಂದ ದೇವಸ್ಥಾನಕ್ಕೆ ಒಳ್ಳೆಯ ಆದಾಯ ಕೂಡ ಬರುತ್ತದೆ ಮತ್ತು ಸದರಿ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುತ್ತದೆ. ಇಷ್ಟೆಲ್ಲಾದ್ದರೂ ಕೂಡಾ ದೇವಸ್ಥಾನ ಸುತ್ತ ಮುತ್ತ ಸ್ವಚ್ಚತೆ ಇರುವುದಿಲ್ಲ. ದೇವಸ್ಥಾನಕ್ಕೆ ಕಂಪೌಂಡ ಗೋಡೆ ಇರುವುದಿಲ್ಲ. ಸದರಿ ದೇವಸ್ಥಾನಕ್ಕೆ ಆರ್ದ ಬಣ್ಣ ಕೊಟ್ಟಿರುತ್ತಾರೆ. ಇನ್ನು ಅರ್ಧ ಬಣ್ಣ ಮಾಡದೆ ಹಾಗೆ ಬಿಟ್ಟಿರುತ್ತಾರೆ. ಮತ್ತು ಈ ದೇವಸ್ಥಾನದೊಳಗೆ ಹೋಗಿ ಕೆಲವು ಪುಢಾರಿಗಳು, ಇಸ್ಪಾಟ್, ಮಟಕಾ ಮತ್ತು ಮದ್ಯಪಾನ ಸೇವಿಸುವುದು ಮಾಡುತ್ತಿದ್ದಾರೆ. ಇದರಿಂದ ದೇವಸ್ಥಾನದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುತ್ತಿದ್ದು, ಭಕ್ತಾದಿಗಳು ದೇವಸ್ಥಾನದ ದರ್ಶನಕ್ಕೆ ಬರಬೇಕಾದರೆ ತುಂಬಾ ಭಯಭೀತರಾಗಿದ್ದಾರೆ. ಇವುಗಳನ್ನು ಕಡಿವಾಣ ಹಾಕುವದಕ್ಕೆ ತಾವುಗಳು ಸಿ.ಸಿ.ಕ್ಯಾಮರ್ ಅಳವಡಿಸಿ. ಈ ಗ್ರಾಮಕ್ಕೆ ಬರುವ ಬೀಟ್ ಪೊಲೀಸ್ರಿಗೆ ನಿರ್ದೇಶನ ನೀಡಿ ದೇವಸ್ಥಾನದೊಳಗಡೆ ಯಾವುದೇ ಅನೈತಿಕ ಚಟುವಟಿಕೆ ನಡೆಯದಂತೆ ನಿಗಾ ವಹಿಸಲು ಸೂಚಿಸಬೇಕು.
1 ಆದ್ದರಿಂದ ದಯಾಳುಗಳಾದ ತಾವುಗಳು ತಕ್ಷಣವೇ ಸದರಿ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯಗಳನ್ನು 217 ಒದಗಿಸಿ ಅಭಿವೃದ್ಧಿ ಕಾಮಗಾರಿ ಮಾಡಿಕೊಡಬೇಕೆಂದು ತಮ್ಮಲ್ಲಿ ನಮ್ಮ ಸಂಘಟನೆ ಗ್ರಾಮಸ್ಥರ ಮನವಿಯ ಮೆರೆಗೆ ಮನವಿ ಸಲ್ಲಿಸುತ್ತಿದ್ದೇನೆ.ಎಂದು ಕರವೇ ಮೂಲಕ ಮಾನ್ಯ ಸುರಪುರ ತಾಲೂಕಿನ ತಹಶೀಲ್ದಾರ್ ಅವರಿಗೆ ಕಚೇರಿಯಲ್ಲಿ ಮನವಿ ಸಲ್ಲಿಸಿದರು ಇದೇ ಸಂದರ್ಭದಲ್ಲಿ
ಮಂಗಿಹಾಳ ಗ್ರಾಮದ ಶ್ರೀ ಬಲಭೀಮೇಶ್ವರ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯ ಒದಗಿಸಿಕೊಡುವ ಕುರಿತು ಮಾನ್ಯ ತಹಸೀಲ್ದಾರರು ಸುರಪುರ ಇವರಿಗೆ ಕರವೇ ತಾಲೂಕ ಘಟಕ ಸುರಪುರ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಕರವೇ . ತಾ. ಪ್ರ. ಕಾರ್ಯದರ್ಶಿ ಹಣಮಗೌಡ ಶಖಾಪೂರ , ತಾಲೂಕ ಪ್ರಧಾನ ಸಂಚಾಲಕರಾದ ಶ್ರೀನಿವಾಸ ನಾಯಕ ಲಕ್ಷ್ಮೀ ಪುರ , ಮಂಗಿಹಾಳ ಗ್ರಾಮ ಶಾಖೆಯ ಅಧ್ಯಕ್ಷರಾದ ಪ್ರಭು ಮಡಿವಾಳರ , ಹಾಗೂ ದೇವು ಹಾಲಗೇರಿ ಉಪಸ್ಥಿತರಿದ್ದರು.
ಕಾಪು ತಾಲ್ಲೂಕಿನಲ್ಲಿ ನೆರೆ: ರಕ್ಷಣೆಗೆ ಸ್ವತಃ ಫೀಲ್ಡಿಗಿಳಿದ ತಹಶಿಲ್ದಾರ್ ಡಾ.ಪ್ರತಿಭಾ ಆರ್
ಇಂದು ಸುರಿದ ಭಾರೀ ಮಳೆಗೆ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕು ಸಂಪೂರ್ಣ ತತ್ತರಿಸಿದೆ. ನೆರೆ ಸಂತ್ರಸ್ತವಾಗಿದೆ. ಹಲವು ಕುಟುಂಬಗಳನ್ನು ತಹಶಿಲ್ದಾರ್ ಡಾ.ಪ್ರತಿಭಾ ಆರ್ ರವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಸ್ವತಃ ನೆರೆ ನೀರಿಗಳಿದು ತಹಶಿಲ್ದಾರ್ ಜನರನ್ನು ರಕ್ಷಿಸಿದ್ದಾರೆ.
ಹಲವು ಕುಟುಂಬಗಳು ಸ್ಥಳಾಂತರ
ಮಲ್ಲಾರು ಗ್ರಾಮ – 8 ಜನ
ಹೆಜಮಾಡಿ – 1 ಜನ
ಪಾದೆಬೆಟ್ಟು – 15 ಜನ
ಬಡಾ – 5 ಜನ
ಸ್ಥಳಾಂತರಗೊಂಡಿರುತ್ತಾರೆ.
ಮನವೊಲಿಸಿದ ತಹಶಿಲ್ದಾರ್
ಕೆಲವು ವೃದ್ಧರು ತಾವು ಇಲ್ಲೇ ಇರುವುದಾಗಿ ಹಠ ಮಾಡಿದರೂ ತಹಶಿಲ್ದಾರ್ ಅವರ ಸುರಕ್ಷತೆಯ ದೃಷ್ಟಿಯಿಂದ ಅಲ್ಲಿ ಇರುವುದು ಸೂಕ್ತವಲ್ಲ ಎಂದು ಮನವೊಲಿಸಿ ಅವರನ್ನು ಸ್ಥಳಾಂತರ ಮಾಡಿಸಿದ್ದಾರೆ.
ಸುವ್ಯವಸ್ಥಿತ ಕಾಳಜಿ ಕೇಂದ್ರ:
ಕಾಪುವಿನ ಪಡು ಗ್ರಾಮದ ಬಹುಪಯೋಗಿ ಆಶ್ರಯತಾಣದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಸಂತ್ರಸ್ತರು ಇಲ್ಲಿ ತಂಗಲು ಅವಕಾಶವಿದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡು ಇಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ಆದರೆ ಹೆಚ್ವಿನ ಸಂತ್ರಸ್ತರು ಸಂಬಂಧಿಕರ ಮನೆಗೆ ತೆರಳಿರುತ್ತಾರೆ. ಯಾರಾದರೂ ಸಂತ್ರಸ್ತರು ಇಚ್ಚೆಪಟ್ಟರೆ ಕಾಳಜಿ ಕೇಂದ್ರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗುವುದು ಎಂದು ತಹಶಿಲ್ದಾರ್ ಡಾ.ಪ್ರತಿಭಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಹಶಿಲ್ದಾರ್ ಡಾ.ಪ್ರತಿಭಾ’ರವರ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರ
ಸ್ವತಃ ಫೀಲ್ಡಿಗಿಳಿದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ತಹಶಿಲ್ದಾರ್ ಡಾ.ಪ್ರತಿಭಾ ರವರ ಧೈರ್ಯ ಮತ್ತು ಮಾನವೀಯ ಸ್ಪಂದನೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಸಂತ್ರಸ್ತ ವೃದ್ಧೆ ಲೀಲಮ್ಮ(70 ವರ್ಷ) ಹೇಳಿಕೆ:
“ತಹಶಿಲ್ದಾರ್ ಮೇಡಂ ನಮ್ಮ ಮನೆ ಬಾಗಿಲಿಗೆ ಬಂದು ನಮ್ಮನ್ನು ಜಲದಿಗ್ಬಂಧನದಿಂದ ರಕ್ಷಿಸಿದ್ದಾರೆ. ಆದರೆ ಈ ನೆರೆಗೆ ಶಾಶ್ವತ ಪರಿಹಾರ ಸಿಗಬೇಕು. ಪ್ರತಿ ವರ್ಷ ಇದೇ ಗೋಳು. ತಹಶಿಲ್ದಾರ್ ಮೇಡಂ ಮಾನವೀಯ ಸ್ಪಂದನೆಗೆ ನಮ್ಮ ಸಲಾಮ್” ಎಂದಿದ್ದಾರೆ
ತಹಶಿಲ್ದಾರ್ ಡಾ.ಪ್ರತಿಭಾ ಆರ್ ಹೇಳಿಕೆ
“ಜನರ ಸುರಕ್ಷತೆಯೇ ನಮ್ಮ ಧ್ಯೇಯ”
“ಇಂದು ಸುರಿದ ಭಾರೀ ಮಳೆಗೆ ಕಾಪು ತಾಲ್ಲೂಕು* ತತ್ತರಗೊಂಡಿದೆ. ತಾಲ್ಲೂಕು ಅಡಳಿತದ ವತಿಯಿಂದ ರಕ್ಷಣಾ
ಕಾರ್ಯಾಚರಣೆ ಕೈಗೊಂಡಿದ್ದೇವೆ. ಕಾಮಿನಿ ನದಿ, ಪಾಪನಾಶಿನಿ
ನದಿಗಳ ಹೂಳೆತ್ತಿಸಿ ಸ್ವಚ್ಚಗೊಳಿಸಿದರೆ ನೆರೆಯ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮುಂದಿನ ದಿನಗಳಲ್ಲಿ ನದಿಗಳ ಸ್ವಚ್ವತಾ ಕಾರ್ಯಕ್ಕೆ ಕ್ರಮ ವಹಿಸಲಾಗುವುದು. ಇಂದು 29 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಜನರ ಸುರಕ್ಷತೆಯೇ ನಮ್ಮ ಧ್ಯೇಯ
ಗೃಹರಕ್ಷಕ ದಳದ ಸಿಬ್ಬಂದಿಗಳಾದ ಕುಮಾರ್, ಮಹೇಶ್ ಮತ್ತಿತರರು ತಹಶಿಲ್ದಾರ್ ರವರಿಗೆ ಸಾತ್ ನೀಡಿ ರಕ್ಷಣಾ ಕಾರ್ಯಾಚರಣೆ ಮಾಡಿದರು.
ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿಗಳಾದ ಶ್ರೀಕಾಂತ್, ಮಥಾಯ್ ಇವರು ಸಹಕರಿಸಿದರು.
ಸ್ಥಳೀಯ ಪಂಚಾಯತಿ ಅಧ್ಯಕ್ಷರಾದ ರೇಷ್ಮಾ ಮೆಂಡನ್ ಸಹಕರಿಸಿದರು.
ತಾಲ್ಲೂಕು ಆಡಳಿತ ನೆರೆ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿದೆ. ಬೋಟುಗಳನ್ನು ರೆಡಿ ಇಟ್ಟುಕೊಳ್ಳಲಾಗಿದೆ. ನುರಿತ ಈಜುಗಾರರ ತಂಡ ಸದಾ ಸೇವೆಗೆ ಲಭ್ಯವಿದೆ. ತಹಶಿಲ್ದಾರ್ ಕಚೇರಿ ಕಂಟ್ರೋಲ್ ರೂಮ್ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ (0820-2551444).
ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಪ್ರಕಟಣೆಯಲ್ಲಿ .
ಡಾ.ನಂದುಪೂಜಾರಿ
ರಾಜ್ಯ ವರದಿಗಾರು
ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಆಷಾಡ ಮಾಸದ ವಿಶೇಷ ಪೂಜೆ
ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಆಷಾಡ ಮಾಸದ ಶುಕ್ರವಾರದಂದು ವಿಶೇಷ ಪೂಜೆ ನಡೆಯಿತು ಬೆಳಿಗ್ಗೆಯಿಂದ ಅಭಿಷೇಕ ಪೂಜೆ, ಅಲಂಕಾರ ಪೂಜೆ ಹಾಗೂ ಮಧ್ಯಾಹ್ನದ ವಿಶೇಷ ಮಹಾಪೂಜೆಯನ್ನು ಸಲ್ಲಿಸಲಾಗಿತ್ತು ಪೂಜೆ ಬಳಿಕ ನಡೆದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಅನ್ನ ಅನ್ನ ಸಂತರ್ಪಣೆ ನಡೆಸಲಾಗಿತ್ತು ಹಾಗೂ ಮಹಿಳಾ ಭಜನಾ ಮಂಡಳಿ ಗುಜರಾತಿನ ಸೇಟ್ ಮಹಿಳಾ ಮಾರವಾಡಿಗಳಿಂದ ದೇವಿಯ ಭಜನೆಗಳು ನಡೆದವು ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸದಾನಂದ ಉಪಾದಕ್ಷ ಮಂಜುನಾಥ್ ಕಾರ್ಯದರ್ಶಿ ಸೋಮಶೇಖರ್ ಖಜಾಂಜಿ ಲೋಕೇಶ್ ನಿರ್ದೇಶಕರುಗಳು ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಅಪಾರ ಸಂಖ್ಯೆಯ ಕಾಳಿಕಾಂಬ ಭಕ್ತಾದಿಗಳು ಹಾಜರಿದ್ದರು
ಹೆಬ್ಬಳ್ಳಿ ದರ್ಗಾದ ಶಿಷ್ಯ ಪಪ್ಪು ಮುತ್ಯಾರಿಂದ ಸಾವಳಗಿ ದರ್ಗಾಗೆ ಪೂಜೆ
ಬಾಗಲಕೋಟೆ: ಕುತುಬುದೀನ ಹಾಜಿಸಾಬ್ ಕೋಟ್ಯಾಳ ಅವರ ಮನೆ ಯಿಂದ ಮಡಿಯಲ್ಲಿ ನದಿ ನೀರು ತಂದು ದೇವರ ತೋಳೆದು ಗಂಧ ಏರಿಸುವುದು ಜರುಗಿತು.
ಜಮಖಂಡಿ ತಾಲೂಕಿನ ಸಾವಳಗಿ ನಗರದಲ್ಲಿ ರಥದ ಮೂಲಕ ಪಪ್ಪು ಮುತ್ಯಾ ಮೆರವಣಿಗೆ ಪ್ರಾರಂಭಗೊಂಡು ಶಿವಾಜಿ ಸರ್ಕಲ, ಕಲ್ಯಾಣ ಕಟ್ಟೆ ಮೂಲಕ ದರ್ಗಾಗೆ ಪ್ರವೇಶಿಸಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಜರತ್ ಮುಸ್ಕಿನ್ ವಲಿ ದುರ್ಗಾ ಉರುಸು ನಿಮಿತ್ಯ ದೇವರಿಗೆ ನೈವೇದ್ಯ ಹೆಬ್ಬಳ್ಳಿ ದರ್ಗಾದ ಶಿಷ್ಯ ಪಪ್ಪು ಮುತ್ಯ ಅವರಿಂದ ಸಕಲ ಸಿದ್ಧತೆಯನ್ನು ಅದ್ಧೂರಿಯಿಂದ ಜರುಗಿತು. ಇದೇ ಸಂದರ್ಭದಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ಅರುಣಕುಮಾರ ಎಸ್. ಪಾಟೀಲ ಕೊಡಲಹಂಗರಗಾ ಹುಟ್ಟು ಹಬ್ಬದ ಅಂಗವಾಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಚಿಂಚೋಳಿ ಪಟ್ಟಣದ ಚಂದಾಪುರದ ಸಾರ್ವಜನಿಕರ ಸರ್ಕಾರಿ ಆಸ್ಪತ್ರೆಯಲ್ಲಿ ಕಲಬುರಗಿ ಜಿಲ್ಲಾ ವೀರಶೈವ ಸಮಾಜದ ಜಿಲ್ಲಾಧ್ಯಕ್ಷರಾದ ಅರುಣಕುಮಾರ ಎಸ್. ಪಾಟೀಲ ಕೊಡಲಹಂಗರಗಾ, ಅವರ ಹುಟ್ಟು ಹಬ್ಬದ ಅಂಗವಾಗಿ ಚಿಂಚೋಳಿ ತಾಲೂಕ ವೀರಶೈವ ಸಮಾಜದ ವತಿಯಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮವನ್ನು ಚಿಂಚೋಳಿ ಬಡಿದರ್ಗಾ ಸಜ್ಜಾದೆ ನಶೀನ್ ಸೈಯದ್ ಅಕ್ಬರ್ ಹುಸೈನಿ, ಮತ್ತು ತಾಲೂಕ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ಮಹಮ್ಮದ ಗಫರ್, ಅವರು ರೋಗಿಗಳೇ ಹಣ್ಣುಗಳನ್ನು ವಿತರಣೆ ಮಾಡಿದರು ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ್, ತಾಲೂಕ ವೀರಶೈವ ಸಮಾಜದ ಗೌರವಾಧ್ಯಕ್ಷರಾದ ರಮೇಶ್ ಪಡಶೆಟ್ಟಿ, ತಾಲೂಕ ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿಗಳದ ವೀರೇಶ ದೇಸಾಯಿ ಚಿಮ್ಮಾಇದಲಾಯಿ, ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ಪ್ರದೀಪ್ ದೇಶಮುಖ, ರೇವಣಸಿದ್ದಪ್ಪ ದಾದಾಪುರ, ವಿಜಯ್ ಕುಮಾರ್ ಬಳಕೇರಿ, ಚಂದ್ರಶೇಖರ್ ಪಾರ, ಜಗದೀಶ್ ಸಜ್ಜನ್ ಕಲ್ಲೂರ್, ಸಮಾಜದ ಯುವ ಮುಖಂಡರಾದ ಪವನ ಪಾಟೀಲ ದೇಗಲಮಡಿ, ದಯಾನಂದ ಹಿತ್ತಲ, ಈಶ್ವರಪ್ಪ ಕಲಶೆಟ್ಟಿ ಗರಗಪಳ್ಳಿ, ಸುನೀಲ್ ಕಾಳಗಿ, ಮಲ್ಲಿನಾಥ್ ಮೇಲಗಿರಿ, ಚೇತನ್ ಹುಡದಳಿ, ರೇವಣಸಿದ್ದಪ್ಪ ತಡಕಲ್, ಮತ್ತು ಅನೇಕ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಇದ್ದರು
ರಕ್ತ ಸಂಗ್ರಹಣೆಯ ದಾಖಲೆಗೆ ದಿನಗಣನೆ ಆರಂಭ
ರಕ್ತ ಸಂಗ್ರಹಣೆಯ ದಾಖಲೆಗೆ ದಿನಗಣನೆ ಆರಂಭಜು.೨೩ರ ರಕ್ತದಾನ ಶಿಬಿರದಲ್ಲಿ ವಿಶ್ವದಾಖಲೆ ಮಾಡುವ ಗುರಿಚಿಕ್ಕಬಳ್ಳಾಪುರ ರಕ್ತದಾನಿಗಳ ರಾಜಧಾನಿಯಾಗಲಿ ಎಂದಕೆವಿ ಶಿಕ್ಷಣ ಸಂಸ್ಥೆ ಗಳೆಂದರೆ ಚಿಕ್ಕಬಳ್ಳಾಪುರದ ಜನತೆಗೆ ಚಿರಪರಿಚಿತ. ಹಾಗಂತ ಇದು ಪೋಷಕರನ್ನ ಸುಲಿಗೆ ಮಾಡೋ ಶಿಕ್ಷಣಸಂಸ್ಥೆಯಾಗಿ ಪ್ರಖ್ಯಾತಿ ಪಡೆದಿಲ್ಲ, ಬದಲಿಗೆ ಸಮಾಜ ಸೇವೆಯ ಮೂಲಕ ಖ್ಯಾತಿ ಪಡೆದಿದೆ. ಹೌದು, ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ರಾದ ಸಿವಿ. ವೆಂಕಟರಾಯಪ್ಪನವರು ಚಿಕ್ಕಬಳ್ಳಾಪುರವನ್ನು ಶಿಕ್ಷಣ ನಗರವಾಗಿ ಮಾಡಲು ಪಣ ತೊಟ್ಟು ಸಂಸ್ಥೆಯನ್ನು ಆರಂಭಿಸಿದರೆ, ಕೆ.ವಿ. ನವೀನ್ ಕಿರಣ್ ಅವರು ಅದೇ ಶಿಕ್ಷಣಸಂಸ್ಥೆಗಳನ್ನ ಸಮಾಜ ಸೇವೆಗೆ ಒಡ್ಡುವ ಮೂಲಕ ಮತ್ತಷ್ಟು ಪ್ರಖ್ಯಾತಿಗೆ ಪಾತ್ರರಾಗಿದ್ದಾರೆ.
ಇಂತಹ ಕೆವಿ ಕ್ಯಾಂಪಾಸ್ಲ್ಲಿ ಸಿವಿವಿ ದತ್ತಿ ಜಯಂತಿ, ದತ್ತಿ ದಿನಾಚರಣೆ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಜು.೨೩ ರಂದು ಮೆಗಾ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಕನಿಷ್ಟ ೪ ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಗುರಿಹೊಂದಲಾಗಿದೆ. ನಗರ ಹೊರವಲಯದ ಕೆವಿ ಕ್ಯಾಂಪಾಸ್ ಕ್ರೀಡಾಂಗಣದಲ್ಲಿ ಜು.೩೦ರಂದು ನಡೆಯಲಿರುವ ಸಿ.ವಿ ವೆಂಕಟರಾಯಪ್ಪನವರ ೨೯ನೇ ದತ್ತಿ ದಿನಾಚರಣೆ ಅಂಗವಾಗಿ ಪತ್ರಕರ್ತರಿಗಾಗಿಯೇ ಹಮ್ಮಿಕೊಂಡಿದ್ದ ಕ್ರೀಡಾಕೂಟದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನವೀನ್ ಕಿರಣ್ ಚಿಕ್ಕಬಳ್ಳಾಪುರ ರಕ್ತದಾನಿಗಳ ರಾಜ ದಾನಿ ಯಾಗಲಿ ಎಂದು ಕರೆ ನೀಡಿದರು.
ದತ್ತಿ ಜಯಂತಿ ಅಂಗವಾಗಿ ೨೦೦೨ ರಲ್ಲಿ ರಾಷ್ಟ್ರೋತ್ಥಾನ ಪರಿಷತ್ ಸಹಕಾರದಲ್ಲಿ ಪ್ರಾರಂಭವಾದವಾದ ರಕ್ತದಾನ ಶಿಬಿರ ಮೊದಲ ಬಾರಿಗೆ ಕೇವಲ ೨೫ ಯೂನಿಟ್ ಸಂಗ್ರಹದಿAದ ಆರಂ`Àವಾಯಿತು. ಕಳೆದೆರಡು ವರ್ಷಗಳಿಂದ ೨ ಸಾವಿರ ಯೂನಿಟ್ ತಲುಪಿದೆ. ಆ ಮೂಲಕ ರಕ್ತದಾನದ ಕ್ರಾಂತಿಯನ್ನುAಟು ಮಾಡುತ್ತಿದೆ. ಜು.೨೩ ರಂದು ನಡೆಯುವ ರಕ್ತದಾನ ಶಿಬಿರದಲ್ಲಿ ಕನಿಷ್ಟ ೪ ಸಾವಿರ ಯೂನಿಟ್ ರಕ್ತ ಸಂಗ್ರಹವಾಗಲಿದೆ ಎಂದು ನವೀನ್ ಕಿರಣ್ ವಿಶ್ವಾಸ ವ್ಯಕ್ತಪಡಿಸಿದರು.
ಜಿ¯್ಲೆ ರಕ್ತದಾನಿಗಳ ರಾಜ`Áನಿಯಾಗುತ್ತಿದ್ದು, ರಕ್ತ ಸಂಗ್ರಹದಲ್ಲಿ ಚಿಕ್ಕಬಳ್ಳಾಪುರ ವಿಶ್ವ ದಾಖಲೆ ಬರೆಯಲಿದೆ. ಜುಲೈ ೨೩ಕ್ಕೆ ನಡೆಯಲಿರುವ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಸಂಘಸAಸ್ಥೆಗಳು, ಸಿನಿಮಾ ನಟರು, ಉದ್ಯಮಿಗಳು ವೀಡಿಯೋ ಮೂಲಕ ರಕ್ತದಾನಕ್ಕೆ ಪ್ರೋತ್ಸಾಹ ನೀಡಿರುವುದು ಸಂತಸ ತಂದಿದೆ, ಕಳೆದ ಎರಡೂವರೆ ತಿಂಗಳಿದ ಶಿಕ್ಷಣಸಂಸ್ಥೆಗಳ ೪೦೦ಕ್ಕೂ ಹೆಚ್ಚು ಸಿಬ್ಬಂದಿ ಪ್ರತಿನಿತ್ಯ ಶ್ರಮಿಸಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ೧೪ ಸಾವಿರಕ್ಕೂ ಹೆಚ್ಚು ಜನ ಆನ್ಲೈನ್ ಮೂಲಕ ರಕ್ತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ, ಈ ಮೂಲಕ ರಕ್ತಾದನದಲ್ಲಿ ಕ್ರಾಂತಿ ನಡೆಯುತ್ತಿದೆ, ನೋಂದಣಿ ಮಾಡಿಕೊಂಡ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದರು.
೭ ಸಾವಿರ ಮಂದಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಲಾಗಿದೆ, ರಕ್ತದಾನ ಶಿಬಿರದ ಸ್ಥಳದಲ್ಲಿ ರಕ್ತದಾನಿಗಳು ಕಾಯುವ ಸ್ಥಿತಿ ಇಲ್ಲದಂತೆ ಈ ಬಾರಿ ಕ್ರಮ ವಹಿಸಲಾಗಿದೆ, ೨೫೦ ಹಾಸಿಗೆಗಳ ವಿಶಾಲ ಜಾಗವನ್ನು ಸಿದ್ಧಪಡಿಸಲಾಗಿದೆ, ಎಲ್ಲರೂ ಬಂದು ರಕ್ತದಾನ ಮಾಡುವಂತೆ ಮನವಿ, ೨೦೧೨ರಿಂದ ಈವರೆಗೂ ೮,೫೦೦ ಯೂನಿಟ್ಗೂ ಹೆಚ್ಚು ರಕ್ತ ಶೇಖರಣೆ ಮಾಡಲಾಗಿದೆ. ೨೦೨೪ರಲ್ಲಿ ೨,೧೪೬ ಯೂನಿಟ್ ರಕ್ತ ಸಂಗ್ರಹ ಮಾಡಲಾಗಿದೆ. ಜೀವ ಉಳಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಲು ಅವರು ಮನವಿ ಮಾಡಿದರು.
ಮಾಜಿ ಶಾಸಕರಾದ ಶಿವರಾಜ ಸಜ್ಜನರ ಹುಟ್ಟು ಹಬ್ಬದ ಪ್ರಯುಕ್ತ ಕಲ್ಯಾಣ ಸಮಿತಿಯಿಂದ ಸನ್ಮಾನ
ಹಾವೇರಿ:ಜಿಲ್ಲೆ ಹಾಗೂ ರಾಜ್ಯದಲ್ಲಿ ಪ್ರಭಾವಿಗಳಾಗಿ ಜಿಲ್ಲೆಗೆ ತಮ್ಮದೆಯಾದ ಕೊಡುಗೆ ನೀಡಿದ ಮಾಜಿಶಾಸಕರಾದ ಶಿವರಾಜ ಸಜ್ಜನರ ಅವರ ಸೇವೆ ಅಪಾರವಾಗಿದೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಹೇಳಿದರು. ಇಲ್ಲಿನ ಮಾಜಿ ಶಾಸಕರಾದ ಶಿವರಾಜ ಸಜ್ಜನರ ಅವರ ನಿವಾಸದಲ್ಲಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರನ್ನು ಕಲ್ಯಾಣ ಸಮಿತಿಯಿಂದ ಗೌರವಿಸಿ ಸನ್ಮಾನಿಸಿ ಅವರ ಸೇವೆ ಸ್ಮರಸಿದರು. ಸರಳ ಸಜ್ಜನಕೆಯ ವ್ಯಕ್ತಿತ್ವದ ಹಾಗೂ ಯುವ ನಾಯಕರನ್ನು ಬೆಳಿಸುವ ಸ್ವಭಾವ ಮಾಜಿಶಾಸಕರಾದ ಶಿವರಾಜ ಸಜ್ಜನರ ಅವರಲ್ಲಿ ಕಾಣಬಹುದು.ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಅವರ ಕಷ್ಟಗಳಿಗೆ ಸ್ಪಂಧಿಸುವ ಕೆಲಸವನ್ನು ಶಿವರಾಜ ಸಜ್ಜನರ ಅವರು ಮಾಡುತ್ತಾ ಬರುತ್ತಿದ್ದಾರೆ.ಅವರಿಗೆ ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನಮಾನ ಸಿಗಲಿ ಹಾಗೂ ಆರೋಗ್ಯ ಆಯುಷ್ಯ ವೃದ್ಧಿಸಲಿ ಎಂದು ಉಡಚಪ್ಪ ಮಾಳಗಿ ಅವರು ಶುಭ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ ಮುಖಂಡರಾದ ರಾಜು ಪೇಟಕರ್, ಮೃತ್ಯುಂಜಯ ಮುಷ್ಠಿ,ರಾಜು ಹೊಸಕೇರಿ,ದ್ಯಾಮಣ್ಣ ಕೊಟ್ಟೂರ,ಶಾಂತಯ್ಯ ಮಳ್ಳಿಮಠ,ಸುನೀಲ ಕೋರಿ,ನಿಂಗಪ್ಪ ದಂಡಿನವರ ಸೇರಿದಂತೆ ಅನೇಕರು ಇದ್ದರು.
