ಇಂದು ಸುರಿದ ಭಾರೀ ಮಳೆಗೆ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕು ಸಂಪೂರ್ಣ ತತ್ತರಿಸಿದೆ. ನೆರೆ ಸಂತ್ರಸ್ತವಾಗಿದೆ. ಹಲವು ಕುಟುಂಬಗಳನ್ನು ತಹಶಿಲ್ದಾರ್ ಡಾ.ಪ್ರತಿಭಾ ಆರ್ ರವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಸ್ವತಃ ನೆರೆ ನೀರಿಗಳಿದು ತಹಶಿಲ್ದಾರ್ ಜನರನ್ನು ರಕ್ಷಿಸಿದ್ದಾರೆ.
ಹಲವು ಕುಟುಂಬಗಳು ಸ್ಥಳಾಂತರ
ಮಲ್ಲಾರು ಗ್ರಾಮ – 8 ಜನ
ಹೆಜಮಾಡಿ – 1 ಜನ
ಪಾದೆಬೆಟ್ಟು – 15 ಜನ
ಬಡಾ – 5 ಜನ
ಸ್ಥಳಾಂತರಗೊಂಡಿರುತ್ತಾರೆ.
ಮನವೊಲಿಸಿದ ತಹಶಿಲ್ದಾರ್
ಕೆಲವು ವೃದ್ಧರು ತಾವು ಇಲ್ಲೇ ಇರುವುದಾಗಿ ಹಠ ಮಾಡಿದರೂ ತಹಶಿಲ್ದಾರ್ ಅವರ ಸುರಕ್ಷತೆಯ ದೃಷ್ಟಿಯಿಂದ ಅಲ್ಲಿ ಇರುವುದು ಸೂಕ್ತವಲ್ಲ ಎಂದು ಮನವೊಲಿಸಿ ಅವರನ್ನು ಸ್ಥಳಾಂತರ ಮಾಡಿಸಿದ್ದಾರೆ.
ಸುವ್ಯವಸ್ಥಿತ ಕಾಳಜಿ ಕೇಂದ್ರ:
ಕಾಪುವಿನ ಪಡು ಗ್ರಾಮದ ಬಹುಪಯೋಗಿ ಆಶ್ರಯತಾಣದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಸಂತ್ರಸ್ತರು ಇಲ್ಲಿ ತಂಗಲು ಅವಕಾಶವಿದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡು ಇಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ಆದರೆ ಹೆಚ್ವಿನ ಸಂತ್ರಸ್ತರು ಸಂಬಂಧಿಕರ ಮನೆಗೆ ತೆರಳಿರುತ್ತಾರೆ. ಯಾರಾದರೂ ಸಂತ್ರಸ್ತರು ಇಚ್ಚೆಪಟ್ಟರೆ ಕಾಳಜಿ ಕೇಂದ್ರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗುವುದು ಎಂದು ತಹಶಿಲ್ದಾರ್ ಡಾ.ಪ್ರತಿಭಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಹಶಿಲ್ದಾರ್ ಡಾ.ಪ್ರತಿಭಾ’ರವರ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರ
ಸ್ವತಃ ಫೀಲ್ಡಿಗಿಳಿದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ತಹಶಿಲ್ದಾರ್ ಡಾ.ಪ್ರತಿಭಾ ರವರ ಧೈರ್ಯ ಮತ್ತು ಮಾನವೀಯ ಸ್ಪಂದನೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಸಂತ್ರಸ್ತ ವೃದ್ಧೆ ಲೀಲಮ್ಮ(70 ವರ್ಷ) ಹೇಳಿಕೆ:
“ತಹಶಿಲ್ದಾರ್ ಮೇಡಂ ನಮ್ಮ ಮನೆ ಬಾಗಿಲಿಗೆ ಬಂದು ನಮ್ಮನ್ನು ಜಲದಿಗ್ಬಂಧನದಿಂದ ರಕ್ಷಿಸಿದ್ದಾರೆ. ಆದರೆ ಈ ನೆರೆಗೆ ಶಾಶ್ವತ ಪರಿಹಾರ ಸಿಗಬೇಕು. ಪ್ರತಿ ವರ್ಷ ಇದೇ ಗೋಳು. ತಹಶಿಲ್ದಾರ್ ಮೇಡಂ ಮಾನವೀಯ ಸ್ಪಂದನೆಗೆ ನಮ್ಮ ಸಲಾಮ್” ಎಂದಿದ್ದಾರೆ
ತಹಶಿಲ್ದಾರ್ ಡಾ.ಪ್ರತಿಭಾ ಆರ್ ಹೇಳಿಕೆ
“ಜನರ ಸುರಕ್ಷತೆಯೇ ನಮ್ಮ ಧ್ಯೇಯ”
“ಇಂದು ಸುರಿದ ಭಾರೀ ಮಳೆಗೆ ಕಾಪು ತಾಲ್ಲೂಕು* ತತ್ತರಗೊಂಡಿದೆ. ತಾಲ್ಲೂಕು ಅಡಳಿತದ ವತಿಯಿಂದ ರಕ್ಷಣಾ
ಕಾರ್ಯಾಚರಣೆ ಕೈಗೊಂಡಿದ್ದೇವೆ. ಕಾಮಿನಿ ನದಿ, ಪಾಪನಾಶಿನಿ
ನದಿಗಳ ಹೂಳೆತ್ತಿಸಿ ಸ್ವಚ್ಚಗೊಳಿಸಿದರೆ ನೆರೆಯ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮುಂದಿನ ದಿನಗಳಲ್ಲಿ ನದಿಗಳ ಸ್ವಚ್ವತಾ ಕಾರ್ಯಕ್ಕೆ ಕ್ರಮ ವಹಿಸಲಾಗುವುದು. ಇಂದು 29 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಜನರ ಸುರಕ್ಷತೆಯೇ ನಮ್ಮ ಧ್ಯೇಯ
ಗೃಹರಕ್ಷಕ ದಳದ ಸಿಬ್ಬಂದಿಗಳಾದ ಕುಮಾರ್, ಮಹೇಶ್ ಮತ್ತಿತರರು ತಹಶಿಲ್ದಾರ್ ರವರಿಗೆ ಸಾತ್ ನೀಡಿ ರಕ್ಷಣಾ ಕಾರ್ಯಾಚರಣೆ ಮಾಡಿದರು.
ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿಗಳಾದ ಶ್ರೀಕಾಂತ್, ಮಥಾಯ್ ಇವರು ಸಹಕರಿಸಿದರು.
ಸ್ಥಳೀಯ ಪಂಚಾಯತಿ ಅಧ್ಯಕ್ಷರಾದ ರೇಷ್ಮಾ ಮೆಂಡನ್ ಸಹಕರಿಸಿದರು.
ತಾಲ್ಲೂಕು ಆಡಳಿತ ನೆರೆ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿದೆ. ಬೋಟುಗಳನ್ನು ರೆಡಿ ಇಟ್ಟುಕೊಳ್ಳಲಾಗಿದೆ. ನುರಿತ ಈಜುಗಾರರ ತಂಡ ಸದಾ ಸೇವೆಗೆ ಲಭ್ಯವಿದೆ. ತಹಶಿಲ್ದಾರ್ ಕಚೇರಿ ಕಂಟ್ರೋಲ್ ರೂಮ್ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ (0820-2551444).
ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಪ್ರಕಟಣೆಯಲ್ಲಿ .
ಡಾ.ನಂದುಪೂಜಾರಿ
ರಾಜ್ಯ ವರದಿಗಾರು
