ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಆಷಾಡ ಮಾಸದ ಶುಕ್ರವಾರದಂದು ವಿಶೇಷ ಪೂಜೆ ನಡೆಯಿತು ಬೆಳಿಗ್ಗೆಯಿಂದ ಅಭಿಷೇಕ ಪೂಜೆ, ಅಲಂಕಾರ ಪೂಜೆ ಹಾಗೂ ಮಧ್ಯಾಹ್ನದ ವಿಶೇಷ ಮಹಾಪೂಜೆಯನ್ನು ಸಲ್ಲಿಸಲಾಗಿತ್ತು ಪೂಜೆ ಬಳಿಕ ನಡೆದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಅನ್ನ ಅನ್ನ ಸಂತರ್ಪಣೆ ನಡೆಸಲಾಗಿತ್ತು ಹಾಗೂ ಮಹಿಳಾ ಭಜನಾ ಮಂಡಳಿ ಗುಜರಾತಿನ ಸೇಟ್ ಮಹಿಳಾ ಮಾರವಾಡಿಗಳಿಂದ ದೇವಿಯ ಭಜನೆಗಳು ನಡೆದವು ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸದಾನಂದ ಉಪಾದಕ್ಷ ಮಂಜುನಾಥ್ ಕಾರ್ಯದರ್ಶಿ ಸೋಮಶೇಖರ್ ಖಜಾಂಜಿ ಲೋಕೇಶ್ ನಿರ್ದೇಶಕರುಗಳು ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಅಪಾರ ಸಂಖ್ಯೆಯ ಕಾಳಿಕಾಂಬ ಭಕ್ತಾದಿಗಳು ಹಾಜರಿದ್ದರು
