ಸುರಪುರ ನಗರದಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕ ವತಿಯಿಂದ
ಮಂಗಿಹಾಳ ಗ್ರಾಮದ ಐತಿಹಾಸಿಕ ದೇವಸ್ಥಾನದ ಶ್ರೀ ಬಲಭೀಮೇಶ್ವರ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು. ಈ ದೇವಸ್ಥಾನಕ್ಕೆ ಸಾಕಷ್ಟು ಹಣವಿದ್ದು, ಈ ಕೂಡಲೇ ಸದರಿ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಕ ರ ವೇ . ಆಗ್ರಹಿಸಿ ಮನವಿ ಸಲ್ಲಿಸಿದರು ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ ಬೈರಿಮರಡಿ ಮಾತನಾಡಿ
ಮಂಗಿಹಾಳ ಗ್ರಾಮದಲ್ಲಿ ಶ್ರೀ ಬಲಭೀಮೇಶ್ವರ ದೇವಸ್ಥಾನವಿದ್ದು ಇದಕ್ಕೆ ಸುಮಾರು 50 ಎಕರೆ ಜಮೀನು ಕೂಡಾ ಇರುತ್ತದೆ. ಇದರಿಂದ ದೇವಸ್ಥಾನಕ್ಕೆ ಒಳ್ಳೆಯ ಆದಾಯ ಕೂಡ ಬರುತ್ತದೆ ಮತ್ತು ಸದರಿ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುತ್ತದೆ. ಇಷ್ಟೆಲ್ಲಾದ್ದರೂ ಕೂಡಾ ದೇವಸ್ಥಾನ ಸುತ್ತ ಮುತ್ತ ಸ್ವಚ್ಚತೆ ಇರುವುದಿಲ್ಲ. ದೇವಸ್ಥಾನಕ್ಕೆ ಕಂಪೌಂಡ ಗೋಡೆ ಇರುವುದಿಲ್ಲ. ಸದರಿ ದೇವಸ್ಥಾನಕ್ಕೆ ಆರ್ದ ಬಣ್ಣ ಕೊಟ್ಟಿರುತ್ತಾರೆ. ಇನ್ನು ಅರ್ಧ ಬಣ್ಣ ಮಾಡದೆ ಹಾಗೆ ಬಿಟ್ಟಿರುತ್ತಾರೆ. ಮತ್ತು ಈ ದೇವಸ್ಥಾನದೊಳಗೆ ಹೋಗಿ ಕೆಲವು ಪುಢಾರಿಗಳು, ಇಸ್ಪಾಟ್, ಮಟಕಾ ಮತ್ತು ಮದ್ಯಪಾನ ಸೇವಿಸುವುದು ಮಾಡುತ್ತಿದ್ದಾರೆ. ಇದರಿಂದ ದೇವಸ್ಥಾನದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುತ್ತಿದ್ದು, ಭಕ್ತಾದಿಗಳು ದೇವಸ್ಥಾನದ ದರ್ಶನಕ್ಕೆ ಬರಬೇಕಾದರೆ ತುಂಬಾ ಭಯಭೀತರಾಗಿದ್ದಾರೆ. ಇವುಗಳನ್ನು ಕಡಿವಾಣ ಹಾಕುವದಕ್ಕೆ ತಾವುಗಳು ಸಿ.ಸಿ.ಕ್ಯಾಮರ್ ಅಳವಡಿಸಿ. ಈ ಗ್ರಾಮಕ್ಕೆ ಬರುವ ಬೀಟ್ ಪೊಲೀಸ್ರಿಗೆ ನಿರ್ದೇಶನ ನೀಡಿ ದೇವಸ್ಥಾನದೊಳಗಡೆ ಯಾವುದೇ ಅನೈತಿಕ ಚಟುವಟಿಕೆ ನಡೆಯದಂತೆ ನಿಗಾ ವಹಿಸಲು ಸೂಚಿಸಬೇಕು.
1 ಆದ್ದರಿಂದ ದಯಾಳುಗಳಾದ ತಾವುಗಳು ತಕ್ಷಣವೇ ಸದರಿ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯಗಳನ್ನು 217 ಒದಗಿಸಿ ಅಭಿವೃದ್ಧಿ ಕಾಮಗಾರಿ ಮಾಡಿಕೊಡಬೇಕೆಂದು ತಮ್ಮಲ್ಲಿ ನಮ್ಮ ಸಂಘಟನೆ ಗ್ರಾಮಸ್ಥರ ಮನವಿಯ ಮೆರೆಗೆ ಮನವಿ ಸಲ್ಲಿಸುತ್ತಿದ್ದೇನೆ.ಎಂದು ಕರವೇ ಮೂಲಕ ಮಾನ್ಯ ಸುರಪುರ ತಾಲೂಕಿನ ತಹಶೀಲ್ದಾರ್ ಅವರಿಗೆ ಕಚೇರಿಯಲ್ಲಿ ಮನವಿ ಸಲ್ಲಿಸಿದರು ಇದೇ ಸಂದರ್ಭದಲ್ಲಿ
ಮಂಗಿಹಾಳ ಗ್ರಾಮದ ಶ್ರೀ ಬಲಭೀಮೇಶ್ವರ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯ ಒದಗಿಸಿಕೊಡುವ ಕುರಿತು ಮಾನ್ಯ ತಹಸೀಲ್ದಾರರು ಸುರಪುರ ಇವರಿಗೆ ಕರವೇ ತಾಲೂಕ ಘಟಕ ಸುರಪುರ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಕರವೇ . ತಾ. ಪ್ರ. ಕಾರ್ಯದರ್ಶಿ ಹಣಮಗೌಡ ಶಖಾಪೂರ , ತಾಲೂಕ ಪ್ರಧಾನ ಸಂಚಾಲಕರಾದ ಶ್ರೀನಿವಾಸ ನಾಯಕ ಲಕ್ಷ್ಮೀ ಪುರ , ಮಂಗಿಹಾಳ ಗ್ರಾಮ ಶಾಖೆಯ ಅಧ್ಯಕ್ಷರಾದ ಪ್ರಭು ಮಡಿವಾಳರ , ಹಾಗೂ ದೇವು ಹಾಲಗೇರಿ ಉಪಸ್ಥಿತರಿದ್ದರು.
