ಕಾಗವಾಡ : ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿ ಕಬ್ಬಿನ ಗದ್ದೆ ಒಳಗೆ ಒಗೆದು ಹೋಗಿರುವ ಘಟನೆ ಕಾಗವಾಡ ತಾಲೂಕಿನ ಶೇಡಬಾಳದಲ್ಲಿ ಗ್ರಾಮದಲ್ಲಿ ಬೇಳಕಿಗೆ ಬಂದಿದೆ ..
ಈ ಘಟನೆ ಶೇಡಬಾಳ ಗ್ರಾಮದ ರಾವಸಾಹೇಬ್ ಪಾಟೀಲ್ ರವರ ಎಂಬ ಕಬ್ಬಿನ ಗದ್ದೆಯಲ್ಲಿ ದುಷಕರ್ಮಿ ಗಳು ಬರ್ಬಬರವಾಗಿ ಕೋಲೆ ಮಾಡಿರುವ ಗಟನೆ ನಡದಿದ್ದು . ಕೊಲೆಯಾದ ವ್ಯಕ್ತಿಯನ್ನು ಶೇಡಬಾಳ ಗ್ರಾಮದ ಶಶಿಕಾಂತ್ ಕೃಷ್ಣಾ ಹೊನಕಾಂಬಳೆ (55) ಎಂದು ಗುರುತಿಸಲಾಗಿದೆ.
ಈ ಕೊಲೆಯು ಹಳೆಯ ದ್ವೇಷದ ಹಿನ್ನೆಲೆ ಶಶಿಕಾಂತನನ್ನು ಕೊಲೆ ಮಾಡಲಾಗಿದೆ ಎಂಬ ಸಂಶಯವನ್ನು ಶಶಿಕಾಂತ ಪುತ್ರ ರಾಹುಲ್ ವ್ಯಕ್ತಪಡಿಸಿದ್ದಾರೆ. ಮೃತರ ಶಶಿಕಾಂತನು ಇಬ್ಬರು ಪುತ್ರರನ್ನು ಅಗಲಿದ್ದು, ಓರ್ವ ಸೇನೆಯಲ್ಲಿ ಯೋಧನಾಗಿದ್ದಾನೆ ಇನ್ನೋರ್ವ ಹೂವಿನ ಮಾಲೆ ಕೆಲಸ ಮಾಡುತ್ತಾನೆ.
ಇನ್ನು ಈ ಹಿನ್ನಲೆ ತಂದೆಯ ಶವದ ಬಳಿ ಮಕ್ಕಳ ರೋಧನ ಮನಕಲಕುವಂತ್ತಿತ್ತು. ಸ್ಥಳಕ್ಕೆ ದಾವಿಸಿದ ಕಾಗವಾಡ ಮತ್ತು ಅಥಣಿ ಪೊಲೀಸರು ಭೇಟಿ ನೀಡಿ ಶ್ವಾನದಳದೊಂದಿಗೆ ಶೋದಕಾರ್ಯ ಮುಂದುವರಿಸಿದ್ದಾರೆ .
