ಅರಸೀಕೆರೆ : ಅರಸೀಕೆರೆ ನಗರ ಸಮೀಪವಿರುವ ರಾಜ್ಯದಲ್ಲೇ ಚಿಕ್ಕ ತಿರುಪತಿ ಎಂದು ಹೆಸರು ಪಡೆದಿರುವ ಶ್ರೀ ಅಮರಗಿರಿ ಮಾಲೆಕಲ್ ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಪ್ರಥಮ ಬಾರಿಗೆ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಇಂದು ಭೇಟಿ ನೀಡಿದ ಹಾಸನ ಜಿಲ್ಲಾಧಿಕಾರಿ ಕೆ ಎಸ್ ಲತಾ ಕುಮಾರಿ ಇವರು ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯ ದರ್ಶನ ಪಡೆದು ನಂತರ ಭೇಟಿ ನೀಡಿದ ನೆನಪಿಗೋಸ್ಕರ ದೇವಾಲಯದ ಆವರಣದಲ್ಲಿ ಗುಲಾಬಿ ಹೂವಿನ ಗಿಡ ನೆಟ್ಟು ಸ್ವಾಮಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಮಾರುತಿ, ತಹಶೀಲ್ದಾರ್ ಎಂ ಜಿ ಸಂತೋಷ್ ಕುಮಾರ್, ತಾಲೂಕ್ ಪಂಚಾಯತ್
ಕಾರ್ಯನಿರ್ವಾಹಕ ಅಧಿಕಾರಿ ಎಚ್ ಕೆ ಸತೀಶ್ , ಟಿಎಚ್ಒ ರಂಗನಾಥ್, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ಅಗ್ಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೇ ಕವಿತಾ, ಪಿಡಿಒ ಶಿವಕುಮಾರ್ ,ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಟಿ ಆರ್ ನಾಗರಾಜ್, ಸಮಿತಿ ನಿರ್ದೇಶಕರಾದ ಚಂದ್ರು, ಮುಜರಾಯಿ ಇಲಾಖೆಯ ಅಧಿಕಾರಿ ನಾಗರತ್ನ, ಪಾರು ಪತ್ತೆದಾರ್ ಲೋಕೇಶಯ್ಯ, ಆಗಮಿಕರಾದ ರಾಮಪ್ರಸಾದ್,ಅರ್ಚಕರಾದ ವರದರಾಜು, ಕಂದಾಯ ವೃತ್ತ ನಿರೀಕ್ಷಕ ಓಬಳೇಶ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಶಿವಾನಂದನಾಯ್ಕ, ಗ್ರಾಮ ಆಡಳಿತ ಅಧಿಕಾರಿ ಅಶ್ವಿನಿ,ಪೊಲೀಸ್ ಪೇದೆ ಹರೀಶ್, ಸಮಾಜ ಸೇವಕ ಎಸ್ಎಲ್ಎನ್ ಯೋಗೇಶ್, ಕಂದಾಯ ಇಲಾಖೆ ಶಿವಕುಮಾರ್, ಆರೋಗ್ಯ ಇಲಾಖೆ ಸಿಬ್ಬಂದಿಗಳು, ತಿರುಪತಿ ಗ್ರಾಮಸ್ಥರು,ಭಕ್ತಾದಿಗಳು ಉಪಸ್ಥಿತರಿದ್ದರು. ವರದಿ ಪರ್ವಿಜ್ ಅಹಮದ್ ಅರಸೀಕೆರೆ
POST
ಆಲಮೇಲ ದಿಂದ ದೇವಣಗಾಂವ ಕಳಪೆ ಡಾಂಬರೀಕರಣ.
ಆಲಮೇಲ: ಸಮೀಪ ದೇವಣಗಾಂವ ಹತ್ತಿರ ನಾಲ್ಕು ಕಿಲೋಮೀಟರ್ ಡಂಬರಿಕರಣ ಕಳಪೆ ಕಾಮಗಾರಿಕೆ ಆಗಿರುವುದರಿಂದ ಸದಾಶಿವ ರಾಷ್ಟ್ರೀಯ ಹೆದ್ದಾರಿ ಇದು ಮಹಾರಾಷ್ಟ್ರ ಗಡಿ ಭಾಗದಲ್ಲಿ ಇರುವುದರಿಂದ ಗಾಣಗಾಪುರ ದಿಂದ ಪಂಡರಾಪುರಕ್ಕೆ ಹೋಗುವ ಮಾರ್ಗ ಇದು ಪ್ರಮುಖ ರಸ್ತೆ ವಾಗಿರುತ್ತದೆ.
ಆದರಿಂದ ಈ ನಾಲ್ಕು ಕಿಲೋಮೀಟರ್ ಡಾಂಬರೀಕರಣವನ್ನು ಸಂಬಂಧಪಟ್ಟ ಅಧಿಕಾರಿಗಳು ಈ ಭಾಗದ ಶಾಸಕರು ಅತಿ ಶೀಘ್ರದಲ್ಲಿ ಗಮನ ಹರಿಸಬೇಕು ಬಸವರಾಜ್ ಹೂಗಾರ್ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ಹೇಳಿದರು.
ಮಾಜಿ ಶಾಸಕರಾದ ರಮೇಶ್ ಭೂಸನೂರ ಅವರ ನೇತೃತ್ವದಲ್ಲಿ ನಾವು ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಸಂದೇಶ ನೀಡಿದರು.
ಕಲಬುರ್ಗಿನಿಂದ ವಿಜಯಪುರ ಎರಡು ಜಿಲ್ಲೆಗಳಿಗೆ ಹೊಂದಿ ಕೊಂಡಿರು ಪ್ರಮುಖ ರಾಜ್ಯ ಹೆದ್ದಾರಿವಾಗಿದೆ ನಾಲ್ಕು ಕಿಲೋಮೀಟರ್ ರಸ್ತೆ ಡಾಂಬರೀಕರಣ ಸಂಪೂರ್ಣ ಕಳಪೆಯಿಂದ ಕೂಡಿದೆ ಇದಕ್ಕೆ ಸರಿಯಾದ ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿ ಆಲಮೇಲ ತಾಲೂಕ ದಂಡಾಧಿಕಾರಿಗಳಿಗೆ ಮನವಿ ಕೊಡಲಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡದೆ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ದತ್ತಾತ್ರೇಯ ಸೊನ್ನ ಅಶೋಕ ಗಂಗನಳ್ಳಿ ಮಹಾಂತಪ್ಪ ಗಂಗನಳ್ಳಿ ಶರಣು ಯಲಜಿ ಪ್ರವೀಣ ಗಾಣಿಗರ ಕಲ್ಲು ಕಣಮೇಶ್ವರ.ಸಿದ್ದು ತಾವರಖೇಡ ಬಸವರಾಜ ಭೂಸನೂರ ಚನ್ನಯ್ಯ ಹಿರೇಮಠ ಶ್ರೀಕಾಂತ ಬಾಲಾಶಯ ಪ್ರವೀಣ ತಳವಾರ ದೌಲತ್ ಚೌದರಿ ಸಿದ್ದಲಿಂಗ ಗಂಗನಳ್ಳಿ. ಅನೇಕ ಊರಿನ ಹಿರಿಯರು ಯುವಕರು ಪಾಲ್ಗೊಂಡಿದರು
ವರದಿ. ಉಮೇಶ ಕಟಬರ
ಸಿಂಧನೂರು ತಾಲೂಕಿನ ಸಿದ್ದಿ ಪರ್ವತ ಅಂಬಾಮಠಕ್ಕೆ ಪಾದಯಾತ್ರೆ
ಸುರಪುರ :ಸುರಪುರ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ವತಿಯಿಂದ ಶ್ರೀ ಸದ್ಗುರು ರಾಮಲಿಂಗೇಶ್ವರ ಆನಂದ್ ಆಶ್ರಮ ಮಠದ ಪೂಜ್ಯರಾದ ಶ್ರೀ ರಾಮ ಶರಣರ ಸಮ್ಮುಖದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಪೇಠ ಅಮ್ಮಾಪುರ ಗ್ರಾಮ ದಿಂದ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸಿದ್ದಿ ಪರ್ವತ ಅಂಬಾಮಠಕ್ಕೆ ಪಾದಯಾತ್ರೆ ಮೂಲಕ ನೂರಾರು ಭಕ್ತರ ಜೊತೆಗೆ ಪೂಜ್ಯರಾದ ಶ್ರೀ ರಾಮ ಶರಣರು ಮಾತನಾಡಿ ಮನಸ್ಸಿನ ಸಂಪೂರ್ಣ ಅರಿವು ಮತ್ತು ತುಟಿಗಳ ಮೇಲೆ ಮಂತ್ರ ಪಠಣದೊಂದಿಗೆ
. ‘ಪಾದ ಯಾತ್ರೆ’ ಅಥವಾ ಕಾಲ್ನಡಿಗೆಯ ತೀರ್ಥಯಾತ್ರೆಯನ್ನು ಸಾಮೂಹಿಕ ವ್ಯಾಯಾಮವಾಗಿ ಮಾಡಿದಾಗ, ಸಾಮೂಹಿಕ ಶಕ್ತಿ ಮತ್ತು ಒಂದು ಕಾರಣಕ್ಕಾಗಿ ಅರಿವಿನ ಪ್ರಯೋಜನವನ್ನು ಹೊಂದಿರುತ್ತದೆ. ಎಂದು ಹೇಳಿ ಕಾಲ್ನಡಿಗೆ ಮೂಲಕ
ಸುತ್ತಮುತ್ತಲಿನ ಅನೇಕ ಗ್ರಾಮದ ಭಕ್ತಾದಿಗಳು ಸೇರಿಕೊಂಡು ಪಾದಯಾತ್ರೆ ಹಮ್ಮಿಕೊಂಡಿದ್ದರು ಪಾದಯಾತ್ರೆ ಮೂಲಕ ಭಕ್ತಾದಿಗಳು. ಭಜನಾ ಮಾಡುತ್ತಾ ಶಿವನನ್ನು ನೆನೆಯುತ್ತಾ ಸಾಗಿದರು ಇದೇ ಸಂದರ್ಭದಲ್ಲಿ ಹಣಮಂತ ಹೊತಪೇಠ, ಬೈಲಪ್ಪ ಹದಗಲ್, ಸಂಗಯ್ಯ ಮಡ್ದಾ ಬಾವಿ, ಮಲ್ಲಪ್ಪ ಅರಿಕೇರಿ , ನಾಗಪ್ಪ , ಶಿವಣ್ಣ ಗಡಗಿ , .ಮಲ್ಕಪ್ಪ ಬಡಿಗೇರ್ , ಶೇಖಪ್ಪ ಕೋಳೂರು , ಸಣಿ ಯಾದವ್ , ಮಲ್ಲಿಕಾರ್ಜುನ್ ರೆಡ್ಡಿ , ಹನುಮೇಶ್ ಯಾದವ, ಯಂಕಣ್ಣ ಹೋತಪೇಠ , ಬಸವರಾಜ್ , ಶರಣು ಟಣಕೆ ದಾರ ಮೌನೇಶ್ , ರವಿಕುಮಾರ್ ಹೊಸೂರು , ಮಲ್ಲು ಚಲವಾದಿ ದೇವು ದೊಡ್ಮನಿ , ಹಾಗೂ ಅನೇಕ ಊರಿನ ಮಹಿಳೆಯರು ಶ್ರೀಮತಿ ಬಸಮ್ಮ , ಶ್ರೀಮತಿ ಲಕ್ಷ್ಮಿ ಹೇಳುವ , ಶ್ರೀಮತಿ ಗೌರಮ್ಮ ಹಿರೇಮಠ್ , ಶ್ರೀಮತಿ ನಾಗಮ್ಮ ಗಡಿಗಿ , ಶ್ರೀಮತಿ ಬಸಮ್ಮ ಗೋಗಿ , ದ್ಯಾಮವ್ವ ಬೆಳೆ ಬಾಹಿ ಇನ್ನಿತರು ಉಪಸ್ಥಿತರಿದ್ದು ಭಾಗವಹಿಸಿದರು
ಸ್ವತಃ ನೀರಿಗಿಳಿದು ನೆರೆ ಪೀಡಿತ ಕುಟುಂಬಕ್ಕೆ ಸಾಂತ್ವನ ಹೇಳಿದ ತಹಶಿಲ್ದಾರ್ ಡಾ.ಪ್ರತಿಭಾ.ಆರ್
ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಎರ್ಮಾಳ್ ಗ್ರಾಮದ ಅಡ್ವೆಕೋಡಿ ಪ್ರದೇಶದ ತಾರಾನಾಥ್ ಎಂಬುವರ ಕುಟುಂಬ ನೆರೆ ನೀರಿನಲ್ಲೇ ನಡೆದುಕೊಂಡು ಬಂದು ದಿನ ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ತಿಳಿದು ಸ್ವತಃ ತಹಶಿಲ್ದಾರ್ ಅಲ್ಲಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಶೀಘ್ರ ಸಂಕಷ್ಟ ಪರಿಹರಿಸುವ ಭರವಸೆ ನೀಡಿದ್ದಾರೆ.
ಒದ್ದೆಬಟ್ಟೆಯಲ್ಲೇ ಕಾಲೇಜಿಗೆ ಹೋಗಬೇಕಾದ ವಿದ್ಯಾರ್ಥಿಗಳು
ತಾರಾನಾಥ್ ರವರ ಮಕ್ಕಳಾದ ಪ್ರಜ್ಞಾ ಮತ್ತು ಪ್ರಜ್ವಲ್ ಕಾಲೇಜಿಗೆ ಹೋಗುವಾಗ ಈ ಎದೆ ಮಟ್ಟದ ನೆರೆ ನೀರಿನಲ್ಲೇ ತೊಯ್ದುಕೊಂಡು ಹೋಗಬೇಕು. ಪುಸ್ತಕದ ಚೀಲವನ್ನೂ ಹೊತ್ತೊಯ್ಯಬೇಕು. ಇದೇ ಸ್ಥಿತಿಯಲ್ಲಿ ಕಾಲೇಜು ತಲುಪಬೇಕಾದ ಸಂಕಷ್ಟ ಇದೆ. ಜೀವಭಯದಿಂದ ಕಾಲೇಜಿಗೆ ಹೋಗಬೇಕಾಗಿದೆ.
*ಮಳೆಗಾಲದ ಸಂಕಷ್ಟ: ಸಾಮಾನು-ದಿನಸಿಯನ್ನೂ ನೀರಿನಲ್ಲಿ ಮುಳುಗಿಕೊಂಡೇ ತರಬೇಕು
ತಾರಾನಾಥ್ ರವರು ಮನೆಗೆ ದಿನಸಿ ಸಾಮಾನು, ಅಗತ್ಯ ವಸ್ತುಗಳನ್ನು ತರುವುದಕ್ಕೂ ಇದೇ ನೆರೆ ನೀರಿನಲ್ಲೇ ಈಜಿಕೊಂಡು ಹೋಗಬೇಕಿದೆ.
ತಹಶಿಲ್ದಾರ್ ಸ್ವತಃ ಇದೇ ಎದೆಮಟ್ಟದ ನೆರೆ ನೀರಿನಲ್ಲಿ ತೆರಳಿ ಪರಿಶೀಲನೆ
ಇವರ ಸಮಸ್ಯೆ ಬಗ್ಗೆ ತಿಳಿದ ತಹಶಿಲ್ದಾರ್ ಪ್ರತಿಭಾ ಆರ್ ಸ್ವತಃ ಈ ಪ್ರದೇಶಕ್ಕೆ ತೆರಳಿದ್ದಾರೆ. ನುರಿತವರೇ ಇಷ್ಡು ಆಳದ ನೀರಿನಲ್ಲಿ ಇಳಿಯಲು ಹೆದರುವಾಗ ಸ್ವತಃ ತಹಶಿಲ್ದಾರ್ ಮೇಡಂ ಎದೆಮಟ್ಟದ ನೀರಿನಲ್ಲೇ ಧೈರ್ಯದಿಂದ ಹೆಜ್ಜೆ ಇಡುತ್ತಾ ಆ ಒಂಟಿ ಮನೆ ತಲುಪಿ ಆ ಕುಟುಂಬವನ್ನು ಭೇಟಿಯಾಗಿದ್ದಾರೆ. ಕುಟುಂಬದ ಪರಿಸ್ಥಿತಿಯನ್ನು ಕಂಡು ಸಾಂತ್ವನ ಹೇಳಿದ್ದಾರೆ. ಶೀಘ್ರವೇ ಈ ನೆರೆ ಇಳಿಸುವ ಪರಿಹಾರ ಕಂಡು ಹುಡುಕುವುದಾಗಿ ಭರವಸೆ ನೀಡಿದ್ದಾರೆ.
ಕಾಮಿನಿ ನದಿಯ ಹೂಳೆತ್ತಿ ಸ್ವಚ್ಚಗೊಳಿಸಿದರೆ ಈ ನೆರೆಗೆ ಪರಿಹಾರ ಸಿಗುತ್ತದೆ
ಸಮೀಪದ ಕಾಮಿನಿ ನದಿ ಪಡುಬಿದ್ರಿಯ ಕಡೆಯಿಂದ ಹರಿದು ಸಮುದ್ರಕ್ಕೆ ಸೇರುತ್ತದೆ. ಅಲ್ಲಿ ಹೂಳು ತುಂಬಿಕೊಂಡು ಕಸ ಸೇರಿಕೊಂಡು ಕಲ್ಮಶ ತುಂಬಿಕೊಂಡಿರುವ ಕಾರಣ ಅಡ್ವೆಕೋಡಿಯ ಗದ್ದೆಗಳಲ್ಲಿ ಜಲಾವೃತವಾಗುತ್ತದೆ. ಇದರಿಂದಲೇ ಈ ಕುಟುಂಬ ಸಂಕಷ್ಟ ಅನುಭವಿಸಬೇಕಿದೆ. ತಹಶಿಲ್ದಾರ್ ಪ್ರತಿಭಾ ಆರ್. ರವರು ಈ ಕೂಡಲೇ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಕಾಮಿನಿ ನದಿ ಸ್ವಚ್ಚಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ವಿದ್ಯಾರ್ಥಿನಿಯ ಹೇಳಿಕೆ
ನಾನು ಪಿಯುಸಿ ಓದುತ್ತಿದ್ದೇನೆ. ದಿನಾಲು ಇದೇ ನೆರೆ ನೀರಿನಲ್ಲಿಯೇ ಕಾಲೇಜಿಗೆ ತೆರಳಬೇಕು. ಬಟ್ಟೆ ಒದ್ದೆಯಾಗುತ್ತದೆ. ಬೇರೆ ಕಡೆ ಹೋಗಿ ಬಟ್ಟೆ ಬದಲಿಸಕೊಂಡು ತರಗತಿಗೆ ತೆರಳಬೇಕು. ಒಮ್ಮೊಮ್ಮೆ ಒದ್ದೆ ಬಟ್ಟೆಯಲ್ಲಿಯೇ ತರಗತಿಗೆ ಹೋಗಿದ್ದಿದೆ. ಪುಸ್ತಕಗಳನ್ನು ತೋಯದ ಹಾಗೆ ಕಾಪಾಡಿಕೊಂಡು ತರುವುದು ಕಷ್ಟದ ಕೆಲಸ. ಮನೆಗೆ ಸಾಮಾನುಗಳನ್ನು ತರುವುದೂ ಕಷ್ಟದ ಕೆಲಸ. ಇದಕ್ಕೆ ಬೇಗ ಏನಾದರೂ ಪರಿಹಾರ ದೊರಕಿಸಿಕೊಡಿ ಮೇಡಂ”
ಎಂದು ತಹಶಿಲ್ದಾರ್ ಪ್ರತಿಭಾ ರವರಲ್ಲಿ ಅಳಲು ತೋಡಿಕೊಂಡಿದ್ದಾರೆ.
ತಹಶಿಲ್ದಾರ್ ಪ್ರತಿಭಾ ಆರ್ ಹೇಳಿಕೆ
ಇಂದಿನ ಆಧುನಿಕ ಜಗತ್ತಿನಲ್ಲಿಯೂ ಹೀಗೆ ವಿದ್ಯಾರ್ಥಿಗಳು ನೀರಿನಲ್ಲಿ ತೇಲಾಡಿಕೊಂಡು, ಈಜಿಕೊಂಡು ಕಾಲೇಜಿಗೆ ಹೋಗಬೇಕಾದ ಅನಿವಾರ್ಯತೆ ಕಂಡು ತಲೆತಗ್ಗಿಸುವಂತಾಗಿದೆ. ನಾನೂ ಸ್ವತಃ ಇದೇ ನೆರೆಯಲ್ಲಿ ಇಳಿದು ಅವರ ಮನೆ ತಲುಪಿ ಸಾಂತ್ವನ ಹೇಳಿರುತ್ತೇನೆ. ನಿಜಕ್ಕೂ ಆತಂಕದ ಪರಿಸ್ಥಿತಿ ಇರುತ್ತದೆ. ಸಮೀಪದ ಕಾಮಿನಿ ನದಿಯಲ್ಲಿನ ಹೂಳು ಮತ್ತು ಕಸದಿಂದಾಗಿ ಈ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಾಮಿನಿ ನದಿಯ ಸ್ವಚ್ಚತಾ ಕಾರ್ಯ ಕೈಗೊಳ್ಳಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ತಾಲ್ಲೂಕು ಆಡಳಿತ ನೆರೆ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿದೆ. ಬೋಟುಗಳನ್ನು ರೆಡಿ ಇಟ್ಟುಕೊಳ್ಳಲಾಗಿದೆ. ನುರಿತ ಈಜುಗಾರರ ತಂಡ ಸದಾ ಸೇವೆಗೆ ಲಭ್ಯವಿದೆ. ತಹಶಿಲ್ದಾರ್ ಕಚೇರಿ ಕಂಟ್ರೋಲ್ ರೂಮ್ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ (0820-2551444).
ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ತಹಶಿಲ್ದಾರ್ ಪ್ರತಿಭಾ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ನಂದುಪೂಜಾರಿ.
ಡಾ.ಫಾರುಕ್ ಅಹ್ಮದ ಮಣ್ಣೂರ ಅವರಿಂದ ವಿದ್ಯಾರ್ಥಿಗಳಿಗೆ ಎಲ್ಇಡಿ ಟಿವಿ ವಿತರಣೆ
ಚಿಂಚೋಳಿ ಪಟ್ಟಣದ ಚಂದಾಪುರದ ಕಸ್ತೂರಬಾ ಗಾಂಧಿ ಬಾಲಿಕಾ ವಿಧ್ಯಾಲಯದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಗಳು ಮಾಡಲು ಕಲಬುರಗಿಯ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರುಕ್ ಅಹ್ಮದ ಮಣ್ಣೂರ, ಅವರು ತಮ್ಮ ವೈಯಕ್ತಿಕವಾಗಿ ಮಕ್ಕಳಿಗೆ ಎಲ್ಇಡಿ ಟಿವಿ ನೀಡಿದರು ನೀಡಿ ನಂತರ ಅವರು ಮಾತನಾಡಿ ಚಂದಾಪುರದ ಕಸ್ತೂರಬಾ ಗಾಂಧಿ ಬಾಲಿಕಾ ವಿಧ್ಯಾಲಯದ ಮಕ್ಕಳು ಮುಂಬರುವ ದಿನಗಳಲ್ಲಿ ಒಳ್ಳೆಯ ವಿದ್ಯಾಭ್ಯಾಸವನ್ನು ಮಾಡಿ ಐ ಎಸ್ ಮತ್ತು ಕೆ ಎಸ್ ಅಧಿಕಾರಿಗಳಾಗಿ ನೇಮಕ ಆಗಬೇಕು ಎಂದು ನನ್ನ ನನ್ನ ಆಸೆಯಾಗಿದೆ ಏಕೆಂದರೆ ಕಲ್ಯಾಣ ಕರ್ನಾಟಕ ಹಿಂದುಳಿದ ತಾಲೂಕ ಆಗಿದ್ದು ಬಹಳಷ್ಟು ಬಡತನ ಮಕ್ಕಳು ಇಲ್ಲಿ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ನನ್ನ ಗಮನಕ್ಕೆ ಬಂತು ಕಳೆದ ನಿಮಗೆ ನಾನು ಕಾಫಿ ಪೆನ್ನುಗೆ ತರಣೆ ಮಾಡಿದೆ ಆ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ನನಗೆ ಎಲ್ಇಡಿ ಟಿವಿ ನೀಡಿದರೆ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಒಳ್ಳೆಯದಾಗುತ್ತದೆ ಎಂದು ಹೇಳಿದರು ಅದರಂತೆ ನಾನು ಕೂಡ ನಿಮಗೆ ಎಲ್ಇಡಿ ಟಿವಿ ನೀಡುತ್ತಿದ್ದೇನೆ ಮಕ್ಕಳು ಕೂಡ ಎಲ್ಲಾ ಒಳ್ಳೆಯ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ ಚಿಂಚೋಳಿ ತಾಲೂಕಿಗೆ ಒಳ್ಳೆ ಕೀರ್ತಿ ತರಬೇಕೆಂದು ಹೇಳಿದರು ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಗಾಳಮ್ಮ ಡಿ ಸಿಂಧೆ, ಪತ್ರಕರ್ತರಾದ ಅಕ್ರಂಪಾಶಾ ಮೋಮಿನ್, ಡಾ.ಫಾರುಕ್ ಮಣ್ಣೂರ ಅವರ ಅಭಿಮಾನಿ ಬಳಗದ ಸದಸ್ಯರಾದ ಸಂಜೀವಕುಮಾರ ಪಾಟೀಲ್, ವಿವೇಕ್ ಪಾಟೀಲ, ವೀರೇಶ್ ದೇಸಾಯಿ, ವಿಶಾಲ್ ಪಾಟೀಲ್ ಅಂಜಲು ಗೌಡ್, ಪ್ರಭಾಕರ್ ಗೌಡ್, ಕೃಷ್ಣ ಕೊಳ್ಳೂರ್, ಬೈನಪ್ಪ ಗುತ್ತೇದಾರ, ಮತ್ತು ಅನೇಕ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ಡಾ.ಫಾರುಕ್ ಅಹ್ಮದ ಮಣ್ಣೂರ ಅವರಿಗೆ ಸನ್ಮಾನ
ಚಿಂಚೋಳಿ ಪಟ್ಟಣಕ್ಕೆ ಆಗಮಿಸಿದ ಕಲಬುರಗಿಯ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರುಕ್ ಅಹ್ಮದ ಮಣ್ಣೂರ, ಅವರಿಗೆ ಚಿಂಚೋಳಿಯ ಪುರಸಭೆ ಅಧ್ಯಕ್ಷರಾದ ಆನಂದ್ ಟೈಗರ್ ಅವರು ಸನ್ಮಾನವನ್ನು ಮಾಡಿದರು ಈ ಸಂದರ್ಭದಲ್ಲಿ ವಿಶ್ವನಾಥ್ ಹೊಡೆಬೀರನಹಳ್ಳಿ, ಸಂಜಿಕುಮಾರ ಪಾಟೀಲ್, ವಿವೇಕ್ ಪಾಟೀಲ್, ವೀರೇಶ ದೇಸಾಯಿ, ಕಾಶಿನಾಥ್ ಸಿಂಧೆ, ಅನೀಲ ಕಟ್ಟಿ, ಚಂದು ಪಾಟೀಲ್, ಇದ್ದರು
1999-2000 ನೇ ಸಾಲಿನ ವಿದ್ಯಾರ್ಥಿಗಳ 25ನೇ ವರ್ಷದ ಬೆಳ್ಳಿ ಹಬ್ಬ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ.
ಯಾದವಾಡ ಗ್ರಾಮದ ಜಿ.ಎನ್. ಎಸ್. ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ 1999-2000 ನೇ ಬ್ಯಾಚನ ವಿದ್ಯಾರ್ಥಿಗಳ ಬೆಳ್ಳಿಹಬ್ಬ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವು ಇತ್ತಿಚೆಗೆ ಚನ್ನಬಸಪ್ಪ ಹುಬ್ಬಳ್ಳಿ ಇವರ ಕಲ್ಯಾಣ ಮಂಟಪದಲ್ಲಿ ನಡೆಯಿತು.
ರವಿವಾರ ದಿನಾಂಕ 13-07-2025 ರಂದು ಮುಂಜಾನೆ 9-00 ಘಂಟೆಗೆ ಶ್ರೀ ಚನ್ನಬಸಪ್ಪ ಹುಬ್ಬಳ್ಳಿ ಮುತ್ಯಾ ಕಲ್ಯಾಣ ಮಂಟಪ ಯಾದವಾಡ ಮುಂಜಾನೆಯ ಉಪಹಾರದೊಂದಿಗೆ ಬೆಳ್ಳಿ ಹಬ್ಬ , ಸ್ನೇಹ ಸಮ್ಮಿಲನ , ಗುರುವಂದನಾ ಕಾರ್ಯಕ್ರಮವು ಆರಂಭವಾಯಿತು. ಭವ್ಯ ವೇದಿಕೆಗೆ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಹೂವುಗಳನ್ನು ನೀಡಿ ಸ್ವಾಗತ ಕೋರಿದರು. ಈ ಸಂದರ್ಬದಲ್ಲಿ ಗುರುಗಳು ಮಾತನಾಡಿ ನಮ್ಮ ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗಿದ್ದಾರೆ ಈ ಬ್ಯಾಚನ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಉತ್ತಮ ಸಾಧನೆಯನ್ನು ಮಾಡಿದ್ದಾರೆ , ಗ್ರಾಫಿಕ ಡಿಜೈನರ ,ಶಿಕ್ಷಕರು, ಇಂಜಿನಿಯರ್, ಬ್ಯಾಂಕಗಳಲ್ಲಿ ,ಸರಕಾರಿ ನೌಕರರಾಗಿ ಸೈನಿಕರಾಗಿ ಉದ್ಯಮಿಗಳಾಗಿ, ರೈತರಾಗಿ ಸಮಾಜಕ್ಕೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಇದಕ್ಕಿಂತ ಹೆಚ್ಚು ಶಿಕ್ಷರಾದ ನಮಗೆ ಏನು ಬೇಕು ಎಂದು ಹರ್ಷವನ್ನು ವ್ಯಕ್ತ ಪಡಿಸಿದರು .
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಸನ್ಮಾನ ಹಾಗೂ ಸತ್ಕಾರ ಆಯೋಜಕರು ಮಾಡಿದರು. 25 ವರ್ಷಗಳ ನಂತರದ ಭೇಟಿ ಎಲ್ಲ ವಿದ್ಯಾರ್ಥಿಗಳಲ್ಲಿ ಸಂತೋಷ ಉಂಟು ಮಾಡಿತ್ತು. ಎಲ್ಲ ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಬೇಟಿಯಾಗಿ ಕುಶಲೊಪಹಾರ ವಿಚಾರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಇತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ 25ನೇ ವರ್ಷದ ಸವಿನೆನಪಿನ ಕಾಣಿಕೆ ನೀಡಿ ಆಯೋಜಕರು ಶುಭಕೋರಿದರು.
ಈ ಸಂದರ್ಭದಲ್ಲಿ 1999-2000ನೇ ಸಾಲಿನ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂಧಿಗಳು , ವಿದ್ಯಾರ್ಥಿಗಳು ಕುಟುಂಬದ ಸಮೇತ ಬಂದು ಪಾಲ್ಗೊಂಡಿದ್ದು ವಿಷೇಷವಾಗಿತ್ತು.
ಡೆಂಗ್ಯೂ ರೋಗಗಳ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮ
ಡೆಂಗ್ಯೂ ರೋಗಗಳ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಡ್ವೊಕೇಸಿ ಸಭೆಯನ್ನು ಬ್ಯಾಡಗೊಟ ಅಂಗನವಾಡಿ ಕೇಂದ್ರದಲ್ಲಿ ನಡೆಸಲಾಯಿತು..
ಡೆಂಗ್ಯೂ ರೋಗದ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಹೆಬ್ಬಾಲೆಯ ವೈದ್ಯಾಧಿಕಾರಿಯಾದ ಡಾ ಸಾನಿಯಾ ರವರು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಶ್ರೀಮತಿ ಶಾಂತಿಯವರು ಸಾಂಕ್ರಾಮಿಕ ರೋಗಗಳ ಬಗ್ಗೆ ಹಾಗೂ ಅಸಾಂಕ್ರಾಮಿಕ ರೋಗಗಳ ಬಗ್ಗೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕೂಡಿಗೆ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಮಂಜುಳಾರವರು ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಹಾಗೂ ಚರಂಡಿಗಳ ಸ್ವಚ್ಚತೆ ಬಗ್ಗೆ ಮಾಹಿತಿಯನ್ನು ನೀಡಿದರು..
ಸಭೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಶ್ರೀ ಪುನಿತ್, ಸಿಬ್ಬಂದಿಗಳು, ಆರೋಗ್ಯ ನಿರೀಕ್ಷಕರಾದ ಶ್ರೀ ಸಂಜಯ್, ಸಮುದಾಯ ಆರೋಗ್ಯ ಅಧಿಕಾರಿ ದೀಪು, ಅಂಗನವಾಡಿ ಶಿಕ್ಷಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಹಾಡಿಯ ಮುಖಂಡರು ಹಾಜರಿದ್ದರು..
ಕೊಡಗು ಜಿಲ್ಲೆಯ ಮಳೆ ವಿವರ(ಮಿಲಿ ಮೀಟರ್ಗಳಲ್ಲಿ)
ಮಡಿಕೇರಿ :-ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.86 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 58.85 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1713.89 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1188.57 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 41.90 ಮಿ.ಮೀ. ಕಳೆದ ವರ್ಷ ಇದೇ ದಿನ 88.25 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2510.17 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1739.21 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 10.55 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 48.25 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1597.25 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1221.25 ಮಿ.ಮೀ. ಮಳೆಯಾಗಿತ್ತು.
ಪೆÇನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 26.32 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 33.02 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1660.03 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1132.69 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 21.15 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 76.85 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1913.27 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1036.01 ಮಿ.ಮೀ. ಮಳೆಯಾಗಿತ್ತು.
ಕುಶಾಲನಗರ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 4.40 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 47.90 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 888.74 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 813.70 ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 30, ನಾಪೋಕ್ಲು 25.20, ಸಂಪಾಜೆ 55, ಭಾಗಮಂಡಲ 57.40, ವಿರಾಜಪೇಟೆ 12.60, ಅಮ್ಮತ್ತಿ 8.50, ಹುದಿಕೇರಿ 37.60, ಶ್ರೀಮಂಗಲ 29.60, ಪೊನ್ನಂಪೇಟೆ 21, ಬಾಳೆಲೆ 17.09, ಸೋಮವಾರಪೇಟೆ 14.80, ಶನಿವಾರಸಂತೆ 22, ಶಾಂತಳ್ಳಿ 34, ಕೊಡ್ಲಿಪೇಟೆ 13.80, ಕುಶಾಲನಗರ 1.60, ಸುಂಟಿಕೊಪ್ಪ 7.20 ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ (15-07-2025) ವರದಿ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2854.91 ಅಡಿಗಳು. ಕಳೆದ ವರ್ಷ ಇದೇ ದಿನ 2854.77 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 1.80 ಮಿ.ಮೀ., ಕಳೆದ ವರ್ಷ ಇದೇ ದಿನ 37.40 ಮಿ.ಮೀ., ಇಂದಿನ ನೀರಿನ ಒಳಹರಿವು 4971 ಕ್ಯುಸೆಕ್, ಕಳೆದ ವರ್ಷ ಇದೇ ದಿನ 8666 ಕ್ಯುಸೆಕ್., ಇಂದಿನ ನೀರಿನ ಹೊರ ಹರಿವು ನದಿಗೆ 1500 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 5933 ಕ್ಯುಸೆಕ್.
ಉಪ್ಪಾರ ಹೊಸಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆಯಲ್ಲಿ ಸುವರ್ಣ ಮ್ಮ ಗೆಲುವು.
ಸಿರುಗುಪ್ಪ ತಾಲೂಕಿನ ಉಪಾರಹೋಸಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆಯಲ್ಲಿ ಸುವರ್ಣ ಮ್ಮ ಪೊಂಪನ ಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿ 19ಮತ ಗಳಿದ್ದು 11 ಮತಗಳಿಂದ ಗೆಲುವು ಸಾಧಿಸಿದರು.ಮಾಜಿ ಶಾಸಕರಾದ ಎಂ.ಏಸ್. ಸೋಮಲಿಂಗಪ್ಪ ಅವರು ಮತ್ತು ಸಿರುಗುಪ್ಪ ಬಿಜೆಪಿ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಅವರು ಅಭಿನಂದನೆಗಳನ್ನು ಸಲ್ಲಿಸಿದರು .
ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂ ಎಸ್ ಸಿದ್ದಪ್ಪ, ರುದ್ರಗೌಡ,ಎಪಿಎಂಸಿ ಮಾಜಿ ಅಧ್ಯಾಕ್ಷರಾದ ಶರಣಬಸವ,ಜಿಲ್ಲಾ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿಯಾದ ಶರಣಬಸನಗೌಡ,ಹಿರಿಯ ಮುಖಂಡರಾದ ಧರ್ಮವೀರ ಮಲ್ಲಯ್ಯ,ಹನುಮಂತಪ್ಪ,ಕೋಮಾರಪ್ಪ,ಶರಣಬಸವ,ವೆಂಕಟೇಶ್ ಗೌಡ, ನೀಲಕಂಠ,ನಾಗರಾಜ,ಮುದುಕಪ್ಪ,ಜಡೇಶ,ದೇವೇಂದ್ರ,ಮಾಕಪ್ಪ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು.
ವರದಿ ಶೇಖರ್ ಹೆಚ್
