ಆಲಮೇಲ: ಸಮೀಪ ದೇವಣಗಾಂವ ಹತ್ತಿರ ನಾಲ್ಕು ಕಿಲೋಮೀಟರ್ ಡಂಬರಿಕರಣ ಕಳಪೆ ಕಾಮಗಾರಿಕೆ ಆಗಿರುವುದರಿಂದ ಸದಾಶಿವ ರಾಷ್ಟ್ರೀಯ ಹೆದ್ದಾರಿ ಇದು ಮಹಾರಾಷ್ಟ್ರ ಗಡಿ ಭಾಗದಲ್ಲಿ ಇರುವುದರಿಂದ ಗಾಣಗಾಪುರ ದಿಂದ ಪಂಡರಾಪುರಕ್ಕೆ ಹೋಗುವ ಮಾರ್ಗ ಇದು ಪ್ರಮುಖ ರಸ್ತೆ ವಾಗಿರುತ್ತದೆ.
ಆದರಿಂದ ಈ ನಾಲ್ಕು ಕಿಲೋಮೀಟರ್ ಡಾಂಬರೀಕರಣವನ್ನು ಸಂಬಂಧಪಟ್ಟ ಅಧಿಕಾರಿಗಳು ಈ ಭಾಗದ ಶಾಸಕರು ಅತಿ ಶೀಘ್ರದಲ್ಲಿ ಗಮನ ಹರಿಸಬೇಕು ಬಸವರಾಜ್ ಹೂಗಾರ್ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ಹೇಳಿದರು.
ಮಾಜಿ ಶಾಸಕರಾದ ರಮೇಶ್ ಭೂಸನೂರ ಅವರ ನೇತೃತ್ವದಲ್ಲಿ ನಾವು ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಸಂದೇಶ ನೀಡಿದರು.
ಕಲಬುರ್ಗಿನಿಂದ ವಿಜಯಪುರ ಎರಡು ಜಿಲ್ಲೆಗಳಿಗೆ ಹೊಂದಿ ಕೊಂಡಿರು ಪ್ರಮುಖ ರಾಜ್ಯ ಹೆದ್ದಾರಿವಾಗಿದೆ ನಾಲ್ಕು ಕಿಲೋಮೀಟರ್ ರಸ್ತೆ ಡಾಂಬರೀಕರಣ ಸಂಪೂರ್ಣ ಕಳಪೆಯಿಂದ ಕೂಡಿದೆ ಇದಕ್ಕೆ ಸರಿಯಾದ ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿ ಆಲಮೇಲ ತಾಲೂಕ ದಂಡಾಧಿಕಾರಿಗಳಿಗೆ ಮನವಿ ಕೊಡಲಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡದೆ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ದತ್ತಾತ್ರೇಯ ಸೊನ್ನ ಅಶೋಕ ಗಂಗನಳ್ಳಿ ಮಹಾಂತಪ್ಪ ಗಂಗನಳ್ಳಿ ಶರಣು ಯಲಜಿ ಪ್ರವೀಣ ಗಾಣಿಗರ ಕಲ್ಲು ಕಣಮೇಶ್ವರ.ಸಿದ್ದು ತಾವರಖೇಡ ಬಸವರಾಜ ಭೂಸನೂರ ಚನ್ನಯ್ಯ ಹಿರೇಮಠ ಶ್ರೀಕಾಂತ ಬಾಲಾಶಯ ಪ್ರವೀಣ ತಳವಾರ ದೌಲತ್ ಚೌದರಿ ಸಿದ್ದಲಿಂಗ ಗಂಗನಳ್ಳಿ. ಅನೇಕ ಊರಿನ ಹಿರಿಯರು ಯುವಕರು ಪಾಲ್ಗೊಂಡಿದರು
ವರದಿ. ಉಮೇಶ ಕಟಬರ
