ಯಾದವಾಡ ಗ್ರಾಮದ ಜಿ.ಎನ್. ಎಸ್. ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ 1999-2000 ನೇ ಬ್ಯಾಚನ ವಿದ್ಯಾರ್ಥಿಗಳ ಬೆಳ್ಳಿಹಬ್ಬ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವು ಇತ್ತಿಚೆಗೆ ಚನ್ನಬಸಪ್ಪ ಹುಬ್ಬಳ್ಳಿ ಇವರ ಕಲ್ಯಾಣ ಮಂಟಪದಲ್ಲಿ ನಡೆಯಿತು.
ರವಿವಾರ ದಿನಾಂಕ 13-07-2025 ರಂದು ಮುಂಜಾನೆ 9-00 ಘಂಟೆಗೆ ಶ್ರೀ ಚನ್ನಬಸಪ್ಪ ಹುಬ್ಬಳ್ಳಿ ಮುತ್ಯಾ ಕಲ್ಯಾಣ ಮಂಟಪ ಯಾದವಾಡ ಮುಂಜಾನೆಯ ಉಪಹಾರದೊಂದಿಗೆ ಬೆಳ್ಳಿ ಹಬ್ಬ , ಸ್ನೇಹ ಸಮ್ಮಿಲನ , ಗುರುವಂದನಾ ಕಾರ್ಯಕ್ರಮವು ಆರಂಭವಾಯಿತು. ಭವ್ಯ ವೇದಿಕೆಗೆ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಹೂವುಗಳನ್ನು ನೀಡಿ ಸ್ವಾಗತ ಕೋರಿದರು. ಈ ಸಂದರ್ಬದಲ್ಲಿ ಗುರುಗಳು ಮಾತನಾಡಿ ನಮ್ಮ ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗಿದ್ದಾರೆ ಈ ಬ್ಯಾಚನ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಉತ್ತಮ ಸಾಧನೆಯನ್ನು ಮಾಡಿದ್ದಾರೆ , ಗ್ರಾಫಿಕ ಡಿಜೈನರ ,ಶಿಕ್ಷಕರು, ಇಂಜಿನಿಯರ್, ಬ್ಯಾಂಕಗಳಲ್ಲಿ ,ಸರಕಾರಿ ನೌಕರರಾಗಿ ಸೈನಿಕರಾಗಿ ಉದ್ಯಮಿಗಳಾಗಿ, ರೈತರಾಗಿ ಸಮಾಜಕ್ಕೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಇದಕ್ಕಿಂತ ಹೆಚ್ಚು ಶಿಕ್ಷರಾದ ನಮಗೆ ಏನು ಬೇಕು ಎಂದು ಹರ್ಷವನ್ನು ವ್ಯಕ್ತ ಪಡಿಸಿದರು .
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಸನ್ಮಾನ ಹಾಗೂ ಸತ್ಕಾರ ಆಯೋಜಕರು ಮಾಡಿದರು. 25 ವರ್ಷಗಳ ನಂತರದ ಭೇಟಿ ಎಲ್ಲ ವಿದ್ಯಾರ್ಥಿಗಳಲ್ಲಿ ಸಂತೋಷ ಉಂಟು ಮಾಡಿತ್ತು. ಎಲ್ಲ ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಬೇಟಿಯಾಗಿ ಕುಶಲೊಪಹಾರ ವಿಚಾರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಇತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ 25ನೇ ವರ್ಷದ ಸವಿನೆನಪಿನ ಕಾಣಿಕೆ ನೀಡಿ ಆಯೋಜಕರು ಶುಭಕೋರಿದರು.
ಈ ಸಂದರ್ಭದಲ್ಲಿ 1999-2000ನೇ ಸಾಲಿನ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂಧಿಗಳು , ವಿದ್ಯಾರ್ಥಿಗಳು ಕುಟುಂಬದ ಸಮೇತ ಬಂದು ಪಾಲ್ಗೊಂಡಿದ್ದು ವಿಷೇಷವಾಗಿತ್ತು.
