ಹುಣಸಗಿ : ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದ ಮುರಾರ್ಜಿ ದೇಸಾಯಿ ಮಾದರಿ ವಸತಿ ನಿಲಯದಲ್ಲಿ 2010-11 ನೇ ಸಾಲಿನ ವಿದ್ಯಾರ್ಥಿಗಳು ಗುರುವಂದನ ಕಾರ್ಯಕ್ರಮ ಅದ್ದೂರಿಯಿಂದ ಆಚರಿಸಿದರು.
ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಅಕ್ಬರ್ ಅಲಿ ಅತ್ತಾರ್ ಇವರು ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಎನ್ ಆರ್ ಜಾಲಿಬಿಂಚಿ ಮತ್ತು ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಮಾನಪ್ಪ ಸತ್ಯ ಹಾಗೂ ದೈಹಿಕ ಶಿಕ್ಷಕರಾದ ಅಶ್ಪಕ್ ದನದಮನಿ, ನಿವೃತ್ತ ವಸತಿ ನಿಲಯದ ಮೇಲ್ವಿಚಾರಕರಾದ ಮುದಿಗೌಡ ಶಿಕ್ಷಕರಾದ ಸಂಗನಬಸಪ್ಪ ಪಂಜುಗಲ್ ದೇವಿಂದ್ರ ಕಡಕಲ್ ಶಶಿಕಲಾ ಮಾಲಿಪಾಟೀಲ್ ಮಾಂತೇಶ್ ಹೂಗಾರ್ ಸಿದ್ದು ಮೇಟಿ ಗುರುರಾಜ್ ಜೋಶಿ ಶ್ರವಣ್ ಕುಮಾರ್ ಗೋನಾಲ್,ಫರೀದ್ ಸಿದ್ದರಾಮಯ್ಯಟ್ಟಿ, ಗಂಗಣ್ಣ ಪತ್ತಾರ್, ಶ್ರೀಮತಿ ರೇಷ್ಮಾ ಶ್ರೀಮತಿ ಅನುಸೂಯ ಬಿರಾದರ ಎಲ್ಲಾ ಶಿಕ್ಷಕರಿಗೆ ವಿದ್ಯಾರ್ಥಿಗಳು ಹೂಗುಚ್ಚದ ಮೂಲಕ ಎಲ್ಲರನ್ನು ಬರಮಾಡಿಕೊಂಡು ಎಲ್ಲಾ ಶಿಕ್ಷಕರಿಗೆ ಸನ್ಮಾನ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.
ಪ್ರಸ್ತಾವಿಕ ನುಡಿಯನ್ನು ಸಂಗನಬಸಪ್ಪ ಪಂಜುಗಲ್ ಇವರು ನೆರವೇರಿಸಿ ಕೊಟ್ಟರು.
ಆರ್ ಎನ್ ಜಾಲಿಬೆಂಚಿ ಇವರು ಮಾತನಾಡಿ ಸುಮಾರು ವರ್ಷಗಳ ಹಿಂದಿನ ನೆನಪುಗಳನ್ನು ಮರಳಿ ತೋರಿಸಿಕೊಟ್ಟ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು. ಗುರುವಿನ ಗುಲಾಮನಾಗುವ ತನಕ ದೊರೆಯದೆಣ್ಣ ಮುಕುತಿ ಎಂಬುದರ ವಿಸ್ತಾರ ಮಕ್ಕಳಿಗೆ ತಿಳಿಸಿ ಶಿಕ್ಷಣದ ಮೌಲ್ಯ ಶಿಕ್ಷಣದ ನೀತಿ ಶಿಕ್ಷಣ ವಂತನಾದರೆ ಜೀವನದಲ್ಲಿ ಎಲ್ಲವೂ ಸಾಧಿಸಲು ಸಾಧ್ಯ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಾನಪ್ಪ ಸತ್ಯ ಶಿಕ್ಷಕರು ಮಾತನಾಡಿ ಮಕ್ಕಳ ಉಜ್ವಲ ಭವಿಷ್ಯ ಶಿಕ್ಷಕರ ಕೈಯಲ್ಲಿದ್ದು ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಮಕ್ಕಳು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಂಡು ಸರಿ ಮಾರ್ಗದಲ್ಲಿ ಹೋದಲ್ಲಿ ಅವರ ಉಜ್ಜಲ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗುವುದು ಮಕ್ಕಳು ಗುರುಗಳನ್ನು ಗೌರವದಿಂದ ಕಂಡರೆ ಮುಂದಿನ ಭವಿಷ್ಯವೂ ಮಕ್ಕಳಿಗೆ ಭವಿಷ್ಯವನ್ನು ರೂಪಿಸಿಕೊಡುತ್ತದೆ ಹಲವಾರು ವಿಷಯಗಳ ವಿಸ್ತಾರವನ್ನು ಮಕ್ಕಳಿಗೆ ಹೇಳಿದರು.
ಬಸವರಾಜ್ ಹಳೆಯ ವಿದ್ಯಾರ್ಥಿ ಮಾತನಾಡಿ ನಾನು ಕೊನೆಯ ಆಸನದಲ್ಲಿ ಕೂಡುವ ವಿದ್ಯಾರ್ಥಿಯಾಗಿದ್ದು ಆ ಸಮಯದಲ್ಲಿ ಗುರುಗಳು ಹೇಳಿಕೊಟ್ಟ ಪಾಠವನ್ನು ಅವರು ಹೇಳುವ ನೀತಿ ಪಾಠವನ್ನು ಮಾನವೀಯ ಮೌಲ್ಯವನ್ನು ನಾನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ ಹಾಗಾಗಿ ನಾನು ಇಂದು ಮುಂದಿನ ಶಿಕ್ಷಣದ ಕಡೆಗೆ ಹೆಚ್ಚಿನ ಗಮನಕೊಡದೆ ಇದೇ ಗ್ರಾಮದಲ್ಲಿ ಇರುವ ಸನ್ನಿವೇಶ ನನಗೆ ಬಂದಿದ್ದು ನಾನು ಅಂದು ಗುರುಗಳ ಬುದ್ಧಿ ಮಾತು ಪಾಠ ಸರಿಯಾಗಿ ಕೇಳಿ ಗುರುಗಳ ಮಾರ್ಗದರ್ಶನದಲ್ಲಿ ನಡೆದಿದ್ದರೆ ನಾನು ಕೂಡ ಒಬ್ಬ ಉದ್ಯೋಗಸ್ಥ ಖಾಸಗಿ ನೌಕರ ಸರ್ಕಾರಿ ನೌಕರ ಆಗುತ್ತಿದ್ದೆ ಎಂದು ತನ್ನ ಜೀವನದ ಕಥೆಯನ್ನು ಮಕ್ಕಳಿಗೆ ಹೇಳಿ ತಾವುಗಳು ಮುಂದಿನ ಪ್ರಜೆಗಳು ನಾನು ಮಾಡಿದ ತಪ್ಪನ್ನು ಯಾವುದೇ ವಿದ್ಯಾರ್ಥಿಗಳು ಮಾಡಬೇಡಿ ಗುರುವಿನ ಮಾರ್ಗದರ್ಶನದಲ್ಲಿ ನಡೆದು ನಿಮ್ಮ ಜೀವನವನ್ನು ಯಶಸ್ವಿನ ಹಂತಕ್ಕೆ ತಲುಪಿ ಎಂದು ಹೇಳಿದರು.
ಅದೇ ರೀತಿ ದೇವೇಂದ್ರ ಕಡಕಲ್ ಗುರುರಾಜ್ ಜೋಶಿ ಮುಂತಾದ ಅತಿಥಿಗಳು ಮಾತನಾಡಿ ಈಗಿನ ಕಾಲಘಟ್ಟದಲ್ಲಿ ನಿಮ್ಮಂತ ವಿದ್ಯಾರ್ಥಿಗಳು ಪಡೆದಿರುವುದು ನಾವೇ ಭಾಗ್ಯವಂತರು ನಮ್ಮ ಭಾರತೀಯ ಸಂಸ್ಕೃತಿಯ ಗುರುಕುಲ ಪದ್ಧತಿಯೇ ಅನುಸಾರ ತಾವು ಎಲ್ಲಾ ಶಿಕ್ಷಕರನ್ನು ಪುನ ಒಂದೆಡೆ ಸೇರಿಸಿ ಗುರುವಂದನೆ ಸಲ್ಲಿಸಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾರದ ಕ್ಷಣವಾಗಿ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಧನ್ಯವಾದಗಳು ಎಲ್ಲಾ ಶಿಕ್ಷಕರು ತಿಳಿಸಿದರು.
ಹಳೆಯ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ದ್ಯಾಮಣ್ಣ ಬಸವರಾಜ್ ಅಡ್ಡಿ ಬಸವರಾಜ ಮಂಜುನಾಥ್ ಶಿವಕುಮಾರ್ ಸಾಯಬಣ್ಣ ಶರಣು ಚನ್ನಯ್ಯ ಪಲ್ಲವಿ ರೇಷ್ಮಾ ಪ್ರೇಮ ಸುಮಲತಾ ರೇಣುಕಾ ದೇವಿ ಎಲ್ಲಮ್ಮ ಸುಮಾರು ವಿದ್ಯಾರ್ಥಿಯರು ಪಾಲ್ಗೊಂಡಿದ್ದರು.
ಈ ಒಂದು ಕಾರ್ಯಕ್ರಮದ ನಿರೂಪಣೆಯನ್ನು ಪವಿತ್ರ ಹಾಗೂ ಸುಮಲತಾ ಸುಂದರವಾಗಿ ಸೊಗಸಾಗಿ ನಡೆಸಿಕೊಟ್ಟರು ಸ್ವಾಗತವನ್ನು ಮಲ್ಲಿಕಾರ್ಜುನ್ ನಾಗೂರ ನಡೆಸಿಕೊಟ್ಟರು ಕೊನೆಯದಾಗಿ ವಂದನಾರ್ಪಣೆ ಸಾಯಬಣ್ಣ ಇವರು ನಡೆಸಿಕೊಟ್ಟರು ಈ ಕಾರ್ಯಕ್ರಮದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
