ಹಾವೇರಿ:ಜಿಲ್ಲೆ ಹಾಗೂ ರಾಜ್ಯದಲ್ಲಿ ಪ್ರಭಾವಿಗಳಾಗಿ ಜಿಲ್ಲೆಗೆ ತಮ್ಮದೆಯಾದ ಕೊಡುಗೆ ನೀಡಿದ ಮಾಜಿಶಾಸಕರಾದ ಶಿವರಾಜ ಸಜ್ಜನರ ಅವರ ಸೇವೆ ಅಪಾರವಾಗಿದೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಹೇಳಿದರು. ಇಲ್ಲಿನ ಮಾಜಿ ಶಾಸಕರಾದ ಶಿವರಾಜ ಸಜ್ಜನರ ಅವರ ನಿವಾಸದಲ್ಲಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರನ್ನು ಕಲ್ಯಾಣ ಸಮಿತಿಯಿಂದ ಗೌರವಿಸಿ ಸನ್ಮಾನಿಸಿ ಅವರ ಸೇವೆ ಸ್ಮರಸಿದರು. ಸರಳ ಸಜ್ಜನಕೆಯ ವ್ಯಕ್ತಿತ್ವದ ಹಾಗೂ ಯುವ ನಾಯಕರನ್ನು ಬೆಳಿಸುವ ಸ್ವಭಾವ ಮಾಜಿಶಾಸಕರಾದ ಶಿವರಾಜ ಸಜ್ಜನರ ಅವರಲ್ಲಿ ಕಾಣಬಹುದು.ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಅವರ ಕಷ್ಟಗಳಿಗೆ ಸ್ಪಂಧಿಸುವ ಕೆಲಸವನ್ನು ಶಿವರಾಜ ಸಜ್ಜನರ ಅವರು ಮಾಡುತ್ತಾ ಬರುತ್ತಿದ್ದಾರೆ.ಅವರಿಗೆ ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನಮಾನ ಸಿಗಲಿ ಹಾಗೂ ಆರೋಗ್ಯ ಆಯುಷ್ಯ ವೃದ್ಧಿಸಲಿ ಎಂದು ಉಡಚಪ್ಪ ಮಾಳಗಿ ಅವರು ಶುಭ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ ಮುಖಂಡರಾದ ರಾಜು ಪೇಟಕರ್, ಮೃತ್ಯುಂಜಯ ಮುಷ್ಠಿ,ರಾಜು ಹೊಸಕೇರಿ,ದ್ಯಾಮಣ್ಣ ಕೊಟ್ಟೂರ,ಶಾಂತಯ್ಯ ಮಳ್ಳಿಮಠ,ಸುನೀಲ ಕೋರಿ,ನಿಂಗಪ್ಪ ದಂಡಿನವರ ಸೇರಿದಂತೆ ಅನೇಕರು ಇದ್ದರು.
