ಅರಸೀಕೆರೆ ತಾಲ್ಲೋಕ್ ನಲ್ಲಿ ಮುಖ್ಯ ಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಿನಾಂಕ -22-07-2025 ರ ಮಂಗಳವಾರದಂದು ಕಂದಾಯ ಭವನದಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ & ಶಂಕುಸ್ಥಾಪನೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಸೀಕೆರೆ ಕ್ಷೇತ್ರದ ಶಾಸಕರು, ಹಾಗೂ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರು ಆದ ಸನ್ಮಾನ್ಯ ಶ್ರೀ KM ಶಿವಲಿಂಗೇಗೌಡರು ಅಧ್ಯಕ್ಷತೆ ವಹಿಸಿದ್ದರು.ಅರಸೀಕೆರೆ ನಗರ ಸಭೆಯ ಅಧ್ಯಕ್ಷರು ಆದ ಮಾನ್ಯ, ಶ್ರೀ ಸಮೀವುಲ್ಲಾ ರವರು, ಹಾಗೂ ಉಪಾಧ್ಯಕ್ಷರು ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು,ಹಾಗೂ ಈ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾದ ಮಾನ್ಯ,ಶ್ರೀ ಲತಾಕುಮಾರಿಯವರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಮಾನ್ಯ,ಶ್ರೀ ಪೂರ್ಣಿಮಾ ರವರು, ಜಿಲ್ಲಾ ಪೋಲೀಸ್
ವರಿಷ್ಟಾಧಿಕಾರಿಗಳಾದ ಮಾನ್ಯ,ಶ್ರೀ ಮೊಹಮ್ಮದ್ ಸುಜಿತಾ ರವರು,ಹಾಗೂ ಮಾನ್ಯ ತಹಶೀಲ್ದಾರ್ ಶ್ರೀ ಸಂತೋಷ್ ರವರು, ಅರಸೀಕೆರೆಯ ಮಾನ್ಯ, ಶ್ರೀ DYSP ರವರು,ಹಾಗೂ ತಾಲ್ಲೋಕ್ ಆಡಳಿತವು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅತ್ಯoತ ಯಶಸ್ವಿಯಾಗಿ ನೆರವೇರಿಸಿದರು.
ವರದಿ : ಮಾಡಾಳ್ ರವಿ.
