“ಟೀಮ್ ಇಂಪ್ಯಾಕ್ಟ್” ಉತ್ಸವವನ್ನು ಬಡ ಪ್ರತಿಭಾ ವಿದ್ಯಾರ್ಥಿಗಳ & ದೇಶ ಕಾಪಾಡುವ ಸೈನಿಕರ ಜೊತೆ ಆಚರಿಸುತ್ತಿರುವ”ಅಂತರ ರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಎ” ಯ ಜನಪ್ರಿಯ ರಾಜ್ಯಪಾಲರಾದ ಲಯನ್ ಡಾ: ಜಿ.ಮೋಹನ್ mjf 25-26 ಅವರು ಸುದ್ದಿ ಗಾರರೊಂದಿಗೆ ಮಾತನಾಡಿ 317ಎ ಟೀಮ್ ಇಂಪ್ಯಾಕ್ಟ್ ಧ್ಯೇಯದಲ್ಲಿ3ಜಿಲ್ಲೆಗಳೂ ಸೇವೆಯ ಮುಂದಾಳತ್ವದಲ್ಲಿ “ನಾವು ಸೇವೆಗೆ” ತತ್ವದಡಿ ಕಣ್ಣಿನ ಆರೋಗ್ಯ ತಪಾಸಣೆ, ಹಸಿವು ನಿವಾರಣೆ, ಪರಿಸರ ಸಮತೋಲನ ರಕ್ಷಣೆ, ಬಾಲ್ಯದ ಕ್ಯಾನ್ಸರ್ ತಡೆ, ಮಧುಮೇಹ ತಡೆಗಟ್ಟುವಿಕೆ” ಜೊತೆಗೆ ವಿದ್ಯಾರ್ಥಿಗಳಿಗೆ, ಸೈನಿಕ ರಕ್ಷಕರಿಗೂ ಅಗತ್ಯ ಸೇವೆ ಒದಗಿಸುತ್ತಿರುವ ಮಹತ್ತರ ಉದ್ದೇಶ ದಿಂದ ಕೂಡಿದೆ” ಎಂದು ಮಾಧ್ಯಮದವರಿಗೆ ತಿಳಿಸಿದರು. ಇದೇ ಸಂಧರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಶೇ 90ಕ್ಕೂ ಹೆಚ್ಚು ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಿದರು
