ನಂಜನಗೂಡು: ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಸೋಮವಾರ ಮುಂಜಾನೆ ಕೌಟುಂಬಿಕ ಕಲಹದಿಂದ ಮನನೊಂದು ಯುವ ಪೊಲೀಸ್ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರು ಮನ ಕುಲುಕುವ ಘಟನೆ ನಂಜನಗೂಡು ಹೌಸಿನಬೋರ್ಡ್ ನಲ್ಲಿ ನಡೆದಿದೆ. ಬೀರೇಶ್ 37 ವರ್ಷದ ವಿವಾಹಿತ ಮೃತ ದುರ್ದೈವಿ. ಇವರು ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕಟಿ ಗ್ರಾಮದವರಗಿದ್ದು, ಮೈಸೂರು ಜಿಲ್ಲಾ ಸಶಸ್ತ್ರ ಪಡೆಯ ಮುಖ್ಯ ಪೇದೆ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೀರೇಶ್ ತನ್ನ ಪತ್ನಿ ಹಾಗೂ ಮೂರು ವರ್ಷದ ಮುದ್ದು ಮಗುವಿನೊಂದಿಗೆ, ನಂಜನಗೂಡಿನ ಗ್ರಾಮಾಂತರ ಠಾಣೆಯ ಸಮೀಪವಿರುವ ಹೌಸಿಂಗ್ ಬೋರ್ಡು ಕಾಲೋನಿಯಲ್ಲಿ ವಾಸವಿದ್ದರು ಎನ್ನಲಾಗಿದೆ. ಮೃತರ ನಿವಾಸಕ್ಕೆ ಜಿಲ್ಲಾ SP ಆಗಮಿಸಿ ಸಾಂತ್ವನದ ನುಡಿಗಳೊಂದಿಗೆ ಗೌರವ ಸಲ್ಲಿಸಿದರು. ಮೃತರು ಕೌಟುಂಬಿಕ ಕಾರಣ ಮನನೊಂದು ಕೊಠಡಿಯ ಫ್ಯಾನ್ ಗೆ ನೇಣು ಹಾಕಿಕೊಂಡಿರುತ್ತಾರೆ. ಪಟ್ಟಣಪೋಲೀಸ್ ಠಾಣೆಯ ಆರಕ್ಷಕ ಅಧಿಕಾರಿಗಳು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿ ಕೊಂಡು ಶವದ ಮರಣೋತ್ತರ ಪರೀಕ್ಷೆಗೆ ನಂಜನಗೂಡು ಆಸ್ಪತ್ರೆಗೆ ರವಾನಿಸಿದ್ಧತೆ. ಆತ್ಮಹತ್ಯೆ ವಿಚಾರಣೆ ಬಗ್ಗೆ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
