ಲಕ್ಷ್ಮೇಶ್ವರ, ಕರ್ನಾಟಕ ಪ್ರೆಸ್ ಕ್ಲಬ್ ನೂತನ ತಾಲೂಕಾ ಘಟಕದ ವತಿಯಿಂದ
ಕರ್ನಾಟಕ ಪ್ರೆಸ್ ಕ್ಲಬ್ ಕಚೇರಿಯಲ್ಲಿ ಪತ್ರಿಕಾ ದಿನಾಚರಣೆ ಮತ್ತು ನೂತನ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ನಡೆಯಿತು
ಕಾರ್ಯಕ್ರಮವನ್ನು ಸಸಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದ ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯ ಉಪಾಧ್ಯಕ್ಷರಾದ ಸುರೇಶ್ ಹಲಗಿ ಅವರು ಮಾತನಾಡಿ ರಾಜ್ಯದಲ್ಲಿ ಪತ್ರಿಕಾ ಮತ್ತು ಮಾಧ್ಯಮದವರಿಗೆ ಸರಕಾರದಿಂದ ಯಾವುದೇ ಸೌಲಭ್ಯವಿಲ್ಲ ಕೇವಲ ಮಹಿಳೆಯರಿಗೆ ಶಕ್ತಿ ಯೋಜನೆಯಲ್ಲಿ ಉಚಿತ ಬಸ್ ಪ್ರಯಾಣ ಮಾಡುವ ಅನುಕೂಲತೆ ಇದೆ ಆದರೆ ನಿಖರವಾಗಿ ಊರು ಊರಿಗೆ ಹೋಗಿ ಸುದ್ದಿ ಮಾಡುವ ಪತ್ರಕರ್ತರಿಗೆ ಯಾವುದೇ ಸಹಾಯ ಸಹಕಾರ ಇಲ್ಲ ಸರ್ಕಾರ ಇಂತಹ ಪತ್ರಿಕಾ ಮಾಧ್ಯಮದವರಿಗೆ ಸಹಾಯ ಸಹಕಾರ ನೀಡುವ ಕೆಲಸ ಮಾಡಬೇಕು ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷ ಮಂಜುನಾಥ್ ಮಾಗಡಿ ಅವರು ಮಾತನಾಡಿ ಪತ್ರಿಕಾ ಮಾಧ್ಯಮದವರು ಸಮಾಜದಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ನೇರ ನಿಷ್ಠುರವಾಗಿ ಸುದ್ದಿಯನ್ನು ಮಾಡಿದಾಗ ಮಾತ್ರ ಪತ್ರಿಕಾ ಧರ್ಮಕ್ಕೆ ಒಂದು ಅರ್ಥ ಬರುತ್ತದೆ ನೀವು ಯಾರ ಸ್ವತ್ತು ಅಲ್ಲ ಸಂವಿಧಾನದ 4ನೇ ಅಂಗ ಪತ್ರಿಕಾ ರಂಗ ನಿಮಗೆ ಸಂಪೂರ್ಣ ಅಧಿಕಾರವಿದೆ ಸ್ಪಷ್ಟವಾಗಿ ನೀವು ಸುದ್ದಿ ಮಾಡುವುದರಿಂದ ನಿಮ್ಮ ಘನತೆ ಗೌರವ ಹಚ್ಚುವುದರೊಂದಿಗೆ ಒಬ್ಬ ಒಳ್ಳೆಯ ಪತ್ರಕರ್ತರಾಗಿ ಹೊರಹೊಮ್ಮುತ್ತಿರಿ ಎಂದರು
ಇದೇ ಸಮಯದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆಯನ್ನು ಮಾಡಲಾಯಿತು
ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ವೀರಣ್ಣ ಹಡಪದ, ಉಪಾಧ್ಯಕ್ಷರಾಗಿ ನಾಗರಾಜ್ ಲಮಾಣಿ, ಕಾರ್ಯದರ್ಶಿಯಾಗಿ ಅಲ್ತಾಫ್ ಹುಸೇನ್ ಹವಾಲ್ದಾರ್, ಸಹ ಕಾರ್ಯದರ್ಶಿಯಾಗಿ ಮೆಹಬೂಬ್ ಹುಸೇನ್ ಮುಲ್ಲಾ ಖಜಾಂಸಿಯಾಗಿ ಗಾಳೆಪ್ಪ ಹರಿಜನ್, ಸದಸ್ಯರಾಗಿ ನಿಂಗರಾಜ್ ಖರಾಟೆ, ಸಂತೋಷ್ ಭಜಂತ್ರಿ ಅವರನ್ನು ಆಯ್ಕೆ ಮಾಡಲಾಯಿತು
ಈ ಸಮಯದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಸದಸ್ಯರಾದ ದೇವೇಂದ್ರಪ್ಪ ಟಿ ಮುಖಂಡರಾದ ನಾಗಣ್ಣ ಚಿಂಚಲಿ, ಪವನ ಬಂಕಾಪುರ್, ಶಂಕ್ರಪ್ಪ ಹಡಪದ, ಸೇರಿದಂತೆ ಇನ್ನೂ ಅನೇಕ ಮುಖಂಡರು ಇದ್ದರು
