ಲಕ್ಷ್ಮೇಶ್ವರ ನಗರದ ಬೀದಿ ಬದಿ ವ್ಯಾಪಾರಸ್ಥರ ಸಂಘದ ಎಲ್ಲಾ ಪದಾಧಿಕಾರಿಗಳು ಸೇರಿ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರಿಗೆ ಆಶ್ರಯ ಮನೆಯನ್ನು ಮಂಜೂರು ಮಾಡಬೇಕು ಎಂದು ಮನವಿ ನೀಡಿದರು, ಈ ವೇಳೆ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮಂಜುನಾಥ್ ಹೋಗೆಸೊಪ್ಪಿನ ಮಾತನಾಡಿ ಬೀದಿ ಬದಿ ವ್ಯಾಪಾರಸ್ಥರು ಕಡು ಬಡವರಾಗಿದ್ದು ದಿನೇ ದಿನೇ ತಂದ ಹಣ್ಣು ಹೂವು ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡಿ ದಿನನಿತ್ಯದ ಜೀವನ ನಡೆಸುತ್ತಿದ್ದೇವೆ. ಇಂದಿನ ತುಟ್ಟಿ ದಿನಮಾನಗಳಲ್ಲಿ ಎಲ್ಲಾ ದರಗಳು ಗಗನಕ್ಕೆ ಏರುತ್ತಿದ್ದು ಮಕ್ಕಳ ಶಿಕ್ಷಣ ಆರೋಗ್ಯ ಕುಟುಂಬ ನಿರ್ವಹಣೆ ನಡೆಸುವುದು ತುಂಬಾ ಕಷ್ಟಕರವಾಗಿದೆ ಹಾಗೂ ನಮಗೆ ಉಳಿಯಲು ಸರಿಯಾದ ಸೂರು ಇರುವುದಿಲ್ಲ. ಕಾರಣ ಮಾನ್ಯರು ಈ ನಮ್ಮ ಎಲ್ಲಾ ಸಂಕಷ್ಟಗಳನ್ನು ಅರಿತು ಶೀಘ್ರವೇ ನಮಗೆ ವಾಸಿಸಲು ಆಶ್ರಯ ಮನೆಗಳನ್ನ ಮಂಜೂರು ಮಾಡಿದರೆ ತಮನ್ನು ಜೀವನ ಪರ್ಯಂತ ಮರೆಯುವುದಿಲ್ಲ ಎಂದರು.
ವರದಿ. ಹಲಗಿ ಸುರೇಶ
