ಚಳಿಗಾಲ

ಚಳಿಗಾಲ

Share

ಚಳಿಗಾಲದಲ್ಲಿ ಬೆಳೆಯುವ ಶತಾವರಿಯ ಎಲೆ, ಕಾಂಡ ಮತ್ತು ಬೇರುಗಳನ್ನು ವೈದ್ಯಕೀಯ ಉದ್ದೇಶಗಳಿಗೆ ಬಳಸಲಾಗುತ್ತದೆ. ಈ ತರಕಾರಿಯನ್ನು ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಬಳಸಬಹುದು. ಶತಾವರಿಯಿಂದ ಹಲವಾರು ಆರೋಗ್ಯ ಮತ್ತು ತ್ವಚೆಯ ಲಾಭಗಳಿವೆ. ಇದರಲ್ಲಿ ತ್ವಚೆಯನ್ನು ಶುಚಿಗೊಳಿಸುವ ಗುಣಗಳಿದೆ ಮತ್ತು ಇದನ್ನು ನೇರವಾಗಿ ತ್ವಚೆಗೆ ಹಚ್ಚಬಹುದು. ಚಳಿಗಾಲದಲ್ಲಿ ತ್ವಚೆ ಒಣಗಿ ಬಿರುಕು ಬಿಟ್ಟಂತೆ ಆಗುವುದರಿಂದ ಇದನ್ನು ನಿವಾರಿಸಲು ಶತಾವರಿ ಬಳಸಬಹುದು. ಇದನ್ನು ತ್ವಚೆಯ ಆರೈಕೆಗೆ ಬಳಸುವಾಗ ಎಚ್ಚರಿಕೆ ವಹಿಸಬೇಕಾದ ಅಗತ್ಯವೂ ಇದೆ. ಇದು ತುಂಬಾ ಕಿರಿಕಿರಿ ಮತ್ತು ನಿಮ್ಮ ತ್ವಚೆಗೆ ಹೊಂದಿಕೊಳ್ಳದೆ ಇರಬಹುದು. ಮೊದಲು ಇದನ್ನು ಕೈಯ ಒಂದು ಭಾಗಕ್ಕೆ ಹಚ್ಚಿ ಯಾವುದೇ ಸಮಸ್ಯೆಯಾಗುತ್ತದೆಯಾ ಎಂದು ಮೊದಲು ತಿಳಿದುಕೊಳ್ಳಿ.

 

ಕಾಯಿಸಿ ಆರಿಸಿದ ಹಾಲಿಗೆ ಲಿಂಬೆರಸ ಸೇರಿಸಿ ಮುಖಕ್ಕೆ ಹಚ್ಚುತ್ತಿದ್ದರೆ ಬ್ಲ್ಯಾಕ್ ಹೆಡ್ ನಾಶವಾಗಿ ತ್ವಚೆ ಕಾಂತಿಯುಕ್ತವಾಗುತ್ತದೆ.
ದಾಲ್ಚಿನಿ ಚೆಕ್ಕೆಯನ್ನು ತೇಯ್ದು, ಅದಕ್ಕೆ ಜೇನುತುಪ್ಪ ಬೆರೆಸ ರಾತ್ರಿ ಮಲಗುವ ಮುನ್ನ ಮೊಡವೆಗಳ ಮೇಲೆ ಬೊಟ್ಟು ಇಟ್ಟು ಮಲಗಿ ಬೆಳಗ್ಗೆ ಎದ್ದು ತೊಳೆದರೆ ಮೊಡವೆ ಸಂಪೂರ್ಣ ಮಾಯವಾಗುತ್ತದೆ.
ಕಹಿಬೇವಿನ ಎಲೆ ಅರೆದು ಅದಕ್ಕೆ ಅರಿಶಿನ ಸೇರಿಸಿ ಮುಖಕ್ಕೆ ಹಚ್ಚುತ್ತಿದ್ದರೆ, ಮೊಡವೆಗಳು ನಾಶವಾಗಿ ಬೆಳ್ಳಗಿನ ತ್ವಚೆ ನಿಮ್ಮದಾಗುತ್ತದೆ.
ಮೆಂತೆಸೊಪ್ಪು ಅರೆದು ಮುಖಕ್ಕೆ ಹಚ್ಚಿ ೨೦ ನಿಮಿಷ ಬಿಟ್ಟು ತೊಳೆದರೆ ತ್ವಚೆ ನುಣುಪಾಗಿ ಮೊಡವೆಗಳು ಹಾಗೂ ಸುಕ್ಕು ಕಡಿಮೆಯಾಗುತ್ತದೆ.
ಕಿತ್ತಳೆ ಸಿಪ್ಪೆಯನ್ನು ನೀರಿನೊಂದಿಗೆ ಗಟ್ಟಿಯಾಗಿ ರುಬ್ಬಿ ಕಣ್ಣಿನ ಸುತ್ತ ಹೊರತುಪಡಿಸಿ ಮುಖಕ್ಕೆ ಹಚ್ಚಿದರೆ ಮುಖ ಕಾಂತಿಯುಕ್ತವಾಗಿ ಮೊಡವೆಗಳು ಮಾಯವಾಗುತ್ತದೆ.

ಕಹಿಬೇವಿನ ಎಲೆಯನ್ನು ನೀರಿನಲ್ಲಿ ಕುದಿಸಿ ಆನೀರಿನಿಂದ ಮುಖ ತೊಳೆಯಿರಿ. ಇದು ಮೊಡವೆ, ಕಪ್ಪುಚುಕ್ಕೆಗಳನ್ನು ಹೋಗಲಾಡಿಸುತ್ತದೆ.
ಮೊಡವೆಗಳಿಂದಾಗಿ ಮುಖದಲ್ಲಿ ಕಲೆಗಳಾಗಿದ್ದರೆ ತುಳ
ಸಿಯ ಪೇಸ್ಟ್ ಮಾಡಿ ದಿನವೂ ಮುಖಕ್ಕೆ ಹಚ್ಚಿ. ಕಲೆಗಳು ನಿವಾರಣೆಯಾಗುತ್ತದೆ.
ಮೊಡವೆಗಳಿದ್ದರೆ ದಿನವೂ ಸೌತೆಕಾಯಿ ರಸ, ಲಿಂಬೆ ರಸ, ಹಾಲು ಸಮಪ್ರಮಾಣದಲ್ಲಿ ಸೇರಿಸಿ, ಅದರಲ್ಲಿ ಹತ್ತಿ ತುಂಡು ಮುಳುಗಿಸಿ ಆ ಮೂಲಕ ಮುಖಕ್ಕೆ ಉಜ್ಜಿ.
ಮುಖದಲ್ಲಿ ಬ್ಲ್ಯಾಕ್ ಹೆಡ್‌ಗಳಿದ್ದಲ್ಲಿ ಅದನ್ನು ನಿವಾರಣೆ ಮಾಡಲು ಮುಖಕ್ಕೆ ಮೊಸರಿನ ಜೊತೆಗೆ ಅಕ್ಕಿ ಪುಡಿಯನ್ನು ಸೇರಿಸಿ ದಿನವೂ ಹಚ್ಚಬೇಕು. ನಂತರ ಮೃದುವಾಗಿ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಬೇಕು.
ಮುಖ ತುಂಬ ತೈಲಯುಕ್ತವಾಗಿ ಕಾಣುತ್ತಿದ್ದರೆ, ಮುಲ್ತಾನಿ ಮಿಟ್ಟಿಯನ್ನು ರೋಸ್‌ವಾಟರ್‌ನಲ್ಲಿ ಕಲಸಿ ಮುಖಕ್ಕೆ ಹಚ್ಚಬೇಕು. ಸ್ವಲ್ಪ ಹೊತ್ತು ಬಿಟ್ಟು ತೊಳೆಯಬೇಕು.

ಮುಲ್ತಾನಿ ಮಿಟ್ಟಿಯನ್ನು ನೀರಿನಲ್ಲಿ ಕಲಸಿಕೊಂಡು ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮುಖವನ್ನು ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಮ್ಮೆ ಮಾಡಿ ನಿಮಗೆ ಅದ್ಭುತ ಫಲಿತಾಂಶ ದೊರೆಯುವುದು ಖಂಡಿತ. ಮುಲ್ತಾನಿ ಮಿಟ್ಟಿ ನಿಮ್ಮ ತ್ವಚೆಯ ಚರ್ಮದ ರಚನೆಯನ್ನು ಸುಧಾರಿಸುತ್ತದೆ. ಇದು ಅನಗತ್ಯ ತೇಪೆಗಳನ್ನು ತೆಗೆದು ಚರ್ಮವನ್ನು ಮೃದುವಾಗಿಸುತ್ತದೆ. ಇದರಿಂದ ನಿಮ್ಮ ತ್ವಚೆಯ ಚರ್ಮ ತುಂಬಾ ಸುಸಂಗತ ಮತ್ತು ಬಿಳಿಯಾಗುತ್ತದೆ. ಚರ್ಮದ ಕಾಂತಿ ಹಾಗೂ ರಚನೆ, ಅದರ ಆರೋಗ್ಯಕ್ಕಾಗಿ ಮುಲ್ತಾನಿ ಮಿಟ್ಟಿಯನ್ನು ನಿಯಮಿತವಾಗಿ ಬಳಸಬೇಕು.

ಸೌಂದರ್ಯದ ದೃಷ್ಟಿಯಿಂದಲೂ ಮನುಷ್ಯನಿಗೂ ತಲೆ ಕೂದಲು ಅತಿ ಮುಖ್ಯ. ಮಹಿಳೆಯರಿಗಾಗಲಿ, ಪುರುಷರಿಗಾಗಲಿ ತಮ್ಮ ಕೂದಲು ಕಪ್ಪಾಗಿರಬೇಕು, ಸದೃಢವಾಗಿರಬೇಕು, ದಟ್ಟವಾಗಿರಬೇಕು ಎಂಬ ಮಹದಾಸೆ ಇದ್ದೇ ಇರುತ್ತದೆ. ಅದಕ್ಕಾಗಿ ದುಬಾರಿ ಎಣ್ಣೆ ಹಾಗೂ ಶ್ಯಾಂಪುಗಳಿಗೆ ದುಡ್ಡು ಸುರಿಯುತ್ತಾರೆ, ಹಾಗೆ ಇನ್ನೂ ಮುಂದೆ ದುಡ್ಡು ಸುರಿಯಬಾರದು ಎಂದು ಆಲೋಚಿಸಿದ್ದರೆ ಮುಂದೆ ಓದಿ.
ಕೂದಲ ಹೊಳಪಿಗೆ ದಾಸವಾಳದ ಎಲೆಯನ್ನು ಮೊಸರಿನ ಜೊತೆ ಮಿಕ್ಸ್ ಮಾಡಿ ಹಚ್ಚಿದರೆ ಒಳ್ಳೆಯದು. ಕೂದಲು ಉದುರುವುದು, ತಲೆ ತುರಿಕೆ, ತಲೆ ಹೊಟ್ಟು ಈ ರೀತಿಯ ಸಮಸ್ಯೆಯಿದ್ದರೆ ನೆಲ್ಲಿಕಾಯಿಯನ್ನು ಪೇಸ್ಟ್ ಮಾಡಿ ಎಣ್ಣೆ ಜೊತೆ ಹಾಕಿ ಕುದಿಸಿ ತಲೆಗೆ ಹಚ್ಚಬಹುದು. ಇಲ್ಲದಿದ್ದರೆ ನೆಲ್ಲಿಕಾಯಿ ಪೇಸ್ಟ್ ಅನ್ನು ಮೊಸರಿನ ಜೊತೆ ಮಿಕ್ಸ್ ಮಾಡಿಯೂ ತಲೆಗೆ ಹಚ್ಚಬಹುದು. ಮೊಸರನ್ನು ಜೇನು ಅಥವಾ ನಿಂಬೆ ರಸ ಹಚ್ಚಿ ತಲೆಗೆ ಹಚ್ಚಿದರೆ ಇದರಷ್ಟು ಉತ್ತಮವಾದ ಕಂಡೀಷನರ್ ಮತ್ತೊಂದಿಲ್ಲ. ಕೂದಲು ಎಣ್ಣೆ-ಎಣ್ಣೆಯಾಗುತ್ತಿದ್ದರೆ ಅದನ್ನು ಹೋಗಲಾಡಿಸಲು ನಿಂಬೆ ರಸ ಬಳಸಬಹುದು. ಶುದ್ಧವಾದ ತೆಂಗಿನೆಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ನಿಮ್ಮ ಕೂದಲಿನ ಸೌಂದರ್ಯ ಹೆಚ್ಚುವುದು. ತಿಂಗಳಿಗೊಮ್ಮೆ ಕೂದಲಿಗೆ ಮೆಹಂದಿ ಹಚ್ಚುವುದು ಒಳ್ಳೆಯದು. ಇದು ಕೂದಲನ್ನು ಮೃದುವಾಗಿಸುವುದರ ಜೊತೆಗೆ ಅಕಾಲಿಕ ನೆರಿಗೆಯನ್ನು ತಡೆಯುತ್ತದೆ. ತಲೆ ಸ್ನಾನವಾದ ಬಳಿಕ ಅರ್ಧ ಬಕೆಟ್ ನೀರಿಗೆ ಸ್ವಲ್ಪ ವಿನೆಗರ್ ಹಾಕಿ ಆ ನೀರನ್ನು ತಲೆಗೆ ಸುರಿದುಕೊಂಡರೆ ಕೂದಲು ಮೃದುವಾಗುವುದು ಕೆಲವೊಮ್ಮೆ ಇನ್ಫೆಕ್ಶನ್ ಆಗಿ ತಲೆಯಲ್ಲಿ ತುರಿಕೆ ಕಂಡು ಬರುತ್ತದೆ. ಈ ರೀತಿಯಾದಾಗ ಬೇವಿನ ಎಲೆ ಹಚ್ಚಿದರೆ ಒಳ್ಳೆಯದು. ಯಾವುದೇ ಕೂದಲಿನ ಸಮಸ್ಯೆಯಿಲ್ಲದೆ ಮಂದವಾದ ಕೂದಲು ಬೇಕೆಂದರೆ ವಾರಕ್ಕೊಮ್ಮೆ ಮೆಂತೆ ಪೇಸ್ಟ್ ಅನ್ನು ತಲೆಗೆ ಹಚ್ಚಲು ಮರೆಯದಿರಿ. ಮೊಟ್ಟೆಯ ಬಿಳಿಯನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ. ಈ ರೀತಿ ವಾರಕ್ಕೊಮ್ಮೆ ಮಾಡುತ್ತಾ ಬಂದರು ನಿಮ್ಮ ಕೂದಲಿನ ಗುಣ ಮಟ್ಟ ಹೆಚ್ಚುವುದು. ಹರಳೆಣ್ಣೆ ಹಚ್ಚಿದರೆ ಕೂದಲು ಕಪ್ಪಾಗಿ, ಮಂದವಾಗಿ ಬೆಳೆಯುವುದು, ಆದರೆ ಇದನ್ನು ಹಚ್ಚಿದರೆ ತಲೆ ಜಿಡ್ಡು-ಜಿಡ್ಡಾಗಿರುವುದರಿಂದ ಹೆಚ್ಚಿನವರು ಬಳಸಲು ಇಷ್ಟಪಡುವುದಿಲ್ಲ. ಮಂದವಾದ, ಆರೋಗ್ಯಕರವಾದ ಕೂದಲಿಗಾಗಿ ಈ ಎಣ್ಣೆ ಬಳಸಬಹುದು. ಕೂದಲಿಗೆ ವಿಟಮಿನ್ ಬಿ ಕೊರತೆ ಉಂಟಾದರೆ ಕೂದಲು ಕವಲೊಡೆಯುತ್ತದೆ. ಲೋಳೆಸರ ಹಚ್ಚಿದರೆ ಕೂದಲಿಗೆ ಬೇಕಾದ ವಿಟಮಿನ್ ದೊರೆಯುವುದು ಹಾಗೂ ಕೂದಲು ಕವಲೊಡೆಯುವ ಸಮಸ್ಯೆಯೂ ಕಡಿಮೆಯಾಗುವುದು. ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿ ಅದನ್ನು ಮೊಸರಿನ ಜೊತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿದರೆ ಕೂದಲಿಗೆ ಒಳ್ಳೆಯದು. ಕೂದಲು ತುಂಬಾ ಡ್ರೈಯಾಗುತ್ತಿದ್ದರೆ ಶೀಯಾ ಬಟರ್ ಹಚ್ಚಿದರೆ ಸಾಕು, ಕೂದಲಿನಲ್ಲಿ ಮಾಯಿಶ್ಚರೈಸರ್ ಕಾಪಾಡಬಹುದು ತೆಂಗಿನ ಹಾಲನ್ನು ತಲೆಗೆ ಹಚ್ಚಿದರೆ ಕೂದಲು ಡ್ರೈಯಾಗುವುದನ್ನು ಣಚಿಜeಥಿbಚಿhuಜu

೧.ಸೌತೆಕಾಯಿ ರಸ ಕತ್ತಿನ ಚರ್ಮದ ಕಪ್ಪು ಬಣ್ಣವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ತ್ವಜೆಯನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಸೌತೆಕಾಯಿ ರಸ ಅಥವಾ ಪೇಸ್ಟ್ನ್ನು ಕುತ್ತಿಗೆಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ಬಳಿಕ ಪನ್ನೀರು ಹಚ್ಚಿ ಒರೆಸಿಕೊಳ್ಳಿ. ಇದನ್ನು ವಾರಕ್ಕೊಂದು ಬಾರಿಯಾದರೂ ಮಾಡಿ.
೨. ಒಂದು ತುಂಡು ಆಲೂಗಡ್ಡೆಯನ್ನು ತೆಗೆದುಕೊಂಡು ಕತ್ತಿನ ಸುತ್ತ ಅದನ್ನು ಉಜ್ಜಿ. ಒಂದುವೇಳೆ ಇದು ಕಷ್ಟ ಎಂದಾದರೆ ಆಲೂಗಡ್ಡೆ ಜ್ಯೂಸ್ ಮಾಡಿ ಅದನ್ನು ಕತ್ತಿಗೆ ಹಚ್ಚಿ. ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ನೀವು ಕಾಣುವಿರಿ.
೩.ಇನ್ನು ಲಿಂಬೆ ರಸ ಮತ್ತು ಪನ್ನೀರನ್ನು ಸಮಾನವಾಗಿ ತೆಗೆದುಕೊಂಡು ಮಿಶ್ರಣ ಮಾಡಿ. ಇದನ್ನು ರಾತ್ರಿ ಕತ್ತಿಗೆ ಹಚ್ಚಿ ಬೆಳಗ್ಗೆ ತೊಳೆದುಕೊಳ್ಳಿ. ಕೆಲವು ದಿನಗಳ ಕಾಲ ಇದನ್ನು ಮಾಡುತ್ತಾ ಹೋದರೆ ಕತ್ತಿನ ಚರ್ಮದಲ್ಲಿರುವ ಕಪ್ಪು ಕಲೆಗಳು ಹೋಗಿ ನೈಸರ್ಗಿಕ ಬಣ್ಣ ಲಭಿಸುತ್ತದೆ.
೪. ಇನ್ನು ಅಲೋವೆರಾ ಪೇಸ್ಟ್ ಕೂಡ ಕತ್ತಿನ ಕಪ್ಪನ್ನು ನಿವಾರಿಸಲು ನೆರವು ನೀಡುತ್ತದೆ. ಅಲೋವೆರಾದ ತಾಜಾ ಪೇಸ್ಟ್ ಸಿದ್ಧಪಡಿಸಿಕೊಂಡು ಕತ್ತಿಗೆ ಹಚ್ಚಿ. ೧೫ ನಿಮಿಷಗಳ ಬಳಿಕ ತೊಳೆಯಬೇಕು.
೫. ಅಲ್ಮೋಂಡ್ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿ. ಬಳಿಕ ಅದನ್ನು ಕತ್ತಿಗೆ ಹಚ್ಚಿ ಮಸಾಜ್ ಮಾಡಬೇಕು. ಇದು ಕತ್ತು ಬಿಳಿಯಾಗುವುದರ ಜೊತೆಗೆ ರಕ್ತ ಸಂಚಾರ ಸುಧಾರಣೆಯಾಗಲು ಇದು ನೆರವು ನೀಡುತ್ತದೆ.
೬.ಹಾಲನ್ನು ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಯ ಜೊತೆಗೆ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಕತ್ತಿಗೆ ಹಚ್ಚಿ ಒಣಗಿದ ಬಳಿಕ ಕತ್ತು ತೊಳೆದುಕೊಳ್ಳಿ. ಇದನ್ನು ಪ್ರತಿ ವಾರ ಮಾಡಿದರೆ ಸುಂದರ, ನೈಸರ್ಗಿಕ ಬಣ್ಣದ ಕತ್ತು ನಿಮ್ಮದಾಗುವುದರಲ್ಲಿ ಸಂಶಯವಿಲ್ಲ.


Share

Leave a Reply

Your email address will not be published. Required fields are marked *