ಆಗಾಗ ಮುಖ ತೊಳೆಯಿರಿ

ಆಗಾಗ ಮುಖ ತೊಳೆಯಿರಿ

Share

ಬೇಸಿಗೆ ಕಾಲದಲ್ಲಿ ನಿಮ್ಮ ತ್ವಚೆಯ ತೈಲ ಗ್ರಂಥಿಗಳು ಹೆಚ್ಚು ಕೆಲಸ ಮಾಡುವ ಪರಿಣಾಮ ನಿಮ್ಮ ಮುಖದಲ್ಲಿ ಎಣ್ಣೆಯಾಂಶ ಕಂಡುಬರಬಹುದು. ಇದು ನಿಮ್ಮ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳಲು ಮೊದಲ ಕಾರಣ. ಯಾವುದಾದರೂ ಒಳ್ಳೆಯ ಕ್ಲೀನ್ಸರ್ ನಿಂದ ಮುಖವನ್ನು ದಿನದಲ್ಲಿ ಎರಡು ಸಲವಾದರೂ ತೊಳೆಯಿರಿ. ಒಮ್ಮೆ ತೊಳೆದರೂ ಇದು ಕೆಲಸ ಮಾಡಬಹುದು. ದಿನದಲ್ಲಿ ಎಷ್ಟು ಸಲ ಮುಖ ತೊಳೆಯಬೇಕೆಂದು ನೀವು ನೋಡಲು ಪ್ರಯತ್ನಿಸಿ.
ಮೇಕಪ್ ತೆಗೆಯಿರಿ:
ಸುಂದರವಾಗಿ ಕಾಣಿಸಿಕೊಳ್ಳಲು ಮಹಿಳೆಯರು ಮೇಕಪ್ ಮೊರೆ ಹೋಗುವುದು ಹೊಸತೇನಲ್ಲ. ಇದನ್ನು ಸರಿಯಾದ ರೀತಿ ನಿಭಾಯಿಸದಿದ್ದರೆ ಆಗ ಮೊಡವೆ ಉಂಟಾಗಬಹುದು. ಮಲಗುವ ಮೊದಲು ನೀವು ಮೇಕಪ್ ತೆಗೆಯಿರಿ. ಹೀಗೆ ಮಾಡದಿದ್ದರೆ ನೀವು ಉದ್ದೇಶಪೂರ್ವಕವಾಗಿ ಮುಖದಲ್ಲಿ ಮೊಡವೆಗಳನ್ನು ಆಹ್ವಾನಿಸುತ್ತಿದ್ದೀರಿ.
ದಯವಿಟ್ಟು ಧೂಮಪಾನ ನಿಲ್ಲಿಸಿ:
ಹೌದು. ನಿಮಗೆ ನಾನು ಹೇಳುವುದು ಕೇಳಿದೆ. ಮೊಡವೆಯಿಂದ ಮುಕ್ತರಾಗಬೇಕಾದರೆ ನೀವು ಧೂಮಪಾನ ತ್ಯಜಿಸಲೇಬೇಕು. ಧೂಮಪಾನವು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುವುದು ಮಾತ್ರವಲ್ಲದೆ ಮೊಡವೆಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಹಾಲನ್ನು ಕುಡಿಯಿರಿ:
ಒಂದು ಲೋಟ ಹಾಲನ್ನು ಕುಡಿಸಿ ಗಟ್ಟಿಯಾದ ನಂತರ ಅದಕ್ಕೆ ಒಂದು ಹನಿ ನಿಂಬೆ ರಸ ಹಿಂಡಿ ಮತ್ತು ಒಲೆಯಿಂದ ಇಳಿಸಿ, ಕದಡುತ್ತಿರಿ. ಬಿಸಿ ತಣಿದ ನಂತರ ಮಲಗುವ ಸಮಯದಲ್ಲಿ ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮತ್ತು ಮರುದಿನ ಬೆಳಗ್ಗೆ ನಿಮ್ಮ ಮುಖವನ್ನು ತೊಳೆಯಿರಿ.ಇದು ಮೊಡವೆ ನಿವಾರಿಸಿ ಮೃದು ಕಾಂತಿ ನೀಡುತ್ತದೆ.
ಎಣ್ಣೆ ಅಂಶಗಳಿರುವ ಆಹಾರವನ್ನು ದೂರವಿರಿಸಿ:
ಎಣ್ಣೆ ಅಂಶಗಳಿರುವ ಆಹಾರವನ್ನು ನಿಮ್ಮಿಂದ ದೂರವಿರಿಸುವುದು ಮೊಡವೆ ತ್ವಚೆಯಿಂದ ನಿಮಗೆ ಮುಕ್ತಿ ನೀಡುತ್ತದೆ. ತ್ವಚೆಯಲ್ಲಿ ಮೊಡವೆಗಳಿಲ್ಲದೆ ನೀವು ಜನರ ಮಧ್ಯೆ ತುಂಬಾ ಆತ್ಮವಿಶ್ವಾಸದಿಂದ ತಿರುಗಾಡಲು ಇದು ಕೆಲವೊಂದು ಸರಳ ಹಾಗೂ ಪರಿಣಾಮಕಾರಿ ಸಲಹೆಗಳು. ಇಲ್ಲಿ ನೀಡಲಾಗಿರುವ ಕೆಲವೊಂದು ಸಲಹೆಗಳನ್ನು ಹೆಚ್ಚಿನ ಮಹಿಳೆಯರು ಕಡೆಗಣಿಸುತ್ತಾರೆ.
ಯಾಕೆಂದರೆ ಅವರಿಗೆ ಇದರಿಂದ ಹೆಚ್ಚು ಪರಿಣಾಮವಾಗುವುದಿಲ್ಲವೆಂದು ಭಾವಿಸುತ್ತಾರೆ. ಹೀಗಿದ್ದರೆ ಅದು ತಪ್ಪು. ಈ ಸಲಹೆಗಳನ್ನು ಪಾಲಿಸಿದರೆ ಬೇಸಿಗೆ ಕಾಲದಲ್ಲಿ ನೀವು ಮೊಡವೆ ಮುಕ್ತ ತ್ವಚೆ ಪಡೆಯಬಹುದು.

 

೫ sಣeಠಿs ಣo smooಣh sಞiಟಿ&soಜಿಣ bueಣಥಿಜಿuಟಟ..
೧.ಕ್ರೀಮ್ ಗಳನ್ನು ರಾತ್ರಿ ಹೊತ್ತು ಹಚ್ಚುವುದು ತುಂಬಾ ಪರಿಣಾಮಕಾರಿ ಅದರಲ್ಲೂ ನೈಸರ್ಗಿಕವಾದ ಕ್ರೀಮ್ ಬಳಸುವುದು ಒಳ್ಳೆಯದು. ಇದರಿಂದ ತ್ವಚೆಗೆ ಸಂರಕ್ಷಣೆಗೆ ಒಳ್ಳೆಯದು. ಏಕೆಂದರೆ ಮಲಗಿದ್ದಾಗ ನಾವು ವಿಶ್ರಾಂತಿ ಅನುಭವಿಸುತ್ತಿರುವಾಗ ತ್ವಚೆ ಕಣಗಳು ಹೆಚ್ಚು ಕೆಲಸ ಮಾಡುತ್ತದೆ, ಆದ್ದರಿಂದ ಕ್ರೀಮ್ ಗಳನ್ನು ರಾತ್ರಿ ಹೊತ್ತಿನಲ್ಲಿ ಹಚ್ಚಿ. ಮುಖ ಕಾಂತಿಯುತವಾಗಿ, ಯೌವನಭರಿತವಾಗಿ ಕಾಣಲು ದೇಹದಲ್ಲಿ ಕೊಲೆಜಿನ್ ಅಂಶ ಅವಶ್ಯಕ. ಕ್ರೀಮ್ ಗಳನ್ನು ರಾತ್ರಿ ಹಚ್ಚಿದರೆ ತ್ವಚೆ ಕಾಂತಿ ಹೆಚ್ಚಿಸುವ ಕೊಲೆಜಿನ್ (ಛಿoಟಟಚಿgeಟಿ ) ಮತ್ತು ಇಲಾಸ್ಟಿನ್ (eಟಚಿsಣiಟಿ) ಉತ್ಪತ್ತಿಗೆ ಸಹಕಾರಿಯಾಗಿದೆ.
೨. ಸಿಟ್ರಿಕ್ ಆಸಿಡ್ ಮತ್ತು ಗ್ಲೈಸೋಲಿಕ್ ಆಸಿಡ್ ನಿರ್ಜೀವ ತ್ವಚೆಯನ್ನು ತೊಡೆದು ಹಾಕಲು ಸಹಕಾರಿಯಾಗಿದೆ. ವಿಟಮಿನ್ ಸಿ ಕೊಲೆಜಿನ್ ಅಂಶ ಹೆಚ್ಚು ಮಾಡಿ ತ್ವಚೆ ಕಾಂತಿ ಹೆಚ್ಚಿಸುವುದಲ್ಲದೆ ಅಕಾಲಿಕ ಮುಪ್ಪನ್ನು ತಡೆಗಟ್ಟುತ್ತದೆ.
೩. ರೆಟಿನೋಲ್ ಕ್ರೀಮ್ ಬಳಸುವುದು ತ್ವಚೆಗೆ ತುಂಬಾ ಒಳ್ಳೆಯದು. ಇದು ಅಕಾಲಿಕ ನೆರಿಗೆಯನ್ನು ತಡೆಗಟ್ಟುತ್ತದೆ ಕೊಲೆಜಿನ್ ತ್ವಚೆ ಕಾಂತಿಯನ್ನು ಹೆಚ್ಚಿಸುತ್ತದೆ. ಮುಖದಲ್ಲಿ ಅಕಾಲಿಕ ನೆರಿಗೆ ಮೂಡುವುದನ್ನು ತಡೆಗಟ್ಟುತ್ತದೆ.
೪. ಹೊಳೆಯುವ ತ್ವಚೆ ಬೇಕೆಂದು ಬಯಸುವುದಾದರೆ ಚಿಟಿಣioxiಜಚಿಟಿಣs ಅಧಿಕವಿರುವ ಆಹಾರವನ್ನು ಮತ್ತು ಹಣ್ಣುಗಳನ್ನು ತಿನ್ನಬೇಕು. ಬೆರ್ರಿ, ದಾಳಿಂಬೆ, ಗ್ರೀನ್ ಟೀ, ನಟ್ಸ್, ಬೀನ್ಸ್, ದವಸ ಧಾನ್ಯಗಳನ್ನು ಆಹಾರ ಕ್ರಮದಲ್ಲಿ ಸೇರಿಸಿದರೆ ತ್ವಚೆಗೆ ತುಂಬಾ ಒಳ್ಳೆಯದು.
೫. ಮುಖಕ್ಕೆ ಸ್ಟೀಮ್ ಕೊಡಲು ನೀರನ್ನು ಕುದಿಸಿ ಕೊಡುವ ಬದಲು ಹಾಲನ್ನು ಕುದಿಸಿ ಸ್ಟೀಮ್ ಕೊಟ್ಟರೆ ಹೆಚ್ಚಿನ ಪ್ರಯೋಜನವನ್ನು ಪಡೆಯುಬಹುದು. ಮುಖವನ್ನು ಪ್ರತಿ ದಿನ ಕ್ಲೆನ್ಸ್ ಮಾಡಿ ಮಾಯಿಶ್ಚರೈಸರ್ ಮಾಡಿದರೆ ತ್ವಚೆ ಬೇಗನೆ ಮುಪ್ಪಾಗುವುದಿಲ್ಲ, ಸದಾ ಕಾಂತಿಯಿAದ ಕೂಡಿರುತ್ತದೆ.

ಅರಶಿನವು ಸೌಂದರ್ಯಕ್ಕೆ ಹೆಚ್ಚಿನ ಮಹತ್ವವಾದ ಕೊಡುಗೆಯನ್ನು ನೀಡಿದೆ. ಮುಖದಲ್ಲಿ ಮೂಡುವ ಮೊಡವೆಗಳು, ಕಲೆಗಳ ನಿವಾರಣೆಗೆ ಅರಶಿನವು ಉಪಯುಕ್ತವಾಗಿದ್ದು, ಕೆನೆಹಾಲಿನ ಜೊತೆಗೆ ಅರಶಿನವನ್ನು ಹಚ್ಚುವುದರಿಂದ ಮುಖವು ಕಾಂತಿಯುತವಾಗಿ ಕಾಣುತ್ತದೆ. ಅರಶಿನ ಅಥವಾ ಅರಶಿನ ಕೊಂಬನ್ನು ತೇಯ್ದು ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ನಂತರ ಇದನ್ನು ತೊಳೆದುಕೊಳ್ಳಿ. ಇದು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿ ನಿಮ್ಮ ಸೌಂದರ್ಯವನ್ನು ವೃದ್ಧಿಸುತ್ತದೆ. ಅರಶಿನವನ್ನು ಅರೆದು ಹಾಲಿನ ಕೆನೆಯನ್ನು ಮಿಶ್ರ ಮಾಡಿ ಈ ಮಿಶ್ರಣವನ್ನು ಕೂಡ ನೀವು ಮುಖಕ್ಕೆ ಲೇಪಿಸಬಹುದು. ಇದರಿಂದ ನಿಮ್ಮ ಎಣ್ಣೆಯುಕ್ತ ಮುಖವು ಶುಭ್ರಗೊಳ್ಳುತ್ತದೆ.


Share

Leave a Reply

Your email address will not be published. Required fields are marked *