ನಿಮ್ಮ ಮುಖದ ಚರ್ಮ ಎಣ್ಣೆಯುಕ್ತ ಹಾಗೂ ಒಣ ತ್ವಚೆಯಾಗಿದ್ದರೆ, ಚೆನ್ನಾಗಿ ಹಿಸುಕಿದ ಬಾಳೆಹಣ್ಣನ್ನು ಸ್ವಲ್ಪ ಕೆನೆಯೊಂದಿಗೆ ಸೇರಿಸಿ ಮಿಕ್ಸ್ ಮಾಡಿ ಸ್ವಚ್ಛ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದಜು ನಿಮ್ಮ ಮುಖವನ್ನು ತುಂಬ ನಯವಾಗಿಸುತ್ತದೆ. ಚಳಿಗಾಲಕ್ಕೆ ಇದು ಹೇಳಿ ಮಾಡಿಸಿದ ಮಾಸ್ಕ್.
ಮೊಟ್ಟೆಯ ಬಿಳಿಲೋಳೆಯ ಮಾಸ್ಕ್
ಮೊಟ್ಟೆಯ ಬಿಳಿ ಲೋಳೆಯನ್ನು ಚೆನ್ನಾಗಿ ಬೀಟ್ ಮಾಡಿ, ಅದನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಈ ಮಾಸ್ಕ್ ನಿಮ್ಮ ಮುಖವನ್ನು ರಿಫ್ರೆಶ್ ಮಾಡುವುದಲ್ಲದೆ, ನಿಮ್ಮ ಚರ್ಮರಂಧ್ರಗಳನ್ನು ಟೈಟ್ ಮಾಡಿಸುತ್ತದೆ. ಇದು ನಿಮ್ಮನ್ನು ಇನ್ನು ಆರೋಗ್ಯಯುತವಾಗಿ ಕಂಗೊಳಿಸುವAತೆ ಮಾಡುತ್ತದೆ.
ಹಾಲಿನ ಮಾಸ್ಕ್
ಹಾಲಿನ ಕೆನೆ, ಸ್ವಲ್ಪ ಮೊಸರು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಕಚೇರಿ ಕೆಲಸದಿಂದ ಸುಸ್ತಾಗಿರುವ ಮುಖದ ಚರ್ಮಕ್ಕಿದು ತಾಜಾತನದ ಅನುಭೂತಿ ನೀಡುವ ಜೊತೆಗೆ ಚಳಿಗಾಲದ ಚರ್ಮದ ತೊಂದರೆಗಳನ್ನು ತೊಡೆದು ಹಾಕಿ ನಯವಾದ ಮುಖದ ಚರ್ಮ ನೀಡುತ್ತದೆ. ೧೦. ೧೫ ನಿಮಿಷದ ನಂತರ ಹಚ್ಚಿದ ಪ್ಯಾಕ್ ತೊಳೆಯಬಹುದು.
ಬೆಣ್ಣೆಹಣ್ಣಿನ ಮಾಸ್ಕ್
ಬೆಣ್ಣೆಹಣ್ಣಿನ ಒಳಗಿನ ಭಾಗವನ್ನು ತೆಗೆದು ಅದನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಆಲಿವ್ ಆಯಿಲ್ ಸೇರಿಸಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಚಳಿಗಾಲದ ಒಣಗುವಿಕೆಯನ್ನು ತಡೆಯಲು ಇದು ಚರ್ಮಕ್ಕೆ ಎಲ್ಲಾ ರೀತಿಯ ವಿಟಮಿನ್, ಪೋಷಣೆಯನ್ನು ನೀಡುವುದರಿಂದ ಇದು ಹೆಚ್ಚು ಒಣಗುವ ಒಡೆಯುವ ಚರ್ಮದವರಿಗೆ ಅತ್ಯುತ್ತಮ.
ಜೇನಿನ ಮಾಸ್ಕ್
ಜೇನು ಒಂದೆರಡು ಚಮಚ ತೆಗೆದುಕೊಂಡು ಅದಕ್ಕೆ ರೋಸ್ ವಾಟರ್ ಒಂದು ಚಮಚ ಸೇರಿಸಿ. (ರೋಸ್ ವಾಟರ್ ಸೇರಿಸದೆಯೂ ಹಾಗೆಯೇ ಜೇನನ್ನೂ ಮುಖಕ್ಕೆ ಹಚ್ಚಿಕೊಳ್ಳಬಹುದು) ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ೧೫ ನಿಮಿಷ ಬಿಟ್ಟು ತೊಳೆಯಿರಿ.
ಟೊಮ್ಯಾಟೋ-ಮೊಸರಿನ ಪ್ಯಾಕ್
ಚೆನ್ನಾಗಿ ಪೇಸ್ಟ್ ಮಾಡಿದ ಟೊಮ್ಯಾಟೋಗೆ ಸ್ವಲ್ಪ ಮೊಸರು ಸೇರಿಸಿ. ಒಂದೆರಡು ಹನಿ ರೋಸ್ ವಾಟರ್ ಸೇರಿಸಿ ಮುಖಕ್ಕೆ ಈ ಮಿಶ್ರಣ ಹಚ್ಚಿ. ೧೫ ನಿಮಿಷ ಬಿಟ್ಟು ತೊಳೆಯಿರಿ.
ಅಲ್ವಿರಾ ಹಾಗೂ ವಿನೆಗರ್ ಮಿಕ್ಸ್
ಬಿಸಿಲಿನ ಝಳಕ್ಕೆ ಮುಖ ಕೆಂಪಗಾಗಿ ಬಿಳಿಚಿಕೊಂಡು ಸನ್‌ಬರ್ನ್ ಆಗುತ್ತದೆ. ಅಲ್ವಿರಾ ಹಾಗೂ ವಿನೆಗರ್ ಮಿಕ್ಸ್ ಮಾಡಿ ಹಚ್ಚಿದರೆ ಮುಖದ ಮೇಲಾದ ಸನ್ ಬರ್ನ್ ಹೋಗೋತ್ತದೆ.
ಸಾಸಿವೆ ಎಣ್ಣೆಯನ್ನು ಮುಖಕ್ಕೆ ಹಚ್ಚಿದರೆ ಅದು ಮುಖದಲ್ಲಿನ ಹೆಚ್ಚಿನ ಉಷ್ಣತೆಯನ್ನು ಹೀರಿ ಸನ್‌ಬರ್ನ್ ಮಾಯವಾಗಿಸುತ್ತದೆ.
ಸೌತೇಕಾಯಿಯ ಹೋಳನ್ನು ಮುಖಕ್ಕೆ ಉಜ್ಜುತ್ತಾ ಇದ್ದರೆ ಸನ್‌ಬರ್ನ್ ಕಡಿಮೆಯಾಗುತ್ತದೆ.
ಆಲೂಗಡ್ಡೆಯನ್ನು ತುರಿದು ಮುಖಕ್ಕೆ ಹಚ್ಚಿದರೂ ಅದು ಮುಖದ ಉಷ್ಣವನ್ನು ತಂಪಾಗಿಸುತ್ತದೆ.