ಸಿಎಂ ಬಸವರಾಜ ಬೊಮ್ಮಾಯಿ ಬದುಕಿನ ಪಯಣ

Share

ಬಸವರಾಜ ಬೊಮ್ಮಾಯಿ ಕರ್ನಾಟಕದ ಒಬ್ಬರು ರಾಜಕಾರಣಿ. ಭಾರತೀಯ ಜನತಾ ಪಕ್ಷದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದಾರೆ. ಜುಲೈ 28, 2021 ರಂದು ಬಿ.ಎಸ್. ಯಡಿಯೂರಪ್ಪರವರ ನಂತರ ಬೊಮ್ಮಾಯಿ ಕರ್ನಾಟಕದ ೨೩ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಸವರಾಜ ಸೋಮಪ್ಪ ಬೊಮ್ಮಾಯಿ ಕರ್ನಾಟಕದ ಮಾಜಿ ಸಿಎಂ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್. ಆರ್. ಬೊಮ್ಮಾಯಿ-ಗಂಗಮ್ಮ ಅವರ ಪುತ್ರ. 1960 ರ ಜ.28 ರಂದು ಜನಿಸಿದ ಬೊಮ್ಮಾಯಿ ಬಿ.ವಿ ಬೊಮ್ಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದ ಬೊಮ್ಮಾಯಿ ಮೂಲತಃ ವೃತ್ತಿಯಲ್ಲಿ ಕೃಷಿಕ ಮತ್ತು ಕೈಗಾರಿಕೋದ್ಯಮಿ.

ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿರುವ ಅವರು, ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಭಾರತದಲ್ಲೇ ಮೊದಲ ಶೇ.100 ರಷ್ಟು ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತರುವುದು ಸೇರಿದಂತೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ರಾಯಕೀಯ ಜೀವನ

ಅವರು ಜನತಾದಳದಿಂದ ತಮ್ಮ ರಾಜಕೀಯವನ್ನು ಪ್ರಾರಂಭಿಸಿದರು.
1998 ಹಾಗೂ 2004 ರಲ್ಲಿ ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು.
2008 ರಲ್ಲಿ ಜನತಾದಳವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
2008 ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆಗೊಂಡಿದ್ದರು. ಬೊಮ್ಮಾಯಿ ಅವರು ಈ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಜೆ. ಹೆಚ್. ಪಟೇಲ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವವನ್ನು ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ.
ಯಡಿಯೂರಪ್ಪ ಅವರ ಸಂಪುಟದಲ್ಲಿ ಗೃಹ ಖಾತೆಯನ್ನು ನಿರ್ವಹಿಸಿ ಅನುಭವ ಹೊಂದಿರುವ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೇರಿದರು.
ಜನತಾದಳದಿಂದ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್ ಆರ್ ಬೊಮ್ಮಾಯಿ) ಅವರು ಮುಖ್ಯಮಂತ್ರಿಯಾಗಿದ್ದ (1988-89) 32-33 ವರ್ಷಗಳ ನಂತರ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದಾರೆ.


Share

ಜಿಸ್ಕಾಮಾಲ ಉಸ್ಕಾ ಹಮಾಲ.

Share

ವಿಜಯಪುರ ಜಿಲ್ಲಾ ಲಾರಿ ಮಾಲಕರ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಗಳು ಮಾತನಾಡಿ.ಇತ್ತೀಚಿನ ದಿನಗಳಲ್ಲಿ ಡಿಜಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತಿದೆ. ಹಾಗೂಎಲ್ಲಾ ರಸ್ತೆಗಳಿಗೂ ಟೋಲ್ ಪಾವತಿಸುವ ಕಾರಣ ಹಾಗೂ ಲಾರಿ ಗಳಲ್ಲಿ ಲೋಡ್ ಹಾಗೂ ಅನ್ಲೋಡ್ ಮಾಡುವದಕ್ಕೆ ಹಮಾಲಿ ಹಣ ಇನ್ನಿತರ ಖರ್ಚುಗಳು ಹೆಚ್ಚಾಗಿದ್ದು.ಯೋಗ್ಯ ಬಾಡಿಗೆ ಸಿಗದೇ ನಾವು ಬಹಳ ಕಷ್ಟ ದಲ್ಲಿದ್ದೇವೆ ಎಂದರು. ಮೋಟರು ವಾಹನ ಕಾಯೆದೆ ಸೆಕ್ಸನ.67. ಸಬ್. ಸೆಕ್ಸ್ ನ.1ರ ಪ್ರಕಾರ ನಮಗೆ ಕಿಲೋಮೀಟರ್ ಪ್ರಕಾರ್ ಈಗಿರುವ ಖರ್ಚುವೆಚ್ಚಗಳ ಪ್ರಕಾರ ಯೋಗ್ಯ ಬಾಡಿಗೆ ದರ ನಿಗದಿ ಪಡಿಸಿ 2002ಆದೇಶ ಪ್ರತಿಯನ್ನು ನವಿಕರಿಸಿ ಕೊಡಬೇಕೆಂದು. ಈ ಮೂಲಕ. ಮಾನ್ಯ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು ವರದಿ : ಆರ್ ಎಸ್. ಹೊರಕೇರಿ


Share

ತುಮಕೂರು ಜಿಲ್ಲಾ ಕಚೇರಿಯ ಮುಂದೆ ರೈತರ ಬೃಹತ್ ಪ್ರತಿಭಟನೆ

Share

 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತುಮಕೂರು ಜಿಲ್ಲಾ ಕಚೇರಿಯ ಮುಂದೆ ರೈತರ ಬೃಹತ್ ಪ್ರತಿಭಟನೆರಾಜ್ಯಾಧ್ಯಕ್ಷರಾದ ಅಂತಹ ಕೋಡಿಹಳ್ಳಿ ಚಂದ್ರಶೇಖರ್ ಅವರು ನೇತೃತ್ವದಲ್ಲಿಕೊರಟಗೆರೆ ತಾಲ್ಲೂಕು ಬಡವನಹಳ್ಳಿ ಹೋಬಳಿ ಅಜ್ಜನಹಳ್ಳಿ ಗ್ರಾಮ ಸರ್ವೆ ನಂಬರ್ ನಲ್ಲಿ 33 . ರೈತರು ಉಳುಮೆ ಮಾಡುತ್ತಿರುವ ಜಮೀನನ್ನು ತಾಲೂಕ ದಂಡಾಧಿಕಾರಿಗಳ ದಂತಹ ಬೇರೆಯವರಿಗೆ ವರ್ಗಾವಣೆ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಕೂಡಲೇ ಅಧಿಕಾರಿಯನ್ನು ವರ್ಗಾಯಿಸಬೇಕೆಂದು

 

ವರದಿ ಶಿವಕುಮಾರ್


Share

ಜಮಖಂಡಿ ತಾಲೂಕಿನ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

Share

ಜಮಖಂಡಿ. ಇಂದು ನಗರದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕೋವಿಡ್ -19 ಸಂಕಷ್ಟದಲ್ಲಿರುವ ಜಮಖಂಡಿ ತಾಲೂಕಿನ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆಯ ಕಾರ್ಯವನ್ನು ಕೈಗೊಳ್ಳಲಾಯಿತು


Share

ಉಚಿತವಾಗಿ ವ್ಯಾಕ್ಸಿನೇಷನ್ ಅಭಿಯಾನ

Share

 

ಸೇಡಂ ಪಟ್ಟಣದಲ್ಲಿ ಇಂದು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ಶಾರದಾ ಚಾರಿಟೇಬಲ್ ಟ್ರಸ್ಟ್ ಮತ್ತು ಬಾಲರಾಜ್ ಗುತ್ತೇದಾರ್ ಬ್ರಿಗೇಡ್ ವತಿಯಿಂದ ಉಚಿತವಾಗಿ ವ್ಯಾಕ್ಸಿನೇಷನ್ ಅಭಿಯಾನ ಹಾಗೂ ಬಾಲರಾಜ್ ಗುತ್ತೇದಾರ್ ಬ್ರಿಗೇಡ್ ವೆಬ್ಸೈಟ್ ಬಿಡುಗಡೆ ಕಾರ್ಯಕ್ರಮಕ್ಕೆ ಹಾಲಪ್ಪಯ್ಯ ವಿರಕ್ತಮಠದ ಪರಮಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮೀಜಿಗಳು ಚಾಲನೆ ನೀಡಿದರು.


Share