ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ.

ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ.

Share

ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನು ನಡೆಸಿದರು. ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ರೈತರಿಗೆ 25 ಕೆವಿ ಟ್ರಾನ್ಸ್ ಫಾರ್ಮರ್ ನೀಡುವುದಾಗಿ 231 ರೈತರ ಹತ್ತಿರ ತಲಾ ರೂ.30,000ಗಳನ್ನು ಪಡೆಯಲಾಗಿದೆ. ಎರಡು ವರ್ಷಗಳಾದರೂ 25ಕೆವಿ ಟ್ರಾನ್ಸ್ ಫಾರ್ಮರ್ ನೀಡಿಲ್ಲ ಎಂದು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇದೇ ವೇಳೆಯಲ್ಲಿ ರೈತರ ಸಂಘ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್ ಅವರು ಮಾತನಾಡಿ ದಿಬ್ಬೂರಹಳ್ಳಿ ಬೆಸ್ಕಾಂ ಶಾಖಾ ಧಿಕಾರಿ ಯವರು ಲಂಚ ಕೊಡುವವರಿಗೆ ಮತ್ತು ಗುತ್ತಿಗೆದಾರರು ಯಾರ ಹಣ ಕೊಡುತ್ತಾರೋ ಅವರ ಪರವಾಗಿ ಕೆಲಸ ಮಾಡುತ್ತಾರೆ, ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಕರ್ನಾಟಕ ರಾಜ್ಯ ರೈತ ಸಂಘ(ಕೆಎಸ್ ಪುಟ್ಟಣ್ಣಯ್ಯ ಬಣ) ವತಿಯಿಂದ ರೈತರಿಗೆ ಆಗುವ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಬೆಸ್ಕಾಂ ಶಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರಿಗೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮುನೇಗೌಡ, ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ಶಂಕರ್ ನಾರಾಯಣ ತಾಲೂಕು ಉಪಾಧ್ಯಕ್ಷ, ಶ್ರೀನಾಥ್, ದೇವರಾಜ್ ,ನಾರಾಯಣಸ್ವಾಮಿ, ಡಿಎಸ್ಎಸ್ ಮುಖಂಡ ಗೊರ್ಲಪ್ಪ, ಚಿಕ್ಕನರಸಿಂಹಪ್ಪ ಇನ್ನು ಹಲವಾರು ರೈತರು ಭಾಗಿಯಾಗಿದ್ದರು


Share