ಹುಣಸೂರು ಮನೆ ಮನೆಗೆ ತೆರಳಿ ಪಡಿತರದಾರರ ಹೆಬ್ಬೆಟ್ಟು ಹಾಕಿಸಿಕೊಂಡು ನಿಯಮಗಳನ್ನ ಉಲ್ಲಾಂಘಿಸುತ್ತಿರುವ ಪ್ರಕರಣವೊಂದು ಹುಣಸೂರಿನಲ್ಲಿ ಬೆಳಕಿಗೆ ಬಂದಿದೆ.ಹುಣಸೂರು ತಾಲೂಕಿನ ಶ್ಯಾನುಭೋಗನಹಳ್ಳಿಯ ನ್ಯಾಯ ಬೆಲೆ ಅಂಗಡಿ ಸಿಬ್ಬಂದಿ ಪ್ರಶಾಂತ್ ಇಂತಹ ವ್ಯವಸ್ಥೆ ಮಾಡಿಕೊಂಡು ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ.ಪಡಿತರ ದುರುಪಯೋಗಬಾರದು ಅರ್ಹ ಫಲಾನುಭವಿಗಳಿಗೆ ತಲಪಬೇಕೆಂಬ ನಿಯಮಗಳ ಹಿನ್ನಲೆ ಸರ್ಕಾರ ಹೆಬ್ಬೆಟ್ಟು ಹಾಕಿಸಿಕೊಳ್ಳುವ ವ್ಯವಸ್ಥೆ ಜಾರಿಮಾಡಿದೆ.ಪಡಿತರದಾರ ನ್ಯಾಯಬೆಲೆ ಅಂಗಡಿಗೆ ಬಂದು ಹೆಬ್ಬೆಟ್ಟು ಹಾಕಿ ಪದಾರ್ಥಗಳನ್ನ ತೆಗೆದುಕೊಳ್ಳಬೇಕೆಂಬ ಕಾರಣದಿಂದ ಇಂತಹ ನಿಯಮ ಜಾರಿಯಾಗಿದೆ.ಆದರೆ ಹುಣಸೂರು ತಾಲೂಕಿನ ಶ್ಯಾನುಭೋಗನ ಹಳ್ಳಿಯಲ್ಲಿರುವ ನ್ಯಾಯಬೆಲೆ ಅಂಗಡಿಯವರು ಗ್ರಾಮಗಳಿಗೆ ತೆರಳಿ ಅರಳಿಮರದ ಕಟ್ಟೆಯಲ್ಲಿ ಕುಳಿತು ಪಡಿತರದಾರರನ್ನ ಕರೆಸಿ ಹೆಬ್ಬೆಟ್ಟು ಹಾಕಿಸಿಕೊಳ್ಳುತ್ತಿದ್ದಾರೆ.ಆದರೆ ಪಡಿತರ ಮಾತ್ರ ವಿತರಣೆ ಆಗುತ್ತಿಲ್ಲ.ಈ ಬಗ್ಗೆ ಪ್ರಶ್ನಿಸಿದಾಗ ಪಡಿತರದಾರರ ಅನುಕೂಲಕ್ಕಾಗಿ ಮಾಡುತ್ರಿರುವುದಾಗಿ ತಿಳಿಸುತ್ತಿದ್ದಾರೆ.ಪಡಿತರ ದುರುಪಯೋಗಬಾರದೆಂಬ ಉದ್ದೇಶದಿಂದ ಹೆಬ್ಬೆಟ್ಟು ವ್ಯವಸ್ಥೆ ಜಾರಿ ಮಾಡಿದ್ದರೆ ಈ ನ್ಯಾಯ ಬೆಲೆ ಅಂಗಡಿಯವರು ರಾಜಾರೋಷವಾಗಿ ಈ ವ್ಯವಸ್ಥೆಯನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.ಈ ಕುರಿತಂತೆ ಪ್ರಶ್ನೆ ಮಾಡುತ್ತಿದ್ದಂತೆಯೇ ಸಿಬ್ಬಂದಿ ಕ್ಷಣಮಾತ್ರದಲ್ಲಿ ಗಂಟು ಮೂಟೆ ಕಟ್ಟಿ ಬೈಕ್ ನಲ್ಲಿ ಓಡಿದ್ದಾನೆ.ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಇಂತಹ ನ್ಯಾಯಬೆಲೆ ಅಂಗಡಿ ವಿರುದ್ದ ಕ್ರಮ ಕೈಗೊಳ್ಳಬೇಕಿದೆ
POST
ಬಸವಣ್ಣನ ಪ್ರತಿಮೆಗೆ ಅವಮಾನ ಖಂಡಿಸಿ ಕಾಳಗಿ ಬಂದ್ ಯಶಸ್ವಿ
ಕಾಳಗಿ : ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ದಗಡಿ ಗ್ರಾಮದಲ್ಲಿ ಬಸವೇಶ್ವರ ಪ್ರತಿಮೆಗೆ ಧ್ವಂಸ ಮಾಡಿರುವ ಘಟನೆ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಅಪ್ರಾಪ್ತ ಬಾಲಕಿ ಶವ ಪತ್ತೆ ಖಂಡಿಸಿ ವೀರಶೈವ ಲಿಂಗಾಯತ ಸಮಾಜ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ
ಬುಧವಾರ ಹಮ್ಮಿಕೊಂಡ ಕಾಳಗಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಬೆಳಿಗ್ಗೆ 6 ಗಂಟೆಯಿಂದಲೇ ಪ್ರತಿಭಟನಕಾರರು ರಸ್ತೆಗಿಳಿದು ಹಳೆ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದವು. ಬಸ್ ಮತ್ತಿತರ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಹಳೆ-ಹೊಸ ಬಸ್ ನಿಲ್ದಾಣ, ಮುಖ್ಯಬಜಾರ್ ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದವು.
ಕಾಳಗಿಯಿಂದ ಕಲಬುರಗಿ, ಚಿಂಚೋಳಿ ಮಾರ್ಗದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು.
ಪಟ್ಟಣದ ಮುಖ್ಯಬಜಾರ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯೂ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಜರುಗಿತು. ನಂತರ ಕಲಬುರಗಿ ಚಿಂಚೋಳಿ ರಾಜ್ಯ ಹೆದ್ದಾರಿ ತಡೆದು ಕಾಳಗಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಯಿತು.
ಈ ವೇಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡರು, ಬಸವಣ್ಣನವರು ಸಮಾನತೆ, ಸಹೋದರತ್ವದ ಸಂದೇಶ ನೀಡಿದ್ದಾರೆ. ಆದ್ದರಿಂದ ಶಾಂತಿಯುತವಾಗಿ ಹೋರಾಟ ನಡೆಸಲಾಗುತ್ತಿದೆ. ಅಂಥ ಗುರುವಿನ ಪ್ರತಿಮೆಗೆ ಹಾನಿ ಮಾಡುವುದೆಂದರೆ ಮಾನವೀಯತೆಗೆ ಅವಮಾನ ಮಾಡಿದಂತೆ. ಬಸವೇಶ್ವರರ ತತ್ವ ಸಿದ್ಧಾಂತ ಎಲ್ಲರಿಗೂ ಮಾದರಿ. ಆದರೆ, ಅಪರಾಧಿಗಳು ಮಹಾನ್ ವ್ಯಕ್ತಿತ್ವವನ್ನು ಅಗೌರವಿಸಲು ಪ್ರಯತ್ನಿಸಿದರು. ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ವೀರಶೈವ ಲಿಂಗಾಯತ ಸಮಾಜಕ್ಕೆ ಅವಮಾನ ಮಾಡಲು ಯತ್ನಿಸುತ್ತಿರುವ ದುಷ್ಕರ್ಮಿಗಳ ವಿರುದ್ಧ ರಾಜ್ಯ ಸರ್ಕಾರ ಕಬ್ಬಿಣದ ಕಡಲೆಯಾಗಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಪ್ರತಿಮೆ ವಿರೂಪಗೊಳಿಸಿದ ಆರೋಪಿಗಳನ್ನು ಬಂಧಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.
ಹಾಗೆಯೇ ಜಿಲ್ಲೆಯ ಜೇವರ್ಗಿಯಲ್ಲಿ ಅಪ್ರಾಪ್ತ ಬಾಲಕಿಯ ಪ್ರಾಣಕ್ಕೆ ಕುತ್ತು ತಂದ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು. ಆದರೆ ಆತನನ್ನು ಅಪ್ರಾಪ್ತ ಎಂದು ಬಿಂಬಿಸಲು ಸತತ ಪ್ರಯತ್ನಗಳು ನಡೆದಿವೆ. ಇಂತಹ ಕ್ರಮವನ್ನು ವೀರಶೈವ ಲಿಂಗಾಯತ ಸಮಾಜ ತೀವ್ರವಾಗಿ ವಿರೋಧಿಸುತ್ತದೆ ಮತ್ತು ಅವರನ್ನು ಕೂಡಲೇ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಅವರು ಹೇಳಿದರು.
ನಂತರ ತಹಶಿಲ್ದಾರ ಘಮಾವತಿ ರಾಠೋಡ ಮುಖಾಂತರ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಮಂಗಲಗಿ ಪೂಜ್ಯ ಡಾ. ಶಾಂತ ಸೋಮನಾಥ ಶಿವಾಚಾರ್ಯರು, ಕೋಡ್ಲಿ ಪೂಜ್ಯ ಬಸವಲಿಂಗ ಶಿವಾಚಾರ್ಯರು, ರಟಕಲ್ ರೇವಣಸಿದ್ಧ ಶರಣರು,
ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಜಗಧೀಶ್ ಮಾಲಿಪಾಟೀಲ, ಹಿಂದೂ ಜಾಗೃತ ಸೇನೆ ತಾಲೂಕಾಧ್ಯಕ್ಷ ಶಂಕರ ಚೌಕಾ, ಮುಖಂಡರಾದ ದಿವ್ಯಾ ಹಾಗರಗಿ, ಮಲ್ಲಿನಾಥ ಪಾಟೀಲ ಕಾಳಗಿ, ಶಿವರಾಜ್ ಪಾಟೀಲ ಕಲಗುರ್ತಿ, ಶರಣು ಮಜ್ಜಿಗೆ, ಶರಣು ಪಾಟೀಲ ಮೊತಕಪಳ್ಳಿ, ವೀರಣ್ಣ ಗಂಗಾಣಿ, ವಿಜಯಕುಮಾರ್ ಚೆಂಗಟಿ, ಶಿವರಾಜ್ ಪಾಟೀಲ ಗೊಣಗಿ, ಶಿವಕುಮಾರ್ ಕೊಡಸಾಲಿ, ಕಾಳಶೆಟ್ಟಿ ಪಡಶೆಟ್ಟಿ, ಚಂದ್ರಶೆಟ್ಟಿ ಮಾನಶೆಟ್ಟಿ, ಅಮೃತರಾವ ಪಾಟೀಲ್, ರೇವಣಸಿದ್ಧ ಕಲಶೆಟ್ಟಿ, ರಾಜಶೇಖರ ಗುಡದಾ, ನಾಗರಾಜ ಚಿಕ್ಕಮಠ, ನಾಗರಾಜ ಬೇವಿನಕರ್, ಸೋಮಶೇಖರ್ ಮಾಕಪನೋರ, ಸಂತೋಷ ಹೊಸ್ಸಳ್ಳಿ, ಮಂಜುನಾಥ ಭೇರನ್ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಹಾಗೂ ಬಸವ ಅಭಿಮಾನಿಗಳು ಇದ್ದರು.ಕಾಳಗಿ ಪಿ ಎಸ್ ಐ ತಿಮ್ಮಯ್ಯ ಬಿ ಕೆ, ರವರ ನೇತೃತ್ವದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ ಮಾಡಲಾಗಿತ್ತು
ಭೋವಿ ಸಮಾಜ ಕಮಲಾಪುರ ತಾಲೂಕು ಪದಾಧಿಕಾರಿಗಳ ಆಯ್ಕೆ
ಕಮಲಾಪುರ:ತಾಲೂಕಿನ ಭೋವಿ (ವಡ್ಡರ)ಸಮಾಜವು ಮಹಾಗಾಂವ್ ಕ್ರಾಸ್ ನಲ್ಲಿ ತಾಲೂಕಿನ ಭೋವಿ ಸಮಾಜದ ಎಲ್ಲಾ ಹಿರಿಯ ಮುಖಂಡರ ನೇತೃತ್ವದಲ್ಲಿ ಕಮಲಾಪೂರ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಮಲಾಪೂರ ತಾಲೂಕಿನ ಭೋವಿ ಸಮಾಜದ ಗೌರವ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ರಾಮಣ್ಣ, ಅಧ್ಯಕ್ಷರಾಗಿ ಸಚೀನ್ ಎಸ್ ದಂಡಗುಲಕರ್, ಉಪಾಧ್ಯಕ್ಷರಾಗಿ ಪಂಡಿತ ಒಡೆರಾಜ್, ಪವನ ಕಮಲಾಪುರ, ಅಣ್ಣಪ್ಪ ಮಂಜಳಕರ್, ಕಾರ್ಯದರ್ಶಿಯಾಗಿ ಪವನ, ಜಂಟಿ ಕಾರ್ಯದರ್ಶಿಯಾಗಿ ಧಶರಥ ಹಳಗುಣಕಿ, ಕಾರ್ಯಧ್ಯಕ್ಷರಾಗಿ ಸೂರ್ಯಕಾಂತ ಜಯಣ್ಣ ಕುರಿಕೋಟ, ಸಂಘಟನಾ ಕಾರ್ಯದರ್ಶಿಯಾಗಿ ಹಣಮಂತ ಮಲ್ಲಪ್ಪ , ಖಜಾಂಚಿಯಾಗಿ ಕಿರಣ ದಂಡಗುಲಕರ್, ಸದಸ್ಯರಾಗಿ ಯಲ್ಲಪ್ಪ ಮಲ್ಲಪ್ಪ ,ಗೋಪಲ್ ದಂಡುಗುಲಕರ್ ,ಸುನೀಲ್ ಕುರಿಕೋಟ, ಸಂಜುಕುಮಾರ ಕುರಿಕೊಟ , ಸಿದ್ರಾಮ ಎನ್ , ಸುಧಾಕರ್ ಚವ್ಹಾಣ, ಭೀಮಣ್ಣ ಬಳಿರಾಮ್ , ಬಾಲಜಿ ಭೋವಿ,ತುಳಜರಾಮ ಕುರಿಕೋಟ, ಚಂದ್ರಕಾಂತ ವಿ ಕೆ ಸಲಗರ್, ಪ್ರಕಾಶ್ ದಂಡುಗುಲಕರ್ ,ಲಕ್ಷ್ಮಣ ನಾಯಕಲ್ ಅವರನ್ನು ಆಯ್ಕೆ ಮಾಡಲಾಯಿತು
ಭೀಕರ ಅಪಘಾತ 10 ಜನರ ದುರ್ಮರಣ 15 ಕ್ಕೂ ಹೆಚ್ಚು ಜನರಿಗೆ ಗಾಯ
ಯಲ್ಲಾಪುರ : ರಾ. ಹೆ 63 ರ ಹುಬ್ಬಳ್ಳಿ ಅಂಕೋಲಾ ಮಾರ್ಗ ಮಧ್ಯೆ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅರೇಬೈಲ್ ಘಾಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ , ಪ್ರಪಾತಕ್ಕೆ ಬಿದ್ದ ಲಾರಿಯಲ್ಲಿದ್ದ ಸುಮಾರು 9 ಜನರು ಸ್ಥಳದಲ್ಲಿ ಮೃತಪಟ್ಟರೆ , 14 ಕ್ಕೂ ಹೆಚ್ಚು ಜನರು
ಗಾಯಕೊಂಡಿದ್ದಾರೆ
ಹಾವೇರಿ ಜಿಲ್ಲೆಯ ಶಿಗ್ಗಾಂವ – ಸವಣೂರು ಕಡೆಯಿಂದ ಉತ್ತರ ಕನ್ನಡದ ಜಿಲ್ಲೆಯ ಕುಮಟಾದಲ್ಲಿ ನಡೆಯವ ಬುಧವಾರದ ಸಂತೆ ವ್ಯಾಪಾರಕ್ಕಾಗಿ , ಹಣ್ಣು -ತರಕಾರಿ ಮಾರಾಟಗಾರರು ಮಾಲು ಸಮೇತ ಒಂದೇ ಲಾರಿಯಲ್ಲಿ ಬರುತ್ತಿದ್ದಾಗ ದಾರಿ ಮಧ್ಯೆ ಭೀಕರ ದುರಂತ ಸಂಭವಿಸಿದೆ.
ಚಾಲಕನಿಗೆ ಲಾರಿಯೂ ನಿಯಂತ್ರಣ ತಪ್ಪಿದ್ದು ಅರೇಬೈಲ್ ಘಾಟ್ ಬಳಿ ಲಾರಿಯು ಹೆದ್ದಾರಿ ಅಂಚಿನ, ಇಳಿಜಾರಿನಲ್ಲಿ ಪಲ್ಟಿಯಾಗುತ್ತ ಬಹುದೂರ ಸಾಗಿದ್ದು ,ಲಾರಿಯಲ್ಲಿದ್ದಜನರ ಮೇಲೆ ತರಕಾರಿಯ ಬಾಕ್ಸ್ ಗಳು ಬಿದಿದ್ದು ಹಣ್ಣು ತರಕಾರಿ ಬಾಕ್ಸ್ ಗಳು ಚೆಲ್ಲಾಪಿಲ್ಲಿಯಾಗಿಯಾಗಿವೆ
ಈ ಭೀಕರ ದುರಂತದಲ್ಲಿ 9 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು , ಒಬ್ಬರು ಹಾಸ್ಪಿಟಲ್ ಗೆ ರವಾನಿಸುವಾಗ ಅರ್ಧ ದಾರಿಯಲ್ಲಿ ಮೃತ ಪಟ್ಟಿದ್ದಾನೆ ಎನ್ನಲಾಗಿದೆ.14ಕ್ಕೂ ಹೆಚ್ಚು ಗಾಯಾಳುಗಳನ್ನು ಚಿಕಿತ್ಸೆಗಾಗಿ ಯಲ್ಲಾಪುರ ತಾಲೂಕ ಆಸ್ಪತ್ರೆಗೆ ದಾಖಲಿಸಲಾಗಿದೆ ಲಾರಿಯಲ್ಲಿ ಸುಮಾರು 30 ಜನರು ಇದ್ದರು ಎನ್ನಲಾಗಿದೆ.ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲಿನೆ ಕಾರ್ಯ ಮುಂದುವರಿಸಿದ್ದಾರೆ.

ಶಾಸಕ ಡಿ.ರವಿಶಂಕರ್ ಆಣತಿಯಂತೆ ಅಧಿಕಾರಿಗಳು ಚುನಾವಣೆ ನಡೆಸಿದ್ದಾರೆ
ಕೆ ಆರ್.ನಗರ: ಪಿಕಾರ್ಡ್ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಕಳೆದ ೧೯ರಂದು ನಡೆದ ಚುನಾವಣೆಯು ಪಾರದರ್ಶಕವಾಗಿ ನಡೆದಿಲ್ಲ. ಬದಲಾಗಿ ಶಾಸಕ ಡಿ.ರವಿಶಂಕರ್ ಆಣತಿಯಂತೆ ಅಧಿಕಾರಿಗಳು ಚುನಾವಣೆ ನಡೆಸಿದ್ದಾರೆ ಎಂದು ಪುರಸಭೆ ಸದಸ್ಯ ಉಮೇಶ್ ಹೇಳಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಸಾಲಗಾರಲ್ಲದ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತನಾಗಿ ಸ್ಫರ್ಧಿಸಿದ್ದೆ. ಆದರೆ ಶಾಸಕರು ಮತ್ತು ಅವರ ತಂದೆ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಕಾಂಗ್ರೆಸ್ ಬೆಂಬಲಿತ ಪುಷ್ಪಲತರಮೇಶ್ ಅವರನ್ನು ಗೆಲ್ಲಿಸಬೇಕೆಂಬ
ಉದ್ಧೇಶದಿoದ ಚುನಾವಣೆ ನಡೆಯುವ ಸ್ಥಳದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಠಿಕಾಣಿ ಹೂಡಿದ್ದರೆಂದು ದೂರಿದರು.
ಶಾಸಕ ಮತ್ತು ಅವರ ತಂದೆಯವರು ಪಿಕಾರ್ಡ್ ಬ್ಯಾಂಕಿನ ಚುನಾವಣೆ ಪ್ರಕ್ರಿಯೆಯಲ್ಲಿ ಪೂರ್ಣವಾಗಿ ಹಸ್ತಕ್ಷೇಪ ಮಾಡಿ ಅಧಿಕಾರ ಹಿಡಿಯಲೇಬೇಕೆಂಬ ಉದ್ಧೇಶದಿಂದ ಬ್ಯಾಂಕಿನ ವ್ಯವಸ್ಥಾಪಕ ಸೇರಿದಂತೆ ಸಹಕಾರ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಂಡು ತಮಗಿಷ್ಟ ಬಂದoತೆ ಕ್ಷೇತ್ರ ಮರುವಿಂಗಡಣೆ, ಮತದಾರರ ಪಟ್ಟಿ ತಯಾರಿಕೆ
ಮತ್ತು ಮೀಸಲಾತಿ ನಿಗದಿಪಡಿಸುವಾಗ ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಮಾಡಿಸಿಕೊಂಡಿದ್ದಾರೆ. ಇದಕ್ಕೆ
ಉದಾಹರಣೆ ಮಳಲಿ ಕ್ಷೇತ್ರ ಮೊದಲು ಮಹಿಳೆಗೆ ಮೀಸಲಾಗಿತ್ತು. ಆನಂತರ ಸಾಮಾನ್ಯವಾಗಿದೆ ಎಂದರು.
ಸಾಲಗಾರರಲ್ಲದ ಕ್ಷೇತ್ರದ ಒಟ್ಟು ೮೮೯ ಮಂದಿ ಮತದಾರರ ಪೈಕಿ ೩೮೯ ಮಂದಿಯನ್ನು ಅನರ್ಹಗೊಳಿಸಲಾಗಿದೆ. ಇದರಲ್ಲಿ ನವನಗರ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ಬಸಂತ್ ಇದ್ದಾರೆ.
ಅನರ್ಹಗೊಳಿಸಲು ಯಾವುದೇ ಹಣಕಾಸಿನ ವ್ಯವಹಾರ ಮಾಡಿಲ್ಲವೆಂಬ ಕಾರಣ ನೀಡುವ ಬ್ಯಾಂಕಿನ ಆಡಳಿತ
ಮಂಡಳಿ ಸ್ವಂತ ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲವೆoದು ಹೇಳಿದ ಉಮೇಶ್ ಪಿಕಾರ್ಡ್ ಬ್ಯಾಂಕಿನ ವ್ಯವಹಾರ ಎಂಸಿಡಿಸಿಸಿ ಬ್ಯಾಂಕಿನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಈ ರೀತಿಯಲ್ಲಿ ಅರ್ಹ ಮತದಾರರನ್ನು
ಅನರ್ಹಗೊಳಿಸುವುದರ ಜತೆಗೆ ಮರಣ ಹೊಂದಿರುವವರು ಹಾಗೂ ಸಾಲಗಾರರ ಕ್ಷೇತ್ರದಲ್ಲಿ ಮತದಾನ ಹೊಂದಿರುವವರಿoದ ಸಾಲಗಾರರಲ್ಲದ ಕ್ಷೇತ್ರಕ್ಕೆ ಮತದಾನ ಮಾಡಿಸಲಾಗಿದೆ ಎಂದು ಆರೋಪಿಸಿದರು.
ಜೆಡಿಎಸ್ ಪಕ್ಷದ ವರಿಷ್ಠ ಮಾಜಿ ಸಚಿವ ಸಾ.ರಾ.ಮಹೇಶ್ರವರ ಸೂಚನೆಯಂತೆ ನಾನು ಚುನಾವಣೆಯಲ್ಲಿ ಸ್ಫರ್ಧಿಸಿದ್ದು, ನನ್ನ ಸಮಾಜದ ಕೇವಲ ಮೂರು ಮಂದಿ ಮತದಾರರಿದ್ದರೂ ಪಕ್ಷದ ಬೆಂಬಲದಿoದ ಸ್ಫರ್ಧಿಸಲಾಯಿತು. ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ ಮತ್ತು ಹಣದ ಆಮಿಷ ನಡೆದಿದ್ದರೂ ಕೂಡ ನನ್ನ
ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ಧಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಸಂತೋಷ್ಗೌಡ, ಮಾಜಿ ಸದಸ್ಯ ಜಿ.ಪಿ.ಮಂಜು, ಮುಖಂಡರಾದ ಕೆ.ಜೆ.ಕುಚೇಲ, ಬಾಲಾಜಿಗಣೇಶ್ ಹಾಜರಿದ್ದರು
ಹಿರೇಗುತ್ತಿ ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ಸೆಕೆಂಡರಿ ಹೈಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನ
ನಿರಂತರ ಶಿಕ್ಷಣದ ಅಭ್ಯಾಸ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆ- ಡಾ. ದಿನೇಶ್ ಗಾಂವಕರ ಕುಮಟಾ: “ಅಂತರಂಗದ ಅರಿವನ್ನ ಜಾಗೃತಗೊಳಿಸುವಲ್ಲಿ ಶಿಕ್ಷಣದ ಪಾತ್ರ ಮತ್ತು ಶಿಕ್ಷಣವು ಶೈಕ್ಷಣಿಕ ಗುಣಮಟ್ಟ, ಸಾಮಾಜಿಕ ಕಳಕಳಿ, ಆಧ್ಯಾತ್ಮಿಕ ತರಬೇತಿ ಹಾಗೂ ಉತ್ತಮ ಕ್ರಿಯೆ, ಹವ್ಯಾಸಗಳನ್ನು ಬಳಸಿಕೊಂಡಾಗ ವ್ಯಕ್ತಿ ಯಶಸ್ವಿನ ಹಾದಿಯಲ್ಲಿ ಸಾಗಲು ಸಾಧ್ಯ ಹಾಗೂ ರಾಷ್ಟ್ರೀಯ ಶಿಕ್ಷಣನೀತಿ ಅದರ ಮುಖ್ಯ ಅಂಶಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದು ಪ್ರಮುಖ ಆದ್ಯತೆಯಾಗಬೇಕು ಎಂದು ಡಾ. ದಿನೇಶ್ ಎಮ್ ಗಾಂವಕರ ಆಡಳಿತಾಧಿಕಾರಿಗಳು ಆರ್.ಎನ್.ಎಸ್ ಶಿಕ್ಷಣ ಸಮೂಹ ಸಂಸ್ಥೆ ಮುರ್ಡೇಶ್ವರ ಪ್ರಾಂಶುಪಾಲರು ಪ್ರಥಮದರ್ಜೆ ಕಾಲೇಜು ಮುರ್ಡೆಶ್ವರ ನುಡಿದರು.
ಮೀಡಿಯಂ ಸ್ಕೂಲ್
ಅವರು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಹಾಗೂ ಮಹಾತ್ಮಾಗಾಂಧಿ ಇಂಗ್ಲೀಷ್ ಹಿರೇಗುತ್ತಿಯಲ್ಲಿ ನಡೆದ 2024-2025 ರ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ “ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ಕಲಿಕೆಯ ವಾತಾವರಣ ಉತ್ತಮವಾಗಿದೆ. ಸಮುದಾಯದ ಸಹಭಾಗಿತ್ವವಿದೆ. ಈ ಹೈಸ್ಕೂಲ್ ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ” ಎಂದರು.
ವಿಜ್ಞಾನ ವಸ್ತುಪ್ರದರ್ಶನದ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶಾಂತಾ ಎನ್ ನಾಯಕರು “ಸಾಮಾಜಿಕವಾಗಿ ಉತ್ತಮ ವ್ಯಕ್ತಿತ್ವ ಹೊಂದಿ ಸಮಾಜದ ಉತ್ತಮ ಪ್ರಜೆಯಾಗಲು ಪ್ರಯತ್ನಿಸಬೇಕು ಕೇವಲ ಅಂಕಗಳಿಕೆಗಾಗಿ ಶಿಕ್ಷಣವಿರದೇ ಜೀವನಕ್ಕಾಗಿ, ಸಮಾಜದ ವಿಕಸನಕ್ಕಾಗಿ ಶಿಕ್ಷಣವಿರಬೇಕು” ಎಂದರು.
ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ಎಸ್ ನಾಯಕ ಮಾತನಾಡಿ “ಹೈಸ್ಕೂಲ್ ಸ್ಥಾಪನೆಯಲ್ಲಿ ಅವಿರತವಾಗಿ ಪ್ರಯತ್ನಿಸಿದ ಊರಿನ ಎಲ್ಲಾ ಹಿರಿಯರನ್ನು ಸ್ಮರಿಸಿದರು. ಹಾಗೂ ಹೈಸ್ಕೂಲಿನ ಈ ಎಲ್ಲಾ ಸಾಧನೆಗಳಿಗೆ ಎಲ್ಲಾ ಶಿಕ್ಷಕರ ಸಹಕಾರ ಅತಿಮುಖ್ಯವಾಗಿದೆ ಸೆಕೆಂಡರಿ ಹೈಸ್ಕೂಲಿನಲ್ಲಿ ಸುಮಾರು 277 ವಿದ್ಯಾರ್ಥಿಗಳು ಹಾಗೂ ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲಿ 85 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಕಲಿಕೆಗೆ ಉತ್ತಮ ವಾತಾವರಣ ಒದಗಿಸಲಾಗಿದೆ.” ಎಂದರು.
ಶ್ರೀ ಸುನೀಲ್ ಪೈ ಧರ್ಮದರ್ಶಿಗಳು ಶ್ರೀ ಮಹಾಲಸಾ ಸಿದ್ಧಿ ವಿನಾಯಕ ಟೆಂಪಲ್ ಟ್ರಸ್ಟ್ ಮಾದನಗೇರಿ ಮಾತನಾಡಿ “ತನ್ನ ಜೀವನದ ಪರಿವರ್ತನೆಯ ಸ್ಥಳ ಈ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಗುರಿ ಮುಟ್ಟಲು ನಂಬಿಕೆ, ದೃಢತೆ ಇರುವುದು ಅವಶ್ಯಕ ಎನ್ನುತ್ತಾ ಬಾಲ್ಯದ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು.
ಹಿರೇಗುತ್ತಿ ಪಿ.ಯು ಕಾಲೇಜ್ ಪ್ರಾಂಶುಪಾಲರಾದ ರಾಜೀವ ನಾಯ್ಕ ಮಾತನಾಡಿ “Think Positive Be Happy” ಧನಾತ್ಮಕವಾಗಿ ಯೋಚಿಸಿ ಆನಂದದಿಂದಿರಿ” ಗುರಿಯ ಸಫಲತೆಯಲ್ಲಿ ಅವಿರತ ಪ್ರಯತ್ನ ಮುಖ್ಯ” ಎಂದರು.ಶ್ರೀ ನಾಗೇಶ ನಾಯಕ ಸದಸ್ಯರು ಹಾಗೂ ಉದ್ದಂಡ ಬಿ ಗಾಂವಕರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ವಿಜ್ಞಾನ ಶಿಕ್ಷಕ ಮಹಾದೇವ ಬಿ ಗೌಡ, ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಶಿಕ್ಷಕ ರತ್ನ ಪ್ರಶಸ್ತಿ ಪಡೆದ ನಾಗರಾಜ ಜಿ ನಾಯಕ ಹಾಗೂ ರಾಜ್ಯ ಗುರುಶ್ರೇಷ್ಠ ಪ್ರಶಸ್ತಿ ಪಡೆದ ರಾಮಕೃಷ್ಣ ಎನ್ ನಾಯಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇವಕಿ ಮಂಜುನಾಥ ಗೌಡ, ಶಿವಾನಿ ಕೃಷ್ಣ ಗೌಡ, ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಶಮಿತಾ ವಿ ಪಟಗಾರ, ಧ್ರುವ ಎಸ್ ಗೌಡ, ಪ್ರೀತಮ್ ಎಸ್ ಪಾಲನಕರ್ ಇವರಿಗೆ ಸನ್ಮಾನ ಮಾಡಲಾಯಿತು. ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ, ಸೆಕ್ರೆಟರಿ ಮೋಹನ ಬಿ ಕೆರೆಮನೆ, ಸದಸ್ಯರಾದ ಮೋಹನ ಗಾಂವಕರ, ಭಾಗೀರಥಿ ಹಳ್ಳೇರ, ಹಿರೇಗುತ್ತಿ ಪದವಿಪೂರ್ವ ಕಾಲೇಜ್ ಹಿರಿಯ ಉಪನ್ಯಾಸಕರಾದ ನಾಗರಾಜ వి ಗಾಂವಕರ, ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಮುಖ್ಯಾಧ್ಯಾಪಕಿ ಸುಮನ್ ಫರ್ನಾಂಡಿಸ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಿಂಚನಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಹಾಗೂ ಚರಣ ನಾಯ್ಕ ಯಕ್ಷನೃತ್ಯದ ಮೂಲಕ ಪ್ರಾರಂಭವಾಯಿತು. ವಾರ್ಷಿಕ ವರದಿ ವಾಚನವನ್ನು ಶಿಕ್ಷಕಿ ಜಾನಕಿ ಗೊಂಡ ವಾಚಿಸಿದರು. ಸುಮನ್ ಫರ್ನಾಂಡೀಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಶಿಕ್ಷಕಿ ಬಹುಮಾನ ವಿತರಣಾ ಯಾದಿ ವಾಚಿಸಿದರು. ಎಸ್.ಎಸ್.ಎಲ್.ಸಿ ಬಹುಮಾನ ವಿಜೇತರ ಯಾದಿ ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ ಹಾಗೂ ಕ್ರೀಡಾ ವಿಭಾಗದ ಬಹುಮಾನ ವರದಿಯನ್ನು ದೈಹಿಕ ಶಿಕ್ಷಕರಾದ ನಾಗರಾಜ ಜಿ ನಾಯಕ ಮತ್ತು ಸಹಪಠ್ಯ ಚಟುವಟಿಕೆಗಳ ಬಹುಮಾನ ವರದಿಯನ್ನು ಬಾಲಚಂದ್ರ ಅಡಿಗೋಣ ವಾಚಿಸಿದರು.
ಮುಖ್ಯಾಧ್ಯಾಪಕರಾದ ಶ್ರೀ ರೋಹಿದಾಸ ಗಾಂವಕರ ಸರ್ವರನ್ನು ಸ್ವಾಗತಿಸಿದರು. ಎನ್ ರಾಮು ಹಿರೇಗುತ್ತಿ ನಿರೂಪಿಸಿದರು. ಮಹಾದೇವ ಗೌಡ ವಂದಿಸಿದರು. ಕಾರ್ಯಕ್ರಮದಲ್ಲಿ ಚಂದ್ರಹಾಸ ನಾಯಕ, ರಾಮು ಕೆಂಚನ್, ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್, ಇಂದಿರಾ ಬಿ ನಾಯಕ, ಶಿಲ್ಪಾ ನಾಯಕ, ಬಾಲಚಂದ್ರ ಅಡಿಗೋಣ, ಕವಿತಾ ಅಂಬಿಗ, ಮದನ ನಾಯಕ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಮತ್ತು ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಶಿಕ್ಷಕರಾದ ಮಂಗಲಾ, ನಾಗರತ್ನ, ಸ್ವಾತಿ, ವಿಶಾಲಾಕ್ಷಿ, ಶಶಿಕಲಾ ಪುಷ್ಪಾ ಉಪಸ್ಥಿತರಿದ್ದರು. ನಂತರ ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ಸೆಕೆಂಡರಿ ಹೈಸ್ಕೂಲ್ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ನೂತನವಾಗಿ ರಾಮದುರ್ಗ ತಾಲೂಕಿಗೆ ಬಂದಂತ ಪಿಎಸ್ಐ ರವರಿಗೆ ಚಿಲಮೂರ ಗ್ರಾಮದ ಹಿರಿಯರಿಂದ ಸ್ವಾಗತ
ಬೆಳಗಾಂವ ಜಿಲ್ಲಾ ರಾಮದುರ್ಗ ತಾಲೂಕಿಗೆ ಪೊಲೀಸ್ ಇಲಾಖೆಯ ಪ್ರ ಪ್ರಥಮವಾಗಿ ಮಹಿಳಾ ಪಿಎಸ್ಐ ರವರು ರಾಮದುರ್ಗ ತಾಲೂಕಿಗೆ ಬಂದಿದ್ದು, ಗ್ರಾಮೀಣ ಜನತೆ ಮಹಿಳೆಯರು ಹಾಂ ಹೌದಾ ಅಂತಾ ಮಾತನಾಡುತ್ತಿದ್ದು, ಗ್ರಾಮೀಣ ಜನತೆಗೆ ಇದು ಆಶ್ಚರ್ಯಕರ ವಿಷಯವಾಗಿದೆ, ಹೌದು ಮಹಿಳೆಯರು ಯಾವುದರಲ್ಲಿ ನಾವು ಕಡಿಮೆ ಇಲ್ಲ ಎಂದು ಪೋಲಿಸ್ ಇಲಾಖೆ. ಅರಣ್ಯ ಇಲಾಖೆ. ಜಿಲ್ಲಾಧಿಕಾರಿಗಳಾಗಿ. ನ್ಯಾಯಾಧೀಶರಾಗಿ. ಕೆ ಎಸ್ ಆರ್ ಟಿ ಸಿ ಕಂಡಕ್ಟರ. ಡ್ರೈವರ್ ಗಳಾಗಿ. ಸರಕಾರಿ ಇಲಾಖೆ ಎಲ್ಲಾ ಹುದ್ದೆಗೆ ಸೈಯನ್ನುತ್ತಿದ್ದಾರೆ. ಈ ಸದ್ಯದಲ್ಲೇ ನಮ್ಮದೇಶ ಕಾಯುವ ಸೈನಿಕರು ಆಗುತ್ತಿದ್ದಾರೆ ಇದು ಜನತೆಗೆ ಹೆಮ್ಮೆಯ ವಿಷಯ, ಮತ್ತು ಮಹಿಳಾ ವಿದ್ಯಾರ್ಥಿನಿಯರಿಗೆ ಸ್ಪೂರ್ತಿದಾಯಕ ಎನ್ನಬಹುದು ಇದೇ ತರಹ ಎಲ್ಲಾ ಹೆಣ್ಣು ಮಕ್ಕಳು ಒಳ್ಳೆಯ ಗುಣದಿಂದ ಒಳ್ಳೆಯ ತರಹ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಯಲ್ಲಿ ಸೇರಿದರೆ ಪಾಲಕರಿಗೆ ಸಂತೋಷಕರ ವಿಷಯ, ಸಾರ್ವಜನಿಕರಿಗೆ ಆಶ್ಚರ್ಯಕರ ವಿಷಯ ವಾಗುತ್ತದೆ ಇದು ಸಹಜವಾಗಿ ಕಾಣುತ್ತದೆ, ಚಿಲಮೂರ ಗ್ರಾಮದ ಪ್ರಮುಖರಾದ ರಾಮಚಂದ್ರ ಹುಚ್ಚ ಕೆಂಚನವರ. ಪಾಂಡುರಂಗ ಕಲ್ಲೇಶಿ. ಲಕ್ಷ್ಮಣ್ ಮಾದರ್. ಪ್ರಕಾಶ್ ಮಂತ್ರನ್ನವರ. ರಾಮಚಂದ್ರ ಹ ಕುಕಡಿ.ಯವರು ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ತಮ್ಮ ಗ್ರಾಮದ ಕಾರ್ಯಕ್ರಮಕ್ಕೆ ಬರಲು ಆಹವಾನ ನೀಡಿ ನೀವು ನಮ್ಮ ಗ್ರಾಮದ ಶಾಲೆಯ ಕಾರ್ಯ ಕ್ರಮಕ್ಕೆ ಬಂದರೆ ನಮ್ಮ ಗ್ರಾಮದ ಶಾಲಾ ಮಕ್ಕಳಿಗೆ ನೀವು ಸ್ಪೂರ್ತಿ ದಾಯಕ್ ಆಗುತ್ತಿರಿ ಎಂದಾಗ. ಅದಕ್ಕೆ ಓಗೊಟ್ಟು ಖಂಡಿತಾ ಬರುತ್ತೇನೆ ಎಂದು ಭರವಸೆ ಕೊಟ್ಟರು.
22 ರಂದು ಕಾಳಗಿ ಬಂದ್
ಕಾಳಗಿ: ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದಲ್ಲಿ ಬಸವೇಶ್ವರ ಮೂರ್ತಿಗೆ ಅಪಮಾನ ಮಾಡಿರುವದು ಹಾಗೂ ಜೇವರ್ಗಿಯ ಕುಮಾರಿ ಲಕ್ಷ್ಮೀ ರವರಿಗೆ ಲವ್ ಜಿಹಾದ್ ಮೂಲಕ ಬಲಿ ಪಡೆದಿರುವದನ್ನು ಖಂಡಿಸಿ ಜ. 22ರಂದು ಕಾಳಗಿ ಪಟ್ಟಣ ಸಂಪೂರ್ಣವಾಗಿ ಬಂದ ಮಾಡವ ಮೂಲಕ ಪ್ರತಿಭಟನೆ ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ವೀರಶೈವ ಲಿಂಗಾಯತ ಸಮಾಜ ಯುವ ಅಧ್ಯಕ್ಷ ಮಂಜುನಾಥ ಬೇರನ್ ಹೇಳಿದರು.
ಪಟ್ಟಣದ ವೀರಶೈವ ಕಾರ್ಯಲಯದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದ ಬಸವೇಶ್ವರ ಸರ್ಕಲನಿಂದ ಪ್ರತಿಭಟನೆ ಮೆರವಣಿಗೆಯನ್ನು ಹಳೆ ಬಸಸ್ಟ್ಯಾಂಡ್ ನಿಂದ ನೇರವಾಗಿ ಡಾ.ಬಾಬ ಸಾಹೇಬ್ ಅಂಬೇಡ್ಕರ್ ಸರ್ಕಲನಲ್ಲಿ ತಹಸೀಲ್ದಾರ್ ಘಮಾವತಿ ರವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ನೀಡುತ್ತೆವೆ ಎಂದು ತಿಳಿಸಿದರು. ಈ ಪ್ರತಿಭಟನೆ ಹೋರಾಟದಲ್ಲಿ ಸಮಸ್ತ ವೀರಶೈವ ಲಿಂಗಾಯತ ಸಂಘಟನೆಗಳು ಹಾಗೂ ವಿವಿಧ ಸಂಘಟನೆ ಭಾಗಿಯಾಗುತ್ತಾರೆ ಎಂದು ಕನಸಿನ ಭಾರತ ಪತ್ರಿಕೆಗೆ ಮಾಹಿತಿ ನೀಡಿದರು.
ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣದ ಸಭೆ
ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕು ನಾಯಕ ಸಂಘ ರಿ ಆಹ್ವಾನದ ಮೇರೆಗೆ ಮಹರ್ಷಿ ವಾಲ್ಮೀಕಿ ನಾಯಕ ಚಾರಿಟೇಬಲ್ ಟ್ರಸ್ಟ್ ನ ಗೌರವ ಸಲಹೆಗಾರರಾದ ಶ್ರೀ ಎಂ.ಅಪ್ಪಣ್ಣ ಅವರು ಸಭೆಗೆ ಭಾಗವಹಿಸಿದಾಗ ಸಂಘದ ಪದಾಧಿಕಾರಿಗಳು ಜೊತೆ ಸಭೆ ನಡೆಸಿದರು. ಅಧ್ಯಕ್ಷರಾದ ಸಿ.ಸಿ ಮಹದೇವ್ ಅವರು ಸಭೆಯಲ್ಲಿ ಈ ಕೆಳಕಂಡ ವಿಷಯಗಳನ್ನು ಮಂಡಿಸಿದರು ಸಾಲಿಗ್ರಾಮ ತಾಲ್ಲೂಕು ವಾಲ್ಮೀಕಿ ಭವನ ನಿರ್ಮಾಣ ಮಾಡಲು ತಾಲ್ಲೂಕು ಆಡಳಿತ ಕಳೆದ ಐದಾರು ವರ್ಷಗಳಿಂದ ಜಮೀನು ಮಂಜೂರು ಮಾಡದೆ ವಿಳಂಬ ಮಾಡುತ್ತಿರುವ ಬಗ್ಗೆ ,ಸಮಾಜದ ಸಂಘಟನೆ ಮಾಡುವ ವಿಚಾರ , ಪ್ರತಿ ಗ್ರಾಮದಲ್ಲಿ ಸಂಘಕ್ಕೆ ಸದಸ್ಯತ್ವ ಮಾಡುವ ವಿಚಾರ,ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆ ಬಗ್ಗೆ ಮಂಡಿಸಿದರು ಶ್ರೀ ಎಂ.ಅಪ್ಪಣ್ಣ ಅವರು ಎಲ್ಲಾ ವಿಚಾರಗಳನ್ನು ಚರ್ಚಿಸಿ ಕೆಲವು ಸಲಹೆಗಳನ್ನು ನೀಡಿದರು.
ಪ್ರಮುಖವಾಗಿ ಸಾಲಿಗ್ರಾಮ ತಾಲ್ಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಕಳೆದ ಐದಾರು ವರ್ಷಗಳಿಂದ ತಾಲ್ಲೂಕು ಆಡಳಿತ ನಿವೇಶನ ನೀಡಲು ವಿಳಂಬ ಮತ್ತು ತಾರತಮ್ಯ ಮಾಡಿರುವ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ ,ತಾಲ್ಲೂಕು ಆಡಳಿತಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ,ತಹಶಿಲ್ದಾರರಿಗೆ ಹಾಗೂ ಶಾಸಕರಾದ ಶ್ರೀ ರವಿಶಂಕರ್ ಅವರಿಗೆ ದೂರವಾಣಿ ಕರೆ ಮಾಡಿ ನಿವೇಶನ ನೀಡದಿರುವ ಬಗ್ಗೆ ಹಾಗೂ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಶೀಘ್ರವಾಗಿ ನಿವೇಶನ ಮಂಜೂರು ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಶಿಪಾರಸ್ಸು ಮಾಡಿ ಸಮಾಜದ ಅಭಿವೃದ್ಧಿ ಸಹಕರಿಸಬೇಕೆಂದು ತಿಳಿಸಿದರು.
ಸಾಲಿಗ್ರಾಮ ತಾಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷರ ತಂಡ ಮಾಡುತ್ತಿರುವ ಕಾರ್ಯಕ್ರಮಗಳು ರಾಜ್ಯ ನಾಯಕರ ಗಮನಸೆಳೆದಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷರಾದ ದೇವರಾಜ್ ಟಿ.ಕಾಟೂರು, ಸಾಲಿಗ್ರಾಮ ತಾಲೂಕು ಸಂಘದ ಅಧ್ಯಕ್ಷರಾದ ಸಿ.ಸಿ.ಮಹದೇವ್, ಉಪಾಧ್ಯಕ್ಷ ತಂದ್ರೆ ವೆಂಕಟೇಶನಾಯಕ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಕಾರು ಬೈಕ್ ನಡುವೆ ಆಪಘಾತ ಯುವತಿ ಸ್ಥಳದಲ್ಲೇ ಸಾವು
ಹೊನ್ನಾವರ- ಮುರುಡೇಶ್ವರ ಜಾತ್ರೆ ಮುಗಿಸಿ ಮನೆಗೆ ಬರುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕಿನಲ್ಲಿ ಹಿಂದೆ ಕೂತಿದ್ದ ಪೂಜಾ ಗೌಡ ಸಾವನಪ್ಪಿದ್ದಾರೆ.
ಹೊನ್ನಾವರದ ಅಪ್ಪಿಕೆರಿ ನಿವಾಸಿಯಾದ ಪೂಜಾ ಗೌಡ ಹಾಗೂ ಸುರೇಶ ಗೌಡ ಭಾನುವಾರ ಮುರುಡೇಶ್ವರ ಜಾತ್ರೆಗೆ ತೆರಳಿದ್ದರು. ಜಾತ್ರೆ ಮುಗಿಸಿ ಸೋಮವಾರ ಮರಳಿ ಬರುವಾಗ ಹೊನ್ನಾವರ ಬಳಿಯ ಶರಾವತಿ ಸೇತುವೆಯಲ್ಲಿ ಹಿಂಬದಿಯಿಂದ ಬರುತ್ತಿದ್ದ ಕಾರು ಬೈಕ್ ಗೆ ಡಿಕ್ಕಿಯಾದ ಪರಿಣಾಮ ಕಾರು ಮತ್ತೆ ಬೈಕ್ ಜಾಖಂಗೊಂಡಿದೆ ಸುರೇಶ ಗೌಡ ಬೈಕಿನಿಂದ ಹಾರಿ ಕೆಳಗೆ ಬಿದಿದ್ದು ಪೂಜಾ ಗೌಡ ಸಹ ನೆಲಕ್ಕೆ ಅಪ್ಪಳಿಸಿ ತಲೆಗೆ ಗಂಭೀರ ಗಾಯವಾಗಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
