ಕೆ. ಆರ್. ನಗರ: ತಾಲೂಕು ಕಪ್ಪಡಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ರಾಜ್ಯ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸದಸ್ಯ ದೊಡ್ಡ ಸಾಮೇಗೌಡ ಕೆ .ಆರ್. ನಗರ ಪುರಸಭೆ ಅಧ್ಯಕ್ಷ ಶಿವು ನಾಯಕ್ ಜಂಟಿಯಾಗಿ ಜನಪ್ರಿಯ ಶಾಸಕ ಡಿ. ರವಿಶಂಕರ್ ರವರ ಗೆಲುವಿನ ಪ್ರಯುಕ್ತ ಗಂಧನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ನಾಯಕಿ ಶ್ರೀಮತಿ ಪ್ರೇಮ ಶಿವಣ್ಣ ರವರು ಏರ್ಪಡಿಸಿದ್ದ ದೇವರ ಪರಿಷೆ ಹಾಗೂ ಶಾಸಕರ ಗೆಲುವಿನ ಹರಕೆ ಪ್ರಯುಕ್ತ ಕಪ್ಪಡಿ ಕ್ಷೇತ್ರದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಕೇಕ್ ಕತ್ತರಿಸುತ್ತಿರುವುದು. ಈ ಸಂದರ್ಭದಲ್ಲಿ ಜನಪ್ರಿಯ ಶಾಸಕ ಡಿ. ರವಿಶಂಕರ್ ಅವರ ಪತ್ನಿ ಶ್ರೀಮತಿ ಸುನಿತಾ ರವಿಶಂಕರ್ ಗಂಧನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಜಿ. ಆರ್. ಶಿವಣ್ಣ, ಯಜಮಾನ ರಘು, ಮುಖಂಡರಾದ ನಾಗರಾಜು, ಮಂಜುನಾಥ್, ಸತೀಶ್, ಹೆಬ್ಬಾಳ್ ಸ್ವಾಮಿಗೌಡ ಮುಂತಾದವರು ಕಾಣಬಹುದು.
POST
“ಸಹಾಯಕ ಪ್ರಾಧ್ಯಾಪಕರಿಗೆ”ವೃತ್ತಿ ಮಾರ್ಗದರ್ಶನ ಕಾರ್ಯಾಗಾರ’
ಉನ್ನತ ಶಿಕ್ಷಣ ಇಲಾಖೆಯಲ್ಲಿ ನೂತನವಾ ಗಿ ಕಾಲೇಜಿಗೆ ನೇಮಕವಾಗಿರುವ”ಸಹಾಯಕ ಪ್ರಾಧ್ಯಾಪಕರಿಗೆ”ವೃತ್ತಿ ಮಾರ್ಗದರ್ಶನ ಕಾರ್ಯಾಗಾರ’ ಹೊಸಹಾದಿ; ನಿರೀಕ್ಷೆಗಳು, ಸವಾಲುಗಳು ಮತ್ತು ಮಾರ್ಗದರ್ಶಕ ಸಲಹೆಗಳು”ಮತ್ತು ಗಣ್ಯರಿಗೆ ಸನ್ಮಾನ’.
27-1-25ರಂದು’ಜ್ಞಾನಜ್ಯೋತಿ ಸಭಾಂಗಣ’ದಲ್ಲಿ ಸಮಾರಂಭವನ್ನು ಮಾನ್ಯ ಡಿಸಿಎಂ ಡಿಕೆ ಶಿವಕುಮಾರ್, ಶಿಕ್ಷಣ ಸಚಿವ ಡಾ: ಎಂಸಿ.ಸುಧಾಕರ್ ರು,ಗಣ್ಯರು ಉದ್ಘಾಟಿಸಿ ನೂತನ ಪ್ರಾಧ್ಯಾಪಕರಿಗೆ , ವೃತ್ತಿ ಗೌರವದ, ಹೊಣೆಗಾರಿಕೆ, ಸವಾಲುಗಳ ಕುರಿತು ಕಿವಿ ಮಾತು ತಿಳಿಸಿ ಆಶಯ ನುಡಿಗಳನ್ನಾಡಿ; ಅಭಿನಂದನೆ” ತಿಳಿಸಿದರು.ಸಚಿವರು ಸುದ್ದಿಗಾರರೊಂದಿಗೆ,ಮಾತನಾಡಿ ಪ್ರಸ್ತುತ ಸರ್ಕಾರದಲ್ಲಿ “ಉನ್ನತ ಶಿಕ್ಷಣಇಲಾ ಖೆಯಲ್ಲಿನ ಬೆಳವಣಿಗೆಗಳು, ಸೇವೆ, ಸೌಲಭ್ಯ, ಸಾಧನೆಗಳನ್ನು ವಿವರಿಸಿ;ಈಗ ನೇಮಕ ವಾಗಿರುವ” ಸಾವಿರ ಸಹಾಯಕ ಪ್ರಾಧ್ಯಾಪ ಕರಿಗೆ ಒಂದೇ ದಿನ ಕೌನ್ಸೆಲ್ಲಿಂಗ್, ನೇಮಕಾತಿ ಪತ್ರ ನೀಡಿರುವ, ನಿಭಾಯಿಸುವ ಮಹೋನ್ನತ ಕೆಲಸವಾಗಿದೆ”ಎಂದರು.
ನೂತನವಾಗಿ ಕಾಲೇಜಿಗೆ ನೇಮಕವಾಗಿರುವ ಸಹಾಯಕ ಪ್ರಾಧ್ಯಾಪಕರುಗಳೂ ಸಹ ತಮ್ಮ ಮನದಾಳದ ಅನಿಸಿಕೆ ಹಂಚಿಕೊಂ ಡು, ಆಭಾರಿಯಾಗಿದ್ದಾರೆ. ಇಡೀ ದಿನ ಮಾರ್ಗದರ್ಶನ, ಕಾರ್ಯಾಗಾರಗಳು, ಸನ್ಮಾನಗಳು ನಡೆದು ಸಮಾರಂಭ ಯಶಸ್ವಿಯಾಯಿತು
ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು
ಕಾರ್ಕಳದ ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಇಂದಿನ ಪುಣ್ಯಕ್ಷೇತ್ರದ ಚಟುವಟಿಕೆಗಳು ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದವು. ಸಾವಿರಾರು ಭಕ್ತರು ಹರಕೆಗಳನ್ನು ಈಡೇರಿಸಲು ಮತ್ತು ಬಿನ್ನಹಗಳನ್ನು ಸಲ್ಲಿಸಲು ಅತ್ತೂರಿನ ಪುಣ್ಯಸ್ಥಳಕ್ಕೆ ಆಗಮಿಸಿದರು. ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು, ಮತ್ತು ನಾಟಕದ ಪ್ರದರ್ಶನ ದಿನದ ಮುಖ್ಯ ವಿಧಿ ಆಚರಣೆಗಳಾಗಿದ್ದವು.
ಬಸಿಲಿಕಾದ ವಠಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಬೆಳಕು ಮತ್ತು ಅಲಂಕಾರಗಳಿಂದ ಆಕರ್ಷಕವಾಗಿ ಸಿಂಗಾರಗೊಂಡಿದ್ದವು. ಸರ್ವಧರ್ಮ ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಇಂದಿನ ಧಾರ್ಮಿಕ ವಿಧಿಗಳಲ್ಲಿ ವಿಭಿನ್ನ ಧರ್ಮಗಳ ಜನರು ಭಾಗವಹಿಸಿದರು. ಭಕ್ತರು ಸಂತ ಲಾರೆನ್ಸ್ ಅವರ ಪವಾಡಗಳನ್ನು ಸ್ಮರಿಸಿ, ತಮ್ಮ ಬಿನ್ನಹಗಳನ್ನು ಸಲ್ಲಿಸಿ, ಆಶೀರ್ವಾದ ಪಡೆದರು.
ಈ ವರ್ಷದ ಮಹೋತ್ಸವದ ವಿಷಯ “ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ” (ರೋಮಾ 5:5) ಆಗಿದ್ದು, ಇಂದು ಮೂರು ಬಲಿಪೂಜೆಗಳು ನಡೆದವು. ಪ್ರಮುಖ ಬಲಿಪೂಜೆಯನ್ನು ಉಡುಪಿ ಧರ್ಮಕ್ಷೇತ್ರದ ಶ್ರೇಷ್ಟ ಗುರು ಅ/ವಂ/ ಮೊನ್ಸಿಜ್ಞೋರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅರ್ಪಿಸಿದರು. ಪ್ರಭುವಿನಲ್ಲಿ ಭರವಸೆ ಇರಿಸಿ ಕ್ರೈಸ್ತ ಬದುಕನ್ನು ಆಶಾದಾಯಕವಾಗಿ ಬದುಕಬೇಕು. ಕ್ರಿಸ್ತನಲ್ಲಿ ಒಂದಾಗಿ ಭರವಸೆಯ ಯಾತ್ರಾರ್ಥಿಗಳಾಗಿ ನಮ್ಮ ಹೆಜ್ಜೆಯನ್ನಿಡುತ್ತಾ ಸಾಗಬೇಕೆಂದು ಬೋಧಿಸಿದರು.
ನಸುಕಿನಿಂದಲೇ ವಿವಿಧ ಸ್ಥಳಗಳಿಂದ ಭಕ್ತರು ಧಾವಿಸಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಸಾಯಂಕಾಲ ಸಂತ ಲಾರೆನ್ಸ್ ಅವರ ಜೀವನ ಆಧಾರಿತ “ಲಾರೆನ್ಸ್ ಮಹಾತ್ಮೆ” ನಾಟಕ ಪ್ರದರ್ಶಿಸಲಾಯಿತು.
ಪುಷ್ಕರಣಿಗೆ ಭೇಟಿ, ಮೊಂಬತ್ತಿ ಬೆಳಗುವಿಕೆ, ಪೂಜಾ ಬಿನ್ನಹ ಸಲ್ಲಿಕೆ, ಬಲಿಪೂಜೆ, ಪಾಪ ನಿವೇದನೆ ಸಂಸ್ಕಾರ, ಮತ್ತು ಪುಷ್ಪತೀರ್ಥದಲ್ಲಿ ಭಾಗವಹಿಸಲು ಭಕ್ತಸಾಗರ ಮುಗಿಬಿದ್ದಿತ್ತು. ನಸುಕಿನಿಂದ ರಾತ್ರಿ ವರೆಗೆ ಪುಣ್ಯಕ್ಷೇತ್ರ ಭಕ್ತರ ಪುಣ್ಯದಾಯಕ ಸ್ಥಳವಾಗಿ ಪರಿವರ್ತಿತಗೊಂಡಿತ್ತು.
ಗಣವಲಗಾ H .P. S. ಶಾಲೆಯಲ್ಲಿ 76.ನೇ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು
ಇಂಡಿ ತಾಲೂಕಿನ ಗಣವಲಗಾ H.P.S ಶಾಲೆಯಲ್ಲಿ ಇಂದು 76ನೇ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಶಾಲೆಯ SDMC ಅಧ್ಯಕ್ಷರಾದ ಶಾಂತಪ್ಪ.ಕಸ್ಕಿ ಧ್ವಜಾರೋಹಣ ನೆರವೇರಿಸಿದರು , ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಶಾಲೆಯ ಎಸ್. ಡಿ.ಎಮ್. ಸಿ .ಯ ಸದಸ್ಯರಾದಂತ ಲಕ್ಷ್ಮಣ. ಲೋಕುರ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಾಮಣ್ಣ ತಳವಾರ, ಎಸ್. ಡಿ. ಎಮ್. ಸಿ ಉಪಾಧ್ಯಕ್ಷರಾದ ವಿಠ್ಠಲ. ಲೊಕುರ, ರಾಮನಗೌಡ ಪಾಟೀಲ ಇವರೆಲ್ಲರೂ ಕೂಡಿಕೊಂಡು ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರವರ ಮತ್ತು ಮಹಾತ್ಮ ಗಾಂಧೀಜಿ ಭಾವ ಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು ಸಲ್ಲಿಸಿದರು,. ಇದೆ ವೇಳೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಿಗೆ ಮುಖ್ಯ ಗುರುಗಳು ಆದಂತ ಏ. ಎಸ್. ಬಡಿಗೇರ್, ಸರ್ ಮತ್ತು ಎ. ಜಿ. ಮೊರೆ, ಸರ್ ಎ.ಡಿ.ರೇವಶೆಟ್ಟಿ ಸರ್ ಮತ್ತು ಆರ್. ಕೆ. ತಳಕೇರಿ , ಸರ N. I. ದೇವರಮನಿ, ಸರ್ ಉಮೇಶ್, ಕಾಂಬಳೆ,, ಸರ್ ಮತ್ತು ಅತಿಥಿ ಶಿಕ್ಷಕಿ ರೇಣುಕಾ. ಹೂಗಾರ್. ಮೇಡಂ ಇವರೆಲ್ಲರೂ ಸೇರಿಕೊಂಡು ಇಂಡಿ ತಾಲೂಕಿನ ಪ್ರತಿಭಾ ಕಾರಂಜಿಯೆಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳಿಗೆ ಪ್ರಶಸ್ತಿ ಪ್ರಮಾಣ ಪತ್ರನೀಡಿ ಗೌರವಿಸಿ ಸನ್ಮಾನಿಸಲಾಯಿತು ,ಇದೆ ವೇಳೆ S D M C ಯ ಸರ್ವ ಸದಸ್ಯರು ಮತ್ತು ಗಣವಲಗಾ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ಧರೆಪ್ಪ. ತೇಲಿ, ರಾಮನ ಗೌಡ .ಪಾಟೀಲ. ವಿಜಯಕುಮಾರ.ಲೋಕುರ, ಮುದುಕಪ್ಪ.ಕರಕಟ್ಟಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗಣವಲಗಾ ಗ್ರಾಮದ ಗುರುಹಿರಿಯರು ಎಲ್ಲರೂ ಕೂಡಿಕೊಂಡು 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಗಣವಲಗಾ ಶಾಲೆಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು
ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಿಧಾನಸೌಧದ ಆವರಣದಲ್ಲಿ ನಿರ್ಮಿಸಲಾದ ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗಳಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ನಗರಾಭಿವೃದ್ಧಿ ಸಚಿವ ಸುರೇಶ ಬಿ.ಎಸ್, ವಿಧಾನ ಪರಿಷತ್ ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಪೊನ್ನಣ್ಣ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಗ್ಯಾರಂಟಿ ಯೋಜನಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಶಿವಾಜಿನಗರ ವಿಧಾನಸಭಾ ಕ್ಷೇತ್ರ ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
ಗಣರಾಜ್ಯೋತ್ಸವ ದಿನಾಚರಣೆ
ಮಡಿಕೇರಿ:-ಕೊಡಗು ಜಿಲ್ಲಾಡಳಿತ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 76 ನೇ ಗಣರಾಜ್ಯೋತ್ಸವ ದಿನಾಚರಣೆಯು ಭಾನುವಾರ ಅರ್ಥಪೂರ್ಣವಾಗಿ ನಡೆಯಿತು.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಧ್ವಜಾರೋಹಣ ನೆರವೇರಿಸಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಬೆನಕ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಹಿರೇಗುತ್ತಿ ಕಾಲೇಜ್ ಪ್ರತಿಭಾ ಪುರಸ್ಕಾರದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಕಾಲೇಜ ಫಲಿತಾಂಶ ಶೇಕಡಾ ೧೦೦ ಆಗಲು ಕಾರತಣೀಕರ್ತರಾದ ಉಪನ್ಯಾಸಕರಿಗೆ ಗೌರವ ಸನ್ಮಾನ
ಕುಮಟಾ: ಸರಕಾರಿ ಪದವಿಪೂರ್ವ ಕಾಲೇಜು ಹಿರೇಗುತ್ತಿ ೨೦೨೪-೨೫ ರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕಾಲೇಜ್ ಅಭಿವೃದ್ಧಿ ಸಮಿತಿ ಮತ್ತು ಬ್ರಹ್ಮಜಟಕ ಯುವಕ ಸಂಘದ ವತಿಯಿಂದ ಹಿರೇಗುತ್ತಿ ಪದವಿಪೂರ್ವ ಕಾಲೇಜ್ ೨೦೨೩-೨೪ನೇ ಸಾಲಿನಲ್ಲಿ ಕಾಲೇಜಿನ ಫಲಿತಾಂಶ ಶೇಕಡಾ ೧೦೦ ಕ್ಕೆ ೧೦೦ ಆಗಲು ಕಾರಣೀಕರ್ತರಾದ ೨೦೨೩-೨೪ನೇ ಸಾಲಿನ ಪ್ರಬಾರಿ ಪ್ರಾಂಶುಪಾಲರಾದ ನಾಗರಾಜ ವಿ ಗಾಂವಕರ ಹಾಗೂ ಉಪನ್ಯಾಸಕರಾದ ನೇತ್ರಾವತಿ ನಾಯಕ, ಸುಜಾತಾ ನಾಯಕ, ವಿಜಯಲಕ್ಷ್ಮಿ ಗಾಂವಕರ, ಶಾರದಾ ನಾಯಕ, ರಮೇಶ ಗೌಡ, ಶೀಲಾ ನಾಯ್ಕ, ಸೀಮಾ ಪಿ.ಪಿ, ಮಹಾಲಕ್ಷ್ಮಿ ಭಂಡಾರಿ, ವಿನಯಾ ಗೌಡ, ಮಧುರಾ ಗೌಡರವರಿಗೆ ಶಾಸಕರಾದ ದಿನಕರ ಕೇ ಶೆಟ್ಟಿಯವರಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಾಡ ಕಾಲೇಜ್ ಪ್ರಾಂಶುಪಾಲರಾದ ಮೋಹನ ನಾಯಕ, ಹಿರೇಗುತ್ತಿ ಪ್ರಿನ್ಸಿಪಾಲ್ ರಾಜೀವ, ಸುನೀಲ್ ಪೈ, ರಾಜೀವ ಗಾಂವಕರ, ಪ್ರೇಮಾನಂದ ಗಾಂವಕರ, ಬೊಮ್ಮಯ್ಯ ಬೊಮ್ಮನ್, ರಾಮು ಕೆಂಚನ್, ಹಿರೇಗುತ್ತಿ ಗ್ರಾ.ಪಂ ಸದಸ್ಯರಾದ ಮಹೇಶ ನಾಯಕ ಮೊರಬಾ, ಆನಂದ ನಾಯಕ ಹಾಗೂ ಮಹೇಶ(ಬಾಬು) ನಾಯಕ, ಎನ್ ರಾಮು ಹಿರೇಗುತ್ತಿ, ಬಾಲಚಂದ್ರ ಅಡಿಗೋಣ, ವೆಂಕಟ್ರಾಯ ನಾಯಕ, ಉದ್ದಂಡ ಗಾಂವಕರ, ಸುರೇಂದ್ರ ನಾಯಕ, ದೇವಿದಾಸ ನಾಯಕ, ಬ್ರಹ್ಮಜಟಕ ಯುವಕ ಸಂಘದ ಅಧ್ಯಕ್ಷ ಕಿಟ್ಟು ನಾಯಕ, ಉಪಾಧ್ಯಕ್ಷ ಆಕಾಶ ನಾಯಕ, ಕಾರ್ಯದರ್ಶಿ ಪ್ರೀತಮ್ ಗಾಂವಕರ, ಸುಭಾಸ್ ನಾಯಕ, ಉಪಸ್ಥಿತರಿದ್ದರು
ಹಿರೇಗುತ್ತಿ ಹೈಸ್ಕೂಲಿನಲ್ಲಿ ಸಂಭ್ರಮದ ೭೬ನೇ ಗಣರಾಜ್ಯೋತ್ಸವ ಆಚರಣೆ
ಹಿರೇಗುತ್ತಿ ಹೈಸ್ಕೂಲಿನಲ್ಲಿ ಸಂಭ್ರಮದ ೭೬ನೇ ಗಣರಾಜ್ಯೋತ್ಸವ ಆಚರಣೆ
ಕುಮಟಾ:- ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ಮಹಾತ್ಮಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ ೭೬ ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. “ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನು ಮಾಡಿದ್ದೇವೆ,ದೇಶ ನಮ್ಮಿಂದ ಏನನ್ನು ನೀರಿಕ್ಷಿಸುತ್ತದೆ ಎಂಬ ಕಲ್ಪನೆ ನಮ್ಮಲ್ಲಿ ಮೂಡಿ ಕಾಂiÀið ಕೈಗೊಂಡು ಗುರಿ ತಲುಪಿದಾಗ ಮಾತ್ರ ಗಣರಾಜ್ಯೋತ್ಸವದ ಸಾರ್ಥಕತೆ ಸಾಧ್ಯ” ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು “ಭಾರತವು ಜಗತ್ತಿನಲ್ಲಿಯೇ ಅತೀ ಉತ್ಕೃಷ್ಠ ಲಿಖಿತ ಸಂವಿಧಾನವನ್ನು ಹೊಂದಿದ ದೇಶ” ಎಂದರು.
ಮಹಾತ್ಮಗಾಂಧಿ ವಿದ್ಯಾವರ್ಧಕ ಸಂಘದ ಸೆಕ್ರೆಟರಿ ಮೋಹನ ಬಿ ಕೆರೆಮನೆ ಮಾತನಾಡಿ “ನಮ್ಮ ದೇಶದ ಭವ್ಯ ಪರಂಪರೆಯನ್ನು ಸ್ಮರಿಸೋಣ ಪ್ರಜ್ವಲಿಸುತ್ತಿರುವ ಭಾರತದ ಭಾಗವಾಗೋಣ….ನಮ್ಮದು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತಾತ್ಮಕ ಗಣರಾಜ್ಯವಾಗಿದೆ.” ಎಂದರು.
ವಿಶ್ವನಾಥ ಬೇವಿನಕಟ್ಟಿ ಮಾತನಾಡಿ “ಗಣರಾಜ್ಯೋತ್ಸವದ ಧ್ಯೇಯೋದ್ಧೇಶಗಳನ್ನು,ಆದರ್ಶಗಳನ್ನು ವಿದ್ಯಾರ್ಥಿಗಳಿ ತಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದರು”.
ದೈಹಿಕ ಶಿಕ್ಷಕ ನಾಗರಾಜ ನಾಯಕ ಉಸ್ತುವಾರಿಯಲ್ಲಿ ಧ್ವಜವಂದನೆ ಹಾಗೂ ಆಕರ್ಷಕ ಪ್ರಭಾತಪೇರಿ ನಡೆಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ, ಸದಸ್ಯರಾದ ಎನ್.ಟಿ ನಾಯಕ, ಮೋಹನ ಗಾಂವಕರ, ಪ್ರೇಮಾನಂದ ಗಾಂವಕರ, ಹಿರೇಗುತ್ತಿ ಕಾಲೇಜ್ ನಾಗರಾಜ ಗಾಂವಕರ, ಶಿಕ್ಷಕರಾದ ಬಾಲಚಂದ್ರ ಹೆಗಡೇಕರ್, ಎನ್.ರಾಮು.ಹಿರೇಗುತ್ತಿ, ಮಹಾದೇವ ಗೌಡ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ, ಜಾನಕಿ.ಎಮ್.ಗೊಂಡ, ಶಿಲ್ಪಾ ನಾಯಕ, ಕವಿತಾ ಅಂಬಿಗ, ಮದನ ನಾಯಕ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಹಾಗೂ ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಶಿಕ್ಷಕರಾದ ಸುಮನ್ ಫರ್ನಾಂಡೀಸ್, ನಾಗರತ್ನ, ಮಂಗಲಾ, ಸ್ವಾತಿ, ಶಶಿಕಲಾಉಪಸ್ಥಿತರಿದ್ದರು.
ಕಾರ್ಯಕ್ರಮವು ಸಿಂಚನ ಸಂಗಡಿಗರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ಎನ್.ವಿ.ಶ್ರೀನಾಗ ಸರ್ವರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ನಿರೀಕ್ಷಾ ನಾಯಕ ಕಾರ್ಯಕ್ರಮದ ನಿರೂಪಣೆ ಮಾಡಿದರು. ರಜತ ನಾಯಕ ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪ್ರಭಾತಪೇರಿ, ಘೋಷಣೆ ನಡೆದವು. ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿಯನ್ನು ಹಂಚಲಾಯಿತು. ಗಣರಾಜ್ಯೋತ್ಸವದ ಸವಿಯನ್ನು ಅನುಭವಿಸಿದರು.
ಗ್ರಾಮ ಪಂಚಾಯತ ಹಿರೇಗುತ್ತಿಯಲ್ಲಿ ಸಂಭ್ರಮದ ೭೬ ಗಣರಾಜ್ಯೋತ್ಸವ ಧ್ವಜಾರೋಹಣ
ಗ್ರಾಮ ಪಂಚಾಯತ ಹಿರೇಗುತ್ತಿಯಲ್ಲಿ ಸಂಭ್ರಮದ ೭೬ ಗಣರಾಜ್ಯೋತ್ಸವ ಧ್ವಜಾರೋಹಣ
ಕುಮಟಾ : ಗ್ರಾಮಪಂಚಾಯತ ಅಧ್ಯಕ್ಷರಾದ ಶ್ರೀ ಶಾಂತಾ ಎನ್ ನಾಯಕ ಇವರು ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ “ಗಣರಾಜ್ಯೋತ್ಸವದ ಧ್ಯೇಯೋದ್ದೇಶಗಳನ್ನು, ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು”.
ಹಿರೇಗುತ್ತಿಯ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ವೆಂಕಮ್ಮ ಹರಿಕಂತ್ರ, ಸದಸ್ಯರಾದ ನಾಗರತ್ನ ಉಮೇಶ ಗಾಂವಕರ, ಇನಾಸ್ ಫ್ರಾನ್ಸಿಸ್ ಫರ್ನಾಂಡೀಸ್, ಮಹೇಶ ನಾಯಕ, ಆನಂದು ನಾಯಕ, ರಮಾಕಾಂತ ಹರಿಕಂತ್ರ, ಮಾದೇವಿ ಹಳ್ಳೇರ, ಮಂಗಲಾ ಹಳ್ಳೇರ, ಸವಿತಾ ಹಳ್ಳೇರ ಹಾಗೂ ಕಾರ್ಯದರ್ಶಿ ಸಂಧ್ಯಾ ಎಮ್ ಗಾಂವಕರ, ಶ್ವೇತಾ ಹಿಲ್ಲೂರು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು, ಪ್ರಾಥಮಿಕ, ಹೈಸ್ಕೂಲ್, ಕಾಲೇಜಿನ ಅಧ್ಯಾಪಕ ವೃಂದದವರು, ಗಣ್ಯ ವ್ಯಕ್ತಿಗಳು, ಊರ ನಾಗರಿಕರು, ಗ್ರಾಮ ಪಂಚಾಯತ ಸಿಬ್ಬಂದಿಗಳು, ಶ್ರೀ ಬ್ರಹ್ಮಜಟಕ ಯುವಕ ಸಂಘದವರು ಹಾಜರಿದ್ದರು.
ಹಿ.ಪ್ರಾ.ಶಾಲೆ ಮತ್ತು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾಥಿಗಳು ಧ್ವಜವಂದನೆ ಸಲ್ಲಿಸಿದರು. ಊರಿನೆಲ್ಲೆಡೆ ಹಬ್ಬದ ವಾತಾವರಣ ಉಂಟಾಯಿತು. ಪ್ರಾರಂಭದಲ್ಲಿ ಸೆಕೆಂಡರಿ ಹೈಸ್ಕೂಲಿನ ವಿದ್ಯಾರ್ಥಿನಿ ಸಿಂಚನ ಸಂಗಡಿಗರು ಧ್ವಜಗೀತೆ, ವಂದೇಮಾತರA ಹಾಡಿದರು. ಎಲ್ಲರಿಗೂ ಸಿಹಿ ವಿತರಿಸಲಾಯಿತು.
ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಜನರೊಂದಿಗೆ ಜನ ಸೇವಕ-ಶಾಸಕ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ
ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಶಾಸಕರ ಜನಸಂಪರ್ಕ ಕಛೇರಿ ಅವರಣದಲ್ಲಿ ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಜನರೊಂದಿಗೆ ಜನ ಸೇವಕ ಜನಸ್ಪಂದನಾ ಕಾರ್ಯಕ್ರಮ.ಸಾರ್ವಜನಿಕರ ಸಮಸ್ಯೆಗಳನ್ನು ಶಾಸಕರನ್ನ ಖುದ್ದು ಮುಖಮುಖಿ ಭೇಟಿ ಸಮಸ್ಯೆಗಳನ್ನು ಸ್ಥಳದಲ್ಲಿ ನಿವಾರಣೆ ಮಾಡುವ ಕಾರ್ಯಕ್ರಮ.ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಸಾರ್ವಜನಿಕರ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸಿದರು.ಸಮಸ್ಯೆಗಳ ನಿರಂತರ, ನಿವಾರಣೆ ಮಾಡುವುದು ನಮ್ಮ ಕರ್ತವ್ಯ ನಮ್ಮದು. ಮೂರು ವಾರಗಳಿಂದ ಪ್ರತಿ ಸೋಮವಾರ ಜನರೊಂದಿಗೆ ಸಮಸ್ಯೆಗಳ ಕುರಿತು ಮುಕ್ತ ಚರ್ಚೆ, ನೇರ ಭೇಟಿ ಮಾಡಿರುವ ಕಾರಣ ಶೇಕಡ 90ರಷ್ಟು ಪರಿಹಾರವಾಗಿದೆ.ಅಧಿಕಾರಿ ಸಮಕ್ಷಮದಲ್ಲಿ ಸಾರ್ವಜನಿಕರ ಸಮಸ್ಯೆಗಳು ಕೇಳುವುದರಿಂದ ತತಕ್ಷಣ ಪರಿಹಾರ ಸಿಗುತ್ತಿದೆ.ಕುಡಿಯುವ, ರಸ್ತೆ, ಚರಂಡಿ ಮತ್ತು ಕಸವಿಲೇವಾರಿ, ವೈದ್ಯಕೀಯ ಚಿಕಿತ್ಸೆ ಬಗ್ಗೆ ಹೆಚ್ಚಿನ ದೂರುಗಳು ಬಂದಿದೆ.ಸಮಸ್ಯೆಗಳ ಶಾಶ್ವತ ಪರಿಹಾರ ಸಿಗಬೇಕು ಎಂದು ಜನರೊಂದಿಗೆ ಜನಸೇವಕ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ ಉತ್ತಮ ಜನಸ್ಪಂದನೆ ಸಿಗುತ್ತಿದೆ ಎಂದು ಎಸ್.ಸುರೇಶ್ ಕುಮಾರ್ ರವರು ಹೇಳಿದರು.ಜಲಮಂಡಳಿ ಕಾರ್ಯಪಾಲಕ ಅಭಿಯಂತರ ಹರಿನಾಥ್, ಬಿಬಿಎಂಪಿ ಕಾರ್ಯಪಾಲಕ ಅಭಿಯಂತ ಗಂಗಾಧರ್, ಮಂಡಲ ಅಧ್ಯಕ್ಷರಾದ ಸುದರ್ಶನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ,ಮಾಜಿ ಮಹಾಪೌರರಾದ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರುಗಳಾದ ರಾಜಣ್ಣ, ವಿಜಯಕುಮಾರ್, ಹೆಚ್.ಆರ್.ಕೃಷ್ಣಪ್ಪ, ದೀಪಾ ನಾಗೇಶ್ ರವರು ಉಪಸ್ಥಿತರಿದ್ದರು.
