ಹಿರೇಗುತ್ತಿ ಹೈಸ್ಕೂಲಿನಲ್ಲಿ ಸಂಭ್ರಮದ ೭೬ನೇ ಗಣರಾಜ್ಯೋತ್ಸವ ಆಚರಣೆ
ಕುಮಟಾ:- ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ಮಹಾತ್ಮಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ ೭೬ ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. “ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನು ಮಾಡಿದ್ದೇವೆ,ದೇಶ ನಮ್ಮಿಂದ ಏನನ್ನು ನೀರಿಕ್ಷಿಸುತ್ತದೆ ಎಂಬ ಕಲ್ಪನೆ ನಮ್ಮಲ್ಲಿ ಮೂಡಿ ಕಾಂiÀið ಕೈಗೊಂಡು ಗುರಿ ತಲುಪಿದಾಗ ಮಾತ್ರ ಗಣರಾಜ್ಯೋತ್ಸವದ ಸಾರ್ಥಕತೆ ಸಾಧ್ಯ” ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು “ಭಾರತವು ಜಗತ್ತಿನಲ್ಲಿಯೇ ಅತೀ ಉತ್ಕೃಷ್ಠ ಲಿಖಿತ ಸಂವಿಧಾನವನ್ನು ಹೊಂದಿದ ದೇಶ” ಎಂದರು.
ಮಹಾತ್ಮಗಾಂಧಿ ವಿದ್ಯಾವರ್ಧಕ ಸಂಘದ ಸೆಕ್ರೆಟರಿ ಮೋಹನ ಬಿ ಕೆರೆಮನೆ ಮಾತನಾಡಿ “ನಮ್ಮ ದೇಶದ ಭವ್ಯ ಪರಂಪರೆಯನ್ನು ಸ್ಮರಿಸೋಣ ಪ್ರಜ್ವಲಿಸುತ್ತಿರುವ ಭಾರತದ ಭಾಗವಾಗೋಣ….ನಮ್ಮದು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತಾತ್ಮಕ ಗಣರಾಜ್ಯವಾಗಿದೆ.” ಎಂದರು.
ವಿಶ್ವನಾಥ ಬೇವಿನಕಟ್ಟಿ ಮಾತನಾಡಿ “ಗಣರಾಜ್ಯೋತ್ಸವದ ಧ್ಯೇಯೋದ್ಧೇಶಗಳನ್ನು,ಆದರ್ಶಗಳನ್ನು ವಿದ್ಯಾರ್ಥಿಗಳಿ ತಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದರು”.
ದೈಹಿಕ ಶಿಕ್ಷಕ ನಾಗರಾಜ ನಾಯಕ ಉಸ್ತುವಾರಿಯಲ್ಲಿ ಧ್ವಜವಂದನೆ ಹಾಗೂ ಆಕರ್ಷಕ ಪ್ರಭಾತಪೇರಿ ನಡೆಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ, ಸದಸ್ಯರಾದ ಎನ್.ಟಿ ನಾಯಕ, ಮೋಹನ ಗಾಂವಕರ, ಪ್ರೇಮಾನಂದ ಗಾಂವಕರ, ಹಿರೇಗುತ್ತಿ ಕಾಲೇಜ್ ನಾಗರಾಜ ಗಾಂವಕರ, ಶಿಕ್ಷಕರಾದ ಬಾಲಚಂದ್ರ ಹೆಗಡೇಕರ್, ಎನ್.ರಾಮು.ಹಿರೇಗುತ್ತಿ, ಮಹಾದೇವ ಗೌಡ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ, ಜಾನಕಿ.ಎಮ್.ಗೊಂಡ, ಶಿಲ್ಪಾ ನಾಯಕ, ಕವಿತಾ ಅಂಬಿಗ, ಮದನ ನಾಯಕ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಹಾಗೂ ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಶಿಕ್ಷಕರಾದ ಸುಮನ್ ಫರ್ನಾಂಡೀಸ್, ನಾಗರತ್ನ, ಮಂಗಲಾ, ಸ್ವಾತಿ, ಶಶಿಕಲಾಉಪಸ್ಥಿತರಿದ್ದರು.
ಕಾರ್ಯಕ್ರಮವು ಸಿಂಚನ ಸಂಗಡಿಗರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ಎನ್.ವಿ.ಶ್ರೀನಾಗ ಸರ್ವರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ನಿರೀಕ್ಷಾ ನಾಯಕ ಕಾರ್ಯಕ್ರಮದ ನಿರೂಪಣೆ ಮಾಡಿದರು. ರಜತ ನಾಯಕ ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪ್ರಭಾತಪೇರಿ, ಘೋಷಣೆ ನಡೆದವು. ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿಯನ್ನು ಹಂಚಲಾಯಿತು. ಗಣರಾಜ್ಯೋತ್ಸವದ ಸವಿಯನ್ನು ಅನುಭವಿಸಿದರು.
