ಗ್ರಾಮ ಪಂಚಾಯತ ಹಿರೇಗುತ್ತಿಯಲ್ಲಿ ಸಂಭ್ರಮದ ೭೬ ಗಣರಾಜ್ಯೋತ್ಸವ ಧ್ವಜಾರೋಹಣ
ಕುಮಟಾ : ಗ್ರಾಮಪಂಚಾಯತ ಅಧ್ಯಕ್ಷರಾದ ಶ್ರೀ ಶಾಂತಾ ಎನ್ ನಾಯಕ ಇವರು ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ “ಗಣರಾಜ್ಯೋತ್ಸವದ ಧ್ಯೇಯೋದ್ದೇಶಗಳನ್ನು, ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು”.
ಹಿರೇಗುತ್ತಿಯ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ವೆಂಕಮ್ಮ ಹರಿಕಂತ್ರ, ಸದಸ್ಯರಾದ ನಾಗರತ್ನ ಉಮೇಶ ಗಾಂವಕರ, ಇನಾಸ್ ಫ್ರಾನ್ಸಿಸ್ ಫರ್ನಾಂಡೀಸ್, ಮಹೇಶ ನಾಯಕ, ಆನಂದು ನಾಯಕ, ರಮಾಕಾಂತ ಹರಿಕಂತ್ರ, ಮಾದೇವಿ ಹಳ್ಳೇರ, ಮಂಗಲಾ ಹಳ್ಳೇರ, ಸವಿತಾ ಹಳ್ಳೇರ ಹಾಗೂ ಕಾರ್ಯದರ್ಶಿ ಸಂಧ್ಯಾ ಎಮ್ ಗಾಂವಕರ, ಶ್ವೇತಾ ಹಿಲ್ಲೂರು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು, ಪ್ರಾಥಮಿಕ, ಹೈಸ್ಕೂಲ್, ಕಾಲೇಜಿನ ಅಧ್ಯಾಪಕ ವೃಂದದವರು, ಗಣ್ಯ ವ್ಯಕ್ತಿಗಳು, ಊರ ನಾಗರಿಕರು, ಗ್ರಾಮ ಪಂಚಾಯತ ಸಿಬ್ಬಂದಿಗಳು, ಶ್ರೀ ಬ್ರಹ್ಮಜಟಕ ಯುವಕ ಸಂಘದವರು ಹಾಜರಿದ್ದರು.
ಹಿ.ಪ್ರಾ.ಶಾಲೆ ಮತ್ತು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾಥಿಗಳು ಧ್ವಜವಂದನೆ ಸಲ್ಲಿಸಿದರು. ಊರಿನೆಲ್ಲೆಡೆ ಹಬ್ಬದ ವಾತಾವರಣ ಉಂಟಾಯಿತು. ಪ್ರಾರಂಭದಲ್ಲಿ ಸೆಕೆಂಡರಿ ಹೈಸ್ಕೂಲಿನ ವಿದ್ಯಾರ್ಥಿನಿ ಸಿಂಚನ ಸಂಗಡಿಗರು ಧ್ವಜಗೀತೆ, ವಂದೇಮಾತರA ಹಾಡಿದರು. ಎಲ್ಲರಿಗೂ ಸಿಹಿ ವಿತರಿಸಲಾಯಿತು.
