ಕುಮಟಾ: ಸರಕಾರಿ ಪದವಿಪೂರ್ವ ಕಾಲೇಜು ಹಿರೇಗುತ್ತಿ ೨೦೨೪-೨೫ ರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕಾಲೇಜ್ ಅಭಿವೃದ್ಧಿ ಸಮಿತಿ ಮತ್ತು ಬ್ರಹ್ಮಜಟಕ ಯುವಕ ಸಂಘದ ವತಿಯಿಂದ ಹಿರೇಗುತ್ತಿ ಪದವಿಪೂರ್ವ ಕಾಲೇಜ್ ೨೦೨೩-೨೪ನೇ ಸಾಲಿನಲ್ಲಿ ಕಾಲೇಜಿನ ಫಲಿತಾಂಶ ಶೇಕಡಾ ೧೦೦ ಕ್ಕೆ ೧೦೦ ಆಗಲು ಕಾರಣೀಕರ್ತರಾದ ೨೦೨೩-೨೪ನೇ ಸಾಲಿನ ಪ್ರಬಾರಿ ಪ್ರಾಂಶುಪಾಲರಾದ ನಾಗರಾಜ ವಿ ಗಾಂವಕರ ಹಾಗೂ ಉಪನ್ಯಾಸಕರಾದ ನೇತ್ರಾವತಿ ನಾಯಕ, ಸುಜಾತಾ ನಾಯಕ, ವಿಜಯಲಕ್ಷ್ಮಿ ಗಾಂವಕರ, ಶಾರದಾ ನಾಯಕ, ರಮೇಶ ಗೌಡ, ಶೀಲಾ ನಾಯ್ಕ, ಸೀಮಾ ಪಿ.ಪಿ, ಮಹಾಲಕ್ಷ್ಮಿ ಭಂಡಾರಿ, ವಿನಯಾ ಗೌಡ, ಮಧುರಾ ಗೌಡರವರಿಗೆ ಶಾಸಕರಾದ ದಿನಕರ ಕೇ ಶೆಟ್ಟಿಯವರಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಾಡ ಕಾಲೇಜ್ ಪ್ರಾಂಶುಪಾಲರಾದ ಮೋಹನ ನಾಯಕ, ಹಿರೇಗುತ್ತಿ ಪ್ರಿನ್ಸಿಪಾಲ್ ರಾಜೀವ, ಸುನೀಲ್ ಪೈ, ರಾಜೀವ ಗಾಂವಕರ, ಪ್ರೇಮಾನಂದ ಗಾಂವಕರ, ಬೊಮ್ಮಯ್ಯ ಬೊಮ್ಮನ್, ರಾಮು ಕೆಂಚನ್, ಹಿರೇಗುತ್ತಿ ಗ್ರಾ.ಪಂ ಸದಸ್ಯರಾದ ಮಹೇಶ ನಾಯಕ ಮೊರಬಾ, ಆನಂದ ನಾಯಕ ಹಾಗೂ ಮಹೇಶ(ಬಾಬು) ನಾಯಕ, ಎನ್ ರಾಮು ಹಿರೇಗುತ್ತಿ, ಬಾಲಚಂದ್ರ ಅಡಿಗೋಣ, ವೆಂಕಟ್ರಾಯ ನಾಯಕ, ಉದ್ದಂಡ ಗಾಂವಕರ, ಸುರೇಂದ್ರ ನಾಯಕ, ದೇವಿದಾಸ ನಾಯಕ, ಬ್ರಹ್ಮಜಟಕ ಯುವಕ ಸಂಘದ ಅಧ್ಯಕ್ಷ ಕಿಟ್ಟು ನಾಯಕ, ಉಪಾಧ್ಯಕ್ಷ ಆಕಾಶ ನಾಯಕ, ಕಾರ್ಯದರ್ಶಿ ಪ್ರೀತಮ್ ಗಾಂವಕರ, ಸುಭಾಸ್ ನಾಯಕ, ಉಪಸ್ಥಿತರಿದ್ದರು
