ಕಾಳಗಿ: ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದಲ್ಲಿ ಬಸವೇಶ್ವರ ಮೂರ್ತಿಗೆ ಅಪಮಾನ ಮಾಡಿರುವದು ಹಾಗೂ ಜೇವರ್ಗಿಯ ಕುಮಾರಿ ಲಕ್ಷ್ಮೀ ರವರಿಗೆ ಲವ್ ಜಿಹಾದ್ ಮೂಲಕ ಬಲಿ ಪಡೆದಿರುವದನ್ನು ಖಂಡಿಸಿ ಜ. 22ರಂದು ಕಾಳಗಿ ಪಟ್ಟಣ ಸಂಪೂರ್ಣವಾಗಿ ಬಂದ ಮಾಡವ ಮೂಲಕ ಪ್ರತಿಭಟನೆ ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ವೀರಶೈವ ಲಿಂಗಾಯತ ಸಮಾಜ ಯುವ ಅಧ್ಯಕ್ಷ ಮಂಜುನಾಥ ಬೇರನ್ ಹೇಳಿದರು.
ಪಟ್ಟಣದ ವೀರಶೈವ ಕಾರ್ಯಲಯದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದ ಬಸವೇಶ್ವರ ಸರ್ಕಲನಿಂದ ಪ್ರತಿಭಟನೆ ಮೆರವಣಿಗೆಯನ್ನು ಹಳೆ ಬಸಸ್ಟ್ಯಾಂಡ್ ನಿಂದ ನೇರವಾಗಿ ಡಾ.ಬಾಬ ಸಾಹೇಬ್ ಅಂಬೇಡ್ಕರ್ ಸರ್ಕಲನಲ್ಲಿ ತಹಸೀಲ್ದಾರ್ ಘಮಾವತಿ ರವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ನೀಡುತ್ತೆವೆ ಎಂದು ತಿಳಿಸಿದರು. ಈ ಪ್ರತಿಭಟನೆ ಹೋರಾಟದಲ್ಲಿ ಸಮಸ್ತ ವೀರಶೈವ ಲಿಂಗಾಯತ ಸಂಘಟನೆಗಳು ಹಾಗೂ ವಿವಿಧ ಸಂಘಟನೆ ಭಾಗಿಯಾಗುತ್ತಾರೆ ಎಂದು ಕನಸಿನ ಭಾರತ ಪತ್ರಿಕೆಗೆ ಮಾಹಿತಿ ನೀಡಿದರು.