ಬೆಳಗಾಂವ ಜಿಲ್ಲಾ ರಾಮದುರ್ಗ ತಾಲೂಕಿಗೆ ಪೊಲೀಸ್ ಇಲಾಖೆಯ ಪ್ರ ಪ್ರಥಮವಾಗಿ ಮಹಿಳಾ ಪಿಎಸ್ಐ ರವರು ರಾಮದುರ್ಗ ತಾಲೂಕಿಗೆ ಬಂದಿದ್ದು, ಗ್ರಾಮೀಣ ಜನತೆ ಮಹಿಳೆಯರು ಹಾಂ ಹೌದಾ ಅಂತಾ ಮಾತನಾಡುತ್ತಿದ್ದು, ಗ್ರಾಮೀಣ ಜನತೆಗೆ ಇದು ಆಶ್ಚರ್ಯಕರ ವಿಷಯವಾಗಿದೆ, ಹೌದು ಮಹಿಳೆಯರು ಯಾವುದರಲ್ಲಿ ನಾವು ಕಡಿಮೆ ಇಲ್ಲ ಎಂದು ಪೋಲಿಸ್ ಇಲಾಖೆ. ಅರಣ್ಯ ಇಲಾಖೆ. ಜಿಲ್ಲಾಧಿಕಾರಿಗಳಾಗಿ. ನ್ಯಾಯಾಧೀಶರಾಗಿ. ಕೆ ಎಸ್ ಆರ್ ಟಿ ಸಿ ಕಂಡಕ್ಟರ. ಡ್ರೈವರ್ ಗಳಾಗಿ. ಸರಕಾರಿ ಇಲಾಖೆ ಎಲ್ಲಾ ಹುದ್ದೆಗೆ ಸೈಯನ್ನುತ್ತಿದ್ದಾರೆ. ಈ ಸದ್ಯದಲ್ಲೇ ನಮ್ಮದೇಶ ಕಾಯುವ ಸೈನಿಕರು ಆಗುತ್ತಿದ್ದಾರೆ ಇದು ಜನತೆಗೆ ಹೆಮ್ಮೆಯ ವಿಷಯ, ಮತ್ತು ಮಹಿಳಾ ವಿದ್ಯಾರ್ಥಿನಿಯರಿಗೆ ಸ್ಪೂರ್ತಿದಾಯಕ ಎನ್ನಬಹುದು ಇದೇ ತರಹ ಎಲ್ಲಾ ಹೆಣ್ಣು ಮಕ್ಕಳು ಒಳ್ಳೆಯ ಗುಣದಿಂದ ಒಳ್ಳೆಯ ತರಹ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಯಲ್ಲಿ ಸೇರಿದರೆ ಪಾಲಕರಿಗೆ ಸಂತೋಷಕರ ವಿಷಯ, ಸಾರ್ವಜನಿಕರಿಗೆ ಆಶ್ಚರ್ಯಕರ ವಿಷಯ ವಾಗುತ್ತದೆ ಇದು ಸಹಜವಾಗಿ ಕಾಣುತ್ತದೆ, ಚಿಲಮೂರ ಗ್ರಾಮದ ಪ್ರಮುಖರಾದ ರಾಮಚಂದ್ರ ಹುಚ್ಚ ಕೆಂಚನವರ. ಪಾಂಡುರಂಗ ಕಲ್ಲೇಶಿ. ಲಕ್ಷ್ಮಣ್ ಮಾದರ್. ಪ್ರಕಾಶ್ ಮಂತ್ರನ್ನವರ. ರಾಮಚಂದ್ರ ಹ ಕುಕಡಿ.ಯವರು ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ತಮ್ಮ ಗ್ರಾಮದ ಕಾರ್ಯಕ್ರಮಕ್ಕೆ ಬರಲು ಆಹವಾನ ನೀಡಿ ನೀವು ನಮ್ಮ ಗ್ರಾಮದ ಶಾಲೆಯ ಕಾರ್ಯ ಕ್ರಮಕ್ಕೆ ಬಂದರೆ ನಮ್ಮ ಗ್ರಾಮದ ಶಾಲಾ ಮಕ್ಕಳಿಗೆ ನೀವು ಸ್ಪೂರ್ತಿ ದಾಯಕ್ ಆಗುತ್ತಿರಿ ಎಂದಾಗ. ಅದಕ್ಕೆ ಓಗೊಟ್ಟು ಖಂಡಿತಾ ಬರುತ್ತೇನೆ ಎಂದು ಭರವಸೆ ಕೊಟ್ಟರು.
