ನಿರಂತರ ಶಿಕ್ಷಣದ ಅಭ್ಯಾಸ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆ- ಡಾ. ದಿನೇಶ್ ಗಾಂವಕರ ಕುಮಟಾ: “ಅಂತರಂಗದ ಅರಿವನ್ನ ಜಾಗೃತಗೊಳಿಸುವಲ್ಲಿ ಶಿಕ್ಷಣದ ಪಾತ್ರ ಮತ್ತು ಶಿಕ್ಷಣವು ಶೈಕ್ಷಣಿಕ ಗುಣಮಟ್ಟ, ಸಾಮಾಜಿಕ ಕಳಕಳಿ, ಆಧ್ಯಾತ್ಮಿಕ ತರಬೇತಿ ಹಾಗೂ ಉತ್ತಮ ಕ್ರಿಯೆ, ಹವ್ಯಾಸಗಳನ್ನು ಬಳಸಿಕೊಂಡಾಗ ವ್ಯಕ್ತಿ ಯಶಸ್ವಿನ ಹಾದಿಯಲ್ಲಿ ಸಾಗಲು ಸಾಧ್ಯ ಹಾಗೂ ರಾಷ್ಟ್ರೀಯ ಶಿಕ್ಷಣನೀತಿ ಅದರ ಮುಖ್ಯ ಅಂಶಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದು ಪ್ರಮುಖ ಆದ್ಯತೆಯಾಗಬೇಕು ಎಂದು ಡಾ. ದಿನೇಶ್ ಎಮ್ ಗಾಂವಕರ ಆಡಳಿತಾಧಿಕಾರಿಗಳು ಆರ್.ಎನ್.ಎಸ್ ಶಿಕ್ಷಣ ಸಮೂಹ ಸಂಸ್ಥೆ ಮುರ್ಡೇಶ್ವರ ಪ್ರಾಂಶುಪಾಲರು ಪ್ರಥಮದರ್ಜೆ ಕಾಲೇಜು ಮುರ್ಡೆಶ್ವರ ನುಡಿದರು.
ಮೀಡಿಯಂ ಸ್ಕೂಲ್
ಅವರು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಹಾಗೂ ಮಹಾತ್ಮಾಗಾಂಧಿ ಇಂಗ್ಲೀಷ್ ಹಿರೇಗುತ್ತಿಯಲ್ಲಿ ನಡೆದ 2024-2025 ರ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ “ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ಕಲಿಕೆಯ ವಾತಾವರಣ ಉತ್ತಮವಾಗಿದೆ. ಸಮುದಾಯದ ಸಹಭಾಗಿತ್ವವಿದೆ. ಈ ಹೈಸ್ಕೂಲ್ ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ” ಎಂದರು.
ವಿಜ್ಞಾನ ವಸ್ತುಪ್ರದರ್ಶನದ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶಾಂತಾ ಎನ್ ನಾಯಕರು “ಸಾಮಾಜಿಕವಾಗಿ ಉತ್ತಮ ವ್ಯಕ್ತಿತ್ವ ಹೊಂದಿ ಸಮಾಜದ ಉತ್ತಮ ಪ್ರಜೆಯಾಗಲು ಪ್ರಯತ್ನಿಸಬೇಕು ಕೇವಲ ಅಂಕಗಳಿಕೆಗಾಗಿ ಶಿಕ್ಷಣವಿರದೇ ಜೀವನಕ್ಕಾಗಿ, ಸಮಾಜದ ವಿಕಸನಕ್ಕಾಗಿ ಶಿಕ್ಷಣವಿರಬೇಕು” ಎಂದರು.
ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ಎಸ್ ನಾಯಕ ಮಾತನಾಡಿ “ಹೈಸ್ಕೂಲ್ ಸ್ಥಾಪನೆಯಲ್ಲಿ ಅವಿರತವಾಗಿ ಪ್ರಯತ್ನಿಸಿದ ಊರಿನ ಎಲ್ಲಾ ಹಿರಿಯರನ್ನು ಸ್ಮರಿಸಿದರು. ಹಾಗೂ ಹೈಸ್ಕೂಲಿನ ಈ ಎಲ್ಲಾ ಸಾಧನೆಗಳಿಗೆ ಎಲ್ಲಾ ಶಿಕ್ಷಕರ ಸಹಕಾರ ಅತಿಮುಖ್ಯವಾಗಿದೆ ಸೆಕೆಂಡರಿ ಹೈಸ್ಕೂಲಿನಲ್ಲಿ ಸುಮಾರು 277 ವಿದ್ಯಾರ್ಥಿಗಳು ಹಾಗೂ ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲಿ 85 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಕಲಿಕೆಗೆ ಉತ್ತಮ ವಾತಾವರಣ ಒದಗಿಸಲಾಗಿದೆ.” ಎಂದರು.
ಶ್ರೀ ಸುನೀಲ್ ಪೈ ಧರ್ಮದರ್ಶಿಗಳು ಶ್ರೀ ಮಹಾಲಸಾ ಸಿದ್ಧಿ ವಿನಾಯಕ ಟೆಂಪಲ್ ಟ್ರಸ್ಟ್ ಮಾದನಗೇರಿ ಮಾತನಾಡಿ “ತನ್ನ ಜೀವನದ ಪರಿವರ್ತನೆಯ ಸ್ಥಳ ಈ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಗುರಿ ಮುಟ್ಟಲು ನಂಬಿಕೆ, ದೃಢತೆ ಇರುವುದು ಅವಶ್ಯಕ ಎನ್ನುತ್ತಾ ಬಾಲ್ಯದ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು.
ಹಿರೇಗುತ್ತಿ ಪಿ.ಯು ಕಾಲೇಜ್ ಪ್ರಾಂಶುಪಾಲರಾದ ರಾಜೀವ ನಾಯ್ಕ ಮಾತನಾಡಿ “Think Positive Be Happy” ಧನಾತ್ಮಕವಾಗಿ ಯೋಚಿಸಿ ಆನಂದದಿಂದಿರಿ” ಗುರಿಯ ಸಫಲತೆಯಲ್ಲಿ ಅವಿರತ ಪ್ರಯತ್ನ ಮುಖ್ಯ” ಎಂದರು.ಶ್ರೀ ನಾಗೇಶ ನಾಯಕ ಸದಸ್ಯರು ಹಾಗೂ ಉದ್ದಂಡ ಬಿ ಗಾಂವಕರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ವಿಜ್ಞಾನ ಶಿಕ್ಷಕ ಮಹಾದೇವ ಬಿ ಗೌಡ, ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಶಿಕ್ಷಕ ರತ್ನ ಪ್ರಶಸ್ತಿ ಪಡೆದ ನಾಗರಾಜ ಜಿ ನಾಯಕ ಹಾಗೂ ರಾಜ್ಯ ಗುರುಶ್ರೇಷ್ಠ ಪ್ರಶಸ್ತಿ ಪಡೆದ ರಾಮಕೃಷ್ಣ ಎನ್ ನಾಯಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇವಕಿ ಮಂಜುನಾಥ ಗೌಡ, ಶಿವಾನಿ ಕೃಷ್ಣ ಗೌಡ, ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಶಮಿತಾ ವಿ ಪಟಗಾರ, ಧ್ರುವ ಎಸ್ ಗೌಡ, ಪ್ರೀತಮ್ ಎಸ್ ಪಾಲನಕರ್ ಇವರಿಗೆ ಸನ್ಮಾನ ಮಾಡಲಾಯಿತು. ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ, ಸೆಕ್ರೆಟರಿ ಮೋಹನ ಬಿ ಕೆರೆಮನೆ, ಸದಸ್ಯರಾದ ಮೋಹನ ಗಾಂವಕರ, ಭಾಗೀರಥಿ ಹಳ್ಳೇರ, ಹಿರೇಗುತ್ತಿ ಪದವಿಪೂರ್ವ ಕಾಲೇಜ್ ಹಿರಿಯ ಉಪನ್ಯಾಸಕರಾದ ನಾಗರಾಜ వి ಗಾಂವಕರ, ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಮುಖ್ಯಾಧ್ಯಾಪಕಿ ಸುಮನ್ ಫರ್ನಾಂಡಿಸ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಿಂಚನಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಹಾಗೂ ಚರಣ ನಾಯ್ಕ ಯಕ್ಷನೃತ್ಯದ ಮೂಲಕ ಪ್ರಾರಂಭವಾಯಿತು. ವಾರ್ಷಿಕ ವರದಿ ವಾಚನವನ್ನು ಶಿಕ್ಷಕಿ ಜಾನಕಿ ಗೊಂಡ ವಾಚಿಸಿದರು. ಸುಮನ್ ಫರ್ನಾಂಡೀಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಶಿಕ್ಷಕಿ ಬಹುಮಾನ ವಿತರಣಾ ಯಾದಿ ವಾಚಿಸಿದರು. ಎಸ್.ಎಸ್.ಎಲ್.ಸಿ ಬಹುಮಾನ ವಿಜೇತರ ಯಾದಿ ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ ಹಾಗೂ ಕ್ರೀಡಾ ವಿಭಾಗದ ಬಹುಮಾನ ವರದಿಯನ್ನು ದೈಹಿಕ ಶಿಕ್ಷಕರಾದ ನಾಗರಾಜ ಜಿ ನಾಯಕ ಮತ್ತು ಸಹಪಠ್ಯ ಚಟುವಟಿಕೆಗಳ ಬಹುಮಾನ ವರದಿಯನ್ನು ಬಾಲಚಂದ್ರ ಅಡಿಗೋಣ ವಾಚಿಸಿದರು.
ಮುಖ್ಯಾಧ್ಯಾಪಕರಾದ ಶ್ರೀ ರೋಹಿದಾಸ ಗಾಂವಕರ ಸರ್ವರನ್ನು ಸ್ವಾಗತಿಸಿದರು. ಎನ್ ರಾಮು ಹಿರೇಗುತ್ತಿ ನಿರೂಪಿಸಿದರು. ಮಹಾದೇವ ಗೌಡ ವಂದಿಸಿದರು. ಕಾರ್ಯಕ್ರಮದಲ್ಲಿ ಚಂದ್ರಹಾಸ ನಾಯಕ, ರಾಮು ಕೆಂಚನ್, ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್, ಇಂದಿರಾ ಬಿ ನಾಯಕ, ಶಿಲ್ಪಾ ನಾಯಕ, ಬಾಲಚಂದ್ರ ಅಡಿಗೋಣ, ಕವಿತಾ ಅಂಬಿಗ, ಮದನ ನಾಯಕ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಮತ್ತು ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಶಿಕ್ಷಕರಾದ ಮಂಗಲಾ, ನಾಗರತ್ನ, ಸ್ವಾತಿ, ವಿಶಾಲಾಕ್ಷಿ, ಶಶಿಕಲಾ ಪುಷ್ಪಾ ಉಪಸ್ಥಿತರಿದ್ದರು. ನಂತರ ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ಸೆಕೆಂಡರಿ ಹೈಸ್ಕೂಲ್ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.
