ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕು ನಾಯಕ ಸಂಘ ರಿ ಆಹ್ವಾನದ ಮೇರೆಗೆ ಮಹರ್ಷಿ ವಾಲ್ಮೀಕಿ ನಾಯಕ ಚಾರಿಟೇಬಲ್ ಟ್ರಸ್ಟ್ ನ ಗೌರವ ಸಲಹೆಗಾರರಾದ ಶ್ರೀ ಎಂ.ಅಪ್ಪಣ್ಣ ಅವರು ಸಭೆಗೆ ಭಾಗವಹಿಸಿದಾಗ ಸಂಘದ ಪದಾಧಿಕಾರಿಗಳು ಜೊತೆ ಸಭೆ ನಡೆಸಿದರು. ಅಧ್ಯಕ್ಷರಾದ ಸಿ.ಸಿ ಮಹದೇವ್ ಅವರು ಸಭೆಯಲ್ಲಿ ಈ ಕೆಳಕಂಡ ವಿಷಯಗಳನ್ನು ಮಂಡಿಸಿದರು ಸಾಲಿಗ್ರಾಮ ತಾಲ್ಲೂಕು ವಾಲ್ಮೀಕಿ ಭವನ ನಿರ್ಮಾಣ ಮಾಡಲು ತಾಲ್ಲೂಕು ಆಡಳಿತ ಕಳೆದ ಐದಾರು ವರ್ಷಗಳಿಂದ ಜಮೀನು ಮಂಜೂರು ಮಾಡದೆ ವಿಳಂಬ ಮಾಡುತ್ತಿರುವ ಬಗ್ಗೆ ,ಸಮಾಜದ ಸಂಘಟನೆ ಮಾಡುವ ವಿಚಾರ , ಪ್ರತಿ ಗ್ರಾಮದಲ್ಲಿ ಸಂಘಕ್ಕೆ ಸದಸ್ಯತ್ವ ಮಾಡುವ ವಿಚಾರ,ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆ ಬಗ್ಗೆ ಮಂಡಿಸಿದರು ಶ್ರೀ ಎಂ.ಅಪ್ಪಣ್ಣ ಅವರು ಎಲ್ಲಾ ವಿಚಾರಗಳನ್ನು ಚರ್ಚಿಸಿ ಕೆಲವು ಸಲಹೆಗಳನ್ನು ನೀಡಿದರು.
ಪ್ರಮುಖವಾಗಿ ಸಾಲಿಗ್ರಾಮ ತಾಲ್ಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಕಳೆದ ಐದಾರು ವರ್ಷಗಳಿಂದ ತಾಲ್ಲೂಕು ಆಡಳಿತ ನಿವೇಶನ ನೀಡಲು ವಿಳಂಬ ಮತ್ತು ತಾರತಮ್ಯ ಮಾಡಿರುವ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ ,ತಾಲ್ಲೂಕು ಆಡಳಿತಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ,ತಹಶಿಲ್ದಾರರಿಗೆ ಹಾಗೂ ಶಾಸಕರಾದ ಶ್ರೀ ರವಿಶಂಕರ್ ಅವರಿಗೆ ದೂರವಾಣಿ ಕರೆ ಮಾಡಿ ನಿವೇಶನ ನೀಡದಿರುವ ಬಗ್ಗೆ ಹಾಗೂ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಶೀಘ್ರವಾಗಿ ನಿವೇಶನ ಮಂಜೂರು ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಶಿಪಾರಸ್ಸು ಮಾಡಿ ಸಮಾಜದ ಅಭಿವೃದ್ಧಿ ಸಹಕರಿಸಬೇಕೆಂದು ತಿಳಿಸಿದರು.
ಸಾಲಿಗ್ರಾಮ ತಾಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷರ ತಂಡ ಮಾಡುತ್ತಿರುವ ಕಾರ್ಯಕ್ರಮಗಳು ರಾಜ್ಯ ನಾಯಕರ ಗಮನಸೆಳೆದಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷರಾದ ದೇವರಾಜ್ ಟಿ.ಕಾಟೂರು, ಸಾಲಿಗ್ರಾಮ ತಾಲೂಕು ಸಂಘದ ಅಧ್ಯಕ್ಷರಾದ ಸಿ.ಸಿ.ಮಹದೇವ್, ಉಪಾಧ್ಯಕ್ಷ ತಂದ್ರೆ ವೆಂಕಟೇಶನಾಯಕ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.