ಹೊನ್ನಾವರ- ಮುರುಡೇಶ್ವರ ಜಾತ್ರೆ ಮುಗಿಸಿ ಮನೆಗೆ ಬರುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕಿನಲ್ಲಿ ಹಿಂದೆ ಕೂತಿದ್ದ ಪೂಜಾ ಗೌಡ ಸಾವನಪ್ಪಿದ್ದಾರೆ.
ಹೊನ್ನಾವರದ ಅಪ್ಪಿಕೆರಿ ನಿವಾಸಿಯಾದ ಪೂಜಾ ಗೌಡ ಹಾಗೂ ಸುರೇಶ ಗೌಡ ಭಾನುವಾರ ಮುರುಡೇಶ್ವರ ಜಾತ್ರೆಗೆ ತೆರಳಿದ್ದರು. ಜಾತ್ರೆ ಮುಗಿಸಿ ಸೋಮವಾರ ಮರಳಿ ಬರುವಾಗ ಹೊನ್ನಾವರ ಬಳಿಯ ಶರಾವತಿ ಸೇತುವೆಯಲ್ಲಿ ಹಿಂಬದಿಯಿಂದ ಬರುತ್ತಿದ್ದ ಕಾರು ಬೈಕ್ ಗೆ ಡಿಕ್ಕಿಯಾದ ಪರಿಣಾಮ ಕಾರು ಮತ್ತೆ ಬೈಕ್ ಜಾಖಂಗೊಂಡಿದೆ ಸುರೇಶ ಗೌಡ ಬೈಕಿನಿಂದ ಹಾರಿ ಕೆಳಗೆ ಬಿದಿದ್ದು ಪೂಜಾ ಗೌಡ ಸಹ ನೆಲಕ್ಕೆ ಅಪ್ಪಳಿಸಿ ತಲೆಗೆ ಗಂಭೀರ ಗಾಯವಾಗಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
