ಯಲ್ಲಾಪುರ : ರಾ. ಹೆ 63 ರ ಹುಬ್ಬಳ್ಳಿ ಅಂಕೋಲಾ ಮಾರ್ಗ ಮಧ್ಯೆ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅರೇಬೈಲ್ ಘಾಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ , ಪ್ರಪಾತಕ್ಕೆ ಬಿದ್ದ ಲಾರಿಯಲ್ಲಿದ್ದ ಸುಮಾರು 9 ಜನರು ಸ್ಥಳದಲ್ಲಿ ಮೃತಪಟ್ಟರೆ , 14 ಕ್ಕೂ ಹೆಚ್ಚು ಜನರು
ಗಾಯಕೊಂಡಿದ್ದಾರೆ
ಹಾವೇರಿ ಜಿಲ್ಲೆಯ ಶಿಗ್ಗಾಂವ – ಸವಣೂರು ಕಡೆಯಿಂದ ಉತ್ತರ ಕನ್ನಡದ ಜಿಲ್ಲೆಯ ಕುಮಟಾದಲ್ಲಿ ನಡೆಯವ ಬುಧವಾರದ ಸಂತೆ ವ್ಯಾಪಾರಕ್ಕಾಗಿ , ಹಣ್ಣು -ತರಕಾರಿ ಮಾರಾಟಗಾರರು ಮಾಲು ಸಮೇತ ಒಂದೇ ಲಾರಿಯಲ್ಲಿ ಬರುತ್ತಿದ್ದಾಗ ದಾರಿ ಮಧ್ಯೆ ಭೀಕರ ದುರಂತ ಸಂಭವಿಸಿದೆ.
ಚಾಲಕನಿಗೆ ಲಾರಿಯೂ ನಿಯಂತ್ರಣ ತಪ್ಪಿದ್ದು ಅರೇಬೈಲ್ ಘಾಟ್ ಬಳಿ ಲಾರಿಯು ಹೆದ್ದಾರಿ ಅಂಚಿನ, ಇಳಿಜಾರಿನಲ್ಲಿ ಪಲ್ಟಿಯಾಗುತ್ತ ಬಹುದೂರ ಸಾಗಿದ್ದು ,ಲಾರಿಯಲ್ಲಿದ್ದಜನರ ಮೇಲೆ ತರಕಾರಿಯ ಬಾಕ್ಸ್ ಗಳು ಬಿದಿದ್ದು ಹಣ್ಣು ತರಕಾರಿ ಬಾಕ್ಸ್ ಗಳು ಚೆಲ್ಲಾಪಿಲ್ಲಿಯಾಗಿಯಾಗಿವೆ
ಈ ಭೀಕರ ದುರಂತದಲ್ಲಿ 9 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು , ಒಬ್ಬರು ಹಾಸ್ಪಿಟಲ್ ಗೆ ರವಾನಿಸುವಾಗ ಅರ್ಧ ದಾರಿಯಲ್ಲಿ ಮೃತ ಪಟ್ಟಿದ್ದಾನೆ ಎನ್ನಲಾಗಿದೆ.14ಕ್ಕೂ ಹೆಚ್ಚು ಗಾಯಾಳುಗಳನ್ನು ಚಿಕಿತ್ಸೆಗಾಗಿ ಯಲ್ಲಾಪುರ ತಾಲೂಕ ಆಸ್ಪತ್ರೆಗೆ ದಾಖಲಿಸಲಾಗಿದೆ ಲಾರಿಯಲ್ಲಿ ಸುಮಾರು 30 ಜನರು ಇದ್ದರು ಎನ್ನಲಾಗಿದೆ.ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲಿನೆ ಕಾರ್ಯ ಮುಂದುವರಿಸಿದ್ದಾರೆ.
