ಸಂತ ಲಾರೆನ್ಸ್ ಬಸಿಲಿಕ ಅತ್ತೂರು ವಾರ್ಷಿಕ ಮಹೋತ್ಸವಕ್ಕೆ ಚಾಲನೆ ಹಾಗೂ ಸಂತ ಸಾಬೆಸ್ಟಿಯನ್ ನರ ಹಬ್ಬದ ಆಚರಣೆ. ದಿನಾಂಕ 19 -01- 2025 ಭಾನುವಾರ ಬೆಳಿಗ್ಗೆ 7. 30ಕ್ಕೆ ದಿವ್ಯ ಬಲಿ ಪೂಜೆಯ ಮೂಲಕ ಸಂತ ಸೇಬಶ್ಚಿಯನರಾ ಹಬ್ಬವನ್ನು ಆಚರಿಸಲಾಯಿತು. ಕಲ್ಯಾಣಪುರ ಚರ್ಚ್ ನಾ ವಂದನೀಯ ಡಾ ಜೇನ್ಸಿಲ್ ಆಳ್ವಾ ಪ್ರಧಾನ ಗುರುಗಳಾಗಿ. ಪೂಜೆಯನ್ನು ನೆರವೇರಿಸಿದರು. ತದನಂತರ ಸಂತ ಸಬ್ಬಾಸ್ಟಿಯಾನರ ಪ್ರತಿಮೆಯಾನು ಮೆರವಣಿಗೆಯಲ್ಲಿ ತಂದು ಆಶೀರ್ವಚನವನ್ನು ನೀಡಲಾಯಿತು. ತದನಂತರ ನಡೆದ ಕಾರ್ಯಕ್ರಮದಲ್ಲಿ ಸ್ವಂತ ಲಾರೆನ್ಸರ ವಾರ್ಷಿಕ ಮಹೋತ್ಸವಕ್ಕೆ ಅಧಿಕೃತ ಚಾಲನೆಯನ್ನು ನೀಡಲಾಯಿತು. ಉದ್ಘಾಟಕರಾಗಿ ವಂದನೀಯ ಡಾ ಜೇನ್ಸಿಲ್ ಆಳ್ವಾ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರದ ಪ್ರಧಾನ ಧರ್ಮ ಗುರು ವಂದನಿಯಾ ಆಲ್ಬನ್ ಡಿಸೋಜ, ಸಹಾಯಕ ಧರ್ಮ ಗುರುಗಳಾದ ಲ್ಯಾರಿ ಪಿಂಟೊ, ಆಧ್ಯಾತ್ಮಿಕ ಧರ್ಮ ಗುರುಗಳಾದ ರೋಮನ್ ಮಸ್ಕೇರೆನ್ಹಸ್, ಉಪ ಯಜಕ ವಲೇಶ್ ಆರಾನ್ಹ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಕಾರ್ಯದರ್ಶಿ ರೋನಾಲ್ಡ್ ನೋರೊನ್ಹ, 20 ಆಯೋಗದ ಸಂಚಾಲಕರಾದ ಶ್ರೀಮತಿ ಬೆನ್ನಡಿಕ್ಟ ನೋರೊನ್ಹ, ಇವರು ದೀಪ ಬೆಳಗಿಸುವ ಮೂಲಕ ವಾರ್ಷಿಕ ಹಬ್ಬಕ್ಕೆ ಚಾಲನೆಯನ್ನು ನೀಡಿದರು. ತದನಂತರ ಮಾತನಾಡಿದ ವಂದನೀಯ ಡಾ ಜೇನ್ಸಿಲ್ ಆಳ್ವಾ ಮಾತನಾಡಿದ ಸಂತ ಲಾರೆನ್ಸರ ಹಬ್ಬ ಅನೇಕ ವರ್ಷಗಳಿಂದ ಅನೇಕ ಭಕ್ತಾದಿಗಳನ್ನು ಜಾತಿ ಮತ ಧರ್ಮ ಬೇಯುತವಿಲ್ಲದೆ ಆಚರಣೆ ಮಾಡಲಾಗುತ್ತದೆ ಸಂತ ಲಾರೆನ್ಸರು ಅನೇಕ ಆಶೀರ್ವಾದಗಳು ಪವಾಡಗಳು ಈ ಪವಿತ್ರ ಜಾಗದಲ್ಲಿ ನಡೆಯುತ್ತದೆ. ಪ್ರತಿಯೊಬ್ಬರ ಸಹಕಾರವು ಅಗತ್ಯವಾಗಿದೆ ಎಂದು ಶುಭ ಹಾರೈಸಿದರು. ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಇವರು ಕಾರ್ಯಕ್ರಮ ನೆರವೇರಸಿದುರು. ಪಾಲನಾ ಮಂಡಳಿ ಕಾರ್ಯದರ್ಶಿ ರೊನಾಲ್ ನೊರೊನ್ಹಾ. ಧನ್ಯವಾದ ಸಮರ್ಪಿಸಿದರು. ಅತ್ತೂರು ಚರ್ಚ್ ಪಾಲನಾ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
POST
ಉಚ್ಚಿಲ ನಾಗರಿಕ ಹೋರಾಟ ಸಮಿತಿವತಿಯಿಂದ ಹಲವು ಬೇಡಿಕೆ ಅಗ್ರಹಿಸಿ ಪ್ರತಿಭಟನೆ
ಉಚ್ಚಿಲ ನಾಗರಿಕ ಹೋರಾಟ ಸಮಿತಿವತಿಯಿಂದ ಹಲವು ಬೇಡಿಕೆ ಅಗ್ರಹಿಸಿ ರಸ್ತೆ ತಡೆ ಬೃಹತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ರಸ್ತೆ ಅಪಘಾತದಲ್ಲಿ 56 ಜೀವ ಬಳಿಯನ್ನು ತೆಗೆದುಕೊಂಡಿದೆ ಇದಕ್ಕೆ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷವೆ ಕಾರಣ ಸಸ್ತಾನ ಟೋಲ್ ಗೆಟ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಟೋಲ್ ರಿಯಾಯ್ತಿ ಇದ್ದು ಇಲ್ಲಿಯೂ ಕೂಡ ಅನ್ವಯ ಆಗಬೇಕು ಸರಿಯಾಗಿ ಸರ್ವಿಸ್ ರೋಡಿನ ವ್ಯವಸ್ಥೆ ಇಲ್ಲ ವೇಗ ತಡೆ ಅಳವಡಿಕೆ ಮಾಡಬೇಕು ಎಂದು ತಿಳಿಸಿದರು ಬೇಡಿಕೆ 1) ಉಚ್ಚಿಲ ಪೇಟೆಯಲ್ಲಿ ವಾಹನ ಕ್ರಾಸಿಂಗ್ ವ್ಯವಸ್ಥೆ 2) ಎರ್ಮಾಳಿನಿಂದ ಡಿವೈಡರ್ನಿಂದ ಅಲ್-ಇನ್ಸಾನ್ ಶಾಲೆಯ ಡಿವೈಡರ್ ತನಕ ಹೆದ್ದಾರಿ ಮಧ್ಯೆ (ಬೈಟ್) ದಾರಿದೀಪ ಅಳವಡಿಕೆ. 3) ಉಚ್ಚಿಲ ಪೇಟೆಯಲ್ಲಿ ಐಮಾಸ್ ಲೈಟ್ ಅಳವಡಿಸುವಿಕೆ. 4) ಉಚ್ಚಿಲ ಪೇಟೆಯಲ್ಲಿ ಪಾದಾಚಾರಿಗಳು ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್ ವ್ಯವಸ್ಥೆ, 5) ಸರ್ವೀಸ್ ರಸ್ತೆಯಲ್ಲಿ ನೀರು ಹಾದು ಹೋಗಲು ಸಮರ್ಪಕ ವ್ಯವಸ್ಥೆ, 6) ಮೂಳೂರು ಯೂನಿಯನ್ ಬ್ಯಾಂಕ್ ಹತ್ತಿರದ ಡಿವೈಡರ್ ಕ್ರಾಸಿಂಗ್ನ ಕೊನೆಯಲ್ಲಿ ಸಮರ್ಪಕವಾದ ಕ್ರಾಸಿಂಗ್ ವ್ಯವಸ್ಥೆ, 6) ಸರ್ವಿಸ್ ರಸ್ತೆಯ ಡಿವೈಡರ್ನ ಮಧ್ಯೆ ಕಬ್ಬಿಣದ ತಡೆಬೇಲಿ ಅಳವಡಿಸುವಿಕೆ. 7) ಸರ್ವಿಸ್ ರಸ್ತೆಯ ಸೂಕ್ತವಾದ ಸ್ಥಳಗಳಲ್ಲಿ “ರಸ್ತೆ ಉಬ್ಬು” (Humps) ಹಾಕುವಿಕೆ. ಪ್ರತಿಭಟನಾ ಸಂದರ್ಭ ಉಚ್ಚಿಲ ಪೇಟೆಯ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಲಾಯಿತು ಪ್ರತಿಭಟನಾ ಸಭೆಯಲ್ಲಿ ಉಡುಪಿ ಚಿಕ್ಕಮಂಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಕಾಪು ತಹಸಿಲ್ದಾರ್ ಪ್ರತಿಭಾ ಆರ್, ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಜಾವೇದ್ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಸಹಿತ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಸಭೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಯೋಗೀಶ್ ಶೆಟ್ಟಿ, ಶೇಖರ್ ಹೆಜಮಾಡಿ, ಎಂ.ಎ ಗಫರ್ ಸಹಿತ ಗಣ್ಯರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭ ಉಚ್ಚಿಲ ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಸಿರಾಜ್ ಉಚ್ಚಿಲ ಸಹಿತ ನೂರಾರು ಜನರು ಉಪಸ್ಥಿತರಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಬೆಳಗಾವಿಯಲ್ಲಿ “ಉದ್ಯೋಗಕ್ಕಾಗಿ ಕನ್ನಡಿಗರು-ಯುವಜನರ ಹಕ್ಕೋತ್ತಾಯ ” ಸಮಾವೇಶ
ಬೆಳಗಾವಿ : ದೇಶದ ಯುವಜನತೆ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದು ಇದು ಕರ್ನಾಟಕದಲ್ಲಿ ಮತ್ತಷ್ಟು ವ್ಯಾಪಕವಾಗಿದೆ ಇದಕ್ಕೆ ಹಲವು ಕಾರಣಗಳಿದ್ದು ಪ್ರಮುಖವಾಗಿ.
1) ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಲಕ್ಷಾಂತರ ಹುದ್ದೆಗಳನ್ನು ಖಾಲಿ ಉಳಿಸಿಕೊಂಡಿರುವುದು.
2) ಇನ್ನೊಂದಡೆ ರಾಜ್ಯದಲ್ಲಿ ಸ್ಥಾಪನೆಯಾಗುವ ಮತ್ತು ಕಾರ್ಯ ನಿರ್ವಹಿಸುತ್ತಿರುವ ಉದ್ಯಮಗಳಲ್ಲಿ ಕೂಡ ನಿರಂತರವಾಗಿ ರಾಜ್ಯದ ಯುವಜನರು ಕಡೆಗಣಿಸಲು ಪಡುತ್ತಿದ್ದಾರೆ ಹಾಗೆಯೇ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮತ್ತು ಹಿಂದಿ ಹೇರಿಕೆಯಿಂದ ಕೇಂದ್ರ
ಸರಕಾರಿ ನೌಕರಿಗಳಿಂದಲೂ ವಂಚಿತರಾಗುತ್ತಿದ್ದಾರೆ.
ಇದರ ಜೊತೆಗೆ ಸರ್ಕಾರ ಕಾಯಂ ನೇಮಕಾತಿಗಳನ್ನು ಮಾಡದೆ ಕೆಲವೇ ಕೆಲವು ಅವಶ್ಯಕತೆ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಳನ್ನು ಮಾಡಿಕೊಂಡು ಜೀತ ಪದ್ಧತಿ ಅನುಸರಿಸುತ್ತಿದ್ದು ಯುವಜನರ ಬದುಕು ಅತಂತ್ರವನ್ನಾಗಿಸಿವೆ ಸ್ವ ಉದ್ಯೋಗ ಮಾಡಲು ಮುಂದಾದರೆ ಕಿತ್ತು ತಿನ್ನುವ ಭ್ರಷ್ಟಾಚಾರ ಹಾಗೂ ಅಧಿಕಾರಿಶಾಹಿ ಯುವಜನರ ಏಳಿಗೆಗೆ ಕಡಿವಾಣ ಹಾಕುತ್ತಿದೆ.
ಇವೆಲ್ಲವನ್ನ ಮೀರಿಸುವ ಸಾಧ್ಯತೆಯನ್ನು ನೀಡಲು ಶಕ್ತವಾಗಿರುವುದು ಉನ್ನತ ಶಿಕ್ಷಣ ಮತ್ತು ಕೌಶಲ್ಯ ಇಲ್ಲಿಯೂ ಕೂಡ ಯುವಜನರಿಗೆ ನಿರಾಸೆ ಕಾದಿದೆ ಉತ್ತಮ ಗುಣಮಟ್ಟದ ಶಿಕ್ಷಣವು ಕೇವಲ ಹಣ ಉಳ್ಳವರಿಗೆ ಮಾತ್ರ ಲಭ್ಯವಾಗುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಬಡವರು ಕೆಳ ಮಾಧ್ಯಮ ವರ್ಗದವರು ಮತ್ತು ಗ್ರಾಮೀಣ ಪ್ರದೇಶದ ಯುವಕರು ಎಲ್ಲೂ ಸಲ್ಲದಂತೆ ಆಗಿದ್ದಾರೆ.
ಸರ್ಕಾರದ ದುರಾಡಳಿತ ಭ್ರಷ್ಟಾಚಾರ ರಾಜ್ಯದಲ್ಲಿ ನಿರುದ್ಯೋಗವು ವ್ಯಾಪಕವಾಗಿ ವೃದ್ಧಿಸಲು ಕಾರಣವಾಗಿದೆ ಮತ್ತು ಸಾಮಾಜಿಕ ಶೋಭೆಗೆ ಕಾರಣವಾಗಿದೆ ಇದರಿಂದ ರಾಜ್ಯದಲ್ಲಿ ಸುಲಿಗೆ ಕಳ್ಳತನ ದರೋಡೆ ಅಂತ ಅಪರಾಧಗಳು ಹೆಚ್ಚಾಗುವಂತೆ ಹಾಗೂ ಡ್ರಗ್ಸ್ ಹಾಕು ಬೆಟ್ಟಿಂಗ್ ನಂತಹ ವ್ಯಸನಕ್ಕೆ ಬಲಿಯಾಗಲು ಕೂಡ ಕಾರಣವಾಗಿದೆ ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ವ್ಯಾಪಕ ಬಳಕೆಯಿಂದ ಅನೇಕ ಉದ್ಯೋಗಗಳು ಅಸ್ತಿತ್ವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಇಂಥ ಪರಿಸ್ಥಿತಿಯನ್ನ ಮುಂದಾಲೋಚನೆಯಿಂದ ಗ್ರಹಿಸಿ ಜಾಗೃತ ಕ್ರಮಗಳನ್ನು ಕೈಗೊಂಡು ಉದ್ಯೋಗಗಳನ್ನು ಸೃಷ್ಟಿಸಿ ನಿರುದ್ಯೋಗ ಸಮಸ್ಯೆ ನಿವಾರಿಸಬೇಕಾದ ಸರ್ಕಾರಗಳು ಕೇವಲ ಬಾಯಿ ಚಪಲಕ್ಕೆ ಮಾತನಾಡಿ ನಿರಂತರವಾಗಿ ಯುವ ಜನರಿಗೆ ಮೋಸ ಮಾಡುತ್ತಿವೆ.
ಈ ಸಮಸ್ಯೆಗಳನ್ನ ನಿವಾರಿಸಿ ರಾಜ್ಯದ ಯುವ ಜನರಿಗೆ ಹೆಚ್ಚಿನ ಉದ್ಯೋಗವಕಾಶಗಳು ಲಭ್ಯವಾಗುವಂತೆ ಮಾಡಬೇಕಾದ ಮತ್ತು ಉದ್ಯೋಗವು ಪ್ರತಿ ಯೋಗ ಯುವಜನರ ಹಕ್ಕಾಗಿಸುವ ಬೃಹತ್ ಕೆಲಸ ನಮ್ಮೆಲ್ಲರ ಮುಂದಿದೆ ಇದನ್ನ ನಿರ್ವಹಿಸಬೇಕಾದ ಸರಕಾರಕ್ಕೆ ತನ್ನ ಜವಾಬ್ದಾರಿಯನ್ನ ನೆನಪಿಸಿ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ವಾಗುವಂತೆ ಮಾಡುವ ಬಗ್ಗೆ ಸ್ವಾಮಿ ವಿವೇಕಾನಂದರ ಜಯಂತಿಯ ಸಂದರ್ಭದಲ್ಲಿ ಉದ್ಯೋಗಕ್ಕಾಗಿ ಕನ್ನಡಿಗರು ಯುವಜನರ ಹಕ್ ಒತ್ತಾಯ ಸಮಾವೇಶವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಬೆಳಗಾವಿಯಲ್ಲಿ ಇದೇ ಜನವರಿ 26ರಂದು ಭಾನುವಾರ ಗಣರಾಜ್ಯೋತ್ಸವದ ದಿನದಂದು ಸರ್ದಾರ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಈ ಸಮಾವೇಶಕ್ಕೆ ರಾಜ್ಯದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡುತ್ತೇವೆ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಸಿದ್ದು ಕಲಬುರಗಿಯವರು ಕರೆ ನೀಡಿರುತ್ತಾರೆ
ವರದಿ :ಬಸವರಾಜ ಕೋಲ್ಕಾರ
ಔಷಧಿ ಸಸ್ಯಗಳನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹಿಸಿ :ಗಜು ಪೈ
ಕುಮಟಾ :-ತಾಲೂಕಿನ ಕತಗಾಲದಲ್ಲಿ ವಿವಿದೋದ್ದೇಶ ಸಹಕಾರಿ ಸಂಘದಲ್ಲಿ ನಡೆದ ಔಷಧ ಸಸ್ಯಗಳ ಕಾರ್ಯಗಾರವನ್ನು ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗಜಾನನ ಪೈ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಕೋವಿಡ ಸಂಧರ್ಭದಲ್ಲಿ ಗ್ರಾಮೀಣ ಭಾಗದ ಜನತೆಗೆ ಅಮೃತ ಬಳ್ಳಿಯ ಕಷಾಯ ಬಳಸಿದ್ದರಿಂದ ವೈರಾಣು ಎದುರಿಸಿರುವ ಎಷ್ಟೋ ಉದಾಹರಣೆಗಳಿವೆ ಎಂದು ಗಜು ಪೈ ಹೇಳಿದರು.ರಾಜ್ಯ ಔಷಧಿ ಗಿಣಮೂಲಿಕೆ ಪ್ರಾಧಿಕಾರ
ಜೀವ ವೈವಿಧ್ಯ ಮಂಡಳಿ ಹಾಗೂ ಕುಮಟಾದ ಐಕ್ಯ ಎನ್ ಜಿ ಓ ಅವರ ಸಹಕಾರದೊಂದಿಗೆ ಸಸ್ಯಗಳ ಕಾರ್ಯಾಗ್ರಹ ನಡೆಯಿತು.ಔಷಧ ಗಿಡಮೂಲಿಕಾ ಪ್ರಧಿಕಾರದ ವಿಜ್ಞಾನಿ ಡಾ ಎಮ್ ಜಿ ಪ್ರಭು ಮಾತನಾಡಿ ಆಯುರ್ವೇದದಲ್ಲಿ 2351 ನಾಟಿ ವೈದ್ಯ ಪದ್ಧತಿಯಲ್ಲಿ 5137 ಹಾಗೂ ಹೊಮಿಯೋಪತಿಯ ವೈದ್ಯ ಪದ್ಧತಿಯಲ್ಲಿ 506 ಬಗೆಯ ಗಿಡಮೂಲಿಕೆಯನ್ನು ಔಷಧಿ ತಯಾರಿಕೆಕೆ ಬಳಕೆ ಮಾಡುತ್ತಾರೆ.ಔಷಧಿ ಸಸ್ಯಗಳ ಬೇಡಿಕೆ ಅನುಗುಣವಾಗಿ ಅವುಗಳನ್ನು ಬೆಳೆಯಬೇಕು. ಎಂದು ತಿಳಿಸಿದರು.ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ ಎಮ್ ಡಿ ಸುಭಾಷ್ ಚಂದ್ರನ ಕರಾವಳಿ ಪ್ರದೇಶದಲ್ಲಿ ಬೆಳೆಯುವ ಔಷಧಿ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು.ಔಷಧಿ ಗಿಡಮೂಲಿಕಾ ಪ್ರಾಧಿಕಾರದ ವಿಜ್ಞಾನಿ ಡಾ ಕೆ ಎಮ್ ಪ್ರಭು ಕ್ರಷಿ ನಿರ್ಹವಣೆಯ ಬಗ್ಗೆ ಮಾಹಿತಿ ನೀಡಿದರು.ಸಂಘದ ಅಧ್ಯಕ್ಷ ವಿ ಪಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ರಾಜೀವ ಭಟ್ಟ,ಉದಯ ಭಟ್ಟ,ಪ್ರದೀಪ್ ಹೆಗಡೆ,ಶ್ರೀಧರ್ ಹೆಬ್ಬಾರ್,ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಈ ಸಂಧರ್ಭದಲ್ಲಿ ಸಹಕಾರಿ ಸಂಘದ ಕಾರ್ಯನಿರ್ವಾಹಕ ಜಾನ್ ಫೆರ್ನಾಂಡಿಸ್,ಸಮಾಜ ಸೇವಕರಾದ ವಿ ಎಂ ಜಾಲಿಸತ್ತ್ಗಿ,ಕೆ ಪಿ ಭಟ್,ಜಗದೀಶ್ ನಾಯ್ಕ್,ಹಾಗೂ ಐಕ್ಯ ಎನ್ ಜಿ ಓ ಅಧ್ಯಕ್ಷ ಎಂ ಜಿ ನಾಯ್ಕ್ ಕಾರ್ಯಾಗಾರ ಸಂಹವನದಲ್ಲಿ ಪಾಲ್ಗೊಂಡರು.
ಬಿಜೆಪಿ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ :ಬೇಳೂರು ಗೋಪಾಲಕೃಷ್ಣ
ಕುಮಟಾ :-ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸುಭದ್ರವಾಗಿದೆ.ಸುಳ್ಳಿನ ರಾಜಕಾರಣ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಮತ್ತು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.ಕುಮಟಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಅವರು ಜನವರಿ 21 ರಂದು ನಡೆಯುವ ಗಾಂಧಿ ಭಾರತ್ ಸ್ವರಣಾರ್ಥಜೈ ಬಾಪು ಜೈ ಭೀಮ ಮತ್ತು ಜೈ ಸಂವಿಧಾನ ಅಭಿಯಾನದ ಬ್ರಹತ್ ಸಮಾವೇಶ ಪೂರ್ವಭಾವಿ ಸಭೆ ನಡೆಸಿ ಕಾರ್ಯಕರ್ತರೊಂದಿಗೆ ಚರ್ಚಿಸಿದರು.ಈ ಬ್ರಹತ್ ಸಮಾವೇಶಕ್ಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಹಿಂದಿನಿಂದಲೂ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದೆ.ಕಳೆದ ಉಪಚುನಾವಣೆಯಲ್ಲಿ 3 ಕ್ಕೆ ಮೂರು ಕಡೆ ಕಾಂಗ್ರೆಸ್ ಗೆಲುವು ಸಾಧಿಸಿದೆ.ರಾಜ್ಯದಲ್ಲಿ ಕಾಂಗ್ರೆಸ್ ಬಲವಾಗಿದ್ದು ಬಡವರ ಪರ ಕೆಲಸ ಮಾಡುತ್ತಿದೆ.ಬಿಜೆಪಿಯ ಸುಳ್ಳಿನ ರಾಜಕಾರಣಕ್ಕೆ ಜನರು ಸೊಪ್ಪು ಹಾಕುದಿಲ್ಲ ಎಂದು ಲೇವಡಿ ಮಾಡಿದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ ಆಳ್ವಾ,ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಆರ್ ಎಚ್ ನಾಯ್ಕ್,ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್,ಪ್ರಮುಖರಾದ ಹೊನ್ನಪ್ಪ ನಾಯಕ,ನಾಗೇಶ್ ನಾಯ್ಕ್,ಮಧುಸೂದನ್ ಶೇಟ್,ರತ್ನಾಕರ ನಾಯ್ಕ್,ವಿ. ಎಲ್ ನಾಯ್ಕ್,ನಾಗರಾಜ್ ಹಿತ್ತಲಮಕ್ಕಿ,ಧೀರೂ ಶಾನಭಾಗ,ಎಮ್ ಟಿ ನಾಯ್ಕ್,ಅಶೋಕ್ ಗೌಡ,ಕೃಷ್ಣ ಗೌಡ ಅಂತ್ರವಳ್ಳಿ. ಭಾರತಿ ಪಟಗಾರ, ಕೃಷ್ಣಾoನಂದ ವೇರ್ಣೇಕರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಳಗಾಂವ ಜಿಲ್ಲಾ ಹಾಲು ಒಕ್ಕೂಟ ಸಹಕಾರ ಸಂಘದಲ್ಲಿ ಸಭೆ
ಕುಂದಾ ನಗರಿ ಬೆಳಗಾಂವ ಜಿಲ್ಲೆಯ ಸಹಕಾರಿ ಹಾಲು ಉತ್ಪಾದಕರ ಸಂಘ ಒಕ್ಕೂಟ ಸಭಾಭವನದಲ್ಲಿ ಬೆಳಗಾಂವಿ ಜಿಲ್ಲೆಯ ಎಲ್ಲಾ ತಾಲೂಕಿನ ಹಾಲು ಮತ್ತು ನಂದಿನಿ ಹಾಲಿನ ಉತ್ಪನ್ನಗಳ ಮಾರಾಟಗಾರರ ಸಭೆಯನ್ನು ಕರೆಯಲಾಗಿದ್ಧು ಬೆಳಗ್ಗೆ 11 ಗಂಟೆಗೆ ಸಭೆಯು ಪ್ರಾರಂಭವಾಯಿತು. ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಮತ್ತು ಹಾಲಿನಿ ಉತ್ಪನ್ನಗಳ ಮಾರಾಟದ ಅಧಿಕಾರಿಗಳಾದ ಮುಜಾವುದ್ದೀನ್ ಸರ್ ರವರು ಬೆಳಗಾಂವ ಜಿಲ್ಲೆಯ ಎಲ್ಲಾ ತಾಲೂಕಿನ ಮಾರಾಟಗಾರರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನಂದಿನಿ ಹಾಲಿನ ವ್ಯಾಪಾರ ನಂದಿನ ಹಾಲಿನ ಉತ್ಪನ್ನ ಮಾರಾಟದ ಬಗ್ಗೆ ತಿಳಿಹೇಳಿ ಬೆರೆ ಹಾಲಿನ ಕಂಪನಿಯವರು ನಮ್ಮ ನಂದಿನಿ ಉತ್ಪನ್ನಗಳ ಜೋಡಿ ಪೈಪೋಟಿ ಮಾಡುತ್ತಿದ್ದಾರೆ, ನಮ್ಮ ನಂದಿನಿ ಹಾಲಿನ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳಬೇಕು, ನಂದಿನಿ ಉತ್ಪನ್ನಗಳು ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಹಾನಿಕರ ಆಗಲಾರದು, ಬೇರೆ ಕಂಪನಿಯಲ್ಲಿ ಕಲಬೆರಿಕೆ ನಡೆಯಬದು ಆದರೆ? ನಮ್ಮ ನಂದಿನಿ ಉತ್ಪನ್ನಗಳಲ್ಲಿ ಕಲಬೆರಿಕೆ ನಡೆಯಲಾರದು ಎಂದು ಸಾರ್ವಜನಿಕರಿಗೆ ತಿಳಿಹೇಳಿ ನಿಮ್ಮ ವ್ಯಾಪಾರಗಳನ್ನು ಇನ್ನೂ ಹೆಚ್ಚಿಸಿಕೊಳ್ಳಿ. ನಮ್ಮ ಉತ್ಪನ್ನಗಳ ಉಪಯೋಗ ಮಾಡಿದರೆ ಅವರ ಆರೋಗ್ಯವು ಒಳ್ಳೆಯದಾಗಿರುತ್ತದೆ ಎಂದರು, ಸಭೆಯ ನಂತರ ಎಲ್ಲ ಮಾರಾಟಗಾರರಿಗೆ ಹಾಲು ವಿತರಣ ಬ್ಯಾಗು ಟಿ-ಶರ್ಟು ಬುಕ್ಕು ವಿತರಣೆ ಮಾಡಿದರು, ಈ ಸಂದರ್ಭದಲ್ಲಿ ಶ್ರೀಮತಿ ತ್ರಿವೇಣಿ. ಉಮೇಶ. ಸಚಿನ. ಶ್ರೀಕಾಂತ. ಚೇತನ. ಕರಿಯಪ್ಪ. ವಿರೂಪಾಕ್ಷ ಮತ್ತು ಸಹ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ
ಸ್ತನ ಕ್ಯಾನ್ಸರ್ ಬಗ್ಗೆ ತಿಳುವಳಿಕೆ” ನೀಡಿದ ಡಾ:ಜಯಂತಿತುಂಸಿ
ಸ್ತನ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ” ಟೈಲೂಪ್ ಬ್ರೆಸ್ಟ್ ಇಂಪ್ಲಾಂಟ್ ರೀಕನ್ ಸ್ಟ್ರಕ್ಷನ್ ರೊಬೋಟಿಕ್ ತಂತ್ರಜ್ಞಾನದ ಎನ್ಎಸಿ ಆರ್ ಎನ್ ಎಸ್ ಎಂ ವಿಧಾನದ ನಿಖರತೆ, ದಕ್ಷತೆ, ಸುರಕ್ಷತೆ, ಸಂರಕ್ಷಣೆಗೆ ಮುಂಚೂಣಿಯಲ್ಲಿ”ಅಪೊಲೋ ಕ್ಯಾನ್ಸರ್ ಕೇಂದ್ರ” ಬನ್ನೇರುಘಟ್ಟ ರಸ್ತೆ ಬೆಂಗಳೂರು -76, ಪೋ:18002031066..
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸರ್ಜ್ ನ್ ಡಾ:ಜಯಂತಿತುಂಸಿ, ಸಿಈಓಡಾ:ಮನೀ ಷ್ ಮ್ಯಾಥ್ಯೂ, ಅಧ್ಯಕ್ಷ ಶ್ರೀ ದಿನೇಶ್ ಮಾಧ ವನ್ ರವರು”ಟೈಲೂಪ್ ಸ್ತನ ಇಂಪ್ಲಾಂಟ್ ನಿಖರ, ನವೀನ ರೊಬೋಟಿಕ್ ತಂತ್ರಜ್ಞಾನ ವು ಸರ್ವ ಸುರಕ್ಷಿತ, ಜೈವಿಕ ಹೊಂದಾಣಿಕೆ, ಕಡಿಮೆ ಅಪಾಯ,ನೋವು,ರಕ್ತನಷ್ಟ ಮತ್ತು ಶೀಘ್ರ ಚೇತರಿಕೆ, ಮೊದಲಿನ ಆರೋಗ್ಯ ಜೀ ವನ ನಡೆಸಲು ಈ ರೊಬೋಟಿಕ್ ನಿಪ್ಪಲ್ ಸ್ಪೇರಿಂಗ್ ಮಾಸ್ಟೆಕ್ಟಮಿ ತುಂಬಾ ಸಹಕಾರಿ” ಇತ್ತೀಚೆಗೆ ಯುವತಿಯರಲ್ಲಿ ಹೆಚ್ಚುತ್ತಿರುವ ಈ ಸ್ತನ ಕ್ಯಾನ್ಸರ್ ಬಗ್ಗೆ ತಿಳುವಳಿಕೆ” ನೀಡಿದ ರು. ಈ ಹೊಸ ತಂತ್ರದಿಂದ 16ಜನರಿಗೆ ಯ ಶಸ್ವೀ ಶಸ್ತ್ರಚಿಕಿತ್ಸೆ ಮಾಡಲಾಗಿದೆ” ಎಂದರು.
“ಅಪೊಲೋ ಕ್ಯಾನ್ಸರ್ ಕೇಂದ್ರ”ದಿಂದ ಸ್ತನ ಕ್ಯಾನ್ಸರ್ ಫಲಕಾರಿ ಶಸ್ತ್ರಚಿಕಿತ್ಸೆಗೊಳಗಾದ ಇಬ್ಬರೂ ಮಹಿಳೆಯರೂ ಮಾತನಾಡಿ; “ಸಾ ರ್ಥಕತೆ,ಆರೋಗ್ಯವಾದ,ನೋವಿಲ್ಲದ ಜೀವ ನಕ್ಕೆ ಸಂತೋಷ”ಎಂದರು.ಮತ್ತು ಅಮೆರಿಕ ಜರ್ಮನಿಯಿಂದ ಮೊದಲು ಭಾರತಕ್ಕೆ ಈ ಹೊಸ ರೋಬೋ ತಂತ್ರಜ್ಞಾನ ತಂದ ಡಾ:ಜ ಯಂತಿ ತುಂಸಿ ಅವರಿಗೆ ರ್ಕೃತಜ್ಞತೆ ವ್ಯಕ್ತಪ ಡಿಸಿ, ಈ ಸುರಕ್ಷಿತ ಶಸ್ತ್ರ ಚಿಕಿತ್ಸೆಯನ್ನು ಸದು ಪಯೋಗಪಡಿಸಿಕೊಳ್ಳಿ” ಎಂದರು.
ಈ ದಿನಗಳಲ್ಲಿ ಸ್ತನ ಕ್ಯಾನ್ಸರ್ನಲ್ಲಿ ಹೆಚ್ಚು ಬಳಲುತ್ತಿರುವವರಿಗೆ ಸರ್ಕಾರ, ಸಂಘ ಸಂ ಸ್ಥೆಗಳು;ಶಸ್ತ್ರಚಿಕಿತ್ಸೆಗೆ, ಆರ್ಥಿಕ ಸಹಾಯಕ್ಕೆ ಧಾವಿಸಬೇಕೆಂದು”ಎಲ್ಲರೂ ಸಹ ಮನವಿ ಮಾಡಿದ್ದಾರೆ.
ಉತ್ತರ ಕರ್ನಾಟಕ ಜೈನ ಬಾಂಧವರ ಆರನೇ ವರ್ಷದ ಸಂಕ್ರಾ0ತಿ ಸಂಭ್ರಮಾಚರಣೆ ೨೦೨೫
ಉತ್ತರ ಕರ್ನಾಟಕ ಜೈನ ಬಾಂಧವರು ಆರನೇ ವರ್ಷದ ಸಂಕ್ರಾ0ತಿ ಸಂಭ್ರಮಾಚರಣೆ ೨೦೨೫ರ ಕಾರ್ಯಕ್ರಮವನ್ನು ಡಾ||ವೀರೇಂದ್ರ ಹೆಗ್ಡೆ ಸಭಾಂಗಣ, ಕರ್ನಾಟಕ ಜೈನ ಭವನ, ಶಂಕರಪುರ, ಬೆಂಗಳೂರಿನಲ್ಲಿ ಏರ್ಪಡಿಸಿದ್ದರು. ಈ ಕಾರ್ಯಕ್ರಮವನ್ನು ಡಿ.ಸುರೇಂದ್ರ ಕುಮಾರ್ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ. ಉಮಾಶ್ರೀ ರವರು ಹಾಗೂ ಭಾರತೀಯ ಜೈನ ಮಿಲನದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಸುರೇಂದ್ರ ಕುಮಾರ್ ಅವರು ಆಗಮಿಸಿದ್ದರು. ಉತ್ತರ ಕರ್ನಾಟಕ ಜೈನ ಬಾಂಧವರ ಅಧ್ಯಕ್ಷರಾದ ಶ್ರೀ ಸುಭಾಷ್ ಜಿನಗೌಡರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಡಾ. ನೀರಜಾ ನಾಗೇಂದ್ರ ಕುಮಾರ್ ಅವರಿಗೆ ಆದರ್ಶ ಜೈನ ಸಮಾಜ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ವಿಶೇಷ ಸಾಧಕರಿಗೆ ಸನ್ಮಾನಿಸಿದರು ಮತ್ತು ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ತುಮಕೂರಿನ ಖ್ಯಾತ ಸಾಹಿತಿಗಳಾದ ಡಾಕ್ಟರ್ ಎಸ್ ಪಿ ಪದ್ಮಪ್ರಸಾದ್ ರವರ ಸವ್ಯಸಾಚಿ ಕಲಾವಿದ ಜಿನೇಂದ್ರ ಪುಸ್ತಕವನ್ನು ಭಾರತೀಯ ಜೈನ ಮಿಲನ ರಾಷ್ಟ್ರೀಯ ಕಾರ್ಯ ಅಧ್ಯಕ್ಷರಾದ ಶ್ರೀಮತಿ ಅನಿತಾ ಡಿ ಸುರೇಂದ್ರ ಕುಮಾರ್ ಅವರು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀ ಶಾಂತಿನಾಥ ಹುದ್ದಾರ್ ಕಾರ್ಯದರ್ಶಿಗಳಾದ ಶ್ರೀ ಬಾಹುಬಲಿ ಗೌರಾಜಿ ಮತ್ತು ಕಾರ್ಯಾಧ್ಯಕ್ಷರಾದ ಡಾಕ್ಟರ್ ಅಜಿತ್ ಮರುಗುಂಡೆ ಹಾಗೂ ಉತ್ತರ ಕರ್ನಾಟಕ ಜೈನ ಬಾಂಧವರ ನಿರ್ದೇಶಕರುಗಳು ಹಾಜರಿದ್ದರು ಮತ್ತು ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉತ್ತರ ಕರ್ನಾಟಕ ಜೈನ ಮಹಿಳಾ ಮತ್ತು ಮಕ್ಕಳ ಹಾಗೂ ಶ್ರೀಮತಿ ಪ್ರೇಮ ಉಪಾಧ್ಯೆ, ಬೆಳಗಾವಿ ತಂಡಗಳಿAದ ರಸಭರಿತ ಕಾರ್ಯಕ್ರಮಗಳು ಅಲ್ಲಿಗೆ ಆಗಮಿಸಿದ್ದ ಜನರನ್ನು ಮನರಂಜಿಸಿದವು .
ಎಲ್ಲರಿಗೂ ಸೂರು ಯೋಜನೆಯ ಪ್ರಗತಿ ಪರಿಶೀಲಿಸಿದ ಶಾಸಕ ಶಿವಲಿಂಗೇಗೌಡ : ಮಾರ್ಚ್ ಕೊನೆಗೆ 300 ಮನೆ ನಿರ್ಮಾಣ
ಅರಸೀಕೆರೆ: ಹೌಸಿಂಗ್ ಫಾರ್ ಅಲ್ ಯೋಜನೆಯಡಿ 1,180 ಮನೆಗಳು ನಿರ್ಮಾಣ ಆಗಲಿದ್ದು, ಮೊದಲ ಹಂತದಲ್ಲಿ 300 ಮನೆಗಳು ಮಾರ್ಚ್ ಅಂತ್ಯದೊಳಗೆ
- ಪೂರ್ಣವಾಗಲಿವೆ. ಫಲಾನುಭವಿಗಳು ತಕ್ಷಣ ಕೇವಲ ₹1 ಲಕ್ಷ ವಂತಿಗೆ ನೀಡಿ ಮನೆಯ ಪಡೆಯಬೇಕು ಎಂದು
- ಶಾಸಕ, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು. , ಇಲ್ಲಿನ ಸುಬ್ರಹ್ಮಣ್ಯನಗರ ಬಡಾವಣೆ ಸಮೀಪದಲ್ಲಿ ಹೌಸಿಂಗ್ ಫಾರ್ ಹಾಲ್ ಯೋಜನೆಯ ಕನಸಿನ ಮನೆ ಕಾಮಗಾರಿ ವಿಳಂಬವಾಗಿರುವುದನ್ನು ಬುಧವಾರ ಪರಿಶೀಲಿಸಿದ ನಂತರ ಅವರು
- ಮಾತನಾಡಿದರು. ,
ವರದಿ ಪರ್ವಿಜ್ ಅಹಮದ್ ಅರಸೀಕೆರೆ
ಬಡವರ ಪಾಲಿಗೆ ಗ್ಯಾರೆಂಟಿ ಯೋಜನೆಗಳು ಸಹಕಾರಿಯಾಗಿದೆ, ಗ್ಯಾರೆಂಟಿ ಯೋಜನೆಗಳು ಸದ್ಬಳಕೆಯಾಗುತ್ತಿದೆ- ಸಚಿವ ದಿನೇಶ್ ಗುಂಡೂರಾವ್
ಗಾಂಧಿನಗರ ವಿಧಾನಸಭಾ ಕ್ಷೇತ್ರ: ಶಾಸಕರ ಕಛೇರಿಯಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯನ್ನು ಸ್ಥಳೀಯ ಶಾಸಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ರವರ ನೇತೃತ್ವದಲ್ಲಿ ಸಭೆ ಜರುಗಿತು.
ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಉಮೇಶ್ ಬಾಬುರವರು, ಆಹಾರ ಇಲಾಖೆ ಉಪನಿರ್ದೇಶಕಿ ಸೌಮ್ಯ, ಮತ್ತು ಮಹಿಳಾ ಮತ್ತು ಮಕ್ಕಳ ಕುಟುಂಬ ಇಲಾಖೆ, ಬೆಸ್ಕಾಂ , ಕೆ.ಎಸ್.ಆರ್.ಟಿ.ಸಿ ಮತ್ತು ಬಿಟಿಎಸ್, ಕ್ರೀಡಾ ಮತ್ತು ಯುವ ಜನ ಸಬಲೀಕರಣ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಚಿವರಾದ ದಿನೇಶ್ ಗುಂಡೂರಾವ್ ಮಾತನಾಡಿ ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಗಳು ವೇಗವಾಗಿ ಜನರಿಗೆ ತಲುಪಿದೆ. ಯೋಜನೆಯ ಲಾಭ ಎಷ್ಟು ಜನರಿಗೆ ಸದುಪಯೋಗ ವಾಗುತ್ತಿದೆ ಮತ್ತು ಇದರಲ್ಲಿ ಬಡವರು, ಮಧ್ಯಮವರ್ಗದವರು ಎಷ್ಟು ಜನರು ಇದ್ದಾರೆ ಎಂದು ಪರಿಶೀಲನೆ ಮಾಡಬೇಕು.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ 200ಯೂನಿಟ್ ವಿದ್ಯುತ್ ಉಚಿತ ಯೋಜನೆಯ ಲಾಭ ಸಾವಿರಾರು ಕುಟುಂಬಗಳಿಗೆ ಯೋಜನೆ ಲಾಭ ತಲುಪಿದೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಸ್ಲಂ ಪ್ರದೇಶದ ವಾಸ ಮಾಡುವ ಕಡೆಗಳಲ್ಲಿ ಗೃಹಜ್ಯೋತಿ ಯೋಜನೆ ಬಳಕೆದಾರರು ಶೇಕಡ 90%ರಷ್ಟು ಇದ್ದಾರೆ.
ಆಹಾರ ಇಲಾಖೆಯಿಂದ ಬಡವರ ಮನೆಗಳಿಗೆ ಖುದ್ದಾಗಿ ಪರಿಶೀಲನೆ ಮಾಡಿ ಬಿಪಿಎಲ್ ಕಾರ್ಡ್ ನೀಡಲಾಗುತ್ತಿದೆ ಇದರಿಂದ ದುರುಪಯೋಗ ಕಡಿಮೆಯಾಗುತ್ತಿದೆ.
ಹಸಿವಿನಿಂದ ಯಾರು ಮಲಗಬಾರದು ಎಂದು ಸರ್ಕಾರ ಅನ್ನಭಾಗ್ಯ ಯೋಜನೆ ಬಡವರ ಪಾಲಿಗೆ ಅಕ್ಷಯಪಾತ್ರೆಯಾಗಿದೆ.
ಯುವತಿಯರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಗೃಹಲಕ್ಷ್ಮಿ ಯೋಜನೆಯಿಂದ ಸ್ವಾವಲಂಭಿ ಬದುಕು ಸಾಗಿಸಲು ಅನುಕೂಲವಾಗಿದೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರು, ಸಮಿತಿಯ ಸದಸ್ಯರುಗಳು ಪ್ರತಿ ಮನೆಗಳಿಗೆ ಭೇಟಿ ನೀಡಲಿದ್ದಾರೆ ಮತ್ತು ಹೊಸ ಫಲಾನುಭವಿಗಳಿಗೆ ಗುರುತಿಸಿ ಯೋಜನೆ ಲಾಭ ತಲುಪುವಂತೆ ಮತ್ತು ಫಲಾನುಭವಿಗಳಿಗೆ ಸರಿಯಾಗಿ ಯೋಜನೆ ಲಾಭ ತಲುಪುತಿದ್ದಿಯ ಎಂದು ಪರಿಶೀಲನೆ ಮಾಡಲಿದ್ದಾರೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳಾದ ಶ್ರೀನಿವಾಸಮೂರ್ತಿ, ಸರವಣನ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ಓಂಪ್ರಕಾಶ್, ಭಾಗಲಕ್ಷ್ಮಿ, ಅಮರ್ ನಾಥ್ ವಿ, ಮತ್ತು ಕುಮಾರಿ,ಮಾಧುರಿ, ಸೈಯದ್, ಸಲಾವುದ್ದೀನ್, ಮಹೇಶ್ ಜಿ, ದೀಪ, ರೇಖಾ, ಶೇಖರ್, ದರ್ಶನ್ ನಟರಾಜ್, ಮಹೇಶ್ವರಿ ಉಪಸ್ಥಿತರಿದ್ದರು
