ಕುಮಟಾ :-ತಾಲೂಕಿನ ಕತಗಾಲದಲ್ಲಿ ವಿವಿದೋದ್ದೇಶ ಸಹಕಾರಿ ಸಂಘದಲ್ಲಿ ನಡೆದ ಔಷಧ ಸಸ್ಯಗಳ ಕಾರ್ಯಗಾರವನ್ನು ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗಜಾನನ ಪೈ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಕೋವಿಡ ಸಂಧರ್ಭದಲ್ಲಿ ಗ್ರಾಮೀಣ ಭಾಗದ ಜನತೆಗೆ ಅಮೃತ ಬಳ್ಳಿಯ ಕಷಾಯ ಬಳಸಿದ್ದರಿಂದ ವೈರಾಣು ಎದುರಿಸಿರುವ ಎಷ್ಟೋ ಉದಾಹರಣೆಗಳಿವೆ ಎಂದು ಗಜು ಪೈ ಹೇಳಿದರು.ರಾಜ್ಯ ಔಷಧಿ ಗಿಣಮೂಲಿಕೆ ಪ್ರಾಧಿಕಾರ
ಜೀವ ವೈವಿಧ್ಯ ಮಂಡಳಿ ಹಾಗೂ ಕುಮಟಾದ ಐಕ್ಯ ಎನ್ ಜಿ ಓ ಅವರ ಸಹಕಾರದೊಂದಿಗೆ ಸಸ್ಯಗಳ ಕಾರ್ಯಾಗ್ರಹ ನಡೆಯಿತು.ಔಷಧ ಗಿಡಮೂಲಿಕಾ ಪ್ರಧಿಕಾರದ ವಿಜ್ಞಾನಿ ಡಾ ಎಮ್ ಜಿ ಪ್ರಭು ಮಾತನಾಡಿ ಆಯುರ್ವೇದದಲ್ಲಿ 2351 ನಾಟಿ ವೈದ್ಯ ಪದ್ಧತಿಯಲ್ಲಿ 5137 ಹಾಗೂ ಹೊಮಿಯೋಪತಿಯ ವೈದ್ಯ ಪದ್ಧತಿಯಲ್ಲಿ 506 ಬಗೆಯ ಗಿಡಮೂಲಿಕೆಯನ್ನು ಔಷಧಿ ತಯಾರಿಕೆಕೆ ಬಳಕೆ ಮಾಡುತ್ತಾರೆ.ಔಷಧಿ ಸಸ್ಯಗಳ ಬೇಡಿಕೆ ಅನುಗುಣವಾಗಿ ಅವುಗಳನ್ನು ಬೆಳೆಯಬೇಕು. ಎಂದು ತಿಳಿಸಿದರು.ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ ಎಮ್ ಡಿ ಸುಭಾಷ್ ಚಂದ್ರನ ಕರಾವಳಿ ಪ್ರದೇಶದಲ್ಲಿ ಬೆಳೆಯುವ ಔಷಧಿ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು.ಔಷಧಿ ಗಿಡಮೂಲಿಕಾ ಪ್ರಾಧಿಕಾರದ ವಿಜ್ಞಾನಿ ಡಾ ಕೆ ಎಮ್ ಪ್ರಭು ಕ್ರಷಿ ನಿರ್ಹವಣೆಯ ಬಗ್ಗೆ ಮಾಹಿತಿ ನೀಡಿದರು.ಸಂಘದ ಅಧ್ಯಕ್ಷ ವಿ ಪಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ರಾಜೀವ ಭಟ್ಟ,ಉದಯ ಭಟ್ಟ,ಪ್ರದೀಪ್ ಹೆಗಡೆ,ಶ್ರೀಧರ್ ಹೆಬ್ಬಾರ್,ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಈ ಸಂಧರ್ಭದಲ್ಲಿ ಸಹಕಾರಿ ಸಂಘದ ಕಾರ್ಯನಿರ್ವಾಹಕ ಜಾನ್ ಫೆರ್ನಾಂಡಿಸ್,ಸಮಾಜ ಸೇವಕರಾದ ವಿ ಎಂ ಜಾಲಿಸತ್ತ್ಗಿ,ಕೆ ಪಿ ಭಟ್,ಜಗದೀಶ್ ನಾಯ್ಕ್,ಹಾಗೂ ಐಕ್ಯ ಎನ್ ಜಿ ಓ ಅಧ್ಯಕ್ಷ ಎಂ ಜಿ ನಾಯ್ಕ್ ಕಾರ್ಯಾಗಾರ ಸಂಹವನದಲ್ಲಿ ಪಾಲ್ಗೊಂಡರು.
