ಕುಮಟಾ :-ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸುಭದ್ರವಾಗಿದೆ.ಸುಳ್ಳಿನ ರಾಜಕಾರಣ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಮತ್ತು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.ಕುಮಟಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಅವರು ಜನವರಿ 21 ರಂದು ನಡೆಯುವ ಗಾಂಧಿ ಭಾರತ್ ಸ್ವರಣಾರ್ಥಜೈ ಬಾಪು ಜೈ ಭೀಮ ಮತ್ತು ಜೈ ಸಂವಿಧಾನ ಅಭಿಯಾನದ ಬ್ರಹತ್ ಸಮಾವೇಶ ಪೂರ್ವಭಾವಿ ಸಭೆ ನಡೆಸಿ ಕಾರ್ಯಕರ್ತರೊಂದಿಗೆ ಚರ್ಚಿಸಿದರು.ಈ ಬ್ರಹತ್ ಸಮಾವೇಶಕ್ಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಹಿಂದಿನಿಂದಲೂ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದೆ.ಕಳೆದ ಉಪಚುನಾವಣೆಯಲ್ಲಿ 3 ಕ್ಕೆ ಮೂರು ಕಡೆ ಕಾಂಗ್ರೆಸ್ ಗೆಲುವು ಸಾಧಿಸಿದೆ.ರಾಜ್ಯದಲ್ಲಿ ಕಾಂಗ್ರೆಸ್ ಬಲವಾಗಿದ್ದು ಬಡವರ ಪರ ಕೆಲಸ ಮಾಡುತ್ತಿದೆ.ಬಿಜೆಪಿಯ ಸುಳ್ಳಿನ ರಾಜಕಾರಣಕ್ಕೆ ಜನರು ಸೊಪ್ಪು ಹಾಕುದಿಲ್ಲ ಎಂದು ಲೇವಡಿ ಮಾಡಿದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ ಆಳ್ವಾ,ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಆರ್ ಎಚ್ ನಾಯ್ಕ್,ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್,ಪ್ರಮುಖರಾದ ಹೊನ್ನಪ್ಪ ನಾಯಕ,ನಾಗೇಶ್ ನಾಯ್ಕ್,ಮಧುಸೂದನ್ ಶೇಟ್,ರತ್ನಾಕರ ನಾಯ್ಕ್,ವಿ. ಎಲ್ ನಾಯ್ಕ್,ನಾಗರಾಜ್ ಹಿತ್ತಲಮಕ್ಕಿ,ಧೀರೂ ಶಾನಭಾಗ,ಎಮ್ ಟಿ ನಾಯ್ಕ್,ಅಶೋಕ್ ಗೌಡ,ಕೃಷ್ಣ ಗೌಡ ಅಂತ್ರವಳ್ಳಿ. ಭಾರತಿ ಪಟಗಾರ, ಕೃಷ್ಣಾoನಂದ ವೇರ್ಣೇಕರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
