ಬೆಳಗಾವಿ : ದೇಶದ ಯುವಜನತೆ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದು ಇದು ಕರ್ನಾಟಕದಲ್ಲಿ ಮತ್ತಷ್ಟು ವ್ಯಾಪಕವಾಗಿದೆ ಇದಕ್ಕೆ ಹಲವು ಕಾರಣಗಳಿದ್ದು ಪ್ರಮುಖವಾಗಿ.
1) ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಲಕ್ಷಾಂತರ ಹುದ್ದೆಗಳನ್ನು ಖಾಲಿ ಉಳಿಸಿಕೊಂಡಿರುವುದು.
2) ಇನ್ನೊಂದಡೆ ರಾಜ್ಯದಲ್ಲಿ ಸ್ಥಾಪನೆಯಾಗುವ ಮತ್ತು ಕಾರ್ಯ ನಿರ್ವಹಿಸುತ್ತಿರುವ ಉದ್ಯಮಗಳಲ್ಲಿ ಕೂಡ ನಿರಂತರವಾಗಿ ರಾಜ್ಯದ ಯುವಜನರು ಕಡೆಗಣಿಸಲು ಪಡುತ್ತಿದ್ದಾರೆ ಹಾಗೆಯೇ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮತ್ತು ಹಿಂದಿ ಹೇರಿಕೆಯಿಂದ ಕೇಂದ್ರ
ಸರಕಾರಿ ನೌಕರಿಗಳಿಂದಲೂ ವಂಚಿತರಾಗುತ್ತಿದ್ದಾರೆ.
ಇದರ ಜೊತೆಗೆ ಸರ್ಕಾರ ಕಾಯಂ ನೇಮಕಾತಿಗಳನ್ನು ಮಾಡದೆ ಕೆಲವೇ ಕೆಲವು ಅವಶ್ಯಕತೆ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಳನ್ನು ಮಾಡಿಕೊಂಡು ಜೀತ ಪದ್ಧತಿ ಅನುಸರಿಸುತ್ತಿದ್ದು ಯುವಜನರ ಬದುಕು ಅತಂತ್ರವನ್ನಾಗಿಸಿವೆ ಸ್ವ ಉದ್ಯೋಗ ಮಾಡಲು ಮುಂದಾದರೆ ಕಿತ್ತು ತಿನ್ನುವ ಭ್ರಷ್ಟಾಚಾರ ಹಾಗೂ ಅಧಿಕಾರಿಶಾಹಿ ಯುವಜನರ ಏಳಿಗೆಗೆ ಕಡಿವಾಣ ಹಾಕುತ್ತಿದೆ.
ಇವೆಲ್ಲವನ್ನ ಮೀರಿಸುವ ಸಾಧ್ಯತೆಯನ್ನು ನೀಡಲು ಶಕ್ತವಾಗಿರುವುದು ಉನ್ನತ ಶಿಕ್ಷಣ ಮತ್ತು ಕೌಶಲ್ಯ ಇಲ್ಲಿಯೂ ಕೂಡ ಯುವಜನರಿಗೆ ನಿರಾಸೆ ಕಾದಿದೆ ಉತ್ತಮ ಗುಣಮಟ್ಟದ ಶಿಕ್ಷಣವು ಕೇವಲ ಹಣ ಉಳ್ಳವರಿಗೆ ಮಾತ್ರ ಲಭ್ಯವಾಗುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಬಡವರು ಕೆಳ ಮಾಧ್ಯಮ ವರ್ಗದವರು ಮತ್ತು ಗ್ರಾಮೀಣ ಪ್ರದೇಶದ ಯುವಕರು ಎಲ್ಲೂ ಸಲ್ಲದಂತೆ ಆಗಿದ್ದಾರೆ.
ಸರ್ಕಾರದ ದುರಾಡಳಿತ ಭ್ರಷ್ಟಾಚಾರ ರಾಜ್ಯದಲ್ಲಿ ನಿರುದ್ಯೋಗವು ವ್ಯಾಪಕವಾಗಿ ವೃದ್ಧಿಸಲು ಕಾರಣವಾಗಿದೆ ಮತ್ತು ಸಾಮಾಜಿಕ ಶೋಭೆಗೆ ಕಾರಣವಾಗಿದೆ ಇದರಿಂದ ರಾಜ್ಯದಲ್ಲಿ ಸುಲಿಗೆ ಕಳ್ಳತನ ದರೋಡೆ ಅಂತ ಅಪರಾಧಗಳು ಹೆಚ್ಚಾಗುವಂತೆ ಹಾಗೂ ಡ್ರಗ್ಸ್ ಹಾಕು ಬೆಟ್ಟಿಂಗ್ ನಂತಹ ವ್ಯಸನಕ್ಕೆ ಬಲಿಯಾಗಲು ಕೂಡ ಕಾರಣವಾಗಿದೆ ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ವ್ಯಾಪಕ ಬಳಕೆಯಿಂದ ಅನೇಕ ಉದ್ಯೋಗಗಳು ಅಸ್ತಿತ್ವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಇಂಥ ಪರಿಸ್ಥಿತಿಯನ್ನ ಮುಂದಾಲೋಚನೆಯಿಂದ ಗ್ರಹಿಸಿ ಜಾಗೃತ ಕ್ರಮಗಳನ್ನು ಕೈಗೊಂಡು ಉದ್ಯೋಗಗಳನ್ನು ಸೃಷ್ಟಿಸಿ ನಿರುದ್ಯೋಗ ಸಮಸ್ಯೆ ನಿವಾರಿಸಬೇಕಾದ ಸರ್ಕಾರಗಳು ಕೇವಲ ಬಾಯಿ ಚಪಲಕ್ಕೆ ಮಾತನಾಡಿ ನಿರಂತರವಾಗಿ ಯುವ ಜನರಿಗೆ ಮೋಸ ಮಾಡುತ್ತಿವೆ.
ಈ ಸಮಸ್ಯೆಗಳನ್ನ ನಿವಾರಿಸಿ ರಾಜ್ಯದ ಯುವ ಜನರಿಗೆ ಹೆಚ್ಚಿನ ಉದ್ಯೋಗವಕಾಶಗಳು ಲಭ್ಯವಾಗುವಂತೆ ಮಾಡಬೇಕಾದ ಮತ್ತು ಉದ್ಯೋಗವು ಪ್ರತಿ ಯೋಗ ಯುವಜನರ ಹಕ್ಕಾಗಿಸುವ ಬೃಹತ್ ಕೆಲಸ ನಮ್ಮೆಲ್ಲರ ಮುಂದಿದೆ ಇದನ್ನ ನಿರ್ವಹಿಸಬೇಕಾದ ಸರಕಾರಕ್ಕೆ ತನ್ನ ಜವಾಬ್ದಾರಿಯನ್ನ ನೆನಪಿಸಿ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ವಾಗುವಂತೆ ಮಾಡುವ ಬಗ್ಗೆ ಸ್ವಾಮಿ ವಿವೇಕಾನಂದರ ಜಯಂತಿಯ ಸಂದರ್ಭದಲ್ಲಿ ಉದ್ಯೋಗಕ್ಕಾಗಿ ಕನ್ನಡಿಗರು ಯುವಜನರ ಹಕ್ ಒತ್ತಾಯ ಸಮಾವೇಶವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಬೆಳಗಾವಿಯಲ್ಲಿ ಇದೇ ಜನವರಿ 26ರಂದು ಭಾನುವಾರ ಗಣರಾಜ್ಯೋತ್ಸವದ ದಿನದಂದು ಸರ್ದಾರ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಈ ಸಮಾವೇಶಕ್ಕೆ ರಾಜ್ಯದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡುತ್ತೇವೆ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಸಿದ್ದು ಕಲಬುರಗಿಯವರು ಕರೆ ನೀಡಿರುತ್ತಾರೆ
ವರದಿ :ಬಸವರಾಜ ಕೋಲ್ಕಾರ