ಉಚ್ಚಿಲ ನಾಗರಿಕ ಹೋರಾಟ ಸಮಿತಿವತಿಯಿಂದ ಹಲವು ಬೇಡಿಕೆ ಅಗ್ರಹಿಸಿ ರಸ್ತೆ ತಡೆ ಬೃಹತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ರಸ್ತೆ ಅಪಘಾತದಲ್ಲಿ 56 ಜೀವ ಬಳಿಯನ್ನು ತೆಗೆದುಕೊಂಡಿದೆ ಇದಕ್ಕೆ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷವೆ ಕಾರಣ ಸಸ್ತಾನ ಟೋಲ್ ಗೆಟ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಟೋಲ್ ರಿಯಾಯ್ತಿ ಇದ್ದು ಇಲ್ಲಿಯೂ ಕೂಡ ಅನ್ವಯ ಆಗಬೇಕು ಸರಿಯಾಗಿ ಸರ್ವಿಸ್ ರೋಡಿನ ವ್ಯವಸ್ಥೆ ಇಲ್ಲ ವೇಗ ತಡೆ ಅಳವಡಿಕೆ ಮಾಡಬೇಕು ಎಂದು ತಿಳಿಸಿದರು ಬೇಡಿಕೆ 1) ಉಚ್ಚಿಲ ಪೇಟೆಯಲ್ಲಿ ವಾಹನ ಕ್ರಾಸಿಂಗ್ ವ್ಯವಸ್ಥೆ 2) ಎರ್ಮಾಳಿನಿಂದ ಡಿವೈಡರ್ನಿಂದ ಅಲ್-ಇನ್ಸಾನ್ ಶಾಲೆಯ ಡಿವೈಡರ್ ತನಕ ಹೆದ್ದಾರಿ ಮಧ್ಯೆ (ಬೈಟ್) ದಾರಿದೀಪ ಅಳವಡಿಕೆ. 3) ಉಚ್ಚಿಲ ಪೇಟೆಯಲ್ಲಿ ಐಮಾಸ್ ಲೈಟ್ ಅಳವಡಿಸುವಿಕೆ. 4) ಉಚ್ಚಿಲ ಪೇಟೆಯಲ್ಲಿ ಪಾದಾಚಾರಿಗಳು ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್ ವ್ಯವಸ್ಥೆ, 5) ಸರ್ವೀಸ್ ರಸ್ತೆಯಲ್ಲಿ ನೀರು ಹಾದು ಹೋಗಲು ಸಮರ್ಪಕ ವ್ಯವಸ್ಥೆ, 6) ಮೂಳೂರು ಯೂನಿಯನ್ ಬ್ಯಾಂಕ್ ಹತ್ತಿರದ ಡಿವೈಡರ್ ಕ್ರಾಸಿಂಗ್ನ ಕೊನೆಯಲ್ಲಿ ಸಮರ್ಪಕವಾದ ಕ್ರಾಸಿಂಗ್ ವ್ಯವಸ್ಥೆ, 6) ಸರ್ವಿಸ್ ರಸ್ತೆಯ ಡಿವೈಡರ್ನ ಮಧ್ಯೆ ಕಬ್ಬಿಣದ ತಡೆಬೇಲಿ ಅಳವಡಿಸುವಿಕೆ. 7) ಸರ್ವಿಸ್ ರಸ್ತೆಯ ಸೂಕ್ತವಾದ ಸ್ಥಳಗಳಲ್ಲಿ “ರಸ್ತೆ ಉಬ್ಬು” (Humps) ಹಾಕುವಿಕೆ. ಪ್ರತಿಭಟನಾ ಸಂದರ್ಭ ಉಚ್ಚಿಲ ಪೇಟೆಯ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಲಾಯಿತು ಪ್ರತಿಭಟನಾ ಸಭೆಯಲ್ಲಿ ಉಡುಪಿ ಚಿಕ್ಕಮಂಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಕಾಪು ತಹಸಿಲ್ದಾರ್ ಪ್ರತಿಭಾ ಆರ್, ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಜಾವೇದ್ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಸಹಿತ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಸಭೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಯೋಗೀಶ್ ಶೆಟ್ಟಿ, ಶೇಖರ್ ಹೆಜಮಾಡಿ, ಎಂ.ಎ ಗಫರ್ ಸಹಿತ ಗಣ್ಯರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭ ಉಚ್ಚಿಲ ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಸಿರಾಜ್ ಉಚ್ಚಿಲ ಸಹಿತ ನೂರಾರು ಜನರು ಉಪಸ್ಥಿತರಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
