ಕುಂದಾ ನಗರಿ ಬೆಳಗಾಂವ ಜಿಲ್ಲೆಯ ಸಹಕಾರಿ ಹಾಲು ಉತ್ಪಾದಕರ ಸಂಘ ಒಕ್ಕೂಟ ಸಭಾಭವನದಲ್ಲಿ ಬೆಳಗಾಂವಿ ಜಿಲ್ಲೆಯ ಎಲ್ಲಾ ತಾಲೂಕಿನ ಹಾಲು ಮತ್ತು ನಂದಿನಿ ಹಾಲಿನ ಉತ್ಪನ್ನಗಳ ಮಾರಾಟಗಾರರ ಸಭೆಯನ್ನು ಕರೆಯಲಾಗಿದ್ಧು ಬೆಳಗ್ಗೆ 11 ಗಂಟೆಗೆ ಸಭೆಯು ಪ್ರಾರಂಭವಾಯಿತು. ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಮತ್ತು ಹಾಲಿನಿ ಉತ್ಪನ್ನಗಳ ಮಾರಾಟದ ಅಧಿಕಾರಿಗಳಾದ ಮುಜಾವುದ್ದೀನ್ ಸರ್ ರವರು ಬೆಳಗಾಂವ ಜಿಲ್ಲೆಯ ಎಲ್ಲಾ ತಾಲೂಕಿನ ಮಾರಾಟಗಾರರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನಂದಿನಿ ಹಾಲಿನ ವ್ಯಾಪಾರ ನಂದಿನ ಹಾಲಿನ ಉತ್ಪನ್ನ ಮಾರಾಟದ ಬಗ್ಗೆ ತಿಳಿಹೇಳಿ ಬೆರೆ ಹಾಲಿನ ಕಂಪನಿಯವರು ನಮ್ಮ ನಂದಿನಿ ಉತ್ಪನ್ನಗಳ ಜೋಡಿ ಪೈಪೋಟಿ ಮಾಡುತ್ತಿದ್ದಾರೆ, ನಮ್ಮ ನಂದಿನಿ ಹಾಲಿನ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳಬೇಕು, ನಂದಿನಿ ಉತ್ಪನ್ನಗಳು ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಹಾನಿಕರ ಆಗಲಾರದು, ಬೇರೆ ಕಂಪನಿಯಲ್ಲಿ ಕಲಬೆರಿಕೆ ನಡೆಯಬದು ಆದರೆ? ನಮ್ಮ ನಂದಿನಿ ಉತ್ಪನ್ನಗಳಲ್ಲಿ ಕಲಬೆರಿಕೆ ನಡೆಯಲಾರದು ಎಂದು ಸಾರ್ವಜನಿಕರಿಗೆ ತಿಳಿಹೇಳಿ ನಿಮ್ಮ ವ್ಯಾಪಾರಗಳನ್ನು ಇನ್ನೂ ಹೆಚ್ಚಿಸಿಕೊಳ್ಳಿ. ನಮ್ಮ ಉತ್ಪನ್ನಗಳ ಉಪಯೋಗ ಮಾಡಿದರೆ ಅವರ ಆರೋಗ್ಯವು ಒಳ್ಳೆಯದಾಗಿರುತ್ತದೆ ಎಂದರು, ಸಭೆಯ ನಂತರ ಎಲ್ಲ ಮಾರಾಟಗಾರರಿಗೆ ಹಾಲು ವಿತರಣ ಬ್ಯಾಗು ಟಿ-ಶರ್ಟು ಬುಕ್ಕು ವಿತರಣೆ ಮಾಡಿದರು, ಈ ಸಂದರ್ಭದಲ್ಲಿ ಶ್ರೀಮತಿ ತ್ರಿವೇಣಿ. ಉಮೇಶ. ಸಚಿನ. ಶ್ರೀಕಾಂತ. ಚೇತನ. ಕರಿಯಪ್ಪ. ವಿರೂಪಾಕ್ಷ ಮತ್ತು ಸಹ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ