ಕಾಳಗಿ: ತಾಲ್ಲೂಕಿನ ಮಾಡಬೂಳ ಸರಕಾರಿ ಶಾಲೆಗೆ ನೂತನ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಡಿ ಭೋಜಗೊಂಡ ಆಯ್ಕೆಯಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿತು ಈಗ ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದವರ ಸಂಖ್ಯೆ ಹೇಚ್ಚಿದೆ ಅವರು ಮರಳಿ ತಮ್ಮ ಮಕ್ಕಳಿಗೆ ಸರಕಾರಿ ಶಾಲೆಗಳಿಗೆ ಸೇರಿಸಬೇಕು ಎಂಬ ಮನಸ್ಥಿತಿ ಬದಲಾಗುವಂತೆ ಸರಕಾರಿ ಶಾಲೆಗಳು ಅಭಿವೃದ್ಧಿ ಮಾಡುವಲ್ಲಿ ಸರ್ಕಾರ ಅದು ಎಷ್ಟೋ ಅನುದಾನ ಕೊಡುತ್ತಿದೆ ಅದನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯಕ್ಕೆ ಮಾದರಿ ಶಾಲೆಯನ್ನಾಗಿ ಮಾಡಬೇಕು ಮತ್ತು ಹಳ್ಳಿಯಲ್ಲಿ ಓದಿನ ಜೊತೆ ಮಕ್ಕಳಿಗೆ ಕ್ರೀಡೆಗಳಿಗೂ ಹೆಚ್ಚು ಮಹತ್ವ ನೀಡಿ ಎಂದು ಶಂಕರ್ ಪೂಜಾರಿ ಚಿತ್ತಾಪುರ ತಿಳಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪೂಜಾರಿ ಹಾಗೂ ಸಹಬಳಗ ಸೇರಿ ಸನ್ಮಾನಿಸಿ ಗೌರವಿಸಿದರು ಈ ವೇಳೆಯಲ್ಲಿ ಹಿರಿಯ ಮಾರ್ಗದರ್ಶಿ ಎಸ್ ಬಿ ಐ ಮುಖ್ಯ ವ್ಯವಸ್ಥಾಪಕ ಸದಾಶಿವ ವಿ ರಾತ್ರಿಕರ್ ,ಸಂತೋಷ ಗೂಗಲೂತ್,ವಿಲಾಸ ಬಾಬು,ಮಲ್ಲಿಕಾರ್ಜುನ ರಾಜಾಪುರ,ಸುಧಾಕರ ಪವಾರ್,ಭಾಗ್ಯವಂತ ಮಲಘಾಣ, ಶಶಿಕುಮಾರ್ ವಚ್ಚಾ,ವಿಕಾಸ ಉಪ್ಪಿನ, ಇತರರೂ ಇದ್ದರೂ
POST
ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ ವಿಜೃಂಭಣೆಯಿಂದ ನೆರವೇರಿತು
ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ ವಿಜೃಂಭಣೆಯಿಂದ ನೆರವೇರಿತು
ಹನಸೋಗೆ ಫೆಬ್ರವರಿ 20: ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆಬ್ರವರಿ 20, ಗುರುವಾರರಂದು ಪೋಷಕರಿಗಾಗಿ ವಿಶೇಷ ಕ್ರೀಡಾಕೂಟವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಪೋಷಕರು ಉತ್ಸಾಹದಿಂದ ಭಾಗವಹಿಸಿ, ಕ್ರೀಡಾಸ್ಪರ್ಧೆಗಳನ್ನು ಆನಂದಿಸಿದರು.
ಕಾರ್ಯಕ್ರಮವನ್ನು ಶಾಲೆಯ ಅಧ್ಯಕ್ಷ ಹರ್ಷ H K. ಉದ್ಘಾಟಿಸಿ, “ಪೋಷಕರ ಕ್ರೀಡಾಕೂಟವು ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲ, ಮಕ್ಕಳೊಂದಿಗೆ ಒಡನಾಟವನ್ನೂ ಹೆಚ್ಚಿಸುತ್ತದೆ,” ಎಂದು ಹೇಳಿದರು. ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪರಮೇಶ ಎಚ್.ಎನ್. ವಿಶೇಷ ಅತಿಥಿಯಾಗಿ ಪಾಲ್ಗೊಂಡು, “ಪೋಷಕರು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಅವರು ಮಕ್ಕಳಿಗೆ ಮಾದರಿಯಾಗುತ್ತಾರೆ,” ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ ಎಚ್.ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, “ಇಂತಹ ಕಾರ್ಯಕ್ರಮಗಳು ಶಾಲೆಯ ಒಗ್ಗಟ್ಟನ್ನು ಮತ್ತು ಸಂಸ್ಕೃತಿಯನ್ನು ದೃಢಗೊಳಿಸುತ್ತವೆ,” ಎಂದು ಅಭಿಪ್ರಾಯಪಟ್ಟರು.
ಈ ಬಾರಿ ಪೋಷಕರಿಗಾಗಿ ಮಡಿಕೆ ಹೊಡೆಯುವುದು, ಹಾಡುಗಾರಿಕೆ, ಲೇಮನ್ ಮತ್ತು ಸ್ಪೂನ್ ಓಟ, ಪಿಕ್ ಅಂಡ್ ಸ್ಪೀಚ್ ಮುಂತಾದ ಸ್ಪರ್ಧೆಗಳು ಆಯೋಜಿಸಲಾಗಿತ್ತು. ಪೋಷಕರು ತಮ್ಮ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿ, ಸ್ಫೂರ್ತಿ ತುಂಬಿದ ಸ್ಪರ್ಧೆಗಳನ್ನು ನಡೆಸಿದರು.
ಈ ಕಾರ್ಯಕ್ರಮದ ಯಶಸ್ವೀ ಆಯೋಜನೆಯಲ್ಲಿ ಶಿಕ್ಷಕರಾದ ದೇವರಾಜ ಎಚ್.ಪಿ., ಕಿರಣ್ ಟಿ., ಯೋಗೀಶ್ ಹೆಚ್.ಎಮ್., ಚಂದ್ರನಾಯಕ, ನೆಹಾ ಕೌಸರ್, ರಂಜಿತಾ, ಶುಭಾ ಹಾಗೂ ಸಿಬ್ಬಂದಿಗಳಾದ ನಾಗೇಶ, ರಾಣಿ, ಸೌಮ್ಯಾ, ಗೋಪಿನಾಯಕ ಶ್ರಮಿಸಿದರು.
ಸ್ಪರ್ಧೆಗಳ ವಿಜೇತರಿಗೆ ಶಾಲಾ ವಾರ್ಷಿಕೋತ್ಸವ ದಿನ ಬಹುಮಾನ ವಿತರಿಸಲಾಗುವುದು. ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕರು, ಆಡಳಿತ ಮಂಡಳಿ ಹಾಗೂ ಪೋಷಕರು ಪರಸ್ಪರ ಅಭಿನಂದನೆಗಳೊಂದಿಗೆ ಕ್ರೀಡಾಕೂಟವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.
ಆಮೆಲದಲ್ಲಿ ಶಿವಾಜಿ ಜಯಂತಿ ಆಚರಣೆ
ಆಲಮೇಲ: ಪಟ್ಟಣದ ದೇವಿ ಮಂದಿರದಲ್ಲಿ 395ನೇಯ ಶಿವಾಜಿ ಜಯಂತಿಯನ್ನು ಯುವಕರು ಸರಳ ಮತ್ತು ಸಜ್ಜನಿಕೆಯಿಂದ ಆಚರಿಸಲಾಯಿತು
ಮುಖಂಡರಾದ ಶ್ರೀಮಂತ ದುದ್ದಗಿ ಫೋಟೋ ಪೂಜಾ ನೆರವೇರಿಸಿ ಭಾರತದ ಅತ್ಯಂತ ಗೌರವಾನ್ವಿತ ಯೋಧರು ಮತ್ತು ಆಡಳಿತಾಗಾರರಲ್ಲಿ ಒಬ್ಬರಾದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಪ್ರತಿ ವರ್ಷ ಫೆಬ್ರವರಿ 19 ರಂದು ಶಿವಾಜಿ ಜಯಂತಿಯನ್ನು ಆಚರಿಸಲಾಗುತ್ತಿದೆ.
1630ರಲ್ಲಿ ಜನಿಸಿದ ಶಿವಾಜಿ ಮಹಾರಾಜರ ಭಾರತೀಯ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ ಪೌರಾಣಿಕ ಮರಾಠ ರಾಜರಾಗಿದ್ದರು
ಒಂದು ವೇಳೆ ಶಿವಾಜಿ ಇರದಿದ್ದರೆ ಹಿಂದೂಗಳು ನಾಶವಾಗುತ್ತಿದ್ದರು ಅನ್ನುವ ಸಂದೇಶ ಕೂಡ ನಮ್ಮಲ್ಲಿ ಹುಟ್ಟುತ್ತದೆ.
ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸುವುದರಲ್ಲಿ ಅವರ ಕೊಡುಗೆ ಅಪಾರವಾದದ್ದು ತಮ್ಮ ಅತ್ಯುತ್ತಮ ನಾಯಕತ್ವ ಆಡಳಿತ ತಂತ್ರಗಳು ಮತ್ತು ಪ್ರಭುತ್ವ ಆಡಳಿತಕ್ಕೆ ಹೆಸರುವಾಸಿಯಾಗಿದ್ದರು ಅವರು ಆಳ್ವಿಕೆಯ ಅವಧಿಯ ಆಡಳಿತ ಮತ್ತು ನ್ಯಾಯಾಲಯ ವಲಯದಲ್ಲಿ ಪರಶಿಯನ್ ಭಾಷೆಕಿಂತ ಮರಾಠಿ ಮತ್ತು ಸಂಸ್ಕೃತಕ್ಕೆ ಆದ್ಯತೆ ನೀಡುವ ಮೂಲಕ ಗುರುತಿಸಲ್ಪಟ್ಟಿತ್ತು ಇದು ಅವರ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಸೂಚಿಸುತ್ತದೆ ಎಂದು ಹೇಳಿದರು
ಪಟ್ಟಣದ ಊರಿನ ಪ್ರಮುಖ ಬೀದಿಗಳ ಮುಖಾಂತರ ಶಿವಾಜಿ ಮೂರ್ತಿಯನ್ನು ಬೈಕ್ ರ್ಯಾಲಿ ಮುಖಾಂತರ ಮೆರವಣಿಗೆ ಮಾಡಿದರು.
ಇದೇ ಸಂದರ್ಭದಲ್ಲಿ ಗುರುರಾಜ್ ಕೋಣ ಶಿರಸಗಿ. ಹಣಮಂತ ರಜಪೂತ ಸ್ವಾಮಿ ಸೇನೆಯ ಅಧ್ಯಕ್ಷ.ರವಿ ಬಂಡಗಾರ್.ಅಲೋಕ ಬಡದಾಳ. ರಾಹುಲ್ ಕುಮಸಿಗಿ. ಕಮಲಾಕರ್ ಪತ್ತಾರ.ಅಭಿಷೇಕ್ ಅಲೋಣಿ.ಸಂಗೀತ.ರಾಹುಲ್ ಬಗಲಿ.ಸಿದ್ದರಾಮ ಕುಮಸಗಿ.ಶಿವು ರಜಪುತ.
ವರದಿ. ಉಮೇಶ ಕಟಬರ
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ತಾಲ್ಲುಕು ಸಮಿತಿ ಸಭೆ
ದಿನಾಂಕ 19/02/2025ರ ಬುದವಾರ ಸಾಲಿಗ್ರಾಮದ ಪ್ರವಾಶಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ತಾಲ್ಲುಕು ಸಮಿತಿ ಸಭೆಯನ್ನು ಜಿಲ್ಲಾ ಪ್ರದಾನ ಸಂಚಾಲಕರಾದ ಮಲ್ಲಹಳ್ಳಿನಾರಾಯಣ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕೋಮುವಾದ ಹೆಚ್ಚುತ್ತಿದ್ದು ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು ಸಂವಿಧಾನ ಬದಲಾಯಿಸಲು ನಾವು ಬಂದಿರುವುದು ಎಂದು ಅರಚುತ್ತಿದ್ದವರನ್ನೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬದಲಾಯಿಸಿದ್ದೇವೆ ಆದರೇ ಯಾವ ಸರ್ಕಾರ ಅಧಿಕಾರಕ್ಕೆ ಬಂದರೇ ದೇಶದ ಶೋಷಿತ ಸಮುದಾಯ ನೆಮ್ಮದಿಯಿಂದ ಇರುತ್ತದೆ ಮತ್ತು ತನ್ನೆಲ್ಲ ಹಕ್ಕುಗಳನ್ನು ಪಡೆಯುತ್ತದೆ ಎಂದು ಬಿ ಜೆ ಪಿ ಯ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ತಂದೇವೋ ಅದೇ ಸರ್ಕಾರದ ಕೆಲವು ಶಾಸಕರು ದಲಿತ ಚಳುವಳಿಯ ಶ್ರಮವನ್ನು ಮರೆತು ಅವರನ್ನೇ ಗುರಿಯಾಗಿಸಿ ಪೊಲೀಸ್ ಇಲಾಖೆನ್ನು ಬಳಸಿಕೊಂಡು ಚಳುವಳಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಖಂಡನಿಯ ಇಂತವರ ನಡೆಯನ್ನು ಮುಂದಿನ ದಿನಗಳಲ್ಲಿ ಚಳುವಳಿ ಗಂಭೀರವಾಗಿ ಪರಿಗಣಿಸುತ್ತದೆ. ತಾಲೂಕಿನಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಗುರ್ತಿಸಿ ಅವರಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಘಟನೆ ಮುಂದಾಗಬೇಕಿದೆ. ಭೂಮಿ, ಸ್ಮಶಾನ,ರೈತರ ಸಾಗುವಳಿ ಮುಂತಾದ ಸಮಸ್ಯಗಳು ಹೆಚ್ಚಾಗಿದ್ದು ಪರಿಹರಿಸುವ ನಿಟ್ಟಿನಲ್ಲಿ ಚಳುವಳಿ ಕಾರ್ಯಕ್ರಮ ರೂಪಿಸುವಂತೆ ತಿಳಿಸಿದರು. ಜಿಲ್ಲಾ ಸಂಘಟನಾ ಸಂಚಾಲಕರಾದ ಕಳ್ಳಿಮುದ್ದನಹಳ್ಳಿ ಚಂದ್ರು ಮಾತನಾಡಿ ಕೆ ಆರ್ ನಗರ ಮತ್ತು ಸಾಲಿಗ್ರಾಮ ಒಂದೇ ತಾಲೂಕು ಆಗಿದ್ದಾಗ ಎಲ್ಲರೂ ಒಟ್ಟಾಗಿ ಹೋರಾಟ ರೂಪಿಸಿ ಸಮುದಾಯಗಳ ಸಮಸ್ಯಗಳ ಬಗ್ಗೆ ನ್ಯಾಯ ಕಂದುಕೊಳ್ಳುತ್ತಿದ್ದೆವು ಈಗ ಎರಡು ಬೇರೆ ಬೇರೆಯಾದ ಮೇಲೆ ಎರಡು ತಾಲೂಕುಗಳಲ್ಲೂ ಪ್ರತ್ಯಕವಾದ ಸಂಘಟನೆಯನ್ನು ಕಟ್ಟಬೇಕಿದೆ ಎಂದರು
ನೂತನವಾಗಿ ರಚಣೆಯಾಗಿರುವ ಸಾಲಿಗ್ರಾಮ ತಾಲೂಕಿನಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಬೇಕು ಹಾಗೂ ತಾಲೂಕು ಕೇಂದ್ರ ಸ್ಥಾನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣ ಮಾಡಬೇಕು, ಹಾಗೂ ತಾಲೂಕಿನಾದ್ಯಂತ ಹಲವು ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನವೇ ಇರುವುದಿಲ್ಲ ಇನ್ನೂ ಕೆಲವು ಕಡೆ ಇರುವ ಸ್ಮಶಾನ ಒತ್ತುವರಿಯಾಗಿವೆ, ಮತ್ತೆ ಕೆಲವು ಕಡೆ ದಲಿತರು ಮತ್ತು ಸವರ್ಣಿಯರ ನಡುವೆ ಭೂ ಸಮಸ್ಯೆಗಳು ಹೆಚ್ಚಾಗಿವೆ ಕೂಡಲೆ ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿ ಬಗೆಹರಿಸುವಂತೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪದಾಧಿಕಾರಿ ತಾಲೂಕು ಪ್ರಧಾನ ಸಂಚಾಲಕ ಸುಧಾಕರ್ ಸೀಗವಾಳು ಸಂಘಟನಾ ಸಂಚಾಲಕರುಗಳಾದ ಪ್ರಭಾಕರ ಎಲೆಮುದ್ದನಹಳ್ಳಿ, ದೇವರಾಜು ಮಲುಗನಹಳ್ಳಿ, ಸ್ವಾಮಿ ಕರ್ಪೂರವಳ್ಳಿ ,ಮಹಾಂತೇಶ ಲಕ್ಷ್ಮಿಪುರ,ಮಹೇಶ ಎಲೆಮುದ್ದನಹಳ್ಳಿ, ಕೃಷ್ಣ ಬಳ್ಳೂರು, ರಂಗಸ್ವಾಮಿ ಸಾಲಿಗ್ರಾಮ,ಮತ್ತು ಖಜಾಂಚಿ ಗುರು ಬೆಟ್ಟಹಳ್ಳಿ ಹಾಗೂ ತಾಲೂಕು ಸಮಿತಿ ಸದಸ್ಯರುಗಳಾದ ಸೀಗವಾಳು ಸುಧಾಕರ್ , ಪುಷ್ಪಾವತಿ ನಗರ,ಶಂಕರ ಗಾಯನ ಹಳ್ಳಿ,ಮನು ಸಿಗವಾಳು, ರಘು ಶೀಗವಾಳು ಮುಂತಾದವರು ಹಾಜರಿದ್ದರು
ಜಿಂಕೆಗಳ ಹಾವಳಿ, ಹೂ ಕೋಸ್ ಬೆಳೆ ನಾಶ.
ಜಿಂಕೆ ಮತ್ತು ಕಾಡು ಹಂದಿಗಳು ರಾತ್ರಿ ಸಮದಲ್ಲಿ ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದಿದ್ದ ಹೂಕೋಸನ್ನು ತಿಂದು ಸಾಶ ಮಾಡಿರುವ ಘಟನೆ ಹುಣಸೂರಿನ. ಹನಗೋಡು ಹೋಬಳಿ ಬಿ ಆರ್ ಕಾವಲು 3ನೇ ಕಾಲೋನಿ ಗ್ರಾಮದಲ್ಲಿ ನಡೆದಿದೆ. ಬಿ ಆರ್ ಕಾವಲು ಗ್ರಾಮದ ರೈತ ನಾಗೇಗೌಡ ರವರಿಗೆ ಸೇರಿದ ಜಮೀನಿನಲ್ಲಿ ರಾತ್ರಿ ವೇಳೆಯಲ್ಲಿ ಜಿಂಕೆಗಳು ಬೆಳೆಯನ್ನು ತಿಂದು ನಾಶ ಮಾಡಿವೆ. ಸುಮಾರು ಅರ್ಧ ಎಕರೆಯಷ್ಟು, ಬೆಳೆಯನ್ನು ತಿಂದಿದ್ದು, ಅಂದಾಜು 40 ಸಾವಿರ ರೂಪಾಯಿಗಳಷ್ಟು ನಷ್ಟವಾಗಿದೆ. ಬೆಳೆ ಕಟಾವಿಗೆ ಬರುವ ಹೊತ್ತಿನಲ್ಲಿ ಪ್ರಾಣಿಗಳು ನಾಶ ಮಾಡುತ್ತಿರುವುದು ‘ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ’ ಎನ್ನುವಂತೆ ಸಾಲ ಮಾಡಿ ವ್ಯವಸಾಯ ಮಾಡಿದ್ದರೂ ಈ ರೀತಿಯ ಬೆಳೆ ನಾಶದಿಂದ ರೈತ ಮತ್ತೆ ಸಾಲದ ಸುಳಿಗೆ ಸಿಲುಕುವಂತಾಗುತ್ತಿದೆ. ಮೊದಲೆ ಬೆಳೆದ ಬೆಳೆಗೆ ಬೆಲೆಯಿಲ್ಲದೆ ಕಂಗಾಲಾಗಿರುವ ರೈತರಿಗೆ ಈ ರೀತಿಯ ಕಾಡು ಪ್ರಾಣಿಗಳ ಹಾವಳಿಯಿಂದ ಮತ್ತಷ್ಟು ಸಂಕಷ್ಟ ಎದುರಾಗುತ್ತಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಗಮನವಹಿಸಿ ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಿ ಸೂಕ್ತ ಪರಿಹಾರ ನೀಡಬೇಕಾಗಿದೆ.
ಕರ್ನಾಟಕ ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಸೌಲಭ್ಯಗಳ ಮಾಹಿತಿ
ಅರಸೀಕೆರೆ ನಗರದ ಎಸ್ ಎಂ ಜೆ ಸಮುದಾಯ ಭವನದಲ್ಲಿ
ದಿನಾಂಕ : 22/02/2025 ರ ಶನಿವಾರದಂದ್ದು ಮಧ್ಯಾಹ್ನ 2.30 ಘಂಟೆಗೆ ಸರಿಯಾಗಿ ಸುನ್ನಿ ಮುಸ್ಲಿಂ ಜಮಾತ್ ಕಮಿಟಿ,, ಸುಲ್ತಾನುಲ್ ಹಿಂದ್ ಎಜುಕೇಶನಲ್ & ಜಾರಿಟೇಬಲ್ ಟ್ರಸ್ಟ್,, ಶಾದಿ ಮಹಲ್ ಕಮಿಟಿ ಮತ್ತು ನೌಜವಾನ ನೇ ಅಹಲೇ ಸುನತ್,, ಇವರುಗಳ ವತಿಯಿಂದ ರಾಜ್ಯ ಸರ್ಕಾರದಿಂದ ಅಲ್ಪಾಸಂಖ್ಯಾತರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅಲ್ಪಾಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಗಳನ್ನು ನೀಡಲು ಇಲಾಖೆಯಾ ಅಧಿಕಾರಿಗಳು ಆಗಮಿಸುತಿದ್ದಾರೆ. ಆದ್ದರಿಂದ ತಾವುಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿ ಪಡೆದುಕೊಂಡು ಇದರ ಸದುಪಯೋಗ ಪಡೆಕೊಳ್ಳಬೇಕ್ಕಾಗಿ ಸುಲ್ತಾನುಲ್ ಹಿಂದ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಪರ್ವೀಜ್ ಅಹಮದ್ ಅವರು ಮನವಿ ಮಾಡಿಕೊಂಡರು. ವರದಿ ಪರ್ವಿಜ್ ಅಹಮದ್ ಅರಸೀಕೆರೆ
ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡ ನಟ ರಘು ಭಟ್
ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡ ನಟ ರಘು ಭಟ್ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು
ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಿಮಗೊಂದು ಸಿಹಿ ಸುದ್ದಿ ಚಿತ್ರದ ನಿರ್ದೇಶಕ ಸುಧೀಂದ್ರ ನಾಡಿಗರ್ ಮತ್ತು ಕಾರ್ಯಕಾರಿ ನಿರ್ಮಾಪಕಿ ನಿಶಿತಾರವರು ಮಾಧ್ಯಮಗೋಷ್ಟಿ.
ನಿಮಗೊಂದು ಸಿಹಿ ಸುದ್ದಿ ಚಲನಚಿತ್ರ ಪರ್ಪಲ್ ರಾಕ್ ಎಂಟರ್ಟೈನರ್ ಪಾಲುದಾರ ಗಣೇಶ ಪಾಪಣ್ಣರವರ 2020ರಲ್ಲಿ solo ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮತ್ತು ಕಥೆ ಮತ್ತು ಚಿತ್ರಕಥೆ ನಾಯಕನಾಗಿ ರಘು ಭಟ್ ರವರು ನಟಿಸಿದ್ದರು.
ಗೋವಾದಲ್ಲಿ ಚಿತ್ರಕರಣ ಪೂರ್ಣಗೊಂಡ ನಂತರ ಕೊರೊನಾ ಸಂದರ್ಭದಲ್ಲಿ ಚಲನಚಿತ್ರ ಬಿಡುಗಡೆಗೆ ವಿಳಂಬವಾಯಿತು. ನಂತರ ಚಲನಚಿತ್ರ ಅವ್ಯಕ್ತ ಫಿಲ್ಮ್ ಮಾಲೀಕರಾದ ಹರೀಶ್ ಎನ್.ಗೌಡರವರಿಗೆ ಮಾರಾಟ ಮಾಡಿದರು.
ಸೆನ್ಸಾರ್ ಮಂಡಳಿಯಲ್ಲಿ ಚಿತ್ರ ಸೆನ್ಸಾರ್ ಆಗಿ ಹೊರ ಬಂದ ಮೇಲೆ ನಿರ್ದೇಶಕರಾದ ಸುಧೀಂದ್ರ ನಾಡಿಗರ್ ನಿರ್ದೇಶನ ಎಂಬ ಹೆಸರು ನಾಪತ್ತೆಯಾಯಿತು.
ನಿರ್ದೇಶನ ರಘು ಭಟ್ ಎಂಬ ಹೆಸರು ಹಾಕಲಾಗಿತ್ತು ಈ ಅನ್ಯಾಯದ ವಿರುದ್ದ ಸುಧೀಂದ್ರ ನಾಡಿಗರ್ ರವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನಮಗೆ ನ್ಯಾಯ ಕೊಡಿ ಎಂದು ಮನವಿ ಸಲ್ಲಿಸಿದರು.
ನಾನು ಕಷ್ಟಪಟ್ಟು ನಿರ್ದೇಶನ ಮಾಡಿದ್ದೇನೆ ಹಾಗೂ ಇದಕ್ಕೆ ನನ್ನ ತಂಡದ ಸಹಕಾರವಿದೆ ಅದರೆ ಏಕಾಏಕಿ ನಿರ್ದೇಶನ ಮಾಡಿದರವ ಹೆಸರು ಬದಲಾವಣೆ ಮಾಡಿರುವುದು ಅನ್ಯಾಯ ಇದರ ಬಗ್ಗೆ ಚಿತ್ರ ಖರೀದಿ ಮಾಡಿದ ಹರೀಶ್ ಎನ್.ಗೌಡರವರಿಗೆ ಹೇಳಿದರೆ “ನನ್ನಿಷ್ಟ ನಾನು ಯಾರ ಹೆಸರು ಬೇಕಾದರು ಹಾಕಿಕೊಳ್ಳುತ್ತೇನೆ ಎಂದು ಉಡಾಫೆ ಉತ್ತರ ನೀಡುತ್ತಾರೆ”.
ಚಲನಚಿತ್ರ ನಿರ್ಮಾಣ ಸಂದರ್ಭದಲ್ಲಿ ನಿರ್ದೇಶನಕ್ಕೆ ಸಿಗಬೇಕಾದ ಹಣ ಸಿಕ್ಕಿಲ್ಲ ಹೋಗಲಿ , ಚಲನಚಿತ್ರ ನಿರ್ದೇಶನ ಮಾಡಿರುವ ನನ್ನ ಹೆಸರನ್ನ ತೆಗೆದಿರುವದು ದುಖಃದ ಸಂಗತಿ ಕೊಡಲೆ ಚಲನಚಿತ್ರ ವಾಣಿಜ್ಯ ಮಂಡಳಿಯವರು ಮಧ್ಯ ಪ್ರವೇಶ ಮಾಡಿ ಚಲನಚಿತ್ರದ ನಿರ್ದೇಶನ ಎಂಬುದರಲ್ಲಿ ನನ್ನ ಹೆಸರು ಬಂದರೆ ಸಾಕು ನಾನು ಯಾರಿಗೂ ತೊಂದರೆ ಕೊಡುವುದಿಲ್ಲ ಎಂದು ನಿರ್ದೇಶಕ ಸುಧೀಂದ್ರ ನಾಡಿಗರ್ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.
ಸಾಮಾಜಿಕ ಸುರಕ್ಷ ಯೋಜನೆಗಳನ್ನು ಅರಿವು ಮೂಡಿಸಲು ಪ್ರಾಮಾಣಿಕ ಪ್ರಯತ್ನಮಾಡಿ:ಸಂತೋಷ ಭಾರತೀಯ ಸ್ಟೇಟ್ಸ್ ಬ್ಯಾಂಕ್ ಜಿಲ್ಲಾ ಬ್ಯಾಂಕ್ ಮಾರ್ಗದರ್ಶಿ
ಕಾಳಗಿ: ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಇಲಾಖೆಯಲ್ಲಿನ ಎಲ್ಲಾ ಕೆಲಸಗಳನ್ನು ಬ್ಯಾಂಕ್ನ ಸಹಯೋಗದೊಂದಿಗೆ ತ್ವರಿತವಾಗಿ ತಮ್ಮ ತಮ್ಮ ಕೆಲಸವನ್ನು ಮಾಡಿಕೊಳ್ಳವ ಜೊತೆಯಲ್ಲಿ ಪ್ರದಾನ ಮಂತ್ರಿ ಸುರಕ್ಷ ಭೀಮಾ ಯೋಜನೆ ಮತ್ತು ಪ್ರದಾನ ಮಂತ್ರಿ ಜೀವನ ಜ್ಯೋತಿ ಸುರಕ್ಷ ಭೀಮಾ ಯೋಜನೆ ಬಗ್ಗೆ ಎಲ್ಲಾ ಇಲಾಖೆಯುವರು ಜನರಿಗೆ ಜಾಗೃತಿ ಮೂಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದು ಎಲ್ ಡಿ ಎಂ ಅಧಿಕಾರಿ ಸಂತೋಷ ರವರು ತಿಳಿಸಿದರು.
ಕಾಳಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಲಯ ಮಟ್ಟದ ಬ್ಯಾಂಕ್ ಅಧಿಕಾರಿಗಳು ಮತ್ತು ವಿವಿಧ ತಾಲ್ಲೂಕು ಮಟ್ಟದ ಇಲಾಖೆಯು ಸಮಾಲೋಚನೆ ಸಭೆಯಲ್ಲಿ ಕರ್ನಾಟಕ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ನಲ್ಲಿ ಖಾತೆಗಳನ್ನು ಓಪನ್ ಮಾಡಲು ಅಡ ತಡೆಗಳು ಆಗುತ್ತಿರುವ ವಿಷಯ ನಮ್ಮ ಗಮನಕ್ಕೆ ಬಂದಿದ್ದು ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಸ್ ಎಸ್ ಜಿ ಸಂಘ ಖಾತೆಗಳನ್ನು ತೆಗೆಯಿರಿ ಎಂದು ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಂದಿಗೆ ವಿದ್ಯಾರ್ಥಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ತಾವು ಎನ್ ಸಿ ಪಿ ಐ ಬಗ್ಗೆ ಅರಿವು ಮೂಡಿಸಿ ಆ ವಿದ್ಯಾರ್ಥಿಗಳ ಸಮಸ್ಯೆ ಆದಷ್ಟು ಬೇಗ ಬಗೆಹರಿಸಲು ತಿಳಿಸಿದರು ಹೀಗೆ ವಿವಿಧ ಇಲಾಖೆಯ ಬ್ಯಾಂಕ್ನ ಸಮಸ್ಯೆಗಳನ್ನು ಬಗೆಹರಿಸಿ ಮುಂದಿನ ತಿಂಗಳು ಇದೆ ವಿಷಯ ಕೇಳಿದಾಗ ಕೆಲಸ ಆಗಿದೆ ಎಂದು ತಾವುಗಳು ನಮ್ಮಗೆ ತಿಳಿಸಬೇಕು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕಾಳಗಿ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀ ಘಮಾವತಿ ರಾಠೋಡ ,ಕಾಳಗಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಶ್ರೀ ಸದಾಶಿವ ವಿ ರಾತ್ರಿಕರ್, ತಾಲ್ಲೂಕು ಪಂಚಾಯತ ಮುಖ್ಯಾಧಿಕಾರಿಗಳಾದ ಶ್ರೀ ಬಸಲಿಂಗಪ್ಪ ಡಿಗ್ಗಿ, ಕೃಷಿ ಅಧಿಕಾರಿ ಶ್ರೀಮತಿ ಸರೋಜಾ ಕಲಬುರಗಿ, ಪಟ್ಟಣದ ಪಂಚಾಯತ ಇಲಾಖೆಯ ರೇಣುಕಾ ಕಾಬಾ,ಸಾವಿತ್ರಿ ಒಡೆಯರಾಜ, ತಾಲ್ಲೂಕು ಪಂಚಾಯತ ಎನ್ ಆರ್ ಎಲ್ ಎಂ ಅಧಿಕಾರಿ ಕಲ್ಯಾಣಿ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರೂ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಬಣ ಕಲಬುರಗಿ ಮತ್ತು ಜೇವರ್ಗಿ ರೈತ ಸಂಘಟನೆಯ ಕೆಲವು ಮುಖಂಡರಿಂದ ರೈತರಿಗೆ ಅನ್ಯಾಯ!
ಜೇವರ್ಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಬಣದವರಿಂದ ಕಲಬುರಗಿ ಹಾಗೂ ಜೇವರ್ಗಿ ರೈತ ಸಂಘಟನೆಯ ಕೆಲವು ರೈತ ಸಂಘದ ಮುಖಂಡರಿಂದ ರೈತರಿಗೆ ಅನ್ಯಾಯವಾಗುತ್ತಿರುವುದು. ರೈತರು ತಮ್ಮ ಅಳಲು ನೋವನ್ನು ತೋಡಿಕೊಂಡರು. ಕೇಂದ್ರ ಸರ್ಕಾರದ ಭಾರತೀಯ ಹತ್ತಿ ನಿಗಮ ನಿಯಮಿತ ಮಿಲ್ ಗಳು ಹತ್ತಿ ಬೆಳೆಗೆ ಕೇಂದ್ರ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ರೈತರು ತಮ್ಮ ಹತ್ತಿಯನ್ನು ಸರ್ಕಾರ ಮಿಲ್ ಗಳಿಗೆ ಮಾರಾಟ ಮಾಡಲಿಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಕೆಲವು ರೈತ ಮುಖಂಡರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಧ್ಯಕ್ಷರು ಕೋಡಿಹಳ್ಳಿ ಚಂದ್ರಶೇಖರ್ ರ ಹೆಸರು ಬಳಸಿಕೊಂಡು ರೈತ ಸಂಘಟನೆಯ ಕೆಲವು ಸದ್ಯಸರು ರೈತರ ಒಳ್ಳೆಯ ಬಿಳಿ ಹತ್ತಿಯನ್ನು ಮಿಲ್ಲಿನ ಕೆಲವು ದಲ್ಲಾಳಿಗಳೊಂದಿಗೆ ಒಪ್ಪಂದ ಮಾಡಿಕೊಂಡು ರೈತರಿಗೆ ಕಡಿಮೆ ದರ ರೇಟ್ ಮಾರಾಟ ಮಾಡಸುತ್ತಿದ್ರು.ಇದರಿಂದ ರೈತರಿಗೆ ಬಹಳಷ್ಟೂ ನಷ್ಟ ಆಗ್ತಿತ್ತು, ಆದರೆ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಒಳ್ಳೆಯ ಬೆಲೆ ಸಿಕ್ಕರು ದಲ್ಲಾಳಿಗಳ ಕಾಟ ತಪ್ಪಿದಲ್ಲ. ಹೀಗಾದರೆ ರೈತರ ಪರಿಸ್ಥಿತಿ ಕೇಳುವರು ಯಾರು? ರೈತರ ಹಿತ ಕಾಪಾಡುವ ರೈತ ಸಂಘಟನೆಯ ಕೆಲವು ಮುಖಂಡರು ರೈತರಿಂದ ಹಣ ವಸೂಲಿ ದಲ್ಲಾಳಿಗಳ ತರ ಕಾಯಕ ಮಾಡುತ್ತಿದ್ದರೆ ರೈತರನ್ನು ರಕ್ಷಣೆ ಮಾಡುವವರು ಯಾರು! ಅತಿ ಶೀಘ್ರದಲ್ಲಿ ತೊಗರಿ ಕೇಂದ್ರಗಳು ಕಲಬುರಗಿ ಮತ್ತು ಜೇವರ್ಗಿ ಮಿಲ್ ಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೆರೆಯುತ್ತವೆ, ಆದುದರಿಂದ ರೈತರ ಸಾರ್ವಜನಿಕ ಹಿತಗೋಸ್ಕರ ಇಂತಹ ಘಟನೆಗಳು ಮುಂದೆ ಆಗದಂತೆ ಜಿಲ್ಲೆ ಮತ್ತು ತಾಲೂಕುಗಳಲ್ಲಿ ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮ ವಹಿಸಿ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರು ಕೋಡಿಹಳ್ಳಿ ಚಂದ್ರಶೇಖರ್ ಅವರ ಗಮನಕ್ಕೆ ಈ ಪತ್ರಿಕೆಯ ಪ್ರಕಟಣೆ ಮೂಲಕ ತಿಳಿಸಲಾಗುತ್ತದೆ
ಜೆಡಿಎಸ್ ಶಕ್ತಿ ಏನೆಂದು ತೋರಿಸುತ್ತೇವೆ: ರೇವಣ್ಣ
ಅರಸೀಕೆರೆ: ಮುಂಬರುವ ತಾಲೂಕು ಹಾಗೂ ಜಿಲ್ಲಾ
ಪಂಚಾಯ್ತಿ ಸೇರಿ ಯಾವುದೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಲಘುವಾಗಿ ಪರಿಗಣಿಸದೆ ಎಲ್ಲೆಡೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರ ಜೊತೆಗೆ ಹಾಸನ ಜೆಡಿಎಸ್ನ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡುತ್ತೇವೆ ಎಂದು ಮಾಜಿ ಸಚಿವ ಹಾಗೂ ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ತಿಳಿಸಿದರು.
ಸ್ಥಳೀಯ ಜೆಡಿಎಸ್ ಮುಖಂಡ ಗಂಗಾಧರ್ ಅವರ ಕುಟುಂಬದ ಮದುವೆಗೆಂದು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್ ಪಕ್ಷದ ಕೊಡುಗೆ ಏನೆಂಬುದು ಜನರಿಗೆ ಗೊತ್ತಿದೆ.
ಅಲ್ಲದೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಅವರ ಅವಧಿಯಲ್ಲಿ ಕೈಗೊಂಡಿರುವ ಶಾಶ್ವತ ಕೆಲಸ ಕಾರ್ಯಗಳು ಜಿಲ್ಲಾದ್ಯಂತ ಕಾಣುತ್ತಿವೆ ಎಂದರು.
ಇಷ್ಟಿದ್ದರೂ ಜೆಡಿಎಸ್ ಮುಗಿಯುತು ಎನ್ನುವವರಿಗೆ ಸ್ಥಳೀಯ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೃತಿಯಲ್ಲಿ ಮಾಡಿ ತೋರಿಸಲಿದ್ದಾರೆ ಎಂದರು.
ದೇವೇಗೌಡರು, ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಮೊದಲು ತಾಲೂಕುವಾರು ಸಮ್ಮೇಳನ ನಡೆಸಲು ರೂಪುರೇಷ ಸಿದ್ಧ ಮಾಡಿಕೊಳ್ಳಲಾಗುತ್ತಿದೆ. ಕಡೆಯಲ್ಲಿ ಜಿಲ್ಲಾ ಮಟ್ಟದಲ್ಲೂ ಬೃಹತ್ ಸಮ್ಮೇಳನ ನಡೆಸಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.
ಅಧಿಕಾರ ಶಾಶ್ವತ ಅಲ್ಲ, ಅಧಿಕಾರ ಸಿಕ್ಕಾಗ ಮಾಡಿದ ಕೆಲಸಗಳೇ ಶಾಶ್ವತ ಎಂದ ಅವರು, ಅದೇ ರೀತಿ ಅಧಿಕಾರಿಗಳೂ ಸಹ ನಡೆದುಕೊಳ್ಳಬೇಕು. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕಿರುಕುಳ ನೀಡುವುದಾಗಲೀ, ದಬ್ಬಾಳಿಕೆ ಮಾಡುವುದಾಗಲಿ ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಬಜೆಟ್ನಲ್ಲಿ ಹಾಸನ ನಗರದ ಮೇಲ್ಸೇತುವೆ ಸೇರಿದಂತೆ ಜಿಲ್ಲೆಗೆ ಯಾವುದೇ ಹೊಸ ಯೋಜನೆ ಘೋಷಣೆ ಹಾಗೂ ಅನುದಾನ ಬಿಡುಗಡೆ ಮಾಡದೇ ಇರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು ಫ್ಲೈಓವರ್ ಸೇರಿದಂತೆ ಜಿಲ್ಲೆಗೆ ಕೇಂದ್ರದಿಂದ ಏನೆಲ್ಲಾ ಕೆಲಸ ಕಾರ್ಯ ಆಗಬೇಕು ಎಂಬುದರ ಬಗ್ಗೆ ಈಗಾಗಲೇ ದೇವೇಗೌಡರು, ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದು, ಅವರ ಶಕ್ತಿ ಬಳಸಿಕೊಂಡು ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುತ್ತೇವೆ ಎಂದರು.
ಶೀಘ್ರದಲ್ಲೇ ಮಂಡನೆಯಾಗುವ ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, ಕಾದು ನೋಡಿ ನಂತರ ಮಾತನಾಡುವೆ. ಜಿಲ್ಲೆಗೆ ಅನ್ಯಾಯ ಆದರೆ ಸಹಿಸುವುದಿಲ್ಲ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುವುದಕ್ಕೆ ಆಸ್ಪದ ನೀಡಲ್ಲ. ಅನ್ಯಾಯ ಆದರೆ ಹೋರಾಟ ಮಾಡುತ್ತೇವೆ ಎಂದರು.
ದೇವೇಗೌಡರು, ಕುಮಾರಸ್ವಾಮಿ ಶಕ್ತಿ ಬಳಸಿಕೊಂಡು ನಮ್ಮೆಲ್ಲಾ ಲಕ್ಷಾಂತರ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಶಕ್ತಿ ಏನೆಂಬುದನ್ನು ಸಾಬೀತು ಮಾಡುತ್ತೇವೆ. ಅದರಲ್ಲಿ ಸಂದೇಹ ಬೇಡ ಎಂದರು.
ಈ ವೇಳೆ ಜೆಡಿಎಸ್ ಮುಖಂಡರಾದ
ಹಾಸನ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ
ಜ್ಯೋತಿ ಗಂಗಾಧರ್,
ಲಾಳನಕೆರೆ ಯೋಗೇಶ್, ಕುಡುಕುಂದಿ ಕುಮಾರ್, ರಾಜೇಶ್ ಧರ್ಮಶೇಖರ್, ರವಿ ಗಣೇಶ್. ಮನು. ನಗರಸಭೆ ಸದಸ್ಯರಾದ ಸುಜಾತ ರಮೇಶ್ ಮೊದಲಾದವರಿದ್ದರು.
ವರದಿ
ಪರ್ವಿಜ್ ಅಹಮದ್ ಅರಸೀಕೆರೆ
