ಕಾಳಗಿ: ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಇಲಾಖೆಯಲ್ಲಿನ ಎಲ್ಲಾ ಕೆಲಸಗಳನ್ನು ಬ್ಯಾಂಕ್ನ ಸಹಯೋಗದೊಂದಿಗೆ ತ್ವರಿತವಾಗಿ ತಮ್ಮ ತಮ್ಮ ಕೆಲಸವನ್ನು ಮಾಡಿಕೊಳ್ಳವ ಜೊತೆಯಲ್ಲಿ ಪ್ರದಾನ ಮಂತ್ರಿ ಸುರಕ್ಷ ಭೀಮಾ ಯೋಜನೆ ಮತ್ತು ಪ್ರದಾನ ಮಂತ್ರಿ ಜೀವನ ಜ್ಯೋತಿ ಸುರಕ್ಷ ಭೀಮಾ ಯೋಜನೆ ಬಗ್ಗೆ ಎಲ್ಲಾ ಇಲಾಖೆಯುವರು ಜನರಿಗೆ ಜಾಗೃತಿ ಮೂಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದು ಎಲ್ ಡಿ ಎಂ ಅಧಿಕಾರಿ ಸಂತೋಷ ರವರು ತಿಳಿಸಿದರು.
ಕಾಳಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಲಯ ಮಟ್ಟದ ಬ್ಯಾಂಕ್ ಅಧಿಕಾರಿಗಳು ಮತ್ತು ವಿವಿಧ ತಾಲ್ಲೂಕು ಮಟ್ಟದ ಇಲಾಖೆಯು ಸಮಾಲೋಚನೆ ಸಭೆಯಲ್ಲಿ ಕರ್ನಾಟಕ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ನಲ್ಲಿ ಖಾತೆಗಳನ್ನು ಓಪನ್ ಮಾಡಲು ಅಡ ತಡೆಗಳು ಆಗುತ್ತಿರುವ ವಿಷಯ ನಮ್ಮ ಗಮನಕ್ಕೆ ಬಂದಿದ್ದು ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಸ್ ಎಸ್ ಜಿ ಸಂಘ ಖಾತೆಗಳನ್ನು ತೆಗೆಯಿರಿ ಎಂದು ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಂದಿಗೆ ವಿದ್ಯಾರ್ಥಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ತಾವು ಎನ್ ಸಿ ಪಿ ಐ ಬಗ್ಗೆ ಅರಿವು ಮೂಡಿಸಿ ಆ ವಿದ್ಯಾರ್ಥಿಗಳ ಸಮಸ್ಯೆ ಆದಷ್ಟು ಬೇಗ ಬಗೆಹರಿಸಲು ತಿಳಿಸಿದರು ಹೀಗೆ ವಿವಿಧ ಇಲಾಖೆಯ ಬ್ಯಾಂಕ್ನ ಸಮಸ್ಯೆಗಳನ್ನು ಬಗೆಹರಿಸಿ ಮುಂದಿನ ತಿಂಗಳು ಇದೆ ವಿಷಯ ಕೇಳಿದಾಗ ಕೆಲಸ ಆಗಿದೆ ಎಂದು ತಾವುಗಳು ನಮ್ಮಗೆ ತಿಳಿಸಬೇಕು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕಾಳಗಿ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀ ಘಮಾವತಿ ರಾಠೋಡ ,ಕಾಳಗಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಶ್ರೀ ಸದಾಶಿವ ವಿ ರಾತ್ರಿಕರ್, ತಾಲ್ಲೂಕು ಪಂಚಾಯತ ಮುಖ್ಯಾಧಿಕಾರಿಗಳಾದ ಶ್ರೀ ಬಸಲಿಂಗಪ್ಪ ಡಿಗ್ಗಿ, ಕೃಷಿ ಅಧಿಕಾರಿ ಶ್ರೀಮತಿ ಸರೋಜಾ ಕಲಬುರಗಿ, ಪಟ್ಟಣದ ಪಂಚಾಯತ ಇಲಾಖೆಯ ರೇಣುಕಾ ಕಾಬಾ,ಸಾವಿತ್ರಿ ಒಡೆಯರಾಜ, ತಾಲ್ಲೂಕು ಪಂಚಾಯತ ಎನ್ ಆರ್ ಎಲ್ ಎಂ ಅಧಿಕಾರಿ ಕಲ್ಯಾಣಿ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರೂ