ಜೇವರ್ಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಬಣದವರಿಂದ ಕಲಬುರಗಿ ಹಾಗೂ ಜೇವರ್ಗಿ ರೈತ ಸಂಘಟನೆಯ ಕೆಲವು ರೈತ ಸಂಘದ ಮುಖಂಡರಿಂದ ರೈತರಿಗೆ ಅನ್ಯಾಯವಾಗುತ್ತಿರುವುದು. ರೈತರು ತಮ್ಮ ಅಳಲು ನೋವನ್ನು ತೋಡಿಕೊಂಡರು. ಕೇಂದ್ರ ಸರ್ಕಾರದ ಭಾರತೀಯ ಹತ್ತಿ ನಿಗಮ ನಿಯಮಿತ ಮಿಲ್ ಗಳು ಹತ್ತಿ ಬೆಳೆಗೆ ಕೇಂದ್ರ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ರೈತರು ತಮ್ಮ ಹತ್ತಿಯನ್ನು ಸರ್ಕಾರ ಮಿಲ್ ಗಳಿಗೆ ಮಾರಾಟ ಮಾಡಲಿಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಕೆಲವು ರೈತ ಮುಖಂಡರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಧ್ಯಕ್ಷರು ಕೋಡಿಹಳ್ಳಿ ಚಂದ್ರಶೇಖರ್ ರ ಹೆಸರು ಬಳಸಿಕೊಂಡು ರೈತ ಸಂಘಟನೆಯ ಕೆಲವು ಸದ್ಯಸರು ರೈತರ ಒಳ್ಳೆಯ ಬಿಳಿ ಹತ್ತಿಯನ್ನು ಮಿಲ್ಲಿನ ಕೆಲವು ದಲ್ಲಾಳಿಗಳೊಂದಿಗೆ ಒಪ್ಪಂದ ಮಾಡಿಕೊಂಡು ರೈತರಿಗೆ ಕಡಿಮೆ ದರ ರೇಟ್ ಮಾರಾಟ ಮಾಡಸುತ್ತಿದ್ರು.ಇದರಿಂದ ರೈತರಿಗೆ ಬಹಳಷ್ಟೂ ನಷ್ಟ ಆಗ್ತಿತ್ತು, ಆದರೆ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಒಳ್ಳೆಯ ಬೆಲೆ ಸಿಕ್ಕರು ದಲ್ಲಾಳಿಗಳ ಕಾಟ ತಪ್ಪಿದಲ್ಲ. ಹೀಗಾದರೆ ರೈತರ ಪರಿಸ್ಥಿತಿ ಕೇಳುವರು ಯಾರು? ರೈತರ ಹಿತ ಕಾಪಾಡುವ ರೈತ ಸಂಘಟನೆಯ ಕೆಲವು ಮುಖಂಡರು ರೈತರಿಂದ ಹಣ ವಸೂಲಿ ದಲ್ಲಾಳಿಗಳ ತರ ಕಾಯಕ ಮಾಡುತ್ತಿದ್ದರೆ ರೈತರನ್ನು ರಕ್ಷಣೆ ಮಾಡುವವರು ಯಾರು! ಅತಿ ಶೀಘ್ರದಲ್ಲಿ ತೊಗರಿ ಕೇಂದ್ರಗಳು ಕಲಬುರಗಿ ಮತ್ತು ಜೇವರ್ಗಿ ಮಿಲ್ ಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೆರೆಯುತ್ತವೆ, ಆದುದರಿಂದ ರೈತರ ಸಾರ್ವಜನಿಕ ಹಿತಗೋಸ್ಕರ ಇಂತಹ ಘಟನೆಗಳು ಮುಂದೆ ಆಗದಂತೆ ಜಿಲ್ಲೆ ಮತ್ತು ತಾಲೂಕುಗಳಲ್ಲಿ ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮ ವಹಿಸಿ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರು ಕೋಡಿಹಳ್ಳಿ ಚಂದ್ರಶೇಖರ್ ಅವರ ಗಮನಕ್ಕೆ ಈ ಪತ್ರಿಕೆಯ ಪ್ರಕಟಣೆ ಮೂಲಕ ತಿಳಿಸಲಾಗುತ್ತದೆ
