ಜಿಂಕೆ ಮತ್ತು ಕಾಡು ಹಂದಿಗಳು ರಾತ್ರಿ ಸಮದಲ್ಲಿ ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದಿದ್ದ ಹೂಕೋಸನ್ನು ತಿಂದು ಸಾಶ ಮಾಡಿರುವ ಘಟನೆ ಹುಣಸೂರಿನ. ಹನಗೋಡು ಹೋಬಳಿ ಬಿ ಆರ್ ಕಾವಲು 3ನೇ ಕಾಲೋನಿ ಗ್ರಾಮದಲ್ಲಿ ನಡೆದಿದೆ. ಬಿ ಆರ್ ಕಾವಲು ಗ್ರಾಮದ ರೈತ ನಾಗೇಗೌಡ ರವರಿಗೆ ಸೇರಿದ ಜಮೀನಿನಲ್ಲಿ ರಾತ್ರಿ ವೇಳೆಯಲ್ಲಿ ಜಿಂಕೆಗಳು ಬೆಳೆಯನ್ನು ತಿಂದು ನಾಶ ಮಾಡಿವೆ. ಸುಮಾರು ಅರ್ಧ ಎಕರೆಯಷ್ಟು, ಬೆಳೆಯನ್ನು ತಿಂದಿದ್ದು, ಅಂದಾಜು 40 ಸಾವಿರ ರೂಪಾಯಿಗಳಷ್ಟು ನಷ್ಟವಾಗಿದೆ. ಬೆಳೆ ಕಟಾವಿಗೆ ಬರುವ ಹೊತ್ತಿನಲ್ಲಿ ಪ್ರಾಣಿಗಳು ನಾಶ ಮಾಡುತ್ತಿರುವುದು ‘ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ’ ಎನ್ನುವಂತೆ ಸಾಲ ಮಾಡಿ ವ್ಯವಸಾಯ ಮಾಡಿದ್ದರೂ ಈ ರೀತಿಯ ಬೆಳೆ ನಾಶದಿಂದ ರೈತ ಮತ್ತೆ ಸಾಲದ ಸುಳಿಗೆ ಸಿಲುಕುವಂತಾಗುತ್ತಿದೆ. ಮೊದಲೆ ಬೆಳೆದ ಬೆಳೆಗೆ ಬೆಲೆಯಿಲ್ಲದೆ ಕಂಗಾಲಾಗಿರುವ ರೈತರಿಗೆ ಈ ರೀತಿಯ ಕಾಡು ಪ್ರಾಣಿಗಳ ಹಾವಳಿಯಿಂದ ಮತ್ತಷ್ಟು ಸಂಕಷ್ಟ ಎದುರಾಗುತ್ತಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಗಮನವಹಿಸಿ ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಿ ಸೂಕ್ತ ಪರಿಹಾರ ನೀಡಬೇಕಾಗಿದೆ.
